ಅಭಿಪ್ರಾಯ / ಸಲಹೆಗಳು

Crime Reported in Panambur PS

 ದಿನಾಂಕ 06-04-2022 ರಂದು 13.30 ಗಂಟೆಗೆ ಶ್ರೀ  ಉಮೇಶ್ ಕುಮಾರ್ ಎಮ್.ಎನ್   ಮತ್ತು ಠಾಣಾ ಹೆಚ್.ಸಿ ಡೇವಿಡ್ ಡಿಸೋಜಾ  ರವರುಗಳು  ಠಾಣಾ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯದಲ್ಲಿ ಇದ್ದ ಸಮಯ 13.30  ಗಂಟೆಗೆ  ಡೌನ್  ತೋಕುರು ಮಸೀದಿ ಬಳಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡುಬಂದಿದ್ದ   ಅಬ್ದುಲ್ ರಾಝಿಕ್  ಪ್ರಾಯ 30 ವರ್ಷ, ವಾಸ: ಡೌನ್  ತೋಕುರು ಮಸೀದಿ ಬಳಿ, 62 ನೇ ತೋಕುರು ಗ್ರಾಮ ಮಂಗಳೂರು ಎಂಬವನನ್ನು   ವಶಕ್ಕೆ ಪಡೆದು ವೈದ್ಯಾಧಿಕಾರಿಗಳು, ಎ.ಜೆ.ಆಸ್ಪತ್ರೆ,  ಮಂಗಳೂರುರವರ ಮುಖೇನಾ  ಪರೀಕ್ಷಿಸಿ ವರದಿ ಪಡೆಯಲಾಗಿ ಆಪಾದಿತ  ಗಾಂಜಾ ಸೇವನೆ ಮಾಡಿರುವುದು ದೃಡ ಪಟ್ಟಿರುವುದರಿಂದ ಎನ್.ಡಿ.ಪಿ.ಎಸ್ ಕಾಯ್ದೆ 1985 ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.  ಎಂಬಿತ್ಯಾದಿಯಾಗಿರುತ್ತದೆ.

 

Crime Reported in CEN Crime PS

ದಿನಾಂಕ 06-04-2022 ರಂದು ಠಾಣಾ ಪಿಎಸ್ಐ ಲತಾ ಕೆ.ಎನ್ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ  ಸಂತೋಷ್ ರವರೊಂದಿಗೆ ರೌಂಡ್ಸ್ ನಲ್ಲಿದ್ದ ಸಮಯದಲ್ಲಿ  ಬೆಳಿಗ್ಗೆ 8-30 ಗಂಟೆಗೆ ಮಂಗಳೂರು ನಗರದ ನೆಹರು ಮೈದಾನದ ಬಳಿ ಒಬ್ಬ ವ್ಯಕ್ತಿಯು ಗಾಂಜಾ ಸೇದಿ ನಿಂತುಕೊಂಡಿರುವ ಬಗ್ಗೆ ಮಾಹಿತಿ ಬಂದಂತೆ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ತಲುಪಿ ಅಲ್ಲಿ ನಶೆಯಲ್ಲಿದ್ದ ಯಶಸ್ ಕಾಂತ್ ಪ್ರಾಯ 19 ವರ್ಷ ವಾಸ: 15-17-893/2, ಶ್ರೀ ಮಹಾಲಸಾ, ಶಿವಭಾಗ್ 2ನೇ ಕ್ರಾಸ್, ಮಂಗಳೂರು ಎಂಬವನನ್ನು ಬೆಳಿಗ್ಗೆ 8-40 ಗಂಟೆಗೆ ಸಿಬ್ಬಂದಿಯವರೊಂದಿಗೆ ಸುತ್ತುವರಿದು ವಶಕ್ಕೆ ಪಡೆದು ವಿಚಾರಿಸಿದಾಗ ಯಶಸ್ ಕಾಂತ್ ಎಂಬವನು ಗಾಂಜಾ ಸೇದಿರುವುದನ್ನು ಒಪ್ಪಿಕೊಂಡಂತೆ ನಂತರ ಮಂಗಳೂರು ನಗರದ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಮಾಧಕ ವಸ್ತು ಸೇದಿರುವ ಬಗ್ಗೆ ಪರೀಕ್ಷೆಗೊಳಪಡಿಸಿದಾಗ ಮಾಧಕ ವಸ್ತು ಗಾಂಜಾ ಸೇದಿರುವುದು ದೃಢಪಟ್ಟಿರುವುದಾಗಿ ನೀಡಿದ ದೃಢಪತ್ರದಂತೆ ಆರೋಪಿ ಯಶಸ್ ಕಾಂತ್ ಎಂಬವನ ವಿರುದ್ಧ ತಯಾರಿಸಿದ ಪ್ರ.ವ.ವರದಿ ಎಂಬಿತ್ಯಾದಿ

