ಅಭಿಪ್ರಾಯ / ಸಲಹೆಗಳು

Crime Reported in : Mangalore East Traffic PS

ಪಿರ್ಯಾದಿದಾರರಾದ ನೇಮನ್ ಶರೀಫ್ ರವರು   ದಿನಾಂಕ 06-06-2022 ರಂದು ಕೆಲಸದ ನಿಮಿತ್ತ ಕದ್ರಿಗೆ ತೆರಳಿದ್ದವರು ಅಲ್ಲಿ ವೈದ್ಯರನ್ನು ಬಿಟ್ಟು ಅವರ ಮನೆಯ ಕಡೆಗೆ KA 19-K 2032 ನಂಬ್ರದ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಹೊರಟು ಹಂಪನಕಟ್ಟೆ ಕಡೆಯಿಂದ ಕ್ಲಾಕ್ ಟವರ್ ಕಡೆಗೆ ಬರುತ್ತಾ ರಾತ್ರಿ ಸಮಯ ಸುಮಾರು 01.15  ಗಂಟೆಗೆ ತಾಲೂಕು ಪಂಚಾಯತ್ ಕಛೇರಿಯ ಎದುರುಗಡೆ ರಸ್ತೆಗೆ ಬಂದು ತಲುಪಿದಾಗ ಎದುರುಗಡೆಯಿಂದ ಅಂದರೆ ಕ್ಲಾಕ್ ಟವರ್ ಕಡೆಯಿಂದ ಎ.ಬಿ. ಶೆಟ್ಟಿ ಕಡೆಗೆ ಸಾಗಿರುವ ರಸ್ತೆಯಲ್ಲಿ ಏಕಮುಖ ರಸ್ತೆಗೆ ವಿರುದ್ಧವಾಗಿ KA 19 ME 3326 ಕಾರನ್ನು ಅದರ ಚಾಲಕನಾದ ಅಕ್ಷಯ್ ರವರು ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ವಾಹನ ಸಮೇತ ರಸ್ತೆ ಮೇಲೆ ಬಿದ್ದು, ತಲೆಯ ಎಡಭಾಗಕ್ಕೆ ಗುದ್ದಿದ ಚರ್ಮಕಿತ್ತ ರಕ್ತಗಾಯ, ಹಣೆಯಲ್ಲಿ ರಕ್ತಗಾಯ, ಮೂಗಿನ ಭಾಗ ಹರಿದು ಹೋಗಿ ರಕ್ತಗಾಯ ಮತ್ತು ತುಟಿಯ ಮೇಲೆ ಚರ್ಮಕಿತ್ತ ರಕ್ತಗಾಯ ಉಂಟಾದವರನ್ನು ಕಾರು ಚಾಲಕ ಅಕ್ಷಯ್ ರವರು ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯ ವೈದ್ಯರು ಪರೀಕ್ಷಿಸಿ ಗಾಯಾಳುವನ್ನು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿರುವುದಾಗಿದೆ ಎಂಬಿತ್ಯಾದಿ.

 

