ಅಭಿಪ್ರಾಯ / ಸಲಹೆಗಳು

Crime Reported in : Traffic North PS

ದಿನಾಂಕ: 04-03-2022 ರಂದು ಪಿರ್ಯಾದಿ Hema Munjal ದಾರರು ತನ್ನ ಗೆಳೆಯ ಶನ್ನನ್ ಸುವರ್ಣರವರೊಂದಿಗೆ ಶನ್ನನ್ ಸುವರ್ಣ ರವರ ಬಾಬ್ತು KA-19-EZ-0027 ನಂಬ್ರದ KTM Duke ಮೋಟಾರ್ ಸೈಕಲಿನಲ್ಲಿ ಶನ್ನನ್ ಸುವರ್ಣ ರವರು ರಾತ್ರಿ ಮುಕ್ಕ ಬೀಚ್ ಕಡೆಗೆ ಸವಾರಿ ಮಾಡಲು ಹೋಗಿದ್ದವರು ಬಳಿಕ ಮುಕ್ಕ ಬೀಚ್ ಬೀಚ್ ನಲ್ಲಿ ಕೆಲಕಾಲ ಕಳೆದು ಬಳಿಕ ಅಲ್ಲಿಂದ ಮಧ್ಯರಾತ್ರಿ ಸುಮಾರು 01:30 ಗಂಟೆಗೆ (ದಿನಾಂಕ:05-03-2022 ರಂದು) ಹೊರಟು ಮಂಗಳೂರು ಕಡೆಗೆ ಬರುತ್ತಾ ಸದ್ರಿ ಮೋಟಾರ್ ಸೈಕಲಿನಲ್ಲಿ ಪಿರ್ಯಾದಿದಾರರು ಸಹ ಸವಾರೆಯಾಗಿ ಕುಳಿತುಕೊಂಡು NITK Toll Gate ಬಳಿ ರಸ್ತೆಯ ಹಂಪ್ಸ್ ನಲ್ಲಿ ತಲುಪುತ್ತಿದ್ದಂತೆ ಮಧ್ಯರಾತ್ರಿ 01:45 ಗಂಟೆಗೆ ಮೋಟಾರ್ ಸೈಕಲನ್ನು ಶನ್ನನ್ ಸುವರ್ಣನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆ ಹಂಪ್ಸ್ ನಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿದ ಪರಿಣಾಮ ಸಹಸವಾರೆಯಾಗಿ ಕುಳಿತಿದ್ದ ಪಿರ್ಯಾದಿ ಹೇಮ ಮುಂಜಲ್ ರವರು ಮೋಟಾರ್ ಸೈಕಲಿನ ನಿಯಂತ್ರಣ ತಪ್ಪಿ NH 66ನೇ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಕೈ ರಿಸ್ಟ್ ಗೆ ಮೂಳೆ ಮುರಿತದ, ಬಲಕಾಲಿನ ಮಣಿಗಂಟಿಗೆ ಮೂಳೆ ಮುರಿತಗೊಂಡು ಮಾಂಸ ಹರಿದ ರೀತಿಯ ಗಂಭೀರ ಸ್ವರೂಪದ ಗಾಯವಾಗಿದ್ದು, ಅಲ್ಲದೇ ತಲೆಯ ಎಡಬದಿಗೆ ಗುದ್ದಿದ ರೀತಿಯ ಗಾಯವಾಗಿದ್ದು, ಹಣೆಯ ಎಡ ಮತ್ತು ಬಲಬದಿಗೆ, ಎಡಕಣ್ಣಿನ ಎಡಬದಿಯ ಕೆನ್ನೆಗೆ, ಎಡಕಣ್ಣಿನ ಕೆಳಭಾಗ, ಮೂಗು ಮತ್ತು ಮೇಲ್ತುಟಿಗೆ, ಬಲಕಾಲಿನ ಮೊಣಗಂಟಿಗೆ, ಬಲಕೈ ಬೆರಳುಗಳ ಬುಡಕ್ಕೆ ಅಲ್ಲಲ್ಲಿ ತರಚಿದ ರೀತಿಯ ಗಾಯವಾಗಿ ಮುಕ್ಕದ ಶ್ರೀನಿವಾಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಜ್ಯೋತಿ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಎಂಬಿತ್ಯಾದಿ.

