ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS          

ದಿನಾಂಕ 04/10/2021 ರಂದು ಅಬ್ದುಲ್ ಹಸೀಬ್ ರವರು ಕೆಎ-19-ಇಎಸ್-8199 ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸಹಸವಾರನಾಗಿ ಇಸ್ಮಾಯಿಲ್ ಸ್ವಾಬೀರ್ ರವರನ್ನು ಕುಳ್ಳಿರಿಸಿಕೊಂಡು ದೇರಳಕಟ್ಟೆಯಿಂದ ಹೊರಟು ನಂತೂರು ಮಾರ್ಗವಾಗಿ ಎನ್ ಹೆಚ್ 66 ರಲ್ಲಿ ಕೆಪಿಟಿ ಕಡೆಯಿಂದ ಬೈಕಂಪಾಡಿ ಕಡೆಗೆ ಹೊರಟು ಬೆಳಿಗ್ಗೆ  04-30 ಗಂಟೆ ಸುಮಾರಿಗೆ ಎಸ್.ಕೆ.ಎಸ್ ಅಪಾರ್ಟ್ ಮೆಂಟ್ನ ಅಡ್ಡರಸ್ತೆಯ ಸ್ವಲ್ಪ ಹಿಂದುಗಡೆಯಲ್ಲಿ ರಸ್ತೆಯ ಬಲಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಸದರಿಯವರ ಹಿಂದೆ ದ್ವಿಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದ, ಪಿರ್ಯಾದಿದಾರರು ನೋಡುತ್ತಿದ್ದಂತೆಯೇ ಅಬ್ದುಲ್ ಹಸೀಬ್ ರವರು ಮೋಟಾರ್ ಸೈಕಲ್ ನ್ನು ಅಜಾಗರೂಕತೆ, ನಿರ್ಲಕ್ಷತನದಿಂದ ಮತ್ತು ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ಡಿವೈಡರ್ ಮೇಲೆ ಹತ್ತಿ ಬಲಭಾಗಕ್ಕೆ ಮಗುಚಿ ಬಿದ್ದ ಪರಿಣಾಮ ಅಬ್ದುಲ್ ಹಸೀಬ್ ರವರ ತಲೆಯು ಡಿವೈಡರ್ ಮದ್ಯದ ಲೈಟ್ ಕಂಬಕ್ಕೆ ಬಡಿದು ಮತ್ತು ಇಸ್ಮಾಯಿಲ್ ಸ್ವಾಬೀರ್ ರವರ ತಲೆಯು ಡಿವೈಡರ್ ಗೆ ಬಡಿದ ಪರಿಣಾಮ ತಲೆ ಮತ್ತು ಮುಖದ ಭಾಗಕ್ಕೆ ಗಂಭೀರ ಗಾಯವಾಗಿ ಚಿಕಿತ್ಸೆಯ ಬಗ್ಗೆ ಎ.ಜೆ.ಆಸ್ಪತ್ರೆಗೆ ಸಾರ್ವಜನಿಕರ ಸಹಾಯದಿಂದ ದಾಖಲಿಸಲ್ಪಟ್ಟವರಲ್ಲಿ ಅಬ್ದುಲ್ ಹಸೀಬ್ ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ಇಸ್ಮಾಯಿಲ್ ಸ್ವಾಬೀರ್ ರವರು ಸದ್ರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Crime Reported in Mangalore North PS

