ಅಭಿಪ್ರಾಯ / ಸಲಹೆಗಳು

Crime Reported in  Mangalore East Traffic PS

ದಿನಾಂಕ: 05-11-2021 ರಂದು ಪಿರ್ಯಾದಿದಾರರಾದ  ಶ್ರೀಮತಿ ಸೌಮ್ಯ ರವರು ತನ್ನ ಗಂಡ ನಾಗರಾಜ್ ರವರು ಚಲಾಯಿಸುತ್ತಿದ್ದ KA-19-EW-9622 ಸ್ಕೂಟರಿನಲ್ಲಿ ತನ್ನ ಮಗನಾದ ಚಿಂತನನೊಂದಿಗೆ ಸಹ ಸವಾರಳಾಗಿ ಕುಳಿತುಕೊಂಡು ತನ್ನ ಮನೆಯಿಂದ ಕಟೀಲು ದೇವಸ್ಥಾನಕ್ಕೆಂದು ಹೊರಟು NH 73 ರಲ್ಲಿ ಪಡೀಲ್ ಕಡೆಯಿಂದ ಬರುತ್ತಾ ಬಿಕರ್ನಕಟ್ಟೆ ಕೈಕಂಬ ಫ್ಲೈ ಓವರ್ ದಾಟಿ ಸಮಯ ಸುಮಾರು 6:30 ಗಂಟೆಗೆ ಸದ್ರಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಎದುರಿನ ಸಾರ್ವಜನಿಕ ರಸ್ತೆಗೆ ಬಂದು ತಲುಪಿದಾಗ ಅದೇ ದಾರಿಯಲ್ಲಿ ಬರುತ್ತಿದ್ದ KA-19-MG-2668 ನಂಬ್ರದ ಕಾರನ್ನು ಅದರ ಚಾಲಕ ಫೆರಿಕ್ ಡಿಸೋಜಾರವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು ಚಾಲನೆ ಮಾಡುತ್ತಾ ಪೆಟ್ರೋಲ್ ಬಂಕ್ ಕಡೆಗೆ ಹೋಗಲು ಒಮ್ಮೇಲೆ ಎಡಕ್ಕೆ ತಿರುಗಿಸಿ ಸ್ಕೂಟರಿಗೆ ಢಿಕ್ಕಿ ಪಡಿಸಿದ ಪರಿಣಾಮ ಸ್ಕೂಟರಿನಲ್ಲಿದ್ದ ಮೂವರೂ ವಾಹನ ಸಮೇತ ರಸ್ತೆಗೆ ಬಿದ್ದ ಪರಿಣಾಮ ನಾಗರಾಜ್ ರವರಿಗೆ ಬಲ ಕೈ ಕೋಲು ಕೈಗೆ ಮೂಳೆ ಮುರಿತದ ಗಂಭೀರ ಗಾಯವಾಗಿದ್ದು, ಬಲ ಕಾಲಿನ ಮೊಣ ಗಂಟಿಗೆ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿ ಮತ್ತು ಚಿಂತನ್ ರವರಿಗೆ ತರಚಿದ  ಗಾಯಗಳಾಗಿದ್ದು, ನಾಗರಾಜ್ ರವರನ್ನು ಚಿಕಿತ್ಸೆ ಬಗ್ಗೆ ಆಟೋ ರಿಕ್ಷಾ ವೊಂದರಲ್ಲಿ ಎಸ್ ಸಿ ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೆ ಎಂ ಸಿ ಅತ್ತಾವರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯ ವೈದ್ಯರು ನಾಗರಾಜರವರನ್ನು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ ಎಂಬಿತ್ಯಾದಿ.

