ಅಭಿಪ್ರಾಯ / ಸಲಹೆಗಳು

Crime Reported in Mangalore South PS

ಪಿರ್ಯಾದಿ ATHIKA BEGUM ದಾರರು ಅವರ ಮಗಳಾದ ಸಲೀನಾ ಎಂಬವರು ವಾಸವಾಗಿರುವ ಬೋಳಾರದ ಶಾದಿ ಮಹಲ್ ಹತ್ತಿರದಲ್ಲಿರುವ ಮನೆಗೆ ಬಂದಿರುತ್ತಾರೆ. ಅವರು ದಿನಾಂಕ: 30-12-2021 ರಂದು 13.00 ಗಂಟೆಗೆ ಅವರ ಮಗಳ ಮನೆಯಿಂದ ಸುರತ್ಕಲ್ ಗೆ ಕಾರ್ಯಕ್ರಮಕ್ಕೆ ಹೋಗಲು ಫ್ಲಾಟಿನ ಒಳಗಡೆಯಿಂದ ಗೇಟಿನ ಬಳಿ ಬರುತ್ತಿದ್ದಂತೆ, ಫ್ಲಾಟಿನ ಕಂಪೌಂಡ್ ಒಳಗಡೆಯಿಂದ  ಗ್ರೇ ಬಣ್ಣದ ಕಾರು ಒಂದು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು, ಪಿರ್ಯಾದಿದಾರರ ಸೊಂಟಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಕೆಳಗೆ ಬಿದ್ದು, ಸೊಂಟಕ್ಕೆ ಹಾಗೂ ಕಾಲಿಗೆ ಗುದ್ದಿದ್ದ ಗಾಯಗಳಾಗಿರುತ್ತವೆ. ಪಿರ್ಯಾದಿದಾರರ ಮಗಳು, ಅಳಿಯ ಮತ್ತು ಅಲ್ಲಿದ್ದ ಜನರ ಸಹಾಯದಿಂದ ಚಿಕಿತ್ಸೆ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಪಿರ್ಯಾದಿದಾರರಿಗೆ ಚಿಕಿತ್ಸೆ ಬಗ್ಗೆ ಕೆಎ 19 ಎಬಿ 0478 ನಂಬ್ರದ ಕಾರಿನ ಚಾಲಕ ಖರ್ಚು ವೆಚ್ಚಗಳನ್ನು ನೀಡುವುದಾಗಿ ತಿಳಿಸಿದ್ದು,  ಈ ವರೆಗೆ ಚಿಕಿತ್ಸೆ ಬಗ್ಗೆ ತಗುಲಿದ  ಖರ್ಚಿನ ಕುರಿತು ಮಾತನಾಡಲು ಬಾರದ ಕಾರಣ ಹಾಗೂ ಹೈಲ್ಯಾಂಡ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿರುವುದರಿಂದ ದೂರು ನೀಡಲು ತಡವಾಗಿರುತ್ತದೆ. ಆದ್ದರಿಂದ ಪಿರ್ಯಾದಿದಾರರಿಗೆ ಅಪಘಾತ ವೆಸಗಿ ತೀವ್ರತರ ಗಾಯ ಮಾಡಿದ ಕೆಎ 19 ಎಬಿ 0478 ನಂಬ್ರದ ಕಾರಿನ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಬೇಕಾಗಿ ವಿನಂತಿ.

 