ಪಿರ್ಯಾದಿದಾರರಾದ ಮೋಹನ್ ಕುಮಾರ್ ಬಿ ಸುವರ್ಣ ಎಂಬವರು ಡೊಂಗರಕೇರಿಯಲ್ಲಿ ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ 19-07-2021 ರಂದು ರಾತ್ರಿ 7.00 ಗಂಟೆಗೆ KA-19 HC-3107 ನಂಬ್ರದ ಹೊಂಡಾ ಕಂಪೆನಿಯ ಆಕ್ವೀವಾ 5 ಜಿ ಕಂದು ಬಣ್ಣದ ಸ್ಕೂಟರನ್ನು ಅಂಗಡಿಯ ಪಕ್ಕ ನಿಲ್ಲಿಸಿ  ಕೀಯನ್ನು ಅದರಲ್ಲೇ ಇಟ್ಟು ಹೋಗಿದ್ದು, ರಾತ್ರಿ ಸುಮಾರು 8.30 ಗಂಟೆಗೆ ಅಂಗಡಿ ಬಂದ್ ಮಾಡಿ ಪಾರ್ಕ್ ಮಾಡಿದ ಅದೇ ಸ್ಥಳಕ್ಕೆ ಬಂದು ನೋಡಿದಾಗ ನನ್ನ ಸ್ಕೂಟರ್ ಅಲ್ಲಿ ಇರದೇ ಇದ್ದು  ಈ ಬಗ್ಗೆ  ಇಂದಿನ ದಿನದವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯೂ ಸಿಗದ ಕಾರಣ ತಡವಾಗಿ ದೂರು ನೀಡಿದ್ದು, ಪಿರ್ಯಾದಿದಾರರ ಬಾಬ್ತು  KA-19 HC-3107 ನೇ ನೊಂದಣಿ ನಂಬ್ರದ ಹೊಂಡಾ ಕಂಪೆನಿಯ ಆಕ್ವೀವಾ 5 ಜಿ ಕಂದು ಬಣ್ಣದ ಸ್ಕೂಟರ್‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸ್ಕೂಟರ್‌ನಲ್ಲಿ ಸ್ಕೂಟರ್‌ನ ಮೂಲ ಆರ್‌‌ಸಿ ಇತ್ತು ಎಂಬಿತ್ಯಾದಿಯಾಗಿ ಪಿರ್ಯಾದುದಾರರು ನೀಡಿದ ದೂರಿನ ಸಾರಾಂಶ..

Crime Reported in Traffic South PS

ದಿನಾಂಕ:03.10.2021 ರಂದು ಪಿರ್ಯಾದಿದಾರರಾದ ರೋಹನ್(24) ರವರು ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ವುಶ್  ಚಾಂಪಿಯನ್ ಶಿಪ್ ನಲ್ಲಿ ಮಂಡ್ಯ ಜಿಲ್ಲೆಯ ಕೋಚ್ ಆಗಿ  ನೇಮಿಸಿದ ಪ್ರಕಾರ  ಕ್ರೀಡೆಯಲ್ಲಿ ಭಾಗವಹಿಸಿ ನಂತರ ತಮ್ಮ ಸ್ನೇಹಿತನ ಬೈಕ್  ನಂಬ್ರ:KA-19-EY-9303 ನೇದರಲ್ಲಿ ಮೂಡಬಿದ್ರೆಯಿಂದ  ತಮ್ಮ ಮನೆಯಾದ ಉಳ್ಳಾಲ ಬೈಲ್ ಬರುತ್ತಿರುವ ಸಮಯ ಸುಮಾರು 21.45ಗಂಟೆಗೆ ತೊಕ್ಕಟ್ಟು  ನಿಂದ  ಉಳ್ಳಾಲಕ್ಕೆ  ಹೋಗುವ ಸರ್ವಿಸ್ ರಸ್ತೆಯಲ್ಲಿ  ಇರುವ ಬಾಂಬೆ ಬಜಾರ್  ತಲುಪುತ್ತಿದಂತೆ ತೊಕ್ಕಟ್ಟುಓವರ್ ಬ್ರೀಡ್ಜ್ ನ ಕೊರಗಜ್ಜ ಕಟ್ಟೆ ಕಡೆಯಿಂದ ತೊಕ್ಕಟ್ಟು ಕಡೆಗೆ ಬರುತ್ತಿದ್ದ  KA-21-EB-2291 ನೇದರ ಬೈಕ್ ಸವಾರ ದನೇಶ್ ಬೈಕ್ ಕನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನ ದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಬೈಕ್ ಡಿಕ್ಕಿ ಪಡಿಸಿದ ಪರಿಣಾಮ ಎರಡು ಬೈಕ್ ಸವಾರರು  ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ   ಎಡಗಾಲಿನ  ಕೋಲುಕಾಲಿಗೆ ಗುದಿದ್ದ ಗಾಯ ಹಾಗೂ  ಎಡಗೈ ಬೆರಳಿಗೆ ರಕ್ತ ಗಾಯವಾಗಿದ್ದು  ಸಹರಾ ಆಸ್ಪತ್ರೆಯ ವೈದ್ಯರು ಹೊರರೋಗಿಯಾಗಿ  ಚಿಕಿತ್ಸೆ ನೀಡಿ ಕಳುಹಿಸಿರುತ್ತಾರೆ  ಹಾಗೂ ಅಪಘಾತ ಪಡಿಸಿದ ಬೈಕ್ ಸವಾರ ದನೇಶ್ ನಿಗೆ ಎಡ ತಲೆಗೆ ತೀವ್ರ ಸ್ವರೂಪದ  ಗುದ್ದಿದ ರೀತಿಯ  ಗಾಯ ಹಾಗೂ  ಮುಖ,ದವಡೆಗೆ , ಕೈಕಾಲು ಗಳಿಗೆ ಗುದಿದ್ದ ರೀತಿಯಾ ಗಾಯ ಗಳಾಗಿದ್ದು  ನಂತರ ಇವರನ್ನು ಚಿಕಿತ್ಸೆ ಬಗ್ಗೆ ದೇರಳ ಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ  ಎಂಬಿತ್ಯಾದಿ,

