ಅಭಿಪ್ರಾಯ / ಸಲಹೆಗಳು

Crime Reported in Mangalore East PS

ಪಿರ್ಯಾದಿ V Aruna ದಾರು ಮೂಲತಃ ಆಂದ್ರ ಪ್ರದೇಶದ ಕರ್ನೂಲ್ ರವರಾಗಿದ್ದು, ಉದ್ಯೋಗಕ್ಕಾಗಿ ತನ್ನ ಗಂಡ ಹಾಗೂ ಮಗಳು ಡಿ.ಎಸ್. ನಂದಿನಿ ರೆಡ್ಡಿ(19) ರವರೊಂದಿಗೆ ಮಂಗಳೂರಿಗೆ ಬಂದು ಬಂಗ್ರ ಕುಳೂರು ಗುರುದ್ವಾರದ ಬಳಿ ವಾಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ತನ್ನ ಮಗಳನ್ನು ಎಕ್ಷಫರ್ಟ್ ಕಾಲೇಜಿಗೆ ಕೋಚಿಂಗ್ ಸಲುವಾಗಿ ಸೇರಿಸಿದ್ದು, ಪ್ರತಿದಿನ ಪಿರ್ಯಾದಿದಾರರ ಗಂಡ ಮಗಳಾದ ಡಿ.ಎಸ್. ನಂದಿನಿ ರೆಡ್ಡಿ ರವರನ್ನು ಕಾಲೇಜಿಗೆ ಬಿಟ್ಟು ಸಂಜೆ ವಾಪಾಸ್ಸು ಮನೆಗೆ ಕರೆದುಕೊಂಡು ಹೋಗುತ್ತಿರುವುದಾಗಿದೆ. ದಿನಾಂಕ 05.01.2022 ರಂದು ಬೆಳಿಗ್ಗೆ 08:15 ಗಂಟೆಗೆ ಎಂದಿನಂತೆ ಪಿರ್ಯಾದಿದಾರರ ಪತಿಯು ಅವರ ಮಗಳನ್ನು ಎಕ್ಷಫರ್ಟ್ ಕಾಲೇಜಿಗೆ ಬಿಟ್ಟು, ಸಂಜೆ 4:00 ಗಂಟೆಗೆ ಮನೆಗೆ ಕರೆದುಕೊಂಡು ಬರಲು ಹೋದಾಗ ಪಿರ್ಯಾದಿದಾರರ ಮಗಳು ಮಧ್ಯಾಹ್ನದ ಬಳಿಕ ಕ್ಲಾಸಿಗೆ ಬಂದಿರುವುದಿಲ್ಲ ಎಂಬುದಾಗಿ ತಿಳಿದು ಬಂದಿದ್ದು, ಬಳಿಕ ಕಾಲೇಜು ಕ್ಯಾಂಪಸ್, ಮಂಗಳೂರು ನಗರದಲ್ಲಿ ಹುಡುಕಾಡಿದಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದ್ದಲ್ಲಿ ದಿನಾಂಕ 06.01.2022 ರ ತನಕ ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಆದ್ದರಿಂದ ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿ ಕೊಡಬೇಕಾಗಿ ಎಂಬಿತ್ಯಾದಿ.

 

