ಅಭಿಪ್ರಾಯ / ಸಲಹೆಗಳು

Crime Reported in Mangalore North PS

ಸುಮಾರು 4-5 ದಿನಗಳ ಹಿಂದೆ ಪಿರ್ಯಾದಿದಾರರ ಅಪಾರ್ಟ್ ಮೆಂಟ್ ನ ಎಟ್ರನ್ಸ್ ಗೇಟಿನ ಬಳಿ ಮಂಗಳೂರು ಸಿಟಿ ಕಾರ್ಪೋರೇಷನ್ ರವರು ಸಿಮೆಂಟ್ ಹಾಕಿ ಸರಿ ಮಾಡಿದ್ದು ಇದರ ಮೇಲೆ ಬೇರೆಯವರ ಕಾರು ಹೋಗುವ ವಿಚಾರದಲ್ಲಿ  ಪಿರ್ಯಾದಿದಾರರ ಅಪಾರ್ಟ್ ಮೆಂಟಿನ ಫ್ಲಾಟ್ ನಂ. 101ರಲ್ಲಿ ವಾಸವಾಗಿರುವ ಕೃಷ್ಣಾನಂದ ಕಿಣಿ ಎಂಬವರು ಪಿರ್ಯಾದಿದಾರರ ಗಂಡ ವಿನಾಯಕ ಕಾಮತ್ ರವರೊಂದಿಗೆ ಜಗಳ ಮಾಡಿಕೊಂಡಿದ್ದು, ಇದೇ ವಿಚಾರದಲ್ಲಿ ಪಿರ್ಯಾದಿದಾರರ ಗಂಡ ವಿನಾಯಕ ಕಾಮತ್ ರವರೊಂದಿಗೆ ದ್ವೇಷ ಹೊಂದಿದ್ದವರು ದಿನಾಂಕ. 03-11-2021ರಂದು ರಾತ್ರಿ ಸುಮಾರು 11-00ಗಂಟೆ ಸಮಯಕ್ಕೆ ಪಿರ್ಯಾದಿದಾರರ ಫ್ಲಾಟ್ ನಲ್ಲಿದ್ದ ಕೆಲವರು ದೀಪಾವಳಿ ಪ್ರಯುಕ್ತ ಪಟಾಕಿ ಸಿಡಿಸುತ್ತಿದ್ದುದನ್ನು ಕಂಡು ಪಿರ್ಯಾದಿದಾರರ ಗಂಡ ವಿನಾಯಕ ಕಾಮತ್ ರವರು ಫ್ಲಾಟ್ ನ ಕೆಳಗಡೆ ಹೋಗಿದ್ದ ಸಮಯದಲ್ಲಿ ಪಿರ್ಯಾದಿದಾರರ ಗಂಡನೊಂದಿಗೆ ಕೃಷ್ಣಾನಂದ ಕಿಣಿ ಮತ್ತು ಅವರ ಮಗ ಅವಿನಾಶ್ ಕಿಣಿ ಎಂಬವರು ಸದ್ರಿ ಫ್ಲಾಟಿನ ಪಾರ್ಕಿಂಗ್ ಸ್ಥಳದಲ್ಲಿ ಜಗಳ ಮಾಡುತ್ತಿದ್ದ ಜೋರಾದ ಬೊಬ್ಬೆ ಕೇಳಿ ಪಿರ್ಯಾದಿದಾರರು ಮತ್ತು ಅವರ ಅತ್ತೆ ವಿಜಯಲಕ್ಷ್ಮಿ ರವರು ಫ್ಲಾಟಿನ ಕೆಳಗಡೆ ಹೋದಾಗ ಕೃಷ್ಣಾನಂದ ಕಿಣಿ ರವರು ಕೈಯಲ್ಲಿ ಹಿಡಿದುಕೊಂಡಿದ್ದ ಚೂರಿಯಿಂದ ಪಿರ್ಯಾದಿದಾರರ ಗಂಡ ವಿನಾಯಕ ಕಾಮತ್ ರವರ ಎದೆಯ ಭಾಗಕ್ಕೆ ಚುಚ್ಚುತ್ತಿದ್ದುದಲ್ಲದೇ ಅವರ ಮಗ ಅವಿನಾಶ್ ಕಿಣಿ ಎಂಬವರು ಕೂಡಾ ಪಿರ್ಯಾದಿದಾರರ ಗಂಡನನ್ನು ದೂಡುತ್ತಾ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂಬುವುದಾಗಿ ಹೇಳಿ ಅವರಿಬ್ಬರು ಪಿರ್ಯಾದಿದಾರರ ಗಂಡನನ್ನು ಕೊಲ್ಲುವ ಉದ್ದೇಶದಿಂದಲೇ ಅವರಿಬ್ಬರ ಪೈಕಿ ಕೃಷ್ಣಾನಂದ ಕಿಣಿ ಎಂಬವರು ಕೈಯಲ್ಲಿ ಹಿಡಿದುಕೊಂಡಿದ್ದ ಚೂರಿಯಿಂದ ಎದೆಯ ಭಾಗಕ್ಕೆ ಚುಚ್ಚಿದ ಪರಿಣಾಮ ಪಿರ್ಯಾದಿದಾರರ ಗಂಡ ವಿನಾಯಕ ಕಾಮತ್ ಎಂಬವರಿಗೆ ವಿಪರೀತ ರಕ್ತ ಗಾಯವಾಗಿ ಕುಸಿದು ಬಿದ್ದಿದ್ದವರನ್ನು ಅಲ್ಲಿದ್ದ ಅಪಾರ್ಟ್ ಮೆಂಟಿನ ನೀರವ್ ಶಾ ಮತ್ತು ಪಿರ್ಯಾದಿದಾರರ ಅತ್ತೆ ಮತ್ತಿತರರು ಸೇರಿ ಚಿಕಿತ್ಸೆ ಬಗ್ಗೆ ಕೊಡಿಯಾಲ್ ಬೈಲ್ ನ ಯೇನಪೊಯ್ಯ ಆಸ್ಪತ್ರೆಗೆ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು, ಪಿರ್ಯಾದಿ ಗಂಡ ವಿನಾಯಕ ಕಾಮತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ. 04-11-2021ರಂದು 01-40ಗಂಟೆಗೆ ಮೃತ ಪಟ್ಟಿರುತ್ತಾರೆ, ಪಿರ್ಯಾದಿದಾರರ ಗಂಡನ್ನು ಕೊಲೆ ಮಾಡಿದ ಕೃಷ್ಣಾನಂದ ಕಿಣಿ ಮತ್ತು ಅವಿನಾಶ್ ಕಿಣಿ ರವರ ಮತ್ತು ಅವಿನಾಶ್ ಕಿಣಿ ರವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂಬಿತ್ಯಾದಿ ಸಾರಾಂಶ.