 

Crime Reported in Bajpe PS

“ಫಿರ್ಯಾದಿ Melroy Fernandies ದಾರರು ದಿನಾಂಕ 03.10.2021 ರಂದು ಸಂಜೆ ವೇಳಗೆ ತಮ್ಮ ನೆರೆಕರೆಯ ಸ್ನೇಹಿತ ಹೇಮಂತ ಎಂಬವರ ಮೋಟಾರ್ ಸೈಕಲ್ ನಂಬ್ರ ಕೆಎ-19ಇಎಸ್-1119 ನೇಯದರಲ್ಲಿ ಅದ್ಯಪಾಡಿಗೆ ಹೋಗಿದ್ದು, ನಂತರ ಅಲ್ಲಿಂದ ಮನೆ ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎ-19ಇಎಸ್-1119 ನೇಯದರಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಬರುತ್ತಿರುವಾಗ ಸಂಜೆ ಸುಮಾರು 6:30 ಗಂಟೆಗೆ ಮಂಗಳೂರು ತಾಲೂಕು, ಅದ್ಯಪಾಡಿ ಗ್ರಾಮದ, ಹಳೇ ವಿಮಾನ ರಸ್ತೆಯ ಸ್ವಲ್ಪ ಮುಂದೆ ತಲುಪುತ್ತಿದ್ದಂತೆಯೇ ಮೋಟಾರ್ ಸೈಕಲನ್ನು ಆರೋಪಿ ಹೇಮಂತ್ ರವರು ಅತೀ ವೇಗ ಹಾಗೂ ಅಜಾಗಗೂಕತೆಯಿಂದ ಸವಾರಿ ಮಾಡಿಕೊಂಡು ಬಂದುದರ ಪರಿಣಾಮ  ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಇಬ್ಬರೂ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಫಿರ್ಯಾದಿದಾರರ ಬಲ ಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಗಾಯವಾಗಿದ್ದು, ಅಲ್ಲದೇ ಆರೋಪಿ ಹೇಮಂತರವರ ಬಲಕಾಲಿನ ತೊಡೆಗೆ, ಹಿಮ್ಮಡಿಗೆ ರಕ್ತಗಾಯ ಮತ್ತು ಬಲ ಕೈಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಗಾಯಾಳುಗಳು ಚಿಕಿತ್ಸೆ ಬಗ್ಗೆ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಇಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ” ಎಂಬಿತ್ಯಾದಿ

 