Crime Reported in Moodabidre PS

ಪಿರ್ಯಾದಿ UMESH PRASAD Bದಾರರು ಕಳೆದ ವರ್ಷ ಶಶಿಕಾಂತ ರಾಮಮೂರ್ತಿ, ಜಯಪ್ರಕಾಶ್ ಹಾಗೂ ಫಸೀವುರ್ ರೆಹಮಾನ್ ಎಂಬವರ ವಿರುದ್ಧ ಮೂಡಬಿದ್ರೆಯ ಕೋರ್ಟಿನಲ್ಲಿ ನೀಡಿದ್ದ ಖಾಸಗಿ ಪಿರ್ಯಾದಿಯ ಆಧಾರದಲ್ಲಿ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯ ಬಗ್ಗೆ ದಿನಾಂಕ: 26-12-2021 ರಂದು ಆರೋಪಿಗಳು ಮತ್ತು ಪಿರ್ಯಾದಿದಾರರ ಸಮಕ್ಷಮ ಪ್ರಕರಣದ ವಿಚಾರಣೆ ಮುಗಿಸಿ ಪಿರ್ಯಾದಿದಾರರು ತನ್ನ ಗೆಳೆಯರಾದ ರಾಘವೇಂದ್ರ ಬಾಳಿಗ, ನವೀನ್ ಪೈ ಹಾಗೂ ಕಿಶೋರ್ ಮೊಗೆರಾಯರವರ ಜೊತೆಗೆ ಮೂಡಬಿದ್ರೆಯ ರೋಟರಿ ಶಾಲೆಯ ಜಂಕ್ಷನ್ ಬಳಿ ನಿಂತುಕೊಂಡು ಮಾತನಾಡುತ್ತಿರುವಾಗ ಸಾಯಂಕಾಲ ಸುಮಾರು 7-00 ಗಂಟೆಗೆ ಅಲ್ಲಿಗೆ ಬಂದ ಜಯಪ್ರಕಾಶ್ ರವರು ಪಿರ್ಯಾದಿದಾರರ ಬಳಿಗೆ ಹೋಗಿ ಅವರನ್ನುದ್ಧೇಶಿಸಿ ಏಯ್ ಬೇವರ್ಸಿ ಭಟ್ಟ ನೀನು ನಮ್ಮ ಮೇಲೆ ಕೇಸ್ ಕೊಟ್ಟು ನಮ್ಮನ್ನು ವಿಚಾರಣೆಗೆ ಕರೆಸುತ್ತೀಯಾ ನೀನು ಏನು ಮಾಡುತ್ತೀ ನೋಡುತ್ತೇನೆ. ನೀನು ನಮ್ಮ ಮೇಲೆ ಕೊಟ್ಟ ಕೇಸಿನಿಂದ ನನಗೆ ಏನಾದರೂ ತೊಂದರೆ ಆದರೆ ನಿನ್ನನ್ನು ಖಂಡಿತ ಜೀವಂತ ಬಿಡುವುದಿಲ್ಲ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದು, ದಿನಾಂಕ: 28-12-2021 ರಂದು ಈ ಮೇಲಿನ ಪ್ರಕರಣದ ಇನ್ನೊಬ್ಬ ಆರೋಪಿಯಾದ ಫಸೀವುರ್ ರೆಹಮಾನ್ ರವರು ಪಿರ್ಯಾದಿದಾರರ ಮೊಬೈಲಿಗೆ ಫೋನ್ ಮಾಡಿ ಜಯಪ್ರಕಾಶ್ ರವರು ನಿಮಗೆ ಏನಾದರೂ ತೊಂದರೆ ಮಾಡುವ ಮಾಡುವ ಸಾಧ್ಯತೆ ಇರುವುದರಿಂದ ಅವರನ್ನು ಹೊರಗಿಟ್ಟು ನಾವು ಕೇಸನ್ನು ಏನಾದರೂ ಮಾಡಿ ಸೆಟ್ಲ್ ಮೆಂಟ್ ಮಾಡಿಕೊಳ್ಳೋಣ ಎಂದು ತಿಳಿಸಿದಾಗ ಪಿರ್ಯಾದಿದಾರರಿಗೆ ದಿನಾಂಕ: 26-12-2021 ರಂದು ಜಯಪ್ರಕಾಶ್ ರವರು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವ ಉದ್ಧೇಶ ಹಾಗೂ ಫಸೀವುರ್ ರೆಹಮಾನ್ ರವರು ಫೋನ್ ಮಾಡಿ ತಿಳಿಸಿದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಜಯಪ್ರಕಾಶ್ ರವರು ತನಗೆ ಏನಾದರೂ ತೊಂದರೆ ಮಾಡುವ ಉದ್ಧೇಶವನ್ನು ಇಟ್ಟುಕೊಂಡಿರುವುದನ್ನು ಮನಗಂಡ ಪಿರ್ಯಾದಿದಾರರು ತಡವಾಗಿ ನೀಡಿದ ದೂರನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವುದು ಎಂಬಿತ್ಯಾದಿ.