Crime Reported in Mangalore East Traffic PS                         

ದಿನಾಂಕ: 04-01-2022 ರಂದು ಪಿರ್ಯಾದಿದಾರರಾದ ರಾಕೇಶ್ ರವರ ತಂದೆ ವಸಂತ ಆಚಾರ್ಯರವರು ಕೆಲಸ ಮುಗಿಸಿ ಮನೆಯಾದ ವ್ಯಾಸನಗರ ಕಡೆಗೆ ನಡೆದುಕೊಂಡು ಹೋಗುತ್ತಾ ಕೆಪಿಟಿ ಜಂಕ್ಷನ್ ಬಳಿ ಇರುವ ಕದ್ರಿ ಕಾರ್ ಏರ್ ಕಂಡಿಶನಿಂಗ್  ಕಾರು ರಿಪೇರಿ ಗ್ಯಾರೇಜ್ ಮುಂಭಾಗ ಕುಂಟಿಕಾನ ಕಡೆಯಿಂದ ಕೆ ಪಿ ಟಿ ಜಂಕ್ಷನ್ ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ನೇ ಡಾಮಾರು ರಸ್ತೆಯನ್ನು ದಾಟುತ್ತಿದ್ದ ವೇಳೆ  ರಾತ್ರಿ ಸಮಯ ಸುಮಾರು 8:20 ಗಂಟೆಗೆ ಮೇಘರಾಜ್ ಎಂಬವರು ಕುಂಟಿಕಾನ ಕಡೆಯಿಂದ ಕೆ ಪಿಟಿ ಕಡೆಗೆ KA-19-HB-6866 ನಂಬರಿನ ಸ್ಕೂಟರನ್ನು ನಿರ್ಲಕ್ಷ್ಯತನ ಹಾಗೂ ದುಡುಕುತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ತಂದೆ ವಸಂತ ಆಚಾರ್ಯರವರಿಗೆ ಢಿಕ್ಕಿಪಡಿಸಿದ ಪರಿಣಾಮ ರಾ.ಹೆ 66 ನೇ ಡಾಮಾರು ರಸ್ತೆಗೆ ಬಿದ್ದು, ತಲೆಯ ಬಲಬದಿ ಒಳಭಾಗ ರಕ್ತ ಹೆಪ್ಪುಗಟ್ಟಿದ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಅಪಘಾತ ಪಡಿಸಿದ ಸ್ಕೂಟರ್ ಸವಾರನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಎಂಬಿತ್ಯಾದಿ.

 

Crime Reported in Traffic North Police Station                 

ದಿನಾಂಕ 05-01-2022 ರಂದು ಪಿರ್ಯಾದಿ Y. Keshava Bhat (60) ದಾರರ ಚಿಕ್ಕಮ್ಮನ ಮಗ ಶ್ರೀಹರ್ಷ ಕುಮಾರ್ ಎಮ್ ಹೆಚ್ ರವರು ಸುರತ್ಕಲ್ ಅಂಚೆ ಕಛೇರಿಯಲ್ಲಿ ಕೆಲಸ ಮುಗಿಸಿಕೊಂಡು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹಾದು ಹೋಗುವ ರಾ ಹೆ 66 ನೇ ರಸ್ತೆಯನ್ನು ದಾಟಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹಾದು ಹೋಗುವ ರಸ್ತೆಯನ್ನು ದಾಟುವ ಸಲುವಾಗಿ ರಸ್ತೆಗೆ ಇಳಿದು ನಡೆದು ಕೊಂಡು ಹೋಗುತ್ತಿದ್ದ ಬೆಳಿಗ್ಗೆ ಸಮಯ ಸುಮಾರು 10:30 ಸುರತ್ಕಲ್ ಜಂಕ್ಷನ್ ಕಡೆಯಿಂದ ಮಂಗಳೂರು ಕಡೆಗೆ KA-19-MG-1732 ನಂಬ್ರದ ಕಾರನ್ನು ಅದರ ಚಾಲಕ ಅಭಿಲಾಷ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಶ್ರೀಹರ್ಷ ಕುಮಾರ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಎರಡು ಪಕ್ಕೆಲುಬುಗಳು ಮುರಿದಿರುವ ಗಂಭೀರ ಸ್ವರೂಪದ ಗಾಯವಾಗಿದ್ದು ಹಾಗೂ ಬಲ ಕಾಲು ಮತ್ತು ಎಡ ಕಾಲಿನ ಬಳಿ, ಎಡ ಮತ್ತು ಬಲ ಕೈಯ ಮುಂಭಾಗದಲ್ಲಿ ತರಚಿದ ರಕ್ತ ಗಾಯ ಮತ್ತು ಹಣೆಯ ಬಲ ಬದಿ ಕತ್ತಿರಸಿದ ರಕ್ತ ಗಾಯವಾಗಿ ಮೂಗಿನಲ್ಲಿ ರಕ್ತ ಬರುತ್ತಿದ್ದು ಪದ್ಮಾವತಿಯಲ್ಲಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 05-01-2022 07:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080