ಅಭಿಪ್ರಾಯ / ಸಲಹೆಗಳು

Crime Reported in : Mulki PS

ದಿನಾಂಕ: 04-03-2022   ಫಿರ್ಯಾದಿ Kusumadhara K – PI ದಾರರು ಸಿಬ್ಬಂದಿಗಳ ಜೊತೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಮಂಗಳೂರು ತಾಲೂಕು ತೋಕೂರು ಗ್ರಾಮದ ತೋಕೂರು ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣವಾಗಿಟ್ಟು ಉಲಾಯಿ- ಪಿದಾಯಿ ಎಂಬ  ನಸೀಬಿನ ಜೂಜಾಟ ಆಟ ಆಡುತ್ತಿರುವ ಬಗ್ಗೆ ಖಚಿತ ವರ್ತಮಾನ ಬಂದಿರುವುದನ್ನು ಖಚಿತ ಪಡಿಸಿಕೊಂಡು ಸದ್ರಿ ಸ್ಥಳಕ್ಕೆ ಧಾಳಿ ಮಾಡಿ ನಾಲ್ಕು ಮಂದಿ ಆರೋಪಿಗಳು, ಆರೋಪಿಗಳ ವಶದಲ್ಲಿದ್ದ ಒಟ್ಟು 3600=00 ರೂ. ಹಾಗೂ ಜೂಜಾಟಕ್ಕೆ ಉಪಯೋಗಿಸಿದ ನೀಲಿ ಬಣ್ಣದ ಪ್ಲಾಸ್ಟಿಕ್ ಶೀಟ್, ಇಸ್ಫೀಟ್ ಎಲೆಗಳನ್ನು ಸ್ವಾಧೀನ ಪಡಿಸಿ ಕ್ರಮ ಜರಗಿಸಲಾಗಿದೆ ಎಂಬಿತ್ಯಾದಿ.

 

2) ದಿನಾಂಕ: 03-03-2022 ರಂದು ಪಿರ್ಯಾದಿ Kusumadhara K –PI ದಾರರು ಸಿಬ್ಬಂದಿಯರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 19:00 ಗಂಟೆಗೆ ಗ್ರಾಮದ ಕೊಲ್ನಾಡ್ ಇಂಡಸ್ಟ್ರಿಯಲ್ ಏರಿಯಾ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಸವಾದ್, ಪ್ರಾಯ : 26 ವರ್ಷ,  ವಾಸ: ಕೆ.ಎಸ್.ರಾವ್ ನಗರ, ಕಾರ್ನಾಡು ಗ್ರಾಮ, ಮಂಗಳೂರು ತಾಲೂಕು ಎಂಬಾತನು ಹೊಗೆಬತ್ತಿಯನ್ನು ಸೇದುತ್ತಿರುವುದು ಕಂಡುಬಂದಿದ್ದು, ವಾಹನವನ್ನು ನಿಲ್ಲಿಸಿ ಆತನ ಬಳಿ ತೆರಳಿ ವಿಚಾರಿಸಿದಾಗ ಆತ ಹೊಗೆ ಬತ್ತಿಯೊಂದಿಗೆ ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಆತನ ವೈದ್ಯಕೀಯ ತಪಾಸಣೆ ನಡೆಸುವ ಬಗ್ಗೆ ಎ.ಜೆ. ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದ್ದು ಆಸ್ಪತ್ರೆಯಲ್ಲಿ ಆರೋಪಿಯನ್ನು ಪರೀಕ್ಷಿಸಿದ ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಪರೀಕ್ಷಾ ವರದಿಯ ದೃಢಪತ್ರವನ್ನು ಈ ದಿನ ದಿನಾಂಕ: 04-03-2022 ರಂದು ನೀಡಿದ್ದು ಈ ಬಗ್ಗೆ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿ ಎಂಬಿತ್ಯಾದಿಯಾಗಿದೆ.

 

Crime Reported in Mangalore East Traffic PS         

ಪಿರ್ಯಾದಿದಾರರಾದ   ವಿನಯ ಕುಮಾರ್ ಶೆಟ್ಟಿ ಎಂಬವರು ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ತಮ್ಮ ಬಾಬ್ತು ಸ್ಕೂಟರಿನಲ್ಲಿ ಬಿಕರ್ನಕಟ್ಟೆ ಕೈಕಂಬ ಕಡೆಯಿಂದ ಪಡೀಲ್  ಕಡೆಗೆ ರಾಷ್ಟ್ರೀಯ ಹೆದ್ದಾರಿ 73 ನೇ ಡಾಮಾರು ರಸ್ತೆಯಲ್ಲಿ ಹೋಗುತ್ತಾ  ಸಮಯ ಸುಮಾರು ಸಂಜೆ 07.00 ಗಂಟೆಗೆ ಮರೋಳಿ ಜೋಡುಕಟ್ಟೆ ಎಂಬಲ್ಲಿಗೆ ಬಂದು ತಲುಪುತ್ತಿದ್ದಂತೆ ಸದ್ರಿ ಪಿರ್ಯಾದಿದಾರರ ಸ್ಕೂಟರಿನ ಮುಂದಿನಿಂದ ಚಲಿಸುತ್ತಿದ್ದ KA-19-HH-5652 ನಂಬ್ರದ ಸ್ಕೂಟರೊಂದನ್ನು KA-19-AD-5808 ನಂಬ್ರದ ಕಂಟೇನರ್ ಲಾರಿಯು ಬಲ ಬದಿಯಿಂದ  ಓವರ್ ಟೇಕ್ ಮಾಡಿ ಯಾವುದೇ ಸೂಚನೆಯನ್ನು ನೀಡದೇ ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೆಲೇ ರಸ್ತೆಯ ಎಡಬದಿಗೆ ತಿರುಗಿಸಿ ನಿಧಾನಗೊಳಿಸಿ ವೇಳೆ ರಸ್ತೆಯ ಬಲ ಬದಿಯಿಂದ ಘನ ವಾಹನಗಳು ಚಲಿಸುತ್ತಿದ್ದರಿಂದ ಸದ್ರಿ ಸ್ಕೂಟರ್ ಮುಂದಕ್ಕೆ ಹಾಗೂ ಬಲಕ್ಕೆ ಚಲಿಸಲು ಯಾವುದೇ ಅವಕಾಶ ಇಲ್ಲದೇ ಸ್ಕೂಟರ್ ಕಂಟೇನರ್ ಲಾರಿಯ ಬಲ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರಿನ ಸವಾರ ಮನೀಶ್ ಹಾಗೂ ಸಹ ಸವಾರೆ ಶೋಭಾ ರವರು ಸ್ಕೂಟರ್ ಸಮೇತ ರಾ.ಹೆ 73ನೇ ಡಾಮಾರು ರಸ್ತೆಗೆ ಬಿದ್ದು, ಸವಾರ ಮನೀಶ್ ರವರ  ಬಲಕಿವಿಯಿಂದ ಮತ್ತು ಬಾಯಿಯಿಂದ ರಕ್ತ ಬರುತ್ತಿದ್ದು, ಎಡಕಾಲಿಗೆ ಗುದ್ದಿದ ರೀತಿಯ ಗಾಯ ಹಾಗೂ ಸಹ ಸವಾರೆ ಶ್ರೀಮತಿ ಶೋಭಾ ರವರ ಸೊಂಟಕ್ಕೆ ಹಾಗೂ ಎಡಕೈಗೆ ಗುದ್ದಿದ ಗಾಯ ಮತ್ತು ಬಲ ಹುಬ್ಬಿನ ಬಳಿ ರಕ್ತಗಾಯವಾದವರನ್ನು ಚಿಕಿತ್ಸೆ ಬಗ್ಗೆ ಅಟೋರಿಕ್ಷಾವೊಂದರಲ್ಲಿ ತೇಜಸ್ವಿನಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಪರಿಶೀಲಿಸಿದ ಅಲ್ಲಿನ ವೈದ್ಯರು ಮನೀಶ್ ರವರ ದವಡೆಗೆ ಮತ್ತು ಎಡಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಶ್ರೀಮತಿ ಶೋಭಾ ರವರ ಸೊಂಟಕ್ಕೆ ಮತ್ತು ಎಡಕೈ ತೋರು ಬೆರಳಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿರುವುದಾಗಿ  ತಿಳಿಸಿದ್ದು, ಒಳರೋಗಿಗಳಾಗಿ ಚಿಕಿತ್ಸೆಯಲ್ಲಿಇರುವುದಾಗಿದೆ. ಈ ಅಪಘಾತಕ್ಕೆ  KA-19-AD-5808  ನಂಬ್ರದ ಕಂಟೇನರ್ ಲಾರಿಯ ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿದ್ದು, ಅಪಘಾತ ಪಡಿಸಿದ ಲಾರಿಯ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಕೋರಿಕೆ ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 04-03-2022 07:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080