Crime Reported in Ullal PS

ದಿನಾಂಕ. 1-10-2021 ರಂದು ಫಿರ್ಯಾದಿದಾರರಾದ ಅಜೀಜ್ ರವರು ಸಾಕುತ್ತಿದ್ದ ಆಡನ್ನು ಉಳ್ಳಾಲ ಕೋಡಿ ಸೋಲಾರ್ ಕ್ಲಬ್ನ ಎದುರು ಗ್ರೌಂಡಿನಲ್ಲಿ ಮೇಯಲು ಬಿಟ್ಟಿದ್ದನ್ನು ಮದ್ಯಾಹ್ನ 1-30 ಗಂಟೆಯ ಸಮಯಕ್ಕೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದನ್ನು ಫಿರ್ಯಾದಿದಾರರ ಮಗ  ಮಹಮ್ಮದ್ ಅರ್ಬಾಜ್ ಆಲಿ ತಿಳಿಸಿದ್ದು, ಇದಲ್ಲದೆ  ದಿನಾಂಕ. 17-9-2021 ರಂದು ಫಿರ್ಯಾದಿದಾರರ ಸ್ನೇಹಿತ ಮಹಮ್ಮದ್ ಸಮೀರ್  ಯೂಸುಫ್ ರವರು ತೊಕ್ಕೊಟು ಒಳಪೇಟೆಯ ಬಳಿಯಲ್ಲಿ ಮೇಯಲು ಬಿಟ್ಟಿರುವ ಆಡನ್ನು ಕೂಡಾ ಕಾರಿನಲ್ಲಿ ಬಂದಿರುವ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ತಿಳಿಯಿತು ಕಳವಾದ ಆಡುಗಳ ಅಂದಾಜು ಮೌಲ್ಯ ರೂ 8000 ಆಗಬಹುದು  ಎಂಬುದಾಗಿ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ

Crime Reported in Bajpe PS       

 “ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಪ್ರಕರಣದಲ್ಲಿ  ಆರೋಪಿತರ ಪತ್ತೆಯ ಬಗ್ಗೆ ಫಿರ್ಯಾದಿ Poovappa H.M ದಾರರು ಠಾಣಾ ಸಿಬ್ಬಂದಿಯವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಪ್ರಯತ್ನಿಸುತ್ತಿರುವಾಗ ಆರೋಪಿತರು ಮೂಳೂರು ಗ್ರಾಮದ ಬಂಗ್ಲಗುಡ್ಡೆ ಬಳಿ ಇರುವ ನಿರ್ಜನ ಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಂಜೆ ಸುಮಾರು 17:30 ಗಂಟೆಗೆ ಸದ್ರಿ ಸ್ಥಳಕ್ಕೆ ತೆರಳಿದಾಗ  ಸದ್ರಿ ಸ್ಥಳದಲ್ಲಿ ಇಬ್ಬರು ಯುವಕರು ಇದ್ದು ಫಿರ್ಯಾದಿದಾರರನ್ನು ಕಂಡು ಓಡಲು ಪ್ರಯತ್ನಿಸಿದವರನ್ನು ಹಿಡಿದು ವಶಕ್ಕೆ ಪಡೆದು ವಿಚಾರಿಸಲಾಗಿ ಒಬ್ಬನ್ನು ತನ್ನ ಹೆಸರು ಧೀರಜ್ ಇನ್ನೊಬ್ಬನು ಶಕೀರ್ ಎಂಬುದಾಗಿ ತಿಳಿಸಿದ್ದು ಸದ್ರಿ ಆರೋಪಿಗಳು ವಿಚಾರಣೆ ಸಮಯ ತಾವು ಗಾಂಜಾ ಎಂಬ ಅಮಲು ಪದಾರ್ಥ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಂತೆ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಿದಲ್ಲಿ ಆರೋಪಿಗಳು ಗಾಂಜಾ ಎಂಬ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ವೈದ್ಯಾಧಿಕಾರಿಗಳು ದೃಢಪತ್ರ ನೀಡಿದ ಮೇರೆಗೆ ಆರೋಪಿತರ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 04-10-2021 05:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080