ಅಭಿಪ್ರಾಯ / ಸಲಹೆಗಳು

Crime Reported in: CEN Crime PS

ಪಿರ್ಯಾದಿದಾರರು ಮಂಗಳೂರು ನಗರದ ಖಾಸಗಿ ಕಾಲೇಜ್ ನಲ್ಲಿ ಫಿಸಿಯೋಥೆರಪಿ ವ್ಯಾಸಂಗ ಮಾಡಿಕೊಂಡಿದ್ದು, ಯಾರೋ ಅಪರಿಚಿತ ವ್ಯಕ್ತಿ ಇನ್ಸ್ಟಾಗ್ರಾಂ ಮೂಲಕ (drprincewilliams349) Dr Prince ಎಂಬ ಹೆಸರಿನಲ್ಲಿ ಪಿರ್ಯಾದಿದಾರರನ್ನು ಪರಿಚಯಿಸಿಕೊಂಡು ನಂತರ ಸದ್ರಿ ಅಪರಿಚಿತ ವ್ಯಕ್ತಿಯು ತನ್ನ ವಾಟ್ಸಪ್ ನಂಬ್ರ +447448065407 ನೇ ದರಿಂದ ಪಿರ್ಯಾದಿದಾರರೊಂದಿಗೆ ವಾಟ್ಸಪ್ ಮೂಲಕ ಸಂಪರ್ಕದಲ್ಲಿದ್ದು, ಪಿರ್ಯಾದಿದಾರರಿಗೆ ಉಡುಗೊರೆ ಕಳುಹಿಸುವುದಾಗಿ ತಿಳಿಸಿ ಹಾಗೂ ಅದಕ್ಕಾಗಿ ಸೇವಾ ಶುಲ್ಕವನ್ನು ಪಾವತಿಸುವಂತೆ ತಿಳಿಸಿದ್ದು, ಪಿರ್ಯಾದಿದಾರರು ತಮ್ಮ, ಖಾತೆ ರಿಂದ ದಿನಾಂಕ 03-05-2022 ರಿಂದ 05-05-2022 ರವರೆಗೆ  ಹಂತ ಹಂತ ವಾಗಿ ಒಟ್ಟು 1,85,000/-ರೂ ಗಳನ್ನು ಗೂಗಲ್ ಪೇ ನಂಬ್ರ 8414996450 ಮತ್ತು 7431984087 ನೇ ದಕ್ಕೆ ಪಾವತಿಸಿರುತ್ತಾರೆ. ಪಿರ್ಯಾದಿದಾರರು ಉಡುಗೊರೆ ಬರುವುದಾಗಿ ಇಲ್ಲಿಯವರೆಗೂ ಕಾಯುತ್ತಿದ್ದು,ಇದುವರೆಗೂ ಯಾವುದೇ ಉಡುಗೊರೆ ಬಂದಿರುವುದ್ದಿಲ್ಲ, ಪಿರ್ಯಾದಿದಾರರು ಇದರ ಬಗ್ಗೆ ಸದ್ರಿ ಅಪರಿಚಿತ ವ್ಯಕ್ತಿಯ ವಾಟ್ಸಪ್ ಸಂಖ್ಯೆ+447448065407 ನೇ ದಕ್ಕೆ ಸಂಪರ್ಕಿಸಿದರು ಯಾವುದೇ ಸಂಪರ್ಕಕ್ಕೆ ದೊರೆತಿರುವುದಿಲ್ಲ,ಈ ರೀತಿಯಾಗಿ ಪಿರ್ಯಾದಿದಾರರಿಗೆ ಡಾ.ಪ್ರಿನ್ಸ್ ಎಂಬ ಇನ್ಸ್ಟಾಗ್ರಾಂ ಖಾತೆಯ ಮೂಲಕ ಪರಿಚಯಿಸಿಕೊಂಡು ಉಡುಗೊರೆ ಕಳುಹಿಸುದಾಗಿ ತಿಳಿಸಿ ಪಿರ್ಯಾದಿದಾರರನ್ನು ನಂಬಿಸಿ ಮೋಸದಿಂದ ಆನ್ ಲೈನ್ ಮೂಲಕ ಹಣ ಪಡೆದುಕೊಂಡು ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

 

Crime Reported in: Panambur PS    

ದಿನಾಂಕ 05-07-2022 ರಂದು 15.00 ಗಂಟೆಗೆ ಮಂಗಳೂರು ನಗರದ ಬೆಂಗ್ರೆ ಬಳಿಯಲ್ಲಿ  ಮೊಹಮ್ಮದ್ ಖಾಯೀಸ್ ಪ್ರಾಯ 25 ವರ್ಷ, ಎಂಬವನು ಮಾದಕವಸ್ತು ಸೇವನೆ ಮಾಡಿ ತೂರಾಡುತ್ತಿರುವವನ್ನು ವಶಕ್ಕೆ ಪಡೆದು  ಎ.ಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದಲ್ಲಿ  ವೈದ್ಯಾಧಿಕಾರಿಗಳು ಪರೀಕ್ಷಿಸಿ The Urine Sample Tested For The Presence of Tetrahydracannabinoid (Marijuna) is Positive ಎಂದು ವರದಿ ನೀಡಿರುವ ಮೇರೆಗೆ ಆರೋಪಿ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