Crime Reported in  Traffic South PS

ದಿನಾಂಕ:04-11-2021 ರಂದು ಪಿರ್ಯಾದಿದಾರರಾದ ನೆಲ್ಸನ್ ಡಿಸೋಜಾ (36) ರವರು ತಮ್ಮ ಬಾಬ್ತು ಸ್ಕೂಟರ್ ನಂಬ್ರ KA-19-EP-0257  ನೇದಲ್ಲಿ ಉಳ್ಳಾಲ ಕಡೆಯಿಂದ ತಮ್ಮ ಮನೆಯಾದ  ಕೋಟೆಕಾರ್ ಪೀಲಾರ್ ಗೆ ಹೊಗುತ್ತೀರುವ ಸಮಯ ಸುಮಾರು ಸಂಜೆ :5:10 ಗಂಟೆಗೆ ಉಳ್ಳಾಲ ಬೈಲ್  ಬಳಿ ತಲುಪಿದಾಗ ಪಿರ್ಯಾದಿದಾರರ ಸ್ಕೂಟರ್ ಮುಂದಿನಿಂದ ಹೋಗುತ್ತಿದ್ದ KA-19-MD-5664  ನೇದರ ಕಾರಿನ ಚಾಲಕನು ತಮ್ಮ ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಯಾವುದೇ ಮುನ್ಸೂಚನೆ ನೀಡದೆ ಓಮ್ಮಲೇ ತಮ್ಮ ಕಾರನ್ನು ಬಲಕ್ಕೆ ತಿರುಗಿಸಿ ಪಿರ್ಯಾದಿದಾರರ ಸ್ಕೂಟರ್ ಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ಬಲಗಾಲಿನ ಮಂಡಿಯ ಬಳಿ ಮೂಳೆಮುರಿತದ  ಗಾಯ ವಾಗಿದ್ದು ಗಾಯಾಳುವನ್ನು ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಅಪಘಾತ ಪಡಿಸಿದ ಕಾರಿನ ಚಾಲಕ ಉಪಚರಿಸಿ ತಮ್ಮ ಕಾರಿನಲ್ಲಿ ತೊಕ್ಕಟ್ಟಿನ ಸಹರಾ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಭಿತ್ಯಾಧಿ

 

2)  ದಿನಾಂಕ :04-11-2021 ರಂದು  ಪಿರ್ಯಾದಿ ABDUL BASITH ದಾರರು KA-19-EJ-6077 ನೇದರ ಬೈಕ್ ನ್ನು ಪಂಪ್ ವೇಲ್ ಕಡೆಯಿಂದ ಪಡೀಲ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ಸಂಜೆ 4-30 ಗಂಟೆಗೆ ನಾಗುರಿಯ ಡಿಸೋಜಾ ಚಿಕನ್ ಸೆಂಟರ್ ಅಂಗಡಿ ಬಳಿ ತಲುಪಿದಾಗ ಅವರ ಮುಂದಿನಿಂದ ಹೋಗುತ್ತಿದ್ದ ಕಾರು ನಂಬ್ರ KA-19-MF-2495 ನೇದರ ಚಾಲಕ ಮೊಹಮ್ಮದ್ ಅನ್ಸಾರಿ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಓಮ್ಮೇಲೆ ಬಲಕ್ಕೆ ತಿರುಗಿಸಿ  ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಬೈಕ್ ಗೆ  ಡಿಕ್ಕಿ ಪಡಿಸಿದ ಪರಿಣಾಮ  ಅವರು ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರಿಗೆ ಎಡಗೈಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಅವರನ್ನುಅಲ್ಲಿ ಸೇರಿದ ಸಾರ್ಜನಿಕರು ಮತ್ತು ಕಾರಿನ ಚಾಲಕ ಅವರದೇ ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಬಂದು  ದಾಖಲಿಸಿದ್ದು ಅಲ್ಲಿನ ವೈದ್ಯರು ಅವರನ್ನು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಅಪಘಾತ ಪಡಿಸಿದ ಕಾರಿನ ಚಾಲಕ ಅಪಘಾತ ಸಮಯ ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿದ್ದು ನಂತರ ಚಿಕಿತ್ಸಾ ವೆಚ್ಚ ಜಾಸ್ತಿ ಯಾಗಿರುವುದರಿಂದ ಚಿಕಿತ್ಸಾ ವೆಚ್ಚ  ಭರಿಸಲು ನಿರಾಕರಿಸಿದ್ದರಿಂದ ಈ ದೂರನ್ನು ನೀಡಲು ತಡವಾಗಿರುತ್ತದೆ.