2) ಪಿರ್ಯಾದಿ UMESH SHETTY ರವರು ಮಂಗಳೂರು ನಗರದ ಹಂಪನಕಟ್ಟೆ ಜಂಕ್ಷನ್ ಬಳಿ ಇರುವ ಧನ್ಯವಾದ್ ಲಾಡ್ಜ್ ನ ರೂಂ ಬಾಯ್ ಆಗಿದ್ದು, ದಿನಾಂಕ 05-06-2022 ರಂದು ಬೆಳಿಗ್ಗೆ ಸುಮಾರು 10.30 ಗಂಟೆಗೆ ಪಿರ್ಯಾದಿದಾರರು ಲಾಡ್ಜ್ ನ ಮುಂಭಾಗ ನಿಂತುಕೊಂಡಿದ್ದ ವೇಳೆ KA-19-AB-3470 ನಂಬ್ರದ ಆಟೋ ರಿಕ್ಷಾವನ್ನು ಅದರ ಚಾಲಕನಾದ ಪ್ರವೀಣ್ ಶೆಟ್ಟಿ ಎಂಬಾತನು ಮಿಲಾಗ್ರೀಸ್ ಕಡೆಯಿಂದ ಹಂಪನಕಟ್ಟೆ ಜಂಕ್ಷನ್ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ವೆನ್ಲಾಕ್ ಆಸ್ಪತ್ರೆ ಕಡೆಯಿಂದ ಕೆ.ಎಸ್. ರಾವ್ ರೋಡ್ ಕಡೆಗೆ ಹೋಗಲು ಹಂಪನಕಟ್ಟೆ ಜಂಕ್ಷನ್ ಬಳಿ ಧನ್ಯವಾದ್ ಲಾಡ್ಜ್ ಎದುರುಗಡೆ ಜೀಬ್ರಾ ಕ್ರಾಸ್ ಮೇಲೆ ರಸ್ತೆ ದಾಟುತ್ತಿದ್ದ ಪಾದಾಚಾರಿ ಅಬ್ದುಲ್ಲಾ ಎ.ಎಂ. ಎಂಬಾತನಿಗೆ ಡಿಕ್ಕಿ ಪಡಿಸಿದ ಪರಿಣಾಮ ಅಬ್ದುಲ್ಲಾ ಎ.ಎಂ. ರವರು ಆಟೋ ರಿಕ್ಷಾದ ಮುಂಭಾಗದ ಗ್ಲಾಸ್ ಗೆ ಬಡಿದು ಕಾಂಕ್ರಿಟ್ ರಸ್ತೆಗೆ ಎಸೆಯಲ್ಪಟ್ಟು ಬಿದ್ದು, ತಲೆಗೆ ಮತ್ತು ಮುಖಕ್ಕೆ ತೀವ್ರತರಹದ ರಕ್ತಗಾಯಗೊಂಡವನನ್ನು ಚಿಕಿತ್ಸೆಯ ಬಗ್ಗೆ  ಅಪಘಾತಪಡಿಸಿದ ಆಟೋರಿಕ್ಷಾ ಚಾಲಕನೇ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,  ಪರೀಕ್ಷಿಸಿದ ವೈದ್ಯರು ಗಾಯಾಳು ಅಬ್ದುಲ್ಲಾ ಎ.ಎಂ. ರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

               

3) ದಿನಾಂಕ 04-06-2022 ರಂದು ರಾತ್ರಿ ಪಿರ್ಯಾದಿದಾರರಾದ ಸಂತೋಷ್ ರವರು ತನ್ನ ಬಾಬ್ತು KA-19-EJ-9838 ನಂಬ್ರದ ಮೋಟಾರ್ ಸೈಕಲ್ ನಲ್ಲಿ ತನ್ನ ಸ್ನೇಹಿತ ಸಚಿನ್ ರವರನ್ನು ಹಿಂಬದಿ ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು ನಗರದ ವೀರನಗರದಿಂದ ಕೊಂಚಾಡಿಗೆ ಸ್ನೇಹಿತ ಸಚಿನ್ ರವರನ್ನು ಮನೆಗೆ ಬಿಡಲು ನಂತೂರು ಕಡೆಯಿಂದ ಕುಂಟಿಕಾನ ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ನೇ ಡಾಮಾರು ರಸ್ತೆಯಲ್ಲಿ ಮೋಟಾರು ಸೈಕಲನ್ನು ಚಲಾಯಿಸಿಕೊಂಡು ಬರುತ್ತಾ ರಾತ್ರಿ ಸುಮಾರು 11.00 ಗಂಟೆಗೆ ಕೆಪಿಟಿ ಜಂಕ್ಷನ್ ಬಳಿಗೆ ಬಂದು ತಲುಪುತ್ತಿದ್ದಂತೆ KA-19-ME-0566 ನಂಬ್ರದ ಕಾರನ್ನು ಅದರ ಚಾಲಕ ಜೀವನ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ನಂತೂರು ಕಡೆಯಿಂದ ಕುಂಟಿಕಾನ ಕಡೆಗೆ ಹಾದು ಹೋಗಿರುವ ರಾ. ಹೆ. 66ನೇ ಡಾಮಾರು ರಸ್ತೆಯಲ್ಲಿ ಚಲಾಯಿಸಿಕೊಂಡು  ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಮೋಟಾರ್ ಸೈಕಲ್ ನ ಬಲ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಸ್ನೇಹಿತ ಸಚಿನ್ ರವರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಕೈ ಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ಸಚಿನ್ ರವರಿಗೆ ತಲೆಯ ಎಡಬದಿ, ಬಲ ಕಾಲಿನ ಪಾದದ ಗಂಟಿನ ಬಳಿ, ಎಡಕಾಲಿನ ಪಾದದ ಮೇಲೆ ತರಚಿದ ಗಾಯಗಳಾಗಿದ್ದು, ಎಡ ಹುಬ್ಬಿನ ಬಳಿ , ಮೂಗಿನ ಎಡ ಬದಿಗೆ, ಮೇಲ್ತುಟಿಯ ಬಲ ಬದಿಗೆ ಚರ್ಮ ಹರಿದ ರಕ್ತಗಾಯ ಮತ್ತು ಎಡ ಕಾಲಿನ ತೊಡೆಯ ಭಾಗಕ್ಕೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು,  ಸಚಿನ್ ರವರು ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಕಾರು ಚಾಲಕ ಜೀವನ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

