ಅಭಿಪ್ರಾಯ / ಸಲಹೆಗಳು

Crime Reported in Mangalore Rural PS

ದಿನಾಂಕ 03-12-2021 ರಂದು ಪಿರ್ಯಾದಿ Suresh Kumar Y ವರರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ರಾತ್ರಿ ಸಮಯ 09.30 ಗಂಟೆಗೆ ಮಂಗಳೂರು ತಾಲೂಕು ನೀರುಮಾರ್ಗ ಗ್ರಾಮದ ರಂಗಪಾದೆ ಸಾರ್ವಜನಿಕ ಜಾಗದ ಬಳಿ ಮಾದಕ ವಸ್ತುವಾದ ಗಾಂಜ ಸೇವನೆ ಮಾಡುತ್ತಿದ್ದ ಆರೋಪಿ ಶೇಕ್ ಅನ್ಸೂರ್ (33) ವಾಸ: ರಂಗಪಾದೆ, ಕರಾವಳಿ ಕಾಲೇಜು ಬಳಿ ಬೊಂಡಂತಿಲ ಗ್ರಾಮ ಮಂಗಳೂರು ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

Crime Reported in Traffic North PS

ದಿನಾಂಕ 04-12-2021 ರಂದು ಪಿರ್ಯಾದಿ Radha Chetti ದಾರರ ಚಿಕ್ಕಪ್ಪನಾದ ಅಯ್ಯಪ್ಪ ರವರು ಹೊಸಬೆಟ್ಟುವಿನ ಕೊರ್ದಬ್ಬು ದೈವಸ್ಥಾನದ ಎದುರಿನಲ್ಲಿ ರಾ ಹೆ 66 ನೇ ರಸ್ತೆಯನ್ನು ದಾಟುತ್ತಾ ರಸ್ತೆಯ ಇನ್ನೊಂದು ಬದಿಗೆ ತಲುಪುತ್ತಿದ್ದಂತೆ ಬೆಳಿಗ್ಗೆ ಸಮಯ ಸುಮಾರು 08:30 ಗಂಟೆಗೆ ಸುರತ್ಕಲ್ ಜಂಕ್ಷನ್ ಕಡೆಯಿಂದ ಬೈಕಂಪಾಡಿ ಕಡೆಗೆ KA-47-M-6208 ನಂಬ್ರದ ಬಿಳಿ ಬಣ್ಣದ ಆಡಿ ಕಾರನ್ನು ಅದರ ಚಾಲಕ ರಮೇಶ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ NH ಡಾಮಾರು ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಡುತ್ತಿದ್ದ ಅಯ್ಯಪ್ಪ ರವರಿಗೆ ಡಿಕ್ಕಿ ಪಡಿಸಿ ಬಳಿಕ ಕಾರು ಬಲ ಬದಿಗೆ ಚಲಸಿ ರಸ್ತೆಯ ಮಧ್ಯದ ಡಿವೈಡರನಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಪಡಿಸಿ ಕಾರು ಇನ್ನೂ ಮುಂದಕ್ಕೆ ಚಲಿಸಿ, ಅಂದರೆ ಬೈಕಂಪಾಡಿ ಜಂಕ್ಷನ್ ಕಡೆಯಿಂದ ಸುರತ್ಕಲ್ ಕಡೆಗೆ ಹಾದು ಹೋಗುವ NH ಡಾಮಾರು ರಸ್ತೆಯಲ್ಲಿ ಹೋಗಿ ನಿಂತಿದ್ದು, ಈ ಅಪಘಾತದಿಂದ ಅಯ್ಯಪ್ಪ ರವರಿಗೆ ಹೊಟ್ಟೆಗೆ ಗುದ್ದಿದ ರೀತಿ ಗಂಭೀರ ಸ್ವರೂಪದ ಒಳಗಾಯವಾಗಿದ್ದು ಅಲ್ಲದೇ ತಲೆಯ ಹಿಂಭಾಗಕ್ಕೆ ರಕ್ತ ಗಾಯವಾಗಿದ್ದು ಹಾಗೂ ಎರಡೂ ಕೈಗಳಲ್ಲಿ ಅಲ್ಲಲ್ಲಿ ತರಚಿದ ರೀತಿಯ ಗಾಯವಾಗಿ ಮುಕ್ಕ ಶ್ರಿನಿವಾಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in Panambur PS