Crime Reported in CEN Crime PS

1)  ಪಿರ್ಯಾದಿದಾರರು ಮಂಗಳೂರಿನ ಕಾಲೆಜೊಂದರಲ್ಲಿ ಶಿಕ್ಷಕಿಯಾಗಿದ್ದು ಮಂಗಳೂರಿನ ಕೊಡಿಯಾಲ್ ಬೈಲ್ ಬ್ರಾಂಚಿನ ಯೂನಿಯನ್ ಬ್ಯಾಂಕ್ ಖಾತೆ  ಹಾಗೂ ಮೂಡಬಿದ್ರೆ ಬ್ರಾಂಚಿನ  ಹೆಚ್.ಡಿ.ಎಫ್.ಸಿ ಬ್ಯಾಂಕ್ ನಲ್ಲಿ ಖಾತೆ ನ್ನ ಹೊಂದಿರುವುದಾಗಿದೆ. ಪಿರ್ಯಾದಿದಾರರ ಹೆಸರಿನಲ್ಲಿ ಅವರ ಅಣ್ಣ ಕನ್ನಡ ಮ್ಯಾಟ್ರಿಮೋನಿಯಲ್ಲಿ ಪ್ರೊಫೈಲ್ ಒಂದನ್ನು ತೆರೆದಿದ್ದು ಅದರ ಮುಖೇನ ಅನಿಲ್ ಚಂದ್ರ (ಮ್ಯಾಟ್ರಿಮೋನಿ ಐ.ಡಿ E6130230) ಎಂಬಾತನ ಪ್ರೊಫೈಲನ್ನು ಪಿರ್ಯಾದಿದಾರರಿಗೆ ಶೇರ್ ಮಾಡಿ ಆತನ  ಮೊಬೈಲ್ ನಂಬ್ರ (+32460225418) ವನ್ನು ನೀಡಿರುತ್ತಾರೆ. ನಂತರದ ದಿನಗಳಲ್ಲಿ ದಿನಾಂಕ 07-02-2022 ರಿಂದ ಪಿರ್ಯಾದಿದಾರರು ಅನಿಲ್ ಚಂದ್ರ ರವರೊಂದಿಗೆ ಪೋನಿನಲ್ಲಿ ಮಾತನಾಡುತ್ತಿದ್ದು ಈ ಸಮಯ ಅನಿಲ್ ಚಂದ್ರರವರು ತಾನು ಬೆಲ್ಜಿಯಂ ನಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿರುತ್ತಾರೆ. ದಿನಾಂಕ 23-02-2022     ರಂದು ಅನಿಲ್ ಚಂದ್ರರವರು ಪಿರ್ಯಾದಿದಾರರಿಗೆ ಕರೆ ಮಾಡಿ ತನ್ನ ಜೈಪುರದಲ್ಲಿ ವಾಸ್ತವ್ಯವಿರುವ ಸಂಬಂಧಿಕರೊಬ್ಬರು ಆರೋಗ್ಯ ಸ್ಥಿತಿಯು ಗಂಭೀರವಾಗಿದ್ದು ರೂ.1,20,000/- ವನ್ನು  ಕಳುಹಿಸಿಕೊಡುವಂತೆ ಕೋರಿಕೊಂಡಿದ್ದು ಪಿರ್ಯಾದಿದಾರರು ಅನಿಲ್ ಚಂದ್ರ ರವರ ಮಾತನ್ನು ನಂಬಿ ಆತನು ನೀಡಿದ ಡಾ ಸಲೀಂ ಅಲಿ, ಕೋಟಾಕ್ ಮಹಿಂದ್ರ ಬ್ಯಾಂಕ್ ಖಾತೆ ಸಂಖ್ಯೆ 3646505816 ನೇ ದಕ್ಕೆ   ತನ್ನ ಯೂನಿಯನ್ ಬ್ಯಾಂಕ್ ಹಾಗೂ ಹೆಚ್.