                                                       

Crime Reported in : Traffic North Police Station

ಪಿರ್ಯಾದಿದಾರರಾದ ಶ್ರೀ ಅಶ್ರಫ್ ರವರು ದಿನಾಂಕ: 05-06-2022 ರಂದು ಜಪ್ಪುನಲ್ಲಿಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕೆ ಹೋದವರು ರೂಟ್ ನಂಬ್ರ 45ಡಿ KA-19-C-2270 ನಂಬ್ರದ ಬಸ್ಸಿಲ್ಲಿ ವಾಪಾಸು ಮನೆಯಕಡೆಗೆ ಬರುತ್ತಾ ಮಧ್ಯಾಹ್ನ 2:30 ಗಂಟೆಗೆ ಕೃಷ್ಣಾಪುರ 7ನೇ ಬ್ಲಾಕ್ ಬಸ್ಸು ನಿಲ್ದಾಣದ ಬಳಿ ಬಸ್ಸಿನ ಕಂಡಕ್ಟರ್ ಬಸ್ಸನ್ನು ನಿಲ್ಲಿಸಲು ಸೂಚಿಸಿದಂತೆ ಚಾಲಕರು ಬಸ್ಸನ್ನು ನಿಲ್ಲಿಸಿದ್ದು ಪಿರ್ಯಾದಿದಾರರು ಬಸ್ಸಿನ ಮುಂಭಾಗದ ಬಾಗಿಲಿನಿಂದ ಇಳಿಯುತ್ತಿದ್ದ ಸಮಯ ಬಸ್ಸಿನ ಚಾಲಕ ಶೈಲೇಶ್ ಎಂಬಾತನು ಪಿರ್ಯಾದಿದಾರರು ಬಸ್ಸಿನಿಂದ ಇಳಿಯುವುದನ್ನು ಗಮನಿಸದೇ ಬಸ್ಸನ್ನು ನಿರ್ಲಕ್ಷ್ಯತನ ಹಾಗೂ ದುಡುಕುನತದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರು ಬಸ್ಸಿನಿಂದ ಕೆಳೆಗೆ ಬಿದ್ದು ಪಿರ್ಯಾದಿದಾರರ ಬಲ ಕಾಲಿನ ಮೇಲೆ ಬಸ್ಸಿನ ಹಿಂಭಾಗದ ಚಕ್ರ ಹರಿದು ಪಿರ್ಯಾದಿದಾರರಿಗೆ ಮೂಳೆ ಮುರಿತದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

