ಅಭಿಪ್ರಾಯ / ಸಲಹೆಗಳು

Crime Reported in: Mangalore East Traffic PS                  

ದಿನಾಂಕ 30-06-2022 ರಂದು ಪಿರ್ಯಾದಿದಾರರಾದ ಪುರುಷೋತ್ತಮನ್ ಕೆ.ವಿ ರವರು ತನ್ನ ಹೆಂಡತಿಯಾದ ಶಕುಂತಲಾ ಕೆ.ವಿ. ರವರೊಂದಿಗೆ ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ತೆರಳಿ ಮಂಗಳೂರಿಗೆ ವಾಪಾಸ್ಸಾಗಿ ರೈಲ್ವೇ ನಿಲ್ದಾಣದ ಕಡೆಗೆ ಸಾಗಲು ಸಮಯ ಸುಮಾರು 16.00 ಗಂಟೆಗೆ ನೆಹರೂ ಮೈದಾನ ಎದುರುಗಡೆಯಿಂದ ಪೊಲೀಸ್ ಲೇನ್ ಗೇಟ್ ಕಡೆಗೆ ರಸ್ತೆಯನ್ನು ದಾಟುತ್ತ  ರಸ್ತೆಯ ಅಂಚಿನ ಬಳಿ ತಲುಪುತ್ತಿದ್ದಂತೆ ಕ್ಲಾಕ್ ಟವರ್ ಕಡೆಯಿಂದ ಎ.ಬಿ. ಶೆಟ್ಟಿ ವೃತ್ತದ ಕಡೆಗೆ KA-21-J-5885 ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಅಜಿತ್ ಮ್ಯಾಥ್ಯೂ ಎಂಬವರು ನಿರ್ಲಕ್ಷ್ಯತನದಿಂದ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಶಕುಂತಲಾ ಕೆ.ವಿ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿಯವರ ಎಡ ಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ, ಹಣೆಯ ಎಡಭಾಗಕ್ಕೆ ರಕ್ತಗಾಯ ಉಂಟಾದವರನ್ನು ಪಿರ್ಯಾದಿದಾರರು ಸಾರ್ವಜನಿಕರ ಸಹಾಯದಿಂದ ಆಟೋ ರಿಕ್ಷಾ ಒಂದರಲ್ಲಿ ವೆನ್ಲಾಕ್ ಆಸ್ಪತ್ರೆಗೆ ಕರೆ ತಂದಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೇರಳ ರಾಜ್ಯದ ಕಣ್ಣೂರಿನಲ್ಲಿರುವ A.K.G. MEMORIAL CO-OPARATIVE HOSPITAL ಗೆ ಕರೆದುಕೊಂಡು ಬಂದಿದ್ದು, ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಎಂಬಿತ್ಯಾದಿ.

Crime Reported in Mangalore East PS

ದಿನಾಂಕ:04-07-2022 ರಂದು ಮಧ್ಯಾಹ್ನ 12.15 ಗಂಟೆಯ ವೇಳೆಗೆ ಬಲ್ಮಠ ಬಳಿಯ ಆರ್ಯ ಸಮಾಜ ಸಾರ್ವಜನಿಕ ರಸ್ತೆಯಲ್ಲಿ ಸ್ಥಳದಲ್ಲಿ ಸುರೇಶ್ ಎಂ, ಪ್ರಾಯ:27 ವರ್ಷ, ವಾಸ: ಎಸ್.ಆರ್.ನಿಲಯ, ಮನೆ.ನಂ. ಜೆಪ್ಪು ಬಪ್ಪಾಲ್ 3ನೇ ಅಡ್ಡ ರಸ್ತೆ, ಕಂಕನಾಡಿ ಅಂಚೆ, ಮಂಗಳೂರು ತಾಲೂಕು ಎಂಬಾತನು ಮಾದಕ ವಸ್ತು ಸೇವನೆ ಮಾಡಿಕೊಂಡಿರುವವನನ್ನು  ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟಲ್ಲಿ ಈತ ಅಮಲು ಪದಾರ್ಥವನ್ನು ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ ಧೃಡಪಟ್ಟಿರುವುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Crime Reported in Traffic South Police Station