ಡಿ.ಎಫ್.ಸಿ  ಬ್ಯಾಂಕ್ ಗಳಿಂದ ರೂ.1,20,000/-  ರೂಗಳನ್ನು ಹಾಕಿರುತ್ತಾರೆ  ನಂತರ ಆತನು ಪುನಃ ಹಣವನ್ನು ಕೇಳಿದ್ದು  ದಿನಾಂಕ 24-02-2022 ರಂದು ರೂ 100000/- ವನ್ನು ಹೀಗೆ ಒಟ್ಟು ರೂ.2,20,000/- ನ್ನು ವರ್ಗಾಯಿಸಿರುತ್ತಾರೆ. ನಂತರ ಅನಿಲ್ ಚಂದ್ರ ರವರು ದಿನಾಂಕ 26-02-2022 ರಂದು  ತಾನು ಭಾರತಕ್ಕೆ ಬರುವುದಾಗಿ ತಿಳಿಸಿದ್ದು ಅದರಂತೆ 26-02-2022 ರಂದು ಬೆಳಿಗ್ಗೆ 9.30 ಗಂಟೆಗೆ ಪಿರ್ಯಾದಿದಾರರಿಗೆ +917428862622ನೇ ಮೊಬೈಲ್ ನಿಂದ ವ್ಯಕ್ತಿಯೊಬ್ಬರು ಕರೆ ಮಾಡಿ ಅನಿಲ್ ಚಂದ್ರರವರು yellow tag certificate ಇಲ್ಲದೇ ಕಸ್ಟಮ್ಸ್ ನವರ ಕೈಯಲ್ಲಿ ಸಿಕ್ಕಿಕೊಂಡಿದ್ದಾರೆ ಅವರಿಗೆ ಸಹಾಯ ಮಾಡಲು ರೂ. 1,15,000/- ನ್ನು ಕಳುಹಿಸುವಂತೆ ಕೇಳಿಕೊಂಡಿದ್ದು ಪಿರ್ಯಾದಿದಾರರು  ಕರೆಯನ್ನು ನಿರಾಕರಿಸಿರುತ್ತಾರೆ. ಹೀಗೆ ತನ್ನನ್ನು ಕನ್ನಡ ಮ್ಯಾಟ್ರಿಮೋನಿಯಲ್ ಮೂಲಕ ಪರಿಚಯಿಸಿಕೊಂಡು ಪಿರ್ಯಾದಿದಾರರೊಂದಿಗೆ ಪೋನಿನಲ್ಲಿ ಸಂಪರ್ಕ ಇಟ್ಟುಕೊಂಡು ತನ್ನ ಸಂಬಂಧಿಕರ ಆರೋಗ್ಯ ಸರಿಯಿಲ್ಲವೆಂಬುದಾಗಿ ತಿಳಿಸಿ ಮೋಸದಿಂದ ಅರ್ಜಿದಾರರ ಯೂನಿಯನ್ ಹಾಗೂ ಹೆಚ್.ಡಿ.ಎಫ್.ಸಿ ಬ್ಯಾಂಕಿನಿಂದ ಒಟ್ಟು ರೂ.2,20,000/- ನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ. ಎಂಬಿತ್ಯಾದಿ.

 

2) ಪಿರ್ಯಾದಿದಾರರು  ಸೈಟ್ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 04-03-2022 ರಂದು  ಮಂಗಳೂರಿನ ಕಾರ್ ಸ್ಟ್ರೀಟ್ ಡಾ.ಪಿ. ದಯಾನಂದ ಪೈ. ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಕಾಲೇಜಿನಲ್ಲಿ,  ಯಾವುದೇ ಧಾರ್ಮಿಕ ವಸ್ತ್ರ ಕಾಲೇಜಿನಲ್ಲಿ ಧರಿಸುವಂತಿಲ್ಲ ಎಂದು ಹೈಕೋರ್ಟ್ ನೀಡಿದ ಮಧ್ಯಂತರ ತೀರ್ಪನ್ನು ಉಲ್ಲಂಘಿಸಿ 05 ಜನ ವಿದ್ಯಾರ್ಥಿನಿಯರು ಕಾಲೇಜಿನ ತರಗತಿಯನ್ನು ಹಿಜಾಬ್ ಧರಿಸಿ ಪ್ರವೇಶಿಸಲು ಪ್ರಯತ್ನಿಸಿದ ಸಂಧರ್ಭದಲ್ಲಿ ಪಿರ್ಯಾದಿದಾರರ ಸ್ನೇಹಿತನಾದ ಅದೇ ಕಾಲೇಜಿನ ವಿದ್ಯಾರ್ಥಿಯಾದ ಸಾಯಿ ಸಂದೇಶ ಎಂಬುವವರು ಪ್ರಶ್ನಿಸಿ ವಿರೋದಿಸಿದ್ದು ಈ ಬಗ್ಗೆ ಆತನು ವಿದ್ಯಾರ್ಥಿನಿಯರೊಂದಿಗೆ ಮಾತನಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಷಯ ಮತ್ತು ಸಾಮಾಜಿಕ ಜಾಲತಾಣವಾದ  ಇನ್ಸ್ ಸ್ಟಾ ಗ್ರಾಮ್ ನಲ್ಲಿ mari_gudi_5 ಎಂಬ ನಕಲಿ ಇನ್ಸ್ ಸ್ಟಾ ಗ್ರಾಮ್ ಖಾತೆಯಲ್ಲಿ ನನ್ನ ಸ್ನೇಹಿತನಾದ ಸಾಯಿ ಸಂದೇಶ್ ನ ಭಾವಚಿತ್ರವಿರುವ ಪೋಸ್ಟ್ ಹಾಕಿ ಕೊಲೆ ಬೆದರಿಕೆ ಹಾಕಿದ ಇನ್ಸ್ ಸ್ಟಾ ಗ್ರಾಮ್ ಖಾತೆ ಹಾಗೂ ಇತರ ಸಾಮಾಜಿಕ ಜಾಲತಾಣ ಖಾತೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ನೀಡಿದ ಪಿರ್ಯಾದಿಯಾಗಿರುತ್ತದೆ. ಎಂಬಿತ್ಯಾದಿ

 

Crime Reported in Mangalore East Traffic PS         

ಪಿರ್ಯಾದಿದಾರರಾದ  ಹಣಮಂತಪ್ಪ ನಾಯ್ಕರ್, ಸಿಪಿಸಿ ರವರು ದಿನಾಂಕ: 03-03-2022 ರಂದು ಬಲ್ಮಠ ಜಂಕ್ಷನ್ ಕಲೆಕ್ಟರ್ಸ್ ಗೇಟ್ ಇಲ್ಲಿ 2ನೇ ಪಾಳಿಯ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ವೇಳೆ ರಾತ್ರಿ ಸಮಯ ಸುಮಾರು 8-00 ಗಂಟೆಗೆ ಅಂಬೇಡ್ಕರ್  ಸರ್ಕಲ್ ಕಡೆಯಿಂದ ಬಲ್ಮಠ ಜಂಕ್ಷನ್ ಕಡೆಗೆ ಬಂದ ಮೋಟಾರು ಸೈಕಲ್ ಸವಾರನೋರ್ವನು ಬಲ್ಮಠ ಜಂಕ್ಷನ್ ಕಡೆಯಿಂದ ಅಂಬೇಡ್ಕರ್ ಸರ್ಕಲ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಬಲ್ಮಠ ಸಿಟಿ ಬಸ್ಸು ನಿಲ್ದಾಣದ ಬಳಿ MOTOR ROLA ಎಂಬ ಹೆಸರಿನ ಹೆಲ್ಮೆಟ್ ಅಂಗಡಿಯ ಎದುರುಗಡೆ ರಸ್ತೆ ಅಪಘಾತ ಉಂಟಾಗಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಕೂಡಲೇ ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ಓರ್ವ ವಯಸ್ಸಾದ ಗಾಯಾಳು ವ್ಯಕ್ತಿಯನ್ನು ಸಾರ್ವಜನಿಕರು ಎಬ್ಬಿಸಿ ರಸ್ತೆ ಬದಿಗೆ ತಂದು ಉಪಚರಿಸಿಕೊಂಡಿದ್ದು, ಅಪಘಾತದ ಬಗ್ಗೆ ಸ್ಥಳದಲ್ಲಿದ್ದ ಸಾರ್ವಜನಿಕರಲ್ಲಿ ವಿಚಾರಿಸಿಕೊಂಡಲ್ಲಿ ಅಲ್ಲೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ KA-19-HB-5447 ನಂಬ್ರದ ಮೋಟಾರು ಸೈಕಲನ್ನು ತೋರಿಸಿ ಇದೇ ಮೋಟಾರು ಸೈಕಲನ್ನು ಅದರ ಸವಾರ ಹಿಂಬದಿ ಸಹಸವಾರಳೋರ್ವಳನ್ನು ಕುಳ್ಳಿರಿಸಿಕೊಂಡು ಬಲ್ಮಠ ಜಂಕ್ಷನ್ ಕಡೆಯಿಂದ ಅಂಬೇಡ್ಕರ್ ಸರ್ಕಲ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ಮಧ್ಯದ ಡಿವೈಡರ್ ಬಳಿ ರಸ್ತೆ ದಾಟಲು ನಿಂತುಕೊಂಡಿದ್ದ ಅಪರಿಚಿತ ಪಾದಾಚಾರಿ ವ್ಯಕ್ತಿಗೆ ಢಿಕ್ಕಿಪಡಿಸಿದ್ದು, ಢಿಕ್ಕಿಯ ಪರಿಣಾಮ ಅಪರಿಚಿತ ಪಾದಾಚಾರಿ ವ್ಯಕ್ತಿಯು ಢಿಕ್ಕಿಯ ರಭಸಕ್ಕೆ ಕಾಂಕ್ರೀಟ್ ರಸ್ತೆಗೆ ಬಿದ್ದು ಎಡಕಾಲಿಗೆ ರಕ್ತವಾಗಿರುವುದಾಗಿ ತಿಳಿಸಿದ್ದು, ಅಪಘಾತ ಪಡಿಸಿದ ಮೋಟಾರು ಸೈಕಲ್ ಸವಾರ ಡೆಂಜಿಲ್ ಜೋಯೆಲ್ ಮಚಾದೋ ಎಂಬಾತನು ಗಾಯಾಳು ಅಪರಿಚಿತ ವ್ಯಕ್ತಿಯನ್ನು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಒಳರೋಗಿಯಾಗಿ ಚಿಕಿತ್ಸೆಯಲ್ಲಿದ್ದವರು ಈ ದಿನ ದಿನಾಂಕ: 04-03-2022 ರಂದು ಬೆಳಿಗ್ಗೆ 11-50 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿದೆ. ಸದ್ರಿ ಮೃತನು ಅಪರಿಚಿತ ವ್ಯಕ್ತಿಯಾಗಿದ್ದು, ಸುಮಾರು 70 ವರ್ಷ ವಯಸ್ಸಿನವನಾಗಿರಬಹುದು. ಈ ಅಪಘಾತದ ಬಗ್ಗೆ ಮೋಟಾರು ಸೈಕಲ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ. ಎಂಬಿತ್ಯಾದಿ.

