ಅಭಿಪ್ರಾಯ / ಸಲಹೆಗಳು

Crime Reported in Kankanady Town PS

ಪಿರ್ಯಾದಿ Jagadish ASI ರವರು ದಿನಾಂಕ: 05-05-2022 ರಂದು ರಾತ್ರಿ ರೌಂಡ್ಸ್ ಕರ್ತವ್ಯಕ್ಕೆ  ತೆರಳಿ ಮುಂಜಾನೆ ಸುಮಾರು 4.30 ಗಂಟೆಗೆ ಪಡೀಲ್ ಬಜಾಲ್ ಪರಿಸರದಲ್ಲಿ ಸಂಚರಿಸುವ ವೇಳೆ ಪಡೀಲ್ ಬಜಾಲ್ ಕ್ರಾಸ್ ಬಳಿ  ನ್ಯೂ ಆಯ್ಯಂಗಾರ್ ಬೇಕರಿ ಕಟ್ಟಡದ ಹಿಂದೆ ಕತ್ತಲೆಯಲ್ಲಿ ಇಬ್ಬರು ವ್ಯಕ್ತಿಗಳು ತಮ್ಮನ್ನು ಮರೆಮಾಚಿ ಅನುಮಾನಸ್ಪದವಾಗಿ ಇರುವುದನ್ನು ಗಮನಿಸಿ ವಾಹನ ನಿಲ್ಲಿಸಿ ಅವರ ಬಳಿ ಹೋದಾಗ  ನಮ್ಮನ್ನು ಕಂಡು ಕತ್ತಲೆಯಲ್ಲಿ ಅವಿತ್ತು ಕುಳಿತರವರ ಬಳಿ ಹೋದಾಗ  ಓಡಲು ಪ್ರಯತ್ನ ಪಟ್ಟವರನ್ನು  ಹಿಡಿದು ವಿಚಾರಿಸಲಾಗಿ ಪ್ರಸಾದ್ ಪೂಜಾರಿ ಪ್ರಾಯ 25 ವರ್ಷ ತಂದೆ ದಿ.  ವಾಸ : ಮೊಗರುಗುಡ್ಡೆ ಮನೆ 5 ಸೆಂಟ್ಸ್ ಸೈಟ್ ಹೊಸಬೆಟ್ಟು ಗ್ರಾಮ ಮೂಡಬಿದ್ರಿ ಎಂದು ತಿಳಿಸಿರುತ್ತಾನೆ ಇನ್ನೋರ್ವನು ತನ್ನ ಹೆಸರು ಮಹೇಂದ್ರ ಪ್ರಾಯ 26 ವರ್ಷ ವಾಸ  ಮನೆ ನಂಬ್ರ 24 ಮಾತೃಶ್ರೀ ನಿಲಯ ಜೆರಗನ ಹಳ್ಳಿ ಜೆ ಪಿ ನಗರ ಬೆಂಗಳೂರು ಎಂಬುದಾಗಿ ತಿಳಿಸಿರುತ್ತಾನೆ.  ಇವರಲ್ಲಿ  ಆ ವೇಳೆಯಲ್ಲಿ  ತಮ್ಮನ್ನು ಮರೆಮಾಚಿ ಇದ್ದ ಬಗ್ಗೆ ವಿಚಾರಿಸಿದಲ್ಲಿ ಯಾವುದೇ ಸಮಂಜಸ ಉತ್ತರ ನೀಡದೇ ಇದ್ದುದರಿಂದ ಇವರು ಆ ವೇಳೆಯಲ್ಲಿ ಯಾವುದೋ ರೀತಿಯ ಬೇವಾರಂಟು ತಕ್ಷೀರು ಮಾಡುವ ಇರಾದೆಯಿಂದ ಇರುವುದರಿಂದ  ಬಲವಾದ ಸಂಶಯಗೊಂಡು  ಈ ದಿನ ದಿನಾಂಕ:06-05-2022 ರಂದು ಬೆಳಿಗ್ಗೆ 5-30 ಗಂಟೆಗೆ ವಶಕ್ಕೆ ಪಡೆದು ಠಾಣೆಗೆ  ಕರೆದುಕೊಂಡು ಬಂದು ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿರುವುದಾಗಿದೆ, ಎಂಬಿತ್ಯಾದಿ.