Crime Reported in Mangalore East Traffic PS               

ಪಿರ್ಯಾದಿದಾರರಾದ ಶ್ರೀಮತಿ ಗ್ರೇಸಿ ಡಿ’ಕುನ್ಹ ರವರು ದಿನಾಂಕ: 03-11-2021 ರಂದು ತನ್ನ ಮನೆಯಿಂದ ನಡೆದುಕೊಂಡು ಕರಂಗಲ್ಪಾಡಿಯಲ್ಲಿರುವ ಪ್ರಭು ಬೇಕರಿಗೆ ತಿಂಡಿ ತಿನಸುಗಳನ್ನು ಖರೀದಿಸಲು ಹೋಗುತ್ತಾ ಸಂಜೆ ಸಮಯ ಸುಮಾರು 6-30 ಗಂಟೆಗೆ ಕರಂಗಲ್ಪಾಡಿಯಲ್ಲಿರುವ ಪ್ರಭು ಬೇಕರಿ ಮುಂದುಗಡೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ರಸ್ತೆಯನ್ನು ದಾಟುತ್ತಿದ್ದ ವೇಳೆ ಪಿ.ವಿ.ಎಸ್ ಕಡೆಯಿಂದ ಬಂಟ್ಸ್ ಹಾಸ್ಟೇಲ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ KA-19-HD-8666 ನಂಬ್ರದ ಸ್ಕೂಟರನ್ನು ಅದರ ಸವಾರ ವಿಘ್ನೇಶ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಎಡಭಾಗಕ್ಕೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಕಾಂಕ್ರೀಟ್ ರಸ್ತೆಗೆ ಬಿದ್ದು ಹಣೆಯ ಎಡ ಭಾಗಕ್ಕೆ ರಕ್ತ ಗಾಯ ಹಾಗೂ ಎಡ ಭಾಗದ ಸೊಂಟಕ್ಕೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾದವರನ್ನು ಆರೋಪಿ ಸ್ಕೂಟರ್ ಸವಾರನೇ ವಿನಯ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ.