Crime Reported in Traffic South Police Station                                   

ದಿನಾಂಕ 02-01-2022 ರಂದು ಬೆಳಿಗ್ಗೆ ಪಿರ್ಯಾದಿ SOMANATHದಾರರು ಅವರ ಆಟೋರಿಕ್ಷಾ ನಂಬ್ರ KA-19-AC-2205 ನೇದನ್ನು ಸ್ಟಾರ್ಟ್ ಮಾಡುವಾಗ ಆಟೋರಿಕ್ಷಾ ಒಮ್ಮೇಲೇ ಸ್ಟಾರ್ಟ್ ಆಗದ ಕಾರಣ ಏನೋ ತೊಂದರೆ ಇರಬಹುದು ಎಂದು ಆಟೋರಿಕ್ಷಾವನ್ನು ಅವರ ಮನೆಯಿಂದ ಮಂಗಳೂರಿನ ನಾಗೂರಿ ಹತ್ತಿರ ಇರುವ ಗ್ಯಾರೆಜ್ ಗೆ ತೆಗೆದುಕೊಂಡು ಬಂದು ಆಟೋರಿಕ್ಷಾವನ್ನು ರಿಪೇರಿ ಮಾಡಿಸಿಕೊಂಡು ಮಂಗಳೂರಿನಿಂದ ವಾಪಾಸ್ಸು ಅವರ ಮನೆಯಾದ ಬಂಟ್ವಾಳಕ್ಕೆ ಪಡೀಲ್ ಮಾರ್ಗವಾಗಿ ಫರಂಗಿಪೇಟೆ ಕಡೆಗೆ ರಾ.ಹೆ-73 ರ ಏಕಮುಖ ರಸ್ತೆಯಲ್ಲಿ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 10.00 ಗಂಟೆಗೆ ವಳಚ್ಚಿಲ್ ಬಳಿ ತಲುಪಿದಾಗ ಅವರ ಹಿಂದಿನಿಂದ ಅಂದರೆ ಪಡೀಲ್ ಕಡೆಯಿಂದ ಫರಂಗಿಪೇಟೆ ಕಡೆಗೆ ಬರುತ್ತಿದ್ದ ಕಾರು ನಂಬ್ರ KL-14-R-3577 ನೇದನ್ನು ಅದರ ಚಾಲಕ ಸುಪ್ರಿತ್ ಎನ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಆಟೋರಿಕ್ಷಾದ ಹಿಂದಿನ ಬಲಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಆಟೋರಿಕ್ಷಾ ಅವರ ಹತೋಟಿ ತಪ್ಪಿ ಡಾಮಾರು ರಸ್ತೆಯ ಬಲಬದಿಗೆ ಮಗುಚಿ ಬಿದ್ದಿರುತ್ತದೆ. ಈ ಅಪಘಾತದಿಂದ ಪಿರ್ಯಾದಿದಾರರ ಎಡಗಾಲಿನ ಮಣಿಗಂಟಿನ ಹತ್ತಿರ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಮತ್ತು ಅಪಘಾತಪಡಿಸಿದ ಕಾರಿನ ಚಾಲಕ ಸೇರಿ ಅದೇ ಕಾರಿನಲ್ಲಿ ಅವರನ್ನು ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಇಲ್ಲಿನ ವೈದ್ಯರು ಅವರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿರುತ್ತಾರೆ. ಅಪಘಾತ ಸಮಯ ಅಪಘಾತಪಡಿಸಿದ ಕಾರಿನ ಚಾಲಕ ಅವರ ಚಿಕಿತ್ಸೆಯ ಸಂಪೂರ್ಣ ಆಸ್ಪತ್ರೆಯ ವೆಚ್ಚ ಭರಿಸುವುದಾಗಿ ತಿಳಿಸಿದ್ದು ಈಗ ಆಸ್ಪತ್ರೆಯ ವೆಚ್ಚ ಜಾಸ್ತಿ ಆಗುತ್ತಿರುವುದಾಗಿ ತಿಳಿಸಿ ಚಿಕಿತ್ಸಾ ವೆಚ್ಚ ಭರಿಸಲು ನಿರಾಕರಿಸಿರುವುದರಿಂದ ಈ ದೂರನ್ನು ಈ ದಿನ ತಡವಾಗಿ ನೀಡುತ್ತಿರುವುದಾಗಿದೆ.  ಎಂಬಿತ್ಯಾದಿ.