ದಿನಾಂಕ 04-12-2021 ರಂದು ಉಮೇಶ್ ಕುಮಾರ್ ಎಂ.ಎನ್. ಪೊಲೀಸ್ ಉಪ ನಿರೀಕ್ಷಕರು, ಪಣಂಬೂರು ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯಾದ ಪಿ .ಸಿ ದಾದಾಸಾಬ್ ರವರು ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ 12.00 ಗಂಟೆಗೆ ಪಣಂಬೂರು ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕು ಬೆಂಗ್ರೆ ಗ್ರಾಮದ ತೋಟ ಬೆಂಗ್ರೆಗೆ ಹೋಗುವ ರಸ್ತೆಯ ಬದಿಯಲ್ಲಿ ಒಬ್ಬಾತನು ನಡೆದುಕೊಂಡು ಬರುತ್ತಿದ್ದು, ಅಮಲು ಪದಾರ್ಥ ಸೇವಿಸಿದವರಂತೆ ಕಂಡುಬಂದಿದ್ದು, ಸದ್ರಿಯವನನ್ನು ವಿಚಾರಿಸಿ ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ಬಗ್ಗೆ ವೈದ್ಯಾಧಿಕಾರಿಗಳು, ಎ,ಜೆ.ಆಸ್ಪತ್ರೆ, ಕುಂಟಿಕಾನ, ಮಂಗಳೂರುರವರ  ಬಳಿ ಕಳುಹಿಸಿಕೊಟ್ಟಿದ್ದು. ವೈದ್ಯಾಧಿಕಾರಿಗಳು ಪರೀಕ್ಷಿಸಿ ಗಾಂಜಾ ಸೇವನೆ ಮಾಡಿರುವುದಾಗಿ ವರದಿ ನೀಡಿದಂತೆ  ಭವೀಶ್ ಪ್ರಾಯ19 ವರ್ಷ, ವಾಸ:ಡೋರ್ ನಂ. 2-87 ತೋಟ ಬೆಂಗ್ರೆ, ಮಂಗಳೂರು ಎಂಬುವರು ಎಂಬವನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿಯಾಗಿರುತ್ತದೆ.

Crime Reported in Moodabidre PS        

ದಿನಾಂಕ:03-12-2021 ರಂದು ಸಂಜೆ 5.45 ಗಂಟೆಗೆ ಪಿರ್ಯಾದಿ Yogisha Poojary ಅಣ್ಣ ಸುಧಾಕರ ಪೂಜಾರಿರವರು ಅವರ ಬಾಬ್ತು ಮೋಟಾರು ಸೈಕಲ್ ನಂ. ಕೆಎ-19-ಡಬ್ಲ್ಯೂ-9712 ನೇ ದರಲ್ಲಿ ಕೆಲಸ ಮುಗಿಸಿ ಕೆಲ್ಲಪುತ್ತಿಗೆಯಿಂದ ಮನೆಗೆ ತೆರಳುತ್ತಿರುವಾಗ ಕೆಂಪುಳ ನಾಗಬನ ಬಳಿ ತಿರುವಿನಲ್ಲಿ ತಲುಪುತ್ತಿದ್ದಂತೆ ಎದುರುಗಡೆಯಿಂದ ಅಂದರೆ ಮೂಡುಮಾರ್ನಾಡು ಕಡೆಯಿಂದ ಕೆಲ್ಲಪುತ್ತಿಗೆಯ ಕಡೆಗೆ ಕೆಎ-19- ಎಎ-0486 ನೇ ಟಿಪ್ಪರ್ ಚಾಲಕ ಸೋಮನಾಥ ನಾಯ್ಕ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಅಣ್ಣನಾದ ಸುಧಾಕರ ಪೂಜಾರಿಯವರ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಸುಧಾಕರ ಪೂಜಾರಿಯವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟಿದ್ದು, ಹಿಂದಿನಿಂದ ಮೋಟಾರು ಸೈಕಲ್ ನಲ್ಲಿ ಬರುತ್ತಿದ್ದ  ಪಿರ್ಯಾದಿದಾರರು ಕೂಡಲೇ ಸುಧಾಕರ ಪೂಜಾರಿಯವರನ್ನು ಉಪಚರಿಸಿ ನೋಡಿದಾಗ ಸುಧಾಕರ ಪೂಜಾರಿಯವರಿಗೆ ಬಲಕೈಗೆ, ಭುಜಕ್ಕೆ, ತಲೆಗೆ ರಕ್ತಗಾಯವಾಗಿದ್ದು ಅವರನ್ನು ಕಾರ್ಕಳದ ಸ್ಪಂದನ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 04-12-2021 07:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080