 

Crime Reported in  Bajpe PS

ಪಿರ್ಯಾದಿ Sangeethaದಾರರು ದಿನಾಂಕ 04-11-2021 ರಂದು ಸಂಜೆ ತನ್ನ ಸ್ನೇಹಿತೆ ಅಶ್ವಿನಿಯವರ ಜೊತೆ ಅವರ ಸ್ಕೂಟರ್ ನಂಬ್ರ ಕೆಎ-19-ಇವೈ-920 ನೇದರಲ್ಲಿ ಅಶ್ವಿನಿಯವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಂಜೆ 4.00 ಗಂಟೆ ವೇಳೆಗೆ ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಗಂಜಿಮಠ ದೇವಸ್ಥಾನದ ಬಳಿ ತಲುಪುತ್ತಿದ್ದಂತೆ ಗಂಜಿಮಠ ಮಾರ್ಕೆಟ್ ಕಡೆಯಿಂದ ಕೆಎ-19-ಇಯು-0778 ನೇ ಮೋಟಾರ್ ಸೈಕಲನ್ನು ಅದರ ಸವಾರರು ಅತಿವೇಗ ಹಾಗೂ ಅಜಾಗರೂಕತೆಯಿಂದ ಮುಖ್ಯರಸ್ತೆಗೆ ಚಲಾಯಿಸಿ ಪುನಃ ಮಂಗಳೂರು ಕಡೆಗೆ ಏಕಾಏಕಿ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರ್ ಗೆ ಡಿಕ್ಕಿಯಾಗಿ ಪಿರ್ಯಾದಿದಾರರು ಹಾಗೂ ಸಹಸವಾರರಾದ ಅಶ್ವಿನಿಯವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಬಲಕಾಲಿನ ಪಾದಕ್ಕೆ ಗಂಭೀರ ಹಾಗೂ ಅಶ್ವಿನಿಯವರ ಬಲಕಾಲಿಗೆ ರಕ್ತಗಾಯಗಳಾಗಿದ್ದು, ಗಾಯಾಳುಗಳು ಎ.ಜೆ. ಆಸ್ಪತ್ರೆಗೆ ಹೋಗಿ ಬಳಿಕ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋದಲ್ಲಿ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರಿಗೆ ಒಳರೋಗಿಯಾಗಿ ಹಾಗೂ ಅಶ್ವಿನಿಯವರಿಗೆ ಹೊರರೋಗಿಯಾಗಿ ಚಿಕಿತ್ಸೆ ನೀಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Crime Reported in  Surathkal PS