ದಿನಾಂಕ;04-07-2022 ರಂದು ಪಿರ್ಯಾದಿ SUBHASH CHANDRA  M ದಾರರು ಅವರ ಬಾಬ್ತು ಕಾರು ನಂಬ್ರ:KA-19-ML-1967  ನೇದನ್ನು ಚಲಾಯಿಸಿಕೊಂಡು ಹಾಗೂ ಮಗ ಅರ್ಜುನ್ ರವರನ್ನು ಸಹ ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಉಬ್ಬಿಲದಿಂದ ಮಂಗಳೂರು ಕಡೆಗೆ ರಾ ಹೆ-66 ರಲ್ಲಿ ಬರುತ್ತಿರುವ ಸಮಯ ಸುಮಾರು ಬೆಳಿಗ್ಗೆ 8-30 ಗಂಟೆಗೆ ತೊಕ್ಕೊಟ್ಟು ನಾಗನಕಟ್ಟೆ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಬರುತ್ತಿದ್ದ ಪಿಕ್ ಆಪ್ ವಾಹನ ನಂಬ್ರ: TN-92-B-6656 ನೇದರ ಚಾಲಕ ರಾಜಶೇಖರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನ ಹಿಂಬದಿಯ ಡೋರ್ ಹಿಂಬದಿಯ ಬಂಪರ್ ಸಂಪೂರ್ಣ ಜಖಂಗೊಂಡಿರುತ್ತದೆ ಹಾಗೂ ಪಿರ್ಯಾದಿದಾರರಿಗೂ ಹಾಗೂ ಅವರ ಮಗ ಅರ್ಜುನ್ ರವರಿಗೂ ಯಾವುದೇ ಗಾಯವಾಗಿರುವುದಿಲ್ಲ ಎಂಬಿತ್ಯಾದಿ.

Crime Reported in Mangalore South PS   

ದಿನಾಂಕ 04-07-2022 ರಂದು ಬೆಳಿಗ್ಗೆ 11:45 ಗಂಟೆಗೆ ಮಂಗಳೂರು ನಗರದ ಗೂಡ್ಸ್ ಶೆಡ್ಡೆ ಬಂದರು ರಸ್ತೆಯ ಪರಿಸರದಲ್ಲಿ ಜಗದೀಶ್ ಎಂಬಾತನು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆಯನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಂದ ಮೇರೆಗೆ ಧ್ಯಾಹ್ನ 1:45 ಗಂಟೆಗೆ ತಲುಪಿ  ಅಲ್ಲಿ ಚೀಟಿಯನ್ನು ಹಿಡಿದು ಹಣವನ್ನು ಸಂಗ್ರಹಿಸುತ್ತಿದ್ದ  ಜಗದೀಶ್, ಪ್ರಾಯ 30 ವರ್ಷ, ವಾಸ: ಮೀಯಾರ್ ಪಲ್ಕೆ ಮನೆ, ಮಣಿ ನಾಲ್ಕೂರು ಗ್ರಾಮ, ಸರಪಾಡಿ ಅಂಚೆ, ಬಂಟ್ವಾಳ, ಹಾಗು ಇನ್ನೊಬ್ಬ ವ್ಯಕ್ತಿ ಜಗದೀಶ್ ಆಚಾರ್ಯ, ಪ್ರಾಯ 48 ವರ್ಷ, ತಂದೆ: ಅನಂತ ಆಚಾರ್ಯ, ವಾಸ: ಕೂಡಿಬೈಲು ಮನೆ, ನಾವೂರು ಅಂಚೆ, ಬಂಟ್ವಾಳ ತಾಲೂಕು ಇವರನ್ನು ವಿಚಾರಿಸಲಾಗಿ ಇವರು ಹಣ ,ಗಳಿಸುವ ಉದ್ದೇಶದಿಂದ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅದೃಷ್ಠದ ಆಟವಾದ ಮಟ್ಕ ದಂಧೆಯನ್ನು ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದು, ಅವರಿಂದ ಮಟ್ಕಾ ದಂಧೆಗೆ ಉಪಯೋಗಿಸಿಕೊಂಡಿದ್ದ ಮಟ್ಕಾ ಬರೆದ ಚೀಟಿ-1, ನಗದು ಹಣ 11750/-, ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.ಎಂಬಿತ್ಯಾದಿ

 

Crime Reported in  Ullal PS

ದಿನಾಂಕ 4-07-2022 ರಂದು ಮದ್ಯಹ್ನ 1-30 ಗಂಟೆಗೆ ಮಂಗಳೂರು ನಗರದ ಕುತ್ತಾರು ಪ್ರದೇಶದಲ್ಲಿ  ಮಾದಕ ವಸ್ತು ಸೇವನೆ ಮಾಡುತ್ತಿದ್ದ ಇಸ್ಮಾಯಿಲ್ ಪ್ರಾಯ (49) ವಾಸ- ಸುಭಾಸ್ ನಗರ ಮನೆ , ಕುತ್ತಾರು , ಮುನ್ನುರು ಅಂಚೆ ಮಂಗಳೂರು ಎಂಬವರನ್ನು ವಶಕ್ಕೆ ಪಡೆದುಕೂಂಡು ಎ .ಜೆ ಆಸ್ಪತ್ರೆಯ ಪಾರೆನ್ಸಿಕ್ ವಿಭಾಗದಲ್ಲಿ ಮಾದಕ ವಸ್ತುಗಳ ಸೇವನೆ ಮಾಡಿರುವ ಬಗ್ಗೆ ತಪಾಸಣೆ ನಡೆಸಲಾಗಿ ಮಾದಕ ದ್ರವ್ಯ ಸೇವನೆ ಮಾಡಿರುವ ಬಗ್ಗೆ ವರದಿ ಬಂದಿರುತ್ತದೆ ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕಾಗಿ ನೀಡಿದ ಪಿರ್ಯದಿ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 04-07-2022 07:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080