Crime Reported in Kankanady Town PS                  

ದಿನಾಂಕ 03-03-2022 ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಂಗಳೂರು ವತಿಯಿಂದ ಅನಧಿಕೃತ ಮರಳುಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಫೈಸಲ್ ನಗರದಲ್ಲಿ ಹಿರಿಯ ಭೂವಿಜ್ಞಾನಿ, ಶ್ರೀ.ನಿರಂಜನ್ ರವರ ಚಾಲಿತ ದಳ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಂಗಳೂರು ಇವರ ನೇತೃತ್ವದಲ್ಲಿ ಬೆಳಿಗ್ಗೆ 8:30ಗಂಟೆಗೆ ಬಜಾಲು ಗ್ರಾಮದ ಫೈಸಲ್ ನಗರದಲ್ಲಿ ಹಿರಿಯ ಭೂವಿಜ್ಞಾನಿಯವರ ಆಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ದೋಣಿಗಳನ್ನು ವಶಪಡಿಸಿಕೊಂಡಿದ್ದು ಅವರ ಆದೇಶದಂತೆ ಈ ಫೈಸಲ್ನಗರ ನೇತ್ರಾವತಿ ನದಿ ತೀರಕ್ಕೆ ಪಿರ್ಯಾದಿದಾರರು ಬಂದಿದ್ದು, ನೇತ್ರಾವತಿ ನದಿಗೆ ತಾಗಿಕೊಂಡಂತೆ ಇರುವ ಫೈಸಲ್ ನಗರದ ತೋಡಿನಲ್ಲಿ ಅಕ್ರಮ ಮರಳುಗಾರಿಕೆಗೆ ಬಳಸಿದ 03 ಫೈಬರ್ ದೋಣಿಗಳನ್ನು ಅಡಗಿಸಿ ಇಟ್ಟಿರುವುದು ಕಂಡುಬಂದಿದ್ದು. ಸದರಿ ದೋಣಿಗಳ ಮಾಲೀಕರು ಯಾರೆಂಬುದು ತಿಳಿದುಬಂದಿಲ್ಲದ ಕಾರಣ ಆ ದೋಣಿಗಳನ್ನು ಪಿರ್ಯಾದಿದಾರರು ಕೆಲಸಗಾರರ ಮೂಲಕ ತೋಡಿನಿಂದ ತೆಗೆಯುತ್ತಿರುವ, ಸಮಯ 1:40 ಸುಮಾರಿಗೆ ಸದ್ರಿ ಸ್ಥಳಕ್ಕೆ 04 ಜನ ಯುವಕರು ಬಂದು ಪಿರ್ಯಾದಿದಾರರಿಗೂ ಮತ್ತು ಸಿಬ್ಬಂದಿಗಳನ್ನು ತಡೆದು ನಿಲ್ಲಿಸಿ ಪಿರ್ಯಾದಿದಾರರನ್ನು ಉದ್ದೇಶಿಸಿ ಕೆಟ್ಟ ಭಾಷೆಯಲ್ಲಿ ಬೈಯುತ್ತ ಅವರಲ್ಲಿ ಒಬ್ಬ ಬಂದು ದೋಣಿಗಳನ್ನು ಹುಡಿ ಮಾಡಿದರೆ ಪಿರ್ಯಾದಿದಾರರನ್ನು ನಾವು ಹುಡಿ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ, ಅವರಲ್ಲಿ ಹರ್ಷದ್ ಎಂಬ ಹೆಸರಿನ ವ್ಯಕ್ತಿ ತನ್ನ ಸ್ನೇಹಿತನನ್ನು ಉದ್ದೇಶಿಸಿ ನೀನು ಹೇಳಿದರೆ ಈಗಲೇ ನಾನು ಇವರನ್ನೆಲ್ಲಾ ಹೊಡೆಯುತ್ತೇನೆ ಎಂದು ಪಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪಿರ್ಯಾದಿದಾರರಿಗೂ ಮತ್ತು  ಕೆಲಸಗಾರರಿಗೂ  ಜೀವ ಬೆದರಿಕೆ ಹಾಕಿ ಕೆಟ್ಟ ಭಾಷೆಯಿಂದ ಬೈದಿರುವರರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿ.

ಇತ್ತೀಚಿನ ನವೀಕರಣ​ : 05-03-2022 06:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080