Crime Reported in Urva PS

ಪಿರ್ಯಾದಿ Smt Suparna G Shetty ದಾರರ ಬಾಬ್ತು ಕಮಲ್ ಸಾಗರ್, ಸಾಗರ್ ಕೋರ್ಟ್,  ಕಲ್ಬಾವಿ ರಸ್ತೆ, ಕೊಟ್ಟಾರ, ಮಂಗಳೂರು ಎಂಬ ವಾಸ್ತವ್ಯದ ಮನೆಯಲ್ಲಿ ದಿನಾಂಕ 23-03-2021 ರಂದು ಸಂಜೆ 5-00 ಗಂಟೆಗೆ ಚಿನ್ನದ ಪೆಂಡೆಂಟ್-02, ಕೈ ಬೆರಳು ಉಂಗುರ-01, ಕಿವಿಯ ಓಲೆ-03 ಗಳನ್ನು ವಾಡ್ರೋಬ್ ನಲ್ಲಿ ಇರಿಸಿದ್ದು ಈ ಆಭರಣಗಳನ್ನು ಆಗಸ್ಟ್ 05 ನೇ ತಾರೀಖಿನಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿದಾರರು ನೋಡಿದಾಗ ಸದರಿ ಆಭರಣಗಳು ವಾಡ್ರೋಬ್ ನಲ್ಲಿ ಇರೆದೆ ಇದ್ದು ಹುಡುಕಾಡಿದಲ್ಲಿ ಸಿಗದ ಕಾರಣ ದಿನಾಂಕ 05-01-2022 ರಂದು ದೂರು ನೀಡಿರುವುದಾಗಿದೆ. ಕಳವಾದ ಚಿನ್ನಾಭರಣಗಳು ಒಟ್ಟು 80 ಗ್ರಾಂ ತೂಕವಿದ್ದು ಅಂದಾಜು ಮೌಲ್ಯ 5,00,000/- ಆಗಬಹುದು  ಎಂಬಿತ್ಯಾದಿಯಾಗಿದೆ.

Crime Reported in Ullal PS

ಪಿರ್ಯಾದಿದಾರರಾದ ಶ್ರೀಮತಿ ವಿಭಾ ಶೆಟ್ಟಿ(32) ಸ್ಪಾರೋ ಸೊಲುಶನ್ ಎಂಬ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ 2 ವರ್ಷದಿಂದ ಮನೆಯಲ್ಲಿಯೇ ಇದ್ದು ಮನೆಯಿಂದಲೇ ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರ ಮಡ್ಯಾರ್ ಮನೆಯಲ್ಲಿ ಪಿರ್ಯಾದಿಯಾದಿದಾರರು ಪಿರ್ಯಾದಿಯಾದಿದಾರರ ತಾಯಿ, ಅಜ್ಜಿ, ಗಂಡ ಮಂಜುನಾಥ್ ಶೆಟ್ಟಿ, ಹಾಗೂ ತಂದೆ ರಮೇಶ್ ಶೆಟ್ಟಿ ರವರು ವಾಸವಾಗಿರುತ್ತಾರೆ. ಪಿರ್ಯಾದಿದಾರರ ತಂದೆ ರಮೇಶ್ ಶೆಟ್ಟಿ(68) ರವರಿಗೆ ನೆನಪಿನ ಶಕ್ತಿ ಕಡಿಮೆಯಿದ್ದು ದಿನಾಂಕ 02-01-2022 ರಂದು ಸಂಜೆ 4-00 ಗಂಟೆಗೆ ರಮೇಶ್ ಶೆಟ್ಟಿ(68) ವರ್ಷ ರವರು ಮನೆಯಿಂದ ಹೋಗುವುದನ್ನು ಪಿರ್ಯಾದಿಯಾದಿದಾರರ ಗಂಡ ಮಂಜುನಾಥ್ ಶೆಟ್ಟಿ ರವರು ನೋಡಿರುತ್ತಾರೆ. ರಾತ್ರಿ ಎಷ್ಟು ಸಮಯವಾದಾರೂ ಅವರು ಮನೆಗೆ ಬಾರದೇ ಇರುವುದರಿಂದ ಪಿರ್ಯಾದಿದಾರರು ಹಾಗೂ ಮನೆಯವರು ದಿನಾಂಕ 02-01-2022 ರಂದು ರಾತ್ರಿಯಿಂದಲೇ ಸಂಬಂಧಿಕರಲ್ಲಿ ಫೋನ್ ಮೂಲಕ ವಿಚಾರಿಸಿದರೂ ಈ ವರೆಗೆ ಪತ್ತೆಯಾಗಿರುವುದಿಲ್ಲ

 

ಇತ್ತೀಚಿನ ನವೀಕರಣ​ : 06-01-2022 07:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080