ದಿನಾಂಕ: 04/11/2021 ರಂದು ಠಾಣಾ ಪಿ ಎಸ್ ಐ ಪುನೀತ್ ಎಂ ಗಾಂವ್ಕರ್ ಇವರು ಠಾಣಾ ಪಿಸಿ  ಮಂಜಿನಾಥ ಇವರಿಗೆ ದೊರೆತ ಮಾಹಿತಿ ಮೇರೆಗೆ ಠಾಣಾ ಸಿಂಬ್ಬಂದಿಗಳ ಜೊತೆಯಲ್ಲಿ ರಾತ್ರಿ 10-30 ಗಂಟೆಗೆ ಕಾಟಿಪಳ್ಳ ಗ್ರಾಮದ ಕಾಟಿಪಳ್ಳ 2 ನೇಯ ಬ್ಲಾಕ್ ದ .ಕ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ಮೈಧಾನದ ಪಶ್ಚಿಮ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕ್ಯಾಂಡೆಲ್ ಮತ್ತು ಅಲ್ಲಿನ ವಿದ್ಯುತ್ ದೀಪದ ಬೆಳಕಿನ ಸಹಾಯದಿಂದ ನೆಲದ ಮೇಲೆ ಬೆಡ್ ಸೀಟ್ ನ್ನು ಹಾಸಿ ಅದರ ಸುತ್ತ 10 ಮಂದಿ ಸುತ್ತುವರಿದು ಕುಳಿತು ಓರ್ವ ವ್ಯಕ್ತಿಯು ತನ್ನ ಕೈಯಲ್ಲಿ ಇಸ್ಪೀಟ್ ಎಲೆಗಳನ್ನು ಒಂದೊಂದು ಹಾಸಿದ್ದ ಬೆಡ್ ಸೀಟ್ ಮೇಲೆ ಹಾಕುತಿದ್ದು ಇವರುಗಳು ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿರುವುದನ್ನು ರಾತ್ರಿ 10-35 ಗಂಟೆಗೆ ಮೇಲ್ಕಾಣಿಸಿದ ಸಿಬ್ಬಂದಿಗಳ ಸಹಾಯದಿಂದ ಧಾಳಿ ನಡೆಸಿ ವಶಕ್ಕೆ ಪಡೆದ 10 ಜನಗಳ ಹೆಸರು 1)ಮಲ್ಲಪ್ಪ 2)ಮಂಜುನಾಥ 3)ಮರಿಯಪ್ಪ 4)ವಸಂತ 5)ಮಂಜು 6)ದೇವರಾಜ್ 7)ಸತೀಶ್ 8)ಸಲ್ಮಾನ್ 9) ಸೋಮಣ್ಣ 10)ರಾಜಾಸಾಬ  ಮೇಲ್ಕಾಣಿಸಿದ ಆರೋಪಿಗಳ ವಶದಲ್ಲಿ ಇಸ್ಪೀಟ್ ಆಟಕ್ಕೆ ಉಪಯೋಗಿಸಿದ ಇಸ್ಪೀಟ್ ಎಲೆಗಳು-52, ನಗದು ರೂ 6300/- , ಕ್ಯಾಂಡಲ್ ಹಾಗೂ  ನೆಲಕ್ಕೆ ಹಾಸಿದ ಬೇಡ್ ಶೀಟ್ ಮೇಲ್ಕಂಡ ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳಿಂದ ಉಲಾಯಿ ಪಿದಾಯಿ (ಒಳಗೆ-ಹೊರಗೆ) ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳುವರೇ ಎಂಬಿತ್ಯಾದಿಯಾಗಿರುತ್ತದೆ.

 

