ಅಭಿಪ್ರಾಯ / ಸಲಹೆಗಳು

Crime Reported in Mangalore East PS

ಪಿರ್ಯಾದಿ Abdul Rasheed M.A ರವರು ಮಂಗಳೂರು ನಗರದ ಬೆಂದೂರ್ ವೆಲ್ ಬಳಿಯಿರುವ ಡ್ಯಾನೀಶ್ ಎಂಬ ಹೆಸರಿನ ಹೋಟೇಲ್ ನ್ನು ನಡೆಸುತ್ತಿದ್ದು ದಿನಾಂಕ:04-09-2021 ರಂದು ಸಮಯ ಸುಮಾರು ಮಧ್ಯಾಹ್ನ 1-30 ಗಂಟೆಗೆ ಆರೋಪಿ Aboobakar(A1) ನು ಬಿರಿಯಾನಿ ಆರ್ಡರ್ ಮಾಡಿದ್ದು ನಂತರ ಖಾಲಿ ಪ್ಲೇಟ್ ನ್ನು ಕೇಳಿದಾಗ ಪಿರ್ಯಾದಿದಾರರು ಪ್ಲೇಟ್ ನ ಹಣವನ್ನು ನೀಡಬೇಕೆಂದು ಹೇಳಿದಾಗ ಆರೋಪಿತನು ಕೋಪಗೊಂಡು ಪಿರ್ಯಾದಿದಾರರಿಗೆ ಬೇವರ್ಸಿ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ದೂಡಿ ಹಾಕಿ ಅಲ್ಲಿಯೇ ಇದ್ದ ಮರದ ಮಣೆಯಿಂದ ಹೊಡೆಯುತ್ತಿರುವುದನ್ನು ನೋಡಿದ ಹೋಟೇಲ್ ನ ಮ್ಯಾನಜರ್ ತಡೆಯಲು ಬಂದಾಗ ಮ್ಯಾನೇಜರ್ ಗೆ ಕೂಡ ಕೈಗೆ ಕಚ್ಚಿ ಹೋಟೇಲ್ ನ ಎದುರಿನ ಗ್ಲಾಸ್ ನ್ನು ಕೈಯಿಂದ ಹೊಡೆದು ಪುಡಿ ಮಾಡಿ ಪಿರ್ಯಾದಿದಾರರಿಗೆ ಸುಮಾರು 10,000/- ರೂ ನಷ್ಟವುಂಟು ಆಗಿರುತ್ತದೆ. ಎಂಬಿತ್ಯಾದಿ