2) ದಿನಾಂಕ: 05-06-2022 ರಂದು ಪಿರ್ಯಾದಿದಾರರಾದ ಕೃಷ್ಣಾ ಹನುಮಂತಪ್ಪ ಭೋವಿ ರವರು ತನ್ನ ಇಬ್ಬರು ಗೆಳೆಯರಾದ  ಮಹೇಶ್ ಶಂಕರ್ ನಾಯ್ಕ್ ಮತ್ತು ಅರ್ಜುನ್ ಎಂಬವರೊಂದಿಗೆ ರಾತ್ರಿ ಊಟ ಮಾಡುವ ಸಲುವಾಗಿ ಬಾಳ ಕಡೆಗೆ ನಡೆದುಕೊಂಡು ಹೋಗುತ್ತಾ HPCL ಗೇಟ್ ಸಮೀಪ ಸಮೀಪಿಸುತ್ತಿದ್ದಂತೆ ರಾತ್ರಿ ಸಮಯ 10:00 ಗಂಟೆಗೆ ಕಾಟಿಪಳ್ಳ ಕೈಕಂಬ ಜಂಕ್ಷನ್ ಕಡೆಯಿಂದ ಸುರತ್ಕಲ್ ಕಡೆಗೆ KA-19-AB-3081 ನಂಬ್ರದ ಆಟೋರಿಕ್ಷಾವನ್ನು ಅದರ ಚಾಲಕನಾದ ಶಾನವಾಜ್ ಕಲ್ಲಾಪುರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತಿದ್ದ ಕೃಷ್ಣಾ ಹನುಮಂತಪ್ಪ ಭೋವಿ, ಅರ್ಜುನ್ ಹಾಗೂ ಮಹೇಶ ಶಂಕರ್ ನಾಯ್ಕ್ ಎಂಬವರುಗಳ ಪೈಕಿ ಮಹೇಶ ಶಂಕರ್ ನಾಯ್ಕ್ ಎಂಬಾತನಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಹೇಶನು ಡಾಮಾರು ರಸ್ತೆಗೆ ಬಿದ್ದು, ಮಹೇಶನ ತಲೆಯ ಹಿಂಭಾಗ ಬಲಬದಿ ಗುದ್ದಿದ ಗಂಭೀರ ಸ್ವರೂಪದ ಒಳಗಾಯವಾಗಿ ಮಹೇಶನು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾನೆ ಎಂಬಿತ್ಯಾಧಿ.

 

Crime Reported in: Ullal PS

ಪಿರ್ಯಾದಿದಾರರು Pradeep T R ರವರು ದಿನಾಂಕ 05/06/2022 ರಂದು ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ಹಗಲು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಉಳ್ಳಾಲ ತಾಲೂಕು ಉಳ್ಳಾಲ ಗ್ರಾಮದ ಕೋಡಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಯಾವುದೋ ಮಾಧಕ ವಸ್ತು ಸೇವನೆ ಮಾಡಿ ನಶೆಯಲ್ಲಿ ಇದ್ದು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿದ್ದು ಕೂಡಲೇ ಸದ್ರಿ ಸ್ಥಳಕ್ಕೆ ಬೆಳಗ್ಗೆ 11-30 ಗಂಟೆಗೆ ತಲುಪಿದಾಗ ಕೋಡಿ ಸಾರ್ವಜನಿಕ ರಸ್ತೆಯ ಬದಿ ಇರುವ ಮರವೊಂದರ ಕೆಳಗೆ ನಿಂತುಕೊಂಡಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲಿ ಅಮಲಿನಿಂದ ತೂರಾಡಿಕೊಂಡು ಇದ್ದು ಅವನ ಬಳಿಗೆ ಹೋಗಿ ವಿಚಾರಿಸಿದಾಗ ನಶೆಯ ಅಮಲಿನಲ್ಲಿ ಉತ್ತರಿಸುತ್ತಾ ಸದ್ರಿ ವ್ಯಕ್ತಿಯು ನಿಷೇದಿತ ಅಮಲು ಪದಾರ್ಥ ಗಾಂಜಾವನ್ನು ಸೇವಿಸಿರುವುದಾಗಿ ಒಪ್ಪಿಕೊಂಡಿರುತ್ತಾನೆ ಸದ್ರಿ ವ್ಯಕ್ತಿಯು ಅಶ್ರಫ್ ನಿಹಾಲ್ (23 ವರ್ಷ) ವಾಸ : ಕೋಡಿ ಡೌನ್‌ರೋಡ್, ಮಸೀದಿ ಬಳಿ, ಕೋಡಿ, ಉಳ್ಳಾಲ ಎಂಬುದಾಗಿ ತಿಳಿಸಿರುತ್ತಾನೆ. ಸದ್ರಿಯವರನ್ನು ವಶಕ್ಕೆ ಪಡೆದು ದೇರಳಕಟ್ಟೆಯ ಕೆ. ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ತಪಾಸಣೆಗೆ ಒಳಪಡಿಸಿ ವೈದ್ಯಾಧಿಕಾರಿಯವರು ಸದ್ರಿ ವ್ಯಕ್ತಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ದೃಡಪತ್ರ ನೀಡಿರುತ್ತಾರೆ. ಆದುದರಿಂದ  ಕಾನೂನು ಬಾಹಿರವಾದ  ನಿಷೇದಿತ ಮಾಧಕ ವಸ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ ಸದ್ರಿ ವ್ಯಕ್ತಿಯ ವಿರುದ್ದ ಕಾನೂನು ರೀತಿಯ ಕ್ರಮಕೈಗೊಂಡಿರುವುದಾಗಿದೆ ಎಂಬಿತ್ಯಾದಿ

