Crime Reported in: Mangalore West Traffic PS
ದಿನಾಂಕ:05-07-2022 ರಂದು ಪಿರ್ಯಾದಿ DARSHANA ರವರಿಗೆ ಬಳ್ಳಾಲ್ ಭಾಗ್ ನಲ್ಲಿರುವ ಐಟಿ ಕಂಪೆನಿಯಲ್ಲಿ ರಾತ್ರಿ ಪಾಳಿಯ ಕೆಲಸವಿದ್ದು ಅದರಂತೆ ಪಿರ್ಯಾದಿದಾರರ ತಂದೆಯ ಬಾಬ್ತು KA-21-V-2090ನೇ ದ್ವಿ ಚಕ್ರ ವಾಹನದಲ್ಲಿ ಪಿರ್ಯಾದಿದಾರರು ಸಹಸವಾರಳಾಗಿ ತಂದೆಯವರು ದ್ವಿ ಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಮನೆಯಿಂದ ಹೊರಟು ಬಳ್ಳಾಲ್ ಭಾಗ್ ಕಡೆಗೆ ಸಂಚರಿಸುತ್ತಿದ್ದು, ಮೆಸ್ಕಾಂನವರು ಲಾಲ್ ಭಾಗ್ ಬಳಿಯಿರುವ ಪಬ್ಬಸ್ ನ ಎದುರುಗಡೆ ಕೆಲಸ ನಡೆಸುತ್ತಿದ್ದರಿಂದ ಲೇಡಿಹಿಲ್ ಕಡೆಯಿಂದ ಲಾಲ್ ಭಾಗ್ ಕಡೆಗೆ ಹಾದು ಹೋಗುವ ಏಕಮುಖ ರಸ್ತೆಯನ್ನು ಕರಾವಳಿ ಮೈದಾನದ ಎದುರು ಇರುವ ಮೀಡಿಯನ್ ಬಳಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಇಟ್ಟು ಬಂದ್ ಮಾಡಿದ್ದರಿಂದ ವಾಹನಗಳು ಎಲ್ಲವೂ ಕರಾವಳಿ ಮೈದಾನದ ಎದುರು ಇರುವ ಮೀಡಿಯನ್ ನಲ್ಲಿ ಲಾಲ್ ಭಾಗ್ ಕಡೆಯಿಂದ ಲೇಡಿಹಿಲ್ ಕಡೆಗೆ ಹಾದು ಹೋಗುವ ರಸ್ತೆಗೆ ತಿರುವು ತೆಗೆದುಕೊಂಡು ಇತರ ವಾಹನಗಳು ಸಂಚರಿಸುತ್ತಿರುವುದನ್ನು ಅನುಸರಿಸಿಕೊಂಡು ಪಿರ್ಯಾದಿದಾರರ ತಂದೆಯವರು ಕೂಡ ಸಂಚರಿಸುತ್ತಾ ಸಮಯ ಸುಮಾರು 21-30 ಗಂಟೆ ವೇಳೆಗೆ ಲಾಲ್ ಭಾಗ್ ನಲ್ಲಿರುವ ಉಡುಪಿ ಕಡೆಗೆ ಹೋಗುವ ಬಸ್ಸುಗಳು ನಿಲ್ಲುವ ಬಸ್ಸು ಬೇ ಎದುರು ತಲುಪುವಾಗ ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಲೇಡಿಹಿಲ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ KA-70-H-6564 ನೇ ದ್ವಿ ಚಕ್ರ ವಾಹನ ಸವಾರ ಮೋಹನ್ ಎಂಬಾತನು ತಾನು ಸವಾರಿ ಮಾಡುತ್ತಿದ್ದ ದ್ವಿ ಚಕ್ರ ವಾಹನವನ್ನು ತೀರಾ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಆತನ ತೀರಾ ಬಲ ಬದಿಗೆ ಚಲಾಯಿಸಿ ಪಿರ್ಯಾದಿದಾರರ ತಂದೆಯವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರಿಗೆ ಕುತ್ತಿಗೆ ಬಲ ಭಾಗ, ಬೆನ್ನಿಗೆ, ಎರಡೂ ಕಾಲಿನ ತೊಡೆಗೆ ಗುದ್ದಿದ ನಮೂನೆಯ ಗಾಯವಾಗಿದ್ದು ಪಿರ್ಯಾದಿದಾರರ ತಂದೆಯವರಿಗೆ ಬಲ ಕಾಲಿನ ಮೊಣಗಂಟಿನಲ್ಲಿ, ಎಡ ಕೈಯ ತೋರು ಬೆರಳಿಗೆ ತರಚಿದ ನಮೂನೆಯ ಮತ್ತು ಬಲ ಕೈಯ ತೋರು ಬೆರಳಿಗೆ ತರಚಿದ ಮತ್ತು ಗುದ್ದಿದ ನಮೂನೆಯ ಹಾಗೂ ಬಲ ಕೈ ಮಣಿಗಂಟಿನಲ್ಲಿ ಮೂಳೆ ಮುರಿತ ಮತ್ತು ಎದೆಗೆ ಗುದ್ದಿದ ನಮೂನೆಯ ನೋವುವುಂಟಾಗಿರುತ್ತದೆ ಎಂಬಿತ್ಯಾದಿ
Crime Reported in: Barke PS
ಪಿರ್ಯಾದಿದಾರರಾದ ಮುರುಳಿಧರ ಶೆಟ್ಟಿ ಎಂಬುವರು ಸುಮಾರು 19 ವರ್ಷಗಳಿಂದ M/s Alpha Meditech ಎಂಬ ಹೆಸರು ಶೈಲಿಯ ತನ್ನ ಸ್ವಾಮ್ಯದಲ್ಲಿ ವೈಧ್ಯಕೀಯ ಉಪಕರಣಗಳ ಮಾರಾಟ ಮತ್ತು ಸೇವೆ ವ್ಯಾಪಾರವನ್ನು ಮಾಡಿಕೊಂಡಿದ್ದು, 2020 ನೇ ಇಸವಿಯಲ್ಲಿ ಪಿರ್ಯಾದಿದಾರರು ಆರೋಪಿತನಾದ ಅಮಿತ್ ಸುರೇಶ್ ಶೇವಾಲೆ ಎಂಬುವರ ಪರಿಚಯವಾಗಿ ಪಿರ್ಯಾದಿದಾರರ ಉಪಕರಣಗಳ ಸರಬರಾಜು, ಗಾಗಿ ದಿನಾಂಕ: 17-11-2020 ರಂತೆ ಖರೀದಿ ಒಪ್ಪಂದವನ್ನು ಮಾಡಿಕೊಂಡು, ಪಿರ್ಯಾದಿದಾರರು ಆರೋಪಿತನಿಗೆ ಖರೀದಿ ಆದೇಶದಲ್ಲಿ ನಮೂದಿಸಿರುವ ಉಪಕರಣಗಳನ್ನು ಖರೀದಿಸಿ ಉಡುಪಿಯಲ್ಲಿರುವ ಹೈಟೆಕ್ ಮೆಡಿಕೇರ್ ಆಸ್ಪತ್ರೆಗೆ 4 ವಾರಗಳಲ್ಲಿ ನಿಡಬೇಕು ಎಂದು ರೂ.12,00,070/- ಹಣವನ್ನು ಬ್ಯಾಂಕ್ ನಿಂದ ಆರೋಪಿಗೆ ಪಾವತಿಸಿದ್ದರು ಕೂಡಾ ಆರೋಪಿತನು ವೈಧ್ಯಕೀಯ ಉಪಕರಣಗಳನ್ನು ಅಳವಡಿಸದೆ ಪಿರ್ಯಾದಿದಾರರಿಗೆ ನಷ್ಟವನ್ನುಂಟು ಮಾಡಿರುತ್ತಾನೆ. ಅಲ್ಲದೆ ಆರೋಪಿತನು ಹಲವಾರು ಬಾರಿ ಸತಾಯಿಸಿದ್ದು, ಪಿರ್ಯಾದಿದಾರರು ಪುಣೆಗೆ ಹೋಗಿ ಹಲವಾರು ಬಾರಿ ಮಾತುಕತೆ ನಡೆಸಿದಾಗ ಬಳಿಕ ಪಿರ್ಯಾದಿದಾರರಿಗೆ ಚೆಕ್ ಗಳನ್ನು ನೀಡಿದ್ದು ಸದ್ರಿ ಚೆಕ್ ಗಳು ಅಪಮಾನಕ್ಕೆ ಒಳಗಾಗಿದ್ದು ನಂತರ ದಿನಾಂಕ: 29-11-2021 ರಂದು ಒಪ್ಪಂದವನ್ನು ಮಾಡಿಕೊಂಡು ಪಿರ್ಯಾದಿದಾರಿಂದ ಆರೋಪಿತನು ರೂ. 15,39,075/- ಹಣವನ್ನು ಪಾವತಿಸಿಕೊಂಡು, ಪಿರ್ಯಾದಿದಾರರಿಗೆ ನಂಬಿಕೆ ದ್ರೋಹ ಬಗೆದು, ಅಪಾರ ನಷ್ಟವನ್ನುಂಟು ಮಾಡಿ, ಸುಳ್ಳು ಸ್ಪಷ್ಟನೆ ಕೊಟ್ಟು ಮೋಸ ಮಾಡಿರುವುದಾಗಿದೆಂಬಿತ್ಯಾದಿ ಸಾರಾಂಶ.
