ಅಭಿಪ್ರಾಯ / ಸಲಹೆಗಳು

Crime Reported in Kankanady Town PS                                  

.ಪಿರ್ಯಾದು VIDYALAXMI PAI ದಾರರು ಮಂಗಳೂರು  ಎಕ್ಕೂರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು  ತನ್ನ ಗಂಡನ ಹೆಸರಿನಲ್ಲಿ  K A 19 E W 9209 ನೇ ಬಜಾಜ್ ವಿಕ್ರಂತ್  ಎಂಬ ಮೋಟಾರು ಸೈಕಲ್ ನ್ನು ಹೊಂದಿರುವುದಾಗಿದೆ. ತನ್ನ ಗಂಡ ಮೃತ ಪಟ್ಟ ಬಳಿಕ ಮಗನಾದ ರವಿಪ್ರಸಾದ್ ಮೋಟಾರು ಸೈಕಲ್ ನ್ನು ಚಲಾಯಿಸುತ್ತಿದ್ದು ದಿನಾಂಕ 18.04.2022 ರಂದು ರಾತ್ರಿ ಸುಮಾರು 11 ಗಂಟೆಗೆ ಸದ್ರಿ ಬೈಕನ್ನು ಎಕ್ಕೂರು  ಸೇತುವೆ ಬಳಿ ಮನೆಯ ಎದುರು ನಿಲ್ಲಿಸಿದ್ದು ಮರು ದಿನ ದಿನಂಕ 19.04.2022 ರಂದು ಬೆಳಗ್ಗೆ 09.30 ಗಂಟೆಗೆ ಮೋಟಾರ್ ಸೈಕಲ್ ನ್ನು ನೋಡಿದಾಗ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಇದ್ದು ಹುಡುಕಾಡಿದಾಗ ಪತ್ತೆಯಾಗಿರುವುದಿಲ್ಲ ನಂತರದ ದಿನಗಳಲ್ಲಿ ಬೈಕನ್ನು ಮಂಗಳೂರು ನಗರ ಪರಿಸರದಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇರುವ ಕಾರಣ ದೂರು ನೀಡಿರುವುದಾಗಿದೆ. ಕಳವಾದ ಮೋಟಾರು ಸೈಕಲ್ ನ ಅಂದಾಜು ಮೌಲ್ಯ 25000/- ಆಗಬಹುದು  ಚೇಸಸ್ ನಂಬರ್ MD2A75BY9HWM06409 ಮತ್ತು ಇಂಜೀನ್ ನಂಬರ್  JHYWHM78892 ಆಗಿರುತ್ತದೆ.

 

Crime Reported in Traffic North Police Station                                    

ದಿನಾಂಕ 03-05-2022 ರಂದು ಪಿರ್ಯಾದಿ Nithesh V Shetty ದಾರರು ತನ್ನ ಬಾಬ್ತು ಮೋಟಾರ್ ಸೈಕಲಿನಲ್ಲಿ ಉರ್ವಸ್ಟೋರ್ ಕಡೆಯಿಂದ ಕಾನ ಕಡೆಗೆ ರಾ ಹೆ 66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ರಾತ್ರಿ ಸುಮಯ ಸುಮಾರು 7:30 ಗಂಟೆಗೆ ಕುಳಾಯಿ ಬಸ್ ಸ್ಟಾಪ್ ನಿಂದ ಸ್ವಲ್ಪ ಮೊದಲು A.P ಮಾರ್ಬಲ್ ಎದುರು ತಲುಪಿದಾಗ ಪಿರ್ಯಾದಿದಾರರ ಮುಂದಿನಿಂದ KA-19-ES-6313 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಹರ್ಷವರ್ಧನ್ ರವರು ಹಾಗೂ KA-03-MT-3550 ನಂಬ್ರದ ಕಾರನ್ನು ಅದರ ಚಾಲಕ ರಿಫಾಯಿ ಎಂಬಾತನು ಸಮಾನಂತರವಾಗಿ ಚಲಾಯಿಸಿಕೊಂಡು ಹೋಗುತ್ತಾ, ಕಾರು ಚಾಲಕನು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಒಮ್ಮಲೇ ಎಡಕ್ಕೆ ತಿರುಗಿಸಿದ ಪರಿಣಾಮ ಕಾರಿನ ಮುಂಭಾಗದ ಎಡಬದಿಯ ಬಂಪರ್ ಕಾರಿನ ಎಡಬದಿಯಲ್ಲಿ ಹೋಗುತ್ತಿದ್ದ ಮೋಟಾರ್ ಸೈಕಲಿನ ಹಿಂಬದಿಗೆ ಡಿಕ್ಕಿಯಾಗಿ ಮೋಟಾರ್ ಸೈಕಲ್ ಸವಾರ ಹರ್ಷವರ್ಧನ್ ರವರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ಬಲಕಾಲಿನ ಕೋಲು ಕಾಲಿನ ಬಳಿ ಗಂಭೀರ ಸ್ವರೂಪದ ಗಾಯವಾಗಿದ್ದು ಅಲ್ಲದೇ ಬಲ ಭುಜದ ಬಳಿ, ಎರಡೂ ಕೈಗಳ ಮೊಣಕೈ ಬಳಿ, ಎಡ ಕಾಲಿನ ಮೊಣಗಂಟಿನ ಬಳಿ, ಎಡ ಅಂಗೈಗೆ ರಕ್ತ ಗಾಯವಾಗಿ ಚಿಕಿತ್ಸೆಯ ಬಗ್ಗೆ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Crime Reported in Mangalore South PS                 