2) ದಿನಾಂಕ 05-11-2021 ರಂದು ಮಧ್ಯಾಹ್ನ 14:45 ಗಂಟೆಗೆ  ಹೋಯ್ಸಳ  ಕರ್ತವ್ಯದಲ್ಲಿದ್ದ ಹೆಚ್.ಸಿ  ಅಜೀತ್ ಮ್ಯಾಥ್ಯೂ ಇವರಿಗೆ ಸುರತ್ಕಲ್ ನ ತಡಂಬೈಲ್ ಎಂಬಲ್ಲಿ  ಅಬ್ದುಲ್ ಭಾಸ್ಮೀತ್ ಇವರ ಬಾಭ್ತು ಬೀಗ ಹಾಕಿರುವ ಮನೆಯ ಬಳಿಯ ಇಸ್ಪೀಟು ಜೂಜಾಟ ಆಡುತ್ತಿರುವುದ್ದಾಗಿ ಮಾಹಿತಿ ಬಂದಿದ್ದನ್ನು ಅವರು ಫಿರ್ಯಾಧಿದಾರರಾದ ಠಾಣಾ ಕಾನೂನು ಮತ್ತು ಸುವ್ಯವಸ್ಥೆ-1 ನೇ ಪಿ ಎಸ್ಐ PUNEET MURALIDHAR GAONKAR ರವರಿಗೆ ತಿಳಿಸಿದಂತೆ ಅವರು ಠಾಣಾ ಸಿಬ್ಬಂಧಿಗಳೊಂದಿಗೆ ಸುರತ್ಕಲ್ ಗ್ರಾಮದ ಸುರತ್ಕಲ್ ನ ಪುರಾತನ ಮಾರಿಗುಡಿ ಬಳಿಯ ನಾಗೇಶ್ ಪೈ ಇವರ ಅಂಗಡಿ ಬಳಿ ಅಬ್ದುಲ್ ಬಸೀಲ್ ಇವರ ಬಾಭ್ತು ಮನೆಯ ಬಳಿಗೆ ಬಂದು ಮನೆಯ  ದಕ್ಷಿಣ ಬದಿಯ ಖಾಲಿ ಸ್ಥಳದಲ್ಲಿ ನೆಲದ ಮೇಲೆ ಹಳೆಯ ನ್ಯೂಸ್ ಪೇಪರ್ ನ್ನು   ಹಾಸಿ ಅದರ ಸುತ್ತ 4-5 ಮಂದಿ ಸುತ್ತುವರಿದು ಕುಳಿತ್ತು ಓರ್ವ ವ್ಯಕ್ತಿಯು  ತನ್ನ ಕೈಯಲ್ಲಿ ಇಸ್ವೀಟ್ ಎಲೆಗಳನ್ನು ಒಂದೊಂದು ಹಾಸಿದ್ದ   ಬೆಡ್ ಶೀಟ್  ಮೇಲೆ ಹಾಕುತ್ತಾ “ಒಳಗೆ-ಹೊರಗೆ” ಎಂಬುದಾಗಿ ಹೇಳುತ್ತಿದ್ದು, ಸುತ್ತುವರಿದು ಕುಳಿತಿದ್ದ ವ್ಯಕ್ತಿಗಳು ರೂಪಾಯಿ 100 ಒಳಗೆ ಮತ್ತೆ ಕೆಲವರು ರೂಪಾಯಿ 50 ಹೊರಗೆ ಅಂತ ಹೇಳುತ್ತಾ ತಮ್ಮ ಕೈಯಲ್ಲಿದ್ದ ಹಣವನ್ನು ಮಧ್ಯದಲ್ಲಿ ಹಾಕುತಿದ್ದು ಇವರುಗಳು ಹಣವನ್ನು ಪಣವಾಗಿರಿಸಿ ಇಸ್ಪಿಟ್ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿ  15:30 ಗಂಟೆಗೆ ಮೇಲ್ಕಾಣಿಸಿದ ಸಿಬ್ಬಂಧಿಗಳ ಸಹಾಯದಿಂದ ಧಾಳಿ ನಡೆಸಿ,  ಶರಣ್, ಶರಣಪ್ಪ  ಶೇಖಬ್ಬ, ಮಾರುತಿ  ಮತ್ತು ಬೀರಪ್ಪ ಇವರನ್ನು ವಶಕ್ಕೆ ಪಡೆದಿರುವುದ್ದಾಗಿದೆ.   ಮೇಲ್ಕಾಣಿಸಿದ ಆರೋಪಿಗಳ ವಶದಲ್ಲಿ ಇಸ್ಫೀಟ್ ಆಟಕ್ಕೆ ಉಪಯೋಗಿಸಿದ ಇಸ್ವೀಟ್ ಎಲೆಗಳು-52, ನಗದು ರೂ, 2,900/-( ರೂ ಎರಡು ಸಾವಿರದ ಒಂಭೈನೂರು ಮಾತ್ರ ) ಹಾಗೂ ನೆಲಕ್ಕೆ ಹಾಸಿದ ಹಳೆಯ ನ್ಯೂಸ್ ಪೇಪರ್  ವಿರುತ್ತದೆ. ಮೇಲ್ಕಾಣಿಸಿದ ಆರೋಪಿಗಳ  ವಿರುದ್ದ   ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಕ್ರಮ ಜರಗಿಸುವಂತೆ  ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-11-2021 08:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080