Crime Reported in Traffic South PS

ದಿನಾಂಕ: 03-09-2021 ರಂದು ಪಿರ್ಯಾದಿ MOHAMMOD FAIZAL ರವರು ಸಂಜೆ ಸಮಯ ಕೆಲಸ ಮುಗಿಸಿ ಅವರ ಹೆಂಡತಿಯ ಮನೆಯಾದ ಕುತ್ತಾರು ಮದನಿ ನಗರ ಕಡೆಗೆ ಹೋಗುವರೇ ಅವರ ಪರಿಚಯದ ಅಬ್ದುಲ್ ರಜಾಕ್ ರವರ ಬಾಬ್ತು ಅಟೋ ರಿಕ್ಷಾ ನಂಬ್ರ KA-19-AB-7155 ನೇದರಲ್ಲಿ ಅಬ್ದುಲ್ ರಜಾಕ್ ರವರು ಚಾಲಕರಾಗಿದ್ದು ಬಾಡಿಗೆಯ ಬಗ್ಗೆ ಮನೆಯಿಂದ ನನ್ನ ಹೆಂಡತಿ ಮತ್ತು ಮೂರು ಮಂದಿ ಮಕ್ಕಳ ಜೊತೆ ಪ್ರಯಾಣಿಸುತ್ತಾ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 06-00 ಗಂಟೆಗೆ ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ನಡುಕುಮೇರು ಎಂಬಲ್ಲಿ ತಲುಪುವಾಗ ವಿರುದ್ದ ದಿಕ್ಕಿನಿಂದ ಅಂದರೆ ನಾಟೆಕಲ್ ಕಡೆಯಿಂದ ಕೆ.ಸಿ. ರೋಡ್ ಕಡೆಗೆ ಸ್ಕೂಟರ್ ನಂಬ್ರ: KA-19-HC-4493 ನೇದರ ಸವಾರ ಮಹಮ್ಮದ್ ಹನೀಫ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲ ಬದಿಗೆ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಅಟೋ ರಿಕ್ಷಾದ ಬಲ ಬದಿಗೆ ಡಿಕ್ಕಿಪಡಿಸಿ ಸ್ಕೂಟರ್ ಸಮೇತಾ ಡಾಮಾರು ರಸ್ತೆಗೆ ಬಿದ್ದಿರುತ್ತಾನೆ. ಈ ಅಪಘಾತದಿಂದ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಅಟೋ ರಿಕ್ಷಾವು ನಿಯಂತ್ರಣ ಕಳೆದು ಕೊಂಡು ರಸ್ತೆಯ ಬದಿಯಲ್ಲಿರುವ ಗುಂಡಿಗೆ ಮಗುಚಿ ಬಿದ್ದಿರುತ್ತದೆ.  ಈ ಅಪಘಾತದಿಂದ ಅಟೋ ರಿಕ್ಷಾದಲ್ಲಿದ್ದ ಪಿರ್ಯಾದಿದಾರರಿಗೆ ಮೂಗಿಗೆ ರಕ್ತ ಗಾಯ, ಹೆಂಡತಿಯಾದ ಶ್ರೀಮತಿ ಬುಷ್ರಾ (30 ವರ್ಷ) ರವರಿಗೆ ಮೂಗಿಗೆ ರಕ್ತ ಗಾಯ, ಮಕ್ಕಳಾದ ಫಾಜಿಲ್ (10 ವರ್ಷ) ನಿಗೆ ಹಣೆಗೆ ರಕ್ತ ಗಾಯ, ಫಾಹಿಮ (09 ವರ್ಷ) ಳಿಗೆ ಕೈ ಬೆರಳಿಗೆ ರಕ್ತ ಗಾಯ ಮತ್ತು ಫಿದಾ ( 06 ವರ್ಷ) ಳಿಗೆ ಹಣೆಗೆ ಹಾಗೂ ಕೈ ಬೆರಳಿಗೆ ರಕ್ತ ಗಾಯ ಹಾಗೂ ಅಟೋರಿಕ್ಷಾ ಚಾಲಕ ಅಬ್ದುಲ್ ರಜಾಕ್ ನಿಗೆ ಸಣ್ಣಪುಟ್ಟ ರಕ್ತ ಗಾಯವಾಗಿರುವುದಲ್ಲದೇ ಅಪಘಾತಪಡಿಸಿದ ಸ್ಕೂಟರ್ ಸವಾರನಿಗೆ ಕೂಡಾ ಬಲ ಕಾಲಿಗೆ ಹಾಗೂ ಬಲ ಕೈಗೆ ರಕ್ತ ಗಾಯವಾಗಿರುವುತ್ತದೆ. ಕೂಡಲೇ ಅಲ್ಲಿ ಸೇರಿದ ಜನರು ಗಾಯಾಳುಗಳಾದ ನಮ್ಮನ್ನೆಲ್ಲ ಬೇರೊಂದು ಅಟೋ ರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ಕಣಚೂರು ಅಸ್ಪತ್ರೆಗೆ ಕರೆದು ಕೊಂಡು ಹೋಗಿ ದಾಲಿಸಿರುತ್ತಾರೆ.ಅಪಘಾತ ಸಮಯ ಅಪಘಾತಪಡಿಸಿದ ಸ್ಕೂಟರ್ ಸವಾರನು ಆಸ್ಪತ್ರೆಯ ಚಿಕಿತ್ಸೆ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದು ತದನಂತರ ನಿರಾಕರಿಸಿದ್ದರಿಂದ ಈ ದೂರು ನೀಡಲು ತಡವಾಗಿರುತ್ತದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 04-09-2021 05:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080