Crime Reported in: Urva PS
ದಿನಾಂಕ 05-07-2022 ರಂದು ಮಂಗಳೂರು ನಗರದ ಕೋಡಿಕಲ್ ಬಳಿಯಲ್ಲಿ ಪ್ರಜ್ವಲ್ ಪ್ರಾಯ 26 ವರ್ಷ, ವಾಸ: ಜೆ ಬಿ ಲೋಬೋ ರಸ್ತೆ ಸುಬ್ರಹ್ಮಣ್ಯಪುರ, ಕೊಟ್ಟಾರ ಚೌಕಿ, ಮಂಗಳೂರು ಎಂಬವರು ಮಾದಕ ವಸ್ತು ಸೇವನೆ ಮಾಡಿಕೊಂಡಿರುವವರನ್ನು ವಶಕ್ಕೆ ಪಡೆದು ಕುಂಟಿಕಾನ ಎ,ಜೆ ಆಸ್ಪತ್ರೆಯ ವೈಧ್ಯಾಧಿಕಾರಿಯವರಲ್ಲಿ ಗಾಂಜಾ ಸೇವಿಸಿದ ಬಗ್ಗೆ ಪರೀಕ್ಷೆಗೊಳಪಡಿಸಿದ್ದು, ವೈದ್ಯರು ತಮ್ಮ ವರದಿಯಲ್ಲಿ ಈತನು ಗಾಂಜಾ ಸೇವಿಸಿರುವುದಾಗಿ ಧೃಡಪಡಿಸಿ ವರದಿ ನೀಡಿರುವ ಮೇರೆಗೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿರುವುದು ಎಂಬಿತ್ಯಾದಿ.
Crime Reported in:Mangalore North PS
ದಿನಾಂಕ 05-07-2022 ರಂದು ಮಂಗಳೂರು ನಗರದ ಕುದ್ರೋಳಿ ಬಳಿಯಲ್ಲಿ ಶೇಖ್ ಮಹಮ್ಮದ್ ರಾಹೀಲ್ @ ಚೋಟು ಪ್ರಾಯ:22 ವರ್ಷ ವಾಸ: ಅರ್ಬಿಕಾನ್ ಹೌಸ್, ಎ-1 ಫ್ಲಾಟ್ ಮುಂಭಾಗ, ಕುದ್ರೋಳಿ, ಮಂಗಳೂರು ಎಂಬವರು ಮಾದಕ ವಸ್ತು ಸೇವನೆ ಮಾಡಿಕೊಂಡಿರುವವರನ್ನು ವಶಕ್ಕೆ ಪಡೆದು ಕುಂಟಿಕಾನ ಎ,ಜೆ ಆಸ್ಪತ್ರೆಯ ವೈಧ್ಯಾಧಿಕಾರಿಯವರಲ್ಲಿ ಗಾಂಜಾ ಸೇವಿಸಿದ ಬಗ್ಗೆ ಪರೀಕ್ಷೆಗೊಳಪಡಿಸಿದ್ದು, ವೈದ್ಯರು ತಮ್ಮ ವರದಿಯಲ್ಲಿ ಈತನು ಗಾಂಜಾ ಸೇವಿಸಿರುವುದಾಗಿ ಧೃಡಪಡಿಸಿ ವರದಿ ನೀಡಿರುವ ಮೇರೆಗೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿರುವುದು ಎಂಬಿತ್ಯಾದಿ.
Crime Reported in:Mangalore Rural PS
ಪಿರ್ಯಾದಿ Jayaprakash ರವರ ತಂದೆಯವರಾದ ರಾಮಚಂದ್ರ ಪ್ರಾಯ 66 ವರ್ಷ ರವರು ಕಿಡ್ನಿ ತೊಂದರೆ ಮತ್ತು ಬಿ.ಪಿ. ಖಾಯಿಲೆಯಿಂದ ಬಳಲುತ್ತಿದ್ದವರು ಅತೀವ ಮಾತ್ರೆಗಳನ್ನು ಸೇವಿಸುತ್ತಿದ್ದು ಸ್ವಲ್ಪ ಮಾನಸಿಕವಾಗಿ ಖಿನ್ನತೆಯಲ್ಲಿದ್ದವರು ಪ್ರತಿದಿನವು ಸಂಜೆ ವೇಳೆಗೆ ವಾಕಿಂಗ್ ಹೋಗುತ್ತಿದ್ದು ದಿನಾಂಕ 03/07/2022 ರಂದು ಸಂಜೆ ಸುಮಾರು 05.30 ಗಂಟೆಗೆ ಪಿರ್ಯಾದಿದಾರರ ತಾಯಿಯವರಲ್ಲಿ ಹೊರಗಡೆ ಸುತ್ತಾಡಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವರು ವಾಪಾಸ್ ಮನೆಗೆ ಬಂದಿರುವುದಿಲ್ಲ. ಪಿರ್ಯಾದಿದಾರರು ಮನೆಯ ಅಕ್ಕಪಕ್ಕದಲ್ಲಿ, ಸಂಬಂಧಿಕರಲ್ಲಿ ಮತ್ತು ಪರಿಚಯದವರಲ್ಲಿ ತಿಳಿಸಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಸದ್ರಿ ಕಾಣೆಯಾದವರನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬಿತ್ಯಾದಿ.
ಕಾಣೆಯಾದವರ ಚಹರೆ:
ಹೆಸರು: ರಾಮಚಂದ್ರ
ವಯಸ್ಸು: 66 ವರ್ಷ
ಜಾತಿ: ಹಿಂದೂ, ಪೂಜಾರಿ
ಎತ್ತರ: 5.2”
ಚಹರೆ: ಬಿಳಿ ಮೈ ಬಣ್ಣ, ಬಿಳಿ ತಲೆ ಕೂದಲು, ಬಿಳಿ ಸಪೂರ ಮೀಸೆ, ನೀಳ ಮುಖ.
Crime Reported in:Konaje PS
ಪಿರ್ಯಾದಿದಾರರಾದ ಸಿಸಿಬಿ ಘಟಕದ ಪೊಲೀಸ್ ಉಪನಿರೀಕ್ಷಕರಾದ ರಾಜೇಂದ್ರ ಬಿ ಯವರು ದಿನಾಂಕ 05-07-2022 ರಂದು ಮದ್ಯಾಹ್ನ 12-45 ಗಂಟೆಗೆ ಕಛೇರಿಯಲ್ಲಿದ್ದ ಸಮಯ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಅಸೈಗೋಳಿ ಪರಿಸರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕ ದಂಧೆಯನ್ನು ಮಾಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದಿದ್ದು ಸದ್ರಿ ಸ್ಥಳಕ್ಕೆ ದಾಳಿ ನಡೆಸಲಾಗಿ ಅಲ್ಲಿ ಸೇರಿದ್ದವರು ಓಡಿ ಪರಾರಿಯಾಗಿದ್ದು, ಅಲ್ಲಿದ್ದ ಇಬ್ಬರನ್ನು 1) ರಮೇಶ್, ಪ್ರಾಯ(55), ವಾಸ: ಪಟ್ಟೋರಿ ಮನೆ, ಮಂಗಳಾ ಗಂಗೋತ್ರಿ ಅಂಚೆ, ಕೊಣಾಜೆ ಗ್ರಾಮ, ಮಂಗಳೂರು ತಾಲೂಕು 2) ಲಕ್ಷ್ಮಣ ಪ್ರಾಯ(42), ವಾಸ: ಅಸೈಗೋಳಿ ಸೈಟ್ ಮನೆ, ಅಸೈಗೋಳಿ ಅಂಚೆ, ಕೊಣಾಜೆ ಗ್ರಾಮ, ಮಂಗಳೂರು ತಾಲೂಕು ಎಂಬವರನ್ನು ವಶಕ್ಕೆ ಪಡೆದು ಇವರಿಂದ ಒಟ್ಟು ನಗದು ರೂ. 12,300/-, ಮಟ್ಕಾ ಬರೆದ ಚೀಟಿ-1, ಪೆನ್ನು -1,ಇದರ ಮೌಲ್ಯ ರೂ 10/-ನ್ನು ಸ್ವಾಧೀನಪಡಿಸಿ ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿ.
Crime Reported in: Kankanady Town PS
ಪಿರ್ಯಾದು Naveen ರವರು ಮಂಜೇಶ್ವರ ಹೊಸಬೆಟ್ಟು ಬಡಾವಣೆ ಕಾಸರಗೋಡು ಕೇರಳದ ನಿವಾಸಿಯಾಗಿದ್ದು ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಸ್ಟಿಕ್ಕರ್ ಕಟ್ಟಿಂಗ್ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 03-07-2022 ರಂದು ತಮ್ಮ ಬಾಬ್ತು KL14 S 517 ಬಿಳಿ ಬಣ್ಣದ ಹೋಂಡ ಆಕ್ಟಿವಾ ಸ್ಕೂಟರನ್ನು ಮಂಗಳೂರಿನ ಉಜ್ಜೋಡಿ ದಾಮೋದರ್ ಸುವರ್ಣ ಪೆಟ್ರೋಲ್ ಬಂಕ್ ನಲ್ಲಿ ಬೆಳಿಗ್ಗೆ ಸಮಯ ಸುಮಾರು 11:15 ಗಂಟೆಗೆ ಪಾರ್ಕ್ ಮಾಡಿ ಹೋಗಿದ್ದು, ದಿನಾಂಕ 04-07-2022 ರಂದು ಬೆಳಿಗ್ಗೆ 10:30 ಗಂಟೆಗೆ ಬಂದು ನೋಡಿದಾಗ ಪಿರ್ಯಾದುದಾರರ ಸ್ಕೂಟರ್ ಪಾರ್ಕ್ ಮಾಡಿದ ಸ್ಥಳದಲ್ಲಿ ಕಾಣಿಸದೆ ಇರುವುದಾಗಿದೆ ಈ ಬಗ್ಗೆ ಪೆಟ್ರೋಲ್ ಬಂಕ್ ನವರಲ್ಲಿ ಮತ್ತು ಸುತ್ತಮುತ್ತಲಿನವರಲ್ಲಿ ವಿಚಾರಿಸಿ ಎಲ್ಲ ಕಡೆಗಳಲ್ಲಿ ಹುಡುಕಾಡಿದಲ್ಲಿ ಎಲ್ಲಿಯೂ ಕಂಡು ಬಂದಿರುವುದಿಲ್ಲವಾಗಿದೆ. ದಿನಾಂಕ 03-07-2022 ರ ಬೆಳಿಗ್ಗೆ 11:15 ಗಂಟೆಯಿಂದ ದಿನಾಂಕ 04-07-2022 ರ ಬೆಳಿಗ್ಗೆ 10:30 ಗಂಟೆಯ ಮಧ್ಯ ಅವದಿಯಲ್ಲಿ ಯಾರೋ ಕಳ್ಳರು ಪಿರ್ಯಾದುದಾರರ ಸ್ಕೂಟರ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಕಳ್ಳತನವಾದ ಸ್ಕೂಟರ್ ನ ಅಂದಾಜು ಮೌಲ್ಯ ರೂ 35,000/- ಆಗಬಹುದು, ಎಂಬಿತ್ಯಾದಿ.
Crime Reported in:Mangalore South PS
ದಿನಾಂಕ 05-07-2022 ರಂದು ಮಂಗಳೂರು ನಗರದ ಮಾರ್ಗನ್ಸ್ ಗೇಟ್ ಬಳಿಯಲ್ಲಿ ಗಾಡ್ವಿನ್ ಸಾಲ್ಡಾನ್ಹಾ ಎಂಬವರು ಮಾದಕ ವಸ್ತು ಸೇವನೆ ಮಾಡಿಕೊಂಡಿರುವವರನ್ನು ವಶಕ್ಕೆ ಪಡೆದು ಕುಂಟಿಕಾನ ಎ,ಜೆ ಆಸ್ಪತ್ರೆಯ ವೈಧ್ಯಾಧಿಕಾರಿಯವರಲ್ಲಿ ಗಾಂಜಾ ಸೇವಿಸಿದ ಬಗ್ಗೆ ಪರೀಕ್ಷೆಗೊಳಪಡಿಸಿದ್ದು, ವೈದ್ಯರು ತಮ್ಮ ವರದಿಯಲ್ಲಿ ಈತನು ಗಾಂಜಾ ಸೇವಿಸಿರುವುದಾಗಿ ಧೃಡಪಡಿಸಿ ವರದಿ ನೀಡಿರುವ ಮೇರೆಗೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿರುವುದು ಎಂಬಿತ್ಯಾದಿ.