ಪ್ರಕರಣದ ಪಿರ್ಯಾದಿ ಗಂಗಾಧರನ್ ಪಿ ರವರ ಮಗ  ಹೇಮೇಶ ಪ್ರಾಯ-32 ವರ್ಷ  ಎಂಬುವರು ಮಾನಸಿಕನಾಗಿ ಅಶ್ವಸ್ಥನಾಗಿದ್ದು ಸುಮಾರು 08 ವರ್ಷದಿಂದ ಮಂಗಳೂರಿನ ಪಾಧರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರತಿ ತಿಂಗಳು ಚಿಕಿತ್ಸೆಗಾಗಿ ಬರುತ್ತಿದ್ದವರು ದಿನಾಂಕ- 03.04.2022 ರಂದು ಮಧ್ಯಾಹ್ನ 12.00 ಗಂಟೆಗೆ ಚಿಕಿತ್ಸೆಗಾಗಿ  ಮಂಗಳೂರಿನ ಪಾಧರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈಧ್ಯರು ಹೇಮೇಶ ಖಾಯಿಲೆ ಉಲ್ಬಣಗೊಂಡಿದ್ದು ಆತನನ್ನೂ ಒಳರೋಗಿಯಾಗಿ ದಾಖಲಿಸಲು ತಿಳಿಸಿದರು ಅದರಂತೆ ಹೇಮೇಶ ಒಳರೋಗಿಯಾಗಿ ದಾಖಲಿಸುವುದೆಂದು ತಿಳಿದು ಹೇಮೇಶ ಮಂಗಳೂರಿನ ಪಾಧರ್ ಮುಲ್ಲರ್ ಆಸ್ಪತ್ರೆಯಿಂದ ಓಡಿ ಹೋಗಿರುತ್ತಾರೆ, ಮಂಗಳೂರಿನ ಪಾಧರ್ ಮುಲ್ಲರ್ ಆಸ್ಪತ್ರೆಯ ಸುತ್ತಲೂ ಹುಡುಕಾಡಿದ್ದಲ್ಲಿ ಹೇಮೇಶ ಕಾಣೆಯಾಗಿರುತ್ತಾರೆ. ಎಂಬಿತ್ಯಾದಿ. ಕಾಣೆಯಾದ ಹೇಮೇಶ ಚಹರೆ  ಪ್ರಾಯ-32 ವರ್ಷ ದಪ್ಪ ಶರೀರ, ಎತ್ತರ 6 ಅಡಿ, ಗೋಧಿ ಮೈಬಣ್ಣ,ಕಪ್ಪು ಕೂದಲು, ಲೈಟ್ ಗ್ರೀನ್ ಶರ್ಟ್, (ತಿಳಿ ಹಸಿರು) ಹಾಗೂ ಬಿಳಿ ಮುಂಡಾ,  ಧರಿಸಿರುತ್ತಾರೆ, ಮಳಿಯಾಳಿ ಭಾಷೆ ಮಾತನಾಡುವುದಾಗಿದೆ.

 

ಇತ್ತೀಚಿನ ನವೀಕರಣ​ : 04-05-2022 08:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080