 

Crime Reported in: Traffic North Police Station            

ದಿನಾಂಕ: 05-07-2022 ರಂದು ಬೆಳಿಗ್ಗೆ ಸಮಯ ಸುಮಾರು 10:30 ಗಂಟೆಗೆ ಪಿರ್ಯಾದಿ Mahammed Rafeeq ದಾರರು ಅವರ ಬಾಬ್ತು KA-19-AB-2396 ನೇ ಆಟೋರಿಕ್ಷಾದಲ್ಲಿ ಚಾಲಕನಾಗಿ ಸುರತ್ಕಲ್ ಹೊಸಬೆಟ್ಟು ಮುಖ್ಯಪ್ರಾಣ ಮಠದ ಸಮೀಪ ರಾಹೆ 66 ರಲ್ಲಿ ಕುಳಾಯಿ ಕಡೆಯಿಂದ ಸುರತ್ಕಲ್ ಕಡೆಗೆ ಹೋಗುವ ಸಮಯ KA-70-1767 ನೇ ಗ್ಯಾಸ್ ಸಿಲಿಂಡರ್ ಲಾರಿ ಚಾಲಕ ಮಹೇಶ್ ಕುಮಾರ್ ಎಂಬವರು ಇಡ್ಯಾ ಕ್ರಾಸ್ ರಸ್ತೆಯಿಂದ ರಾಹೆ 66 ರಸ್ತೆಗೆ ನಿಧಾನವಾಗಿ ಲಾರಿಯನ್ನು ಚಲಾಯಿಸುತ್ತಾ ಸುರತ್ಕಲ್ ಕಡೆಗೆ ತಿರುಗಿಸುತಿದ್ದಂತೆ ಪಿರ್ಯಾದಿದಾರರು ಹಾಗೂ ಅವರ ಆಟೋರಿಕ್ಷಾದ ಎಡಬದಿಯಲ್ಲಿದ್ದ KA-19-HE-6415 ನೇ ಸ್ಕೂಟರ್ ನ ಸವಾರನು ನಿಧಾನಿಸುತಿದ್ದಂತೆ ಇದೇ ವೇಳೆ ಕುಳಾಯಿ ಕಡೆಯಿಂದ ಸುರತ್ಕಲ್ ಕಡೆಗೆ KA-19-ME-9798 ನೇ ರಿಟ್ಜ್ ಕಾರನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷತನದಿಂದ ರಾಹೆ 66 ನೇ ಡಾಮಾರು ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಆಟೋರಿಕ್ಷಾದ ಹಿಂದಿನ ಬಲಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆಟೋರಿಕ್ಷಾವು ಚಾಲಕನ ಹತೋಟಿ ತಪ್ಪಿ ಮುಂದಕ್ಕೆ ಮುಗ್ಗರಿಸಿ ಎಡಬದಿಯಲ್ಲಿದ್ದ ಸ್ಕೂಟರ್ ಹ್ಯಾಂಡಲಿಗೆ ಡಿಕ್ಕಿಯಾಗಿ ಸ್ಕೂಟರ್ ರಸ್ತೆಗೆ ಬಿದ್ದಿದ್ದು ಆಟೋರಿಕ್ಷಾ ಮುಂದಕ್ಕೆ ಚಲಿಸಿ ಗ್ಯಾಸ್ ಸಿಲಿಂಡರ್ ವಾಹನದ ಬಲಬದಿಗೆ ಡಿಕ್ಕಿಯಾಗಿ ಆಟೋರಿಕ್ಷಾವು ರಸ್ತೆಯ ಬಲಭಾಘಕ್ಕೆ ಮುಗುಚಿ ಬಿದ್ದ ಪರಿಣಾಮ ಪಿರ್ಯಾದಿದಾರರ ತಲೆಯ ನೆತ್ತಿ ಭಾಗಕ್ಕೆ ಚರ್ಮ ಹರಿದ ರೀತಿಯ ರಕ್ತ ಗಾಯ, ಬಲ ಕೋಲು ಕೈ ಭಾಗದಲ್ಲಿ ಹಾಗೂ ಬಲ ಕಾಲಿನ ಮೊಣಗಂಟಿನ ಬಳಿ ತರಚಿದ ರೀತಿಯ ಗಾಯ ಹಾಗೂ ಸ್ಕೂಟರ್ ಸವಾರ ಸಚಿನ್ ರವರಿಗೆ ಬಲ ಕೈ ಉಂಗುರ ಬೆರಳ ಬುಡದಲ್ಲಿ ಚರ್ಮ ಹರಿದ ರೀತಿಯ ರಕ್ತ ಗಾಯವಾಗಿದ್ದು ಗಾಯಾಳುಗಳು ಪದ್ಮಾವತಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಎಂಬಿತ್ಯಾಧಿ.

ಇತ್ತೀಚಿನ ನವೀಕರಣ​ : 05-07-2022 07:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080