                       

2) ದಿನಾಂಕ. 5-6-2022 ರಂದು ಬೆಳಿಗ್ಗೆ 11-30 ಗಂಟೆಯ ಸಮಯಕ್ಕೆ ಉಳ್ಳಾಲ ತಾಲೂಕಿನ ಉಳ್ಳಾಲ ಗ್ರಾಮದ ಕೈಕೋ ಹತ್ತಿರ ಕೆಎ-04-ಸಿ-9170 ನೇ ವಾಹನವನ್ನು ಅದರ  ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸದ್ರಿ ಸ್ಥಳದಲ್ಲಿದ್ದ ಹೆಚ್.ಟಿ/ಎಲ್.ಟಿ. ಲೈನ್ ವಿದ್ಯುತ್ ಕಂಬಕ್ಕೆ ಗುದ್ದಿ 2 ಸಂಖ್ಯೆಯ ವಿದ್ಯುತ್ ಕಂಬವು ತುಂಡಾಗಿ ಮೆಸ್ಕಾಂ ಇಲಾಖೆಗೆ ಸುಮಾರು 50,000/- ರೂಪಾಯಿ ನಷ್ಟ ಉಂಟು ಮಾಡಿದ್ದು, ಈ ಅವಘಡದ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸದ್ರಿ ಲಾರಿ ಚಾಲಕನ ವಿರುದ್ಧ ಸೂಕ್ತ ಕ್ರಮಕ್ಕಾಗಿ ಫಿರ್ಯಾದಿದಾರರು Rajesh Shetty K N  ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

 

Crime Reported in : Mulki PS

ಪಿರ್ಯಾದಿSandeep ರವರ ಪತ್ನಿ ಶ್ರೀಮತಿ ಪ್ರತಿಭಾ ಪ್ರಾಯ: 27 ವರ್ಷ, ಎಂಬಾಕೆಯು ಮಂಗಳೂರು ತಾಲೂಕು ಕಾರ್ನಾಡಿನ ಗ್ರಾಮದ ಕಾರ್ನಾಡು ಸೈಂಟ್ ಆನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು ಎಂದಿನಂತೆ ದಿನಾಂಕ: 04-06-2022 ರಂದು ಬೆಳಿಗ್ಗೆ 08-30ಗಂಟೆಗೆ ಲಿಂಗಪ್ಪಯ್ಯಕಾಡಿನಿಂದ ಕಾರ್ನಾಡು ಸೈಂಟ್ ಆನ್ಸ್ ಆಸ್ಪತ್ರೆಗೆಂದು ಹೋಗಿದ್ದು ಆದರೆ ಆಕೆಯು ಆಸ್ಪತ್ರೆಗೂ ಹೋಗದೇ ಮನೆಗೂ ಬಾರದೇ ಇತರ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿವುದಾಗಿದೆ.

ಕಾಣೆಯಾದವರ ಚಹರೆ:-

ಹೆಸರು: ಶ್ರೀಮತಿ ಪ್ರತಿಭಾ,

ಪ್ರಾಯ: 27 ವರ್ಷ

ಎತ್ತರ: 5 ಅಡಿ

ಮೈಬಣ್ಣ: ಗೋದಿ ಮೈ ಬಣ್ಣ 

ಮೈಕಟ್ಟು: ಸಪೂರ ದೇಹ

ಧರಿಸಿದ ಬಟ್ಟೆ: ಕಪ್ಪು ಚೂಡಿದಾರ ಪ್ಯಾಂಟ್ ಹಾಗೂ ಕೆಂಪು ಟಾಪನ್ನು ಧರಿದ್ದು ಅದಕ್ಕೆ ಕಪ್ಪು ಶಾಲನ್ನು ಧರಿಸಿರುತ್ತಾಳೆ

 

2) ಕೇರಳ ರಾಜ್ಯದ ತ್ರೀಶುರ್ ರೈಲ್ವೆ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡು ಬಂದ ಪ್ರಕರಣದ ಸಾರಂಶ ಏನೆಂದರೆ ಪಿರ್ಯಾದಿದಾರರು Jalaja Suresh ಮತ್ತು ಅವರ ಪತಿ ದಿನಾಂಕ 23/02/2022 ರಂದು ಗುಜರಾತಿ ನ ವಾಪಿಯಿಂದ ತ್ರೀಶೂರ್ ಕಡೆಗೆ ಇಂದೋರ್ ಕೊಚ್ಚುವೆಲಿ ಎಕ್ಸಪ್ರೇಸ್  ಎಂಬ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದಿನಾಂಕ:23-02-2022 ರಂದು 8-25 ಗಂಟೆಯಿಂದ ದಿನಾಂಕ 24-02-2022 ರಂದು 02-15 ಗಂಟೆಯ ಮದ್ಯಾವದಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ ತಲೆಯ ಬಳಿ ಇಟ್ಟಿದ್ದ ಪಿರ್ಯಾದಿದಾರರ ಬ್ಯಾಗ್ ನಲ್ಲಿ ಇದ್ದ (1) 16 ಗ್ರಾಂ ತೂಕದ ಚಿನ್ನದ ಸರ – 1 (2) 17.5 ಗ್ರಾಂ ತೂಕದ ತಾಳಿಯೊಂದಿಗೆ ಇದ್ದ ಚಿನ್ನದ ಸರ 1 (3) 16 ಗ್ರಾಂ ತೂಕದ ಚಿನ್ನದ ಬಳೆ-1 (4)ತಲಾ 8 ಗ್ರಾಂ ತೂಕದ ಒಟ್ಟು 16 ಗ್ರಾಂ ತೂಕದ ಚಿನ್ನದ ಬಳೆಗಳು 2 (5) 3.5 ಗ್ರಾಂ ತೂಕದ ಉಂಗುರ 1 (6) 2 ಗ್ರಾಂ ತೂಕದ ಉಂಗುರ 1 (7) 4 ಗ್ರಾಂ ತೂಕದ  ಕಿವಿಯೋಲೆ 1 ಜೊತೆ (8) ಸ್ಯಾಮ್ ಸಂಗ್ ಕಂಪನಿಯ SM-M 115/DS ನೇ ಮೊಬೈಲ್ ಪೋನ್ 1 (9) ಆದಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, SBI & ಪೆಡರಲ್ ಬ್ಯಾಂಕಿನ ಎ.ಟಿ.ಎಮ್ ಕಾರ್ಡ್ ಇವುಗಳನ್ನು ಕಳವು ಮಾಡಿಕೊಂಡು ಹೋಗಿರುವುದು 02-15 ಗಂಟೆಗೆ ಮುಲ್ಕಿ ಎಂಬಲ್ಲಿ ರೈಲು ತಲುಪಿದಾಗ ಪಿರ್ಯಾದಿದಾರರಿಗೆ ಕಂಡು ಬಂದಿದ್ದು ಪಿರ್ಯಾದಿದಾರರ ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯವು 3,10,000/- ರೂ ಆಗಿದ್ದು ಕಳವಾದ ಮೊಬೈಲಿನ ಮೌಲ್ಯವು 13,000/- ರೂ ಆಗಿರುತ್ತದೆ ಎಂಬಿತ್ಯಾದಿಯಾಗಿದೆ.

 

ಇತ್ತೀಚಿನ ನವೀಕರಣ​ : 06-06-2022 07:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080