 

Crime Reported in Kankanady Town PS

ಪಿರ್ಯಾದು Narayan M K ದಾರರು  ದಿನಾಂಕ 03-11-2021 ರಂದು  ಹೊಯ್ಸಳ -12 ಇಲಾಖಾ ವಾಹನದಲ್ಲಿ ರೌಂಡ್ಸ್  ಕರ್ತವ್ಯಕ್ಕೆ ನೇಮಿಸಿದಂತೆ ಠಾಣಾ ಪಿಸಿ  ಸದಾಶಿವರೊಂದಿಗೆ ಕರ್ತವ್ಯದಲ್ಲಿದ್ದು, ಪಂಪುವೆಲ್ ಜಂಕ್ಷನ್ ನಲ್ಲಿರುವ  ಸಮಯ ಕಂಟ್ರೋಲ್ ರೂಂ ನಿಂದ 16-00 ಗಂಟೆಗೆ  ನಿಸ್ತಂತು ಕರೆಯಲ್ಲಿ  ಜಪ್ಪಿನಮೊಗರು ಗ್ರಾಮದ ಮಹಾಕಾಳಿ ಪಡ್ಪು ಕಡೆ ಹೋಗಲು ತಿಳಿಸಿದ ಮೇರೆಗೆ ಕೂಡಲೇ ಜಪ್ಪಿನಮೊಗರು ಮಹಾಂಕಾಳಿ ಪಡ್ಪು ಜಂಕ್ಷನ್ ಗೆ ಹೊರಟು ಅಲ್ಲಿ ತಲುಪಿದ ಸಮಯ ಓರ್ವ ವ್ಯಕ್ತಿಯನ್ನು ರಾ. ಹೆದ್ದಾರಿಯ ಮಹಾಕಾಳಿ ಪಡ್ಪು ಜಂಕ್ಷನ್ ನ ಬಳಿಯಿರುವ ಟ್ರಾಪಿಕ್ ಪಾಯಿಂಟ್ ಕರ್ತವ್ಯದಲ್ಲಿದ್ದ  ಟ್ರಾಪಿಕ್  ಪೊಲೀಸ್ ಸಿಬ್ಬಂದಿ ನಾಗಪ್ಪ ಗಡದ್ ಕುಳ್ಳಿರಿಸಿದ್ದು ಸದ್ರಿ ವ್ಯಕ್ತಿಯ ಬಳಿ ಸಾರ್ವಜನಿಕರು ಸೇರಿದ್ದು ವಿಚಾರಿಸಿದಾಗ  ಈತ ಈ ದಿನ  ಸಂಜೆ 3.45  ಕ್ಕೆ ಸಿಟಿ ಬಸ್ಸ್ 42 ನೇ ರೂಟ್ ನಂಬ್ರ ಶ್ರೀ ಕಟೀಲ್ ಎಂಬ ಖಾಸಗಿ ಬಸ್ಸಿನಲ್ಲಿ ತೊಕ್ಕೊಟ್ಟಿನಿಂದ ಹತ್ತಿ ಮಂಗಳೂರಿಗೆ ಬರುತ್ತಿರುವ ಸಮಯ ಸದ್ರಿ ವ್ಯಕ್ತಿಯು ಅತನ ಮೊಬೈಲ್ ನಲ್ಲಿ ಮುಂದುಗಡೆ ಸೀಟ್ ನಲ್ಲಿ ಕುಳಿತ ಹೆಂಗಸರ ವಿಡಿಯೋ ಚಿತ್ರಿಕರಣ ಮಾಡುವ ಸಮಯದಲ್ಲಿ ಬಸ್ಸಿನ ಕಂಡೆಕ್ಟರ್ ,ಬಸ್ಸಿನ  ಪ್ರಯಾಣಿಕರು ವಿಷಯ ತಿಳಿದು ಅತನನ್ನು ಪ್ರಶ್ನಿಸಿದಾಗ ಆತನ ಮೊಬೈಲ್ ನಲ್ಲಿ ಹೆಂಗಸರ ವಿಡಿಯೋ ಚಿತ್ರಿಕರಣವಿದ್ದು ಸದ್ರಿ ವ್ಯಕ್ತಿಯ ಹೆಸರು ಮಡಿಕೇರಿಯ ಮಹಮ್ಮದ್ ಎಂಬುದಾಗಿ  ತಿಳಿಯಿತು . ಸದ್ರಿ ಮಹಮ್ಮದ್  ಎಂಬಾತನು ಸಾರ್ವಜನಿಕವಾಗಿ ಹೆಣ್ಣು ಮಕ್ಕಳಿಗೆ ಮಾನ ಹಾನಿಕರವಾಗಿ ವರ್ತನೆ ಮಾಡಿ ತನ್ನ ಮೊಬೈಲ್ ನಲ್ಲಿ ಹೆಂಗಸರ  ವಿಡಿಯೋ ಚಿತ್ರೀಕರಣವನ್ನು  ಸೆರೆಹಿಡಿದಿರುವುದಲ್ಲದೆ ಹೆಂಗಸರ ಮಾನಕ್ಕೆ ಕುಂದು ಉಂಟು ಮಾಡುವ ರೀತಿಯಲ್ಲಿ ವರ್ತಿಸಿರುವುದರಿಂದ ಆತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Crime Reported in Moodabidre PS