 

Crime Reported in Traffic North Police Station                   

ದಿನಾಂಕ 05-05-2022 ರಂದು ಪಿರ್ಯಾದಿ Mohammed Iqbal ದಾರರು ತನ್ನ ಬಾಬ್ತು KA-19-EZ-9943 ನಂಬ್ರದ ಸ್ಕೂಟರಿನಲ್ಲಿ ತನ್ನ ಹೆಂಡಿತಿಯಾದ ಶಕೀಲಾ ರವರ ಜೊತೆಯಲ್ಲಿ ಮಕ್ಕಳಾದ ಫಾತಿಮಾ ಸೀಜ್ಮಾ (06 ವರ್ಷ) ಮತ್ತು ಹಲಿಮಾ ಇಫ್ರ (02 ವ, 10 ತಿಂಗಳು) ರವರನ್ನು ಸಹ ಸವಾರೆಯಾಗಿ ಕುಳ್ಳಿರಿಸಿಕೊಂಡು ಮಂಗಳೂರಿನ ಬಂದರು ಕಡೆಯಿಂದ ತಮ್ಮ ಮನೆ ಕಡೆಗೆ ಕೂಳೂರು ಮಾರ್ಗವಾಗಿ ಸವಾರಿ ಮಾಡಿಕೊಂಡು ಹೋಗುತ್ತಾ KIOCL ಜಂಕ್ಷನ್ ಮೂಲಕ ತಣ್ಣೀರುಬಾವಿ ಕಡೆಗೆ ಕಾಂಕ್ರೀಟ್ ರಸ್ತೆಯಲ್ಲಿ ಸುಮಾರು 200 ಮೀ ತಲುಪುತ್ತಿದ್ದಂತೆ ಸಂಜೆ ಸಮಯ ಸುಮಾರು 6:00 ಗಂಟೆಗೆ ಪಿರ್ಯಾದಿದಾರರ ಹಿಂದುಗಡೆಯಿಂದ ಅಂದರೆ KIOCL ಜಂಕ್ಷನ್ ಕಡೆಯಿಂದ ತಣ್ಣೀರುಬಾವಿ ಕಡೆಗೆ KA-19-MD-7862 ನಂಬ್ರದ ಕಾರನ್ನು ಅದರ ಚಾಲಕ ಯೂಸೆಫ್ ಇಬ್ರಾಹಿಂ ಇಮಾಜ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಹಿಂಬದಿಯ ಬಲಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರಿಗೆ ಸ್ಕೂಟರಿನ ಮೇಲಿನ ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ಹೆಂಡತಿ, ಮಕ್ಕಳೊಂದಿಗೆ ರಸ್ತೆಗೆ ಎಸೆಯಲ್ಪಟ್ಟು ಸಹ ಸವಾರೆಯಾದ ಶಕೀಲಾ ರವರ ಎಡ ಕೈಯ ಮೊಣಗಂಟಿಗೆ ಮತ್ತು ಎಡಕಾಲಿನ ಮೊಣಗಂಟಿಗೆ ತರಚಿದ ರೀತಿಯ ಗಾಯವಾಗಿದ್ದು ಹಾಗೂ ಪಿರ್ಯಾದಿದಾರರ ಮಗಳಾದ ಹಲಿಮಾ ಇಫ್ರಾಳಿಗೆ ಬಲ ಕಣ್ಣಿನ ಹುಬ್ಬಿನ ಮೇಲ್ಭಾಗ ಚರ್ಮ ಹರಿದ ರೀತಿಯ ಗಾಯ, ಬಲ ಕಣ್ಣಿನ ಕೆಳಭಾಗದಲ್ಲಿ ತರಚಿದ ರೀತಿಯ ಗಾಯ, ಬಲ ಕೈಯ ಮೊಣಗಂಟಿನ ಬಳಿ ತರಚಿದ ಗಾಯ ಅಲ್ಲದೇ ತಲೆಯ ಬಲಭಾಗದಲ್ಲಿ ಗುದ್ದಿದ ರೀತಿಯ ಗಾಯವಾಗಿ ಹಲಿಮಾ ಇಫ್ರಾಳಿಗೆ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿರುತ್ತಾರೆ ಹಾಗೂ ಶಕೀಲಾ ರವರಿಗೆ ಸಣ್ಣ ಪುಟ್ಟ ಗಾಯಾಗಳಾಗಿರುವುದರಿಂದ ಯಾವುದೇ ಚಿಕಿತ್ಸೆಯನ್ನು ಪಡೆದುಕೊಂಡಿರುವುದಿಲ್ಲ ಈ ಅಪಘಾತದಿಂದ ಪಿರ್ಯಾದಿದಾರರಿಗೆ ಮತ್ತು ಅವರ ಇನ್ನೊಬ್ಬ ಮಗಳಾದ ಫಾತಿಮಾ ಸೀಜ್ಮಾಳಿಗೆ ಯಾವುದೇ ಗಾಯಾಗಳಾಗಿರುವುದಿಲ್ಲ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 06-05-2022 05:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080