  

Crime Reported in Moodabidre PS

ಪಿರ್ಯಾದಿದಾರರ ಸ್ನೇಹಿತ ಅಜಿತ್ ಶೆಟ್ಟಿ@ ಅಜಿತ್  ಗೆ ದಿನಾಂಕ: 02-04-2022 ರಂದು ಬೆಳಿಗ್ಗೆ 10.15 ಗಂಟೆಗೆ ನೆಲ್ಲಿಕ್ಕಾರು ಗ್ರಾಮದ ಜ್ಯೋತಿನಗರ ತಿರುವು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ  ಸಮಯ  ನೆಲ್ಲಿಕಾರಿನಿಂದ ರೆಂಜಾಳ ಕಡೆಗೆ ಹೋಗುವ ಯಾವುದೋ ವಾಹನವನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ತಿರುವು ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಜಿತ್ ಶೆಟ್ಟಿ @ ಅಜಿತ್ ಗೆ   ಡಿಕ್ಕಿ ಪಡಿಸಿದ  ಪರಿಣಾಮ ಬಲಕಾಲು ಕೋಲು ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು ಆಸ್ಪತ್ರೆಯಲ್ಲಿ ಇದ್ದ ಕಾರಣ ಅಮಲು ಪದಾರ್ಥ ಸೇವಿಸಲು ಸಾಧ್ಯವಾಗದೇ ಮಾನಸಿಕ ತೊಂದರೆಗೆ ಒಳಪಟ್ಟು ಕಾಲಿಗೆ ಹಾಕಿದ್ದ ಬ್ಯಾಂಡೇಜನ್ನು ಹರಿದು ಬಿಸಾಡುತ್ತಿದ್ದನು ಹಾಗೂ ತೀವ್ರ ಅಸ್ವಸ್ತ ನಾಗಿದ್ದವನಂತೆ ಕಂಡು ಬಂದಿದ್ದನು. ಹೀಗಿರುವಾಗ ದಿನಾಂಕ 05-04-2022 ರಂದು ಸಂಜೆ 5-06 ಗಂಟೆಗೆ  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಮೃತರ ರಕ್ತ ಸಂಬಂಧಿಕರು ಯಾರೂ ಇಲ್ಲದೆ ಇದ್ದುದ್ದರಿಂದ ಮೃತರ ಆರೈಕೆಯಲ್ಲಿದ್ದ ಪಿರ್ಯಾದಿ ರೋನಾಲ್ಡ್ ರವರು ತಡವಾಗಿ  ಈ  ದಿನ ದೂರು ನೀಡಿದ್ದು   ಈ ಬಗ್ಗೆ ಕ್ರಮ ಕೈಗೊಂಡು ಅಪಘಾತವನ್ನುಂಟುಮಾಡಿ ಪರಾರಿಯಾಗಿರುವ ವಾಹನ ಹಾಗೂ ವಾಹನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕಾಗಿ ವಿನಂತಿ ಎಂಬಿತ್ಯಾದಿ ಸಾರಂಶವಾಗಿದೆ

 

ಇತ್ತೀಚಿನ ನವೀಕರಣ​ : 06-04-2022 07:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080