ಪಿರ್ಯಾದಿ Smt Meena (55) ದಾರರು ಗುತ್ತಬೆಟ್ಟು, ಪಡುಮಾರ್ನಾಡು ಗ್ರಾಮದ ಸರ್ವೆ ನಂಬ್ರ 78/5 ರಲಿನ್ಲ ಜಾಗದಲ್ಲಿ ವಾಸ್ತವ್ಯವನ್ನು ಹೊಂದಿದ್ದು, ನೆರೆ ಮನೆಯ ನಿವಾಸಿಗಳಾದ ಆರೋಪಿ ರಾಜು, ಲೋಕಯ್ಯ ಮತ್ತು ಇತರರು ದಿನಾಂಕ: 03-11-2021 ರಂದು ಬೆಳಗ್ಗೆ ಸುಮಾರು 10-30 ಗಂಟೆಯ ಸಮಯಕ್ಕೆ ಪಿರ್ಯಾಧಿದಾರರಿಗೆ ಸೇರಿದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾಧಿದಾರರಿಗೆ ಸೇರಿದ ಕಂಪೊಂಡು ಗೋಡೆಯ ಕಲ್ಲಿನ ಕಂಬಳಗಳನ್ನು ತುಂಡುಮಾಡಿ, ಅಲ್ಲಿಗೆ ಬಂದು ಪಿರ್ಯಾಧಿದಾರರು ಆರೋಪಿತರಲ್ಲಿ ‘ನಮ್ಮ ಆಸ್ತಿಯ ಕಂಪೊಂಡನ್ನು ಯಾಕೆ ಹಾಳು  ಮಾಡುತ್ತಿರೆಂದು’  ಕೇಳಿದಾಗ  ಆರೋಪಿ ಪಿರ್ಯಾಧಿದಾರರಿಗೆ “ಬೇವರ್ಸಿ, ನಿನ್ನಂತಹ ಹೆಂಗಸಿಗೆ ನಾವು ಯಾಕೆ ಉತ್ತರ ಕೊಡಬೇಕು?, ನಿನಗೆ ಹೇಗೆ ಬುದ್ದಿ ಕಲಿಸಬೇಕೆಂದು ನಮಗೆ ಗೊತ್ತಿದೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ, ಹಾಗೂ ಆರೋಪಿಗಳು ಮುರಕಲ್ಲಿನ ಕಂಪೊಂಡು ನಾಶಪಡಿಸಿರುವುದರಿಂದ ಸುಮಾರು 25,000/-ನಷ್ಟ ಆಗಿದೆ ಎಂಬಿತ್ಯಾಧಿ

 

ಇತ್ತೀಚಿನ ನವೀಕರಣ​ : 04-11-2021 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080