ಅಭಿಪ್ರಾಯ / ಸಲಹೆಗಳು

Crime Reported in Ullal PS

ಪಿರ್ಯಾದಿ Roopesh N Uchil ರವರ ವಾಹನ KA19EY3488 TVS NTORQ ದ್ವಿಚಕ್ರ ವಾಹನ ದಿನಾಂಕ 10-08-2021 ರಂದು ಸಮಯ 15-00 ಗಂಟೆಗೆ ಕೋಟೆಕಾರ ಗ್ರಾಮದ ಅಡ್ಕದ ಬಳಿಯ ವಾಸುಕಿ ಗ್ಯಾರೆಜ್ ಬಳಿಯ ಪಾರ್ಕಮಾಡಿ ಸಂಬಂಧಿಕರ ಮನೆಗೆ ತೆರಳಿದ್ದು. ನಂತರ ವಾಪಾಸು ಸಂಜೆ 16-15 ಗಂಟೆಗೆ ಬಂದು ನೋಡಿದಾಗ ದ್ವಿಚಕ್ರ ವಾಹನ ಕಾಣೆಯಾಗಿರುತ್ತದೆ.  ಕೂಡಲೇ ಅಲ್ಲಿಯೇ ಅಕ್ಕ ಪಕ್ಕ ದಲ್ಲಿ ಹುಡುಕಾಡಿದರು ಎಲ್ಲಿಯೂ ಕಂಡು ಬರಲಿಲ್ಲ. ಅಂದಿನಿಂದ ಇಂದಿನ ವರೆಗೆ  ಹುಡುಕಾಡಿದರು ಸಿಕ್ಕಿರುವುದಿಲ್ಲ. ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದುಆದರಿಂದ ಪಿರ್ಯಾದಿದಾರರು ದ್ವಿ ಚಕ್ರವಾಹನವನ್ನು ಪತ್ತೆ ಮಾಡಿ ಕೋಡಬೇಕಾಗಿ ನೀಡಿದ ದೂರಿನ ಸಾರಾಂಶ

 

Crime Reported in Konaje PS

ದಿನಾಂಕ 04.09.2021 ರಂದು ಸಂಜೆ 18:30 ಗಂಟೆಗೆ ಠಾಣಾ ಪಿ.ಸಿ ದೀಪಕ್ ರವರಿಗೆ ಬಂಟ್ವಾಳ ತಾಲೂಕು ಫಜೀರು ಗ್ರಾಮದ ಬಲ್ಲೂರು ಗುಡ್ಡೆ ಎಂಬಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕಾನೂನು ಬಾಹಿರವಾಗಿ ಕೋಳಿ ಅಂಕವನ್ನು ನಡೆಸುತ್ತಿರುವುದಾಗಿ ಖಚಿತ ಮಾಹಿತಿ ದೊರೆತ ಮೇರೆಗೆ ಸ್ಥಳಕ್ಕೆ ಪಿರ್ಯಾದಿ Sharanappa Bhandari PSIರವರು  ಠಾಣಾ ಸಿಬ್ಬಂದಿಯವರು 21:45 ಗಂಟೆಗೆ ದಾಳಿ ನಡೆಸಿದಾಗ ಆರೋಪಿಗಳು ಹಣವನ್ನು ಪಣವಾಗಿಟ್ಟುಕೊಂಡು ಕಾನೂನು ಬಾಹಿರವಾಗಿ ಕೋಳಿಗಳ ಕಾಲಿಗೆ ಚೂರಿಯನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಕೋಳಿ ಅಂಕವನ್ನು ನಡೆಸುತ್ತಿರುವುದು ದೃಢಪಟ್ಟಿದ್ದು, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು, ಆರೋಪಿಗಳು ಕೃತ್ಯಕ್ಕೆ ಬಳಸಿದ ಹುಂಜಗಳು-3, ನಗದು ಹಣ ರೂ 28,120/-, ಚೂರಿಗಳು-3, ದ್ವಿಚಕ್ರ ವಾಹನಗಳು-6, ಚಾರ್ಜರ್ ಲೈಟ್ ಗಳು-2 ನ್ನು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ರೂ 2,11,220/- ರೂ ಆಗಬಹುದು ಎಂಬಿತ್ಯಾದಿ.

Crime Reported in Mangalore East PS

ಪಿರ್ಯಾದಿ Hanumanthappa Shiruru ರವರು ಬಲ್ಮಠದ ವಾಸ್ ಲೇನ್ 1 ನೇ ಕ್ರಾಸ್ ಬಳಿ ಇರುವ ಯುನಿಟಿ ಆಸ್ಪತ್ರೆಯ ಬಳಿಯಲ್ಲಿ ತನ್ನ 4 ಜನ ಮಕ್ಕಳೊಂದಿಗೆ ವಾಸ ಮಾಡಿಕೊಂಡು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ.ಪಿರ್ಯಾದಿದಾರರ 3ನೇ ಮಗಳಾದ ಸುಮಿತರವರು 2 ನೇ ವರ್ಷದ ಬಿ.ಎ ವಿದ್ಯಾಭ್ಯಾಸವನ್ನು ಬಲ್ಮಠ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಸದ್ರಿ ಕಾಲೇಜು ಇಲ್ಲದ ಕಾರಣ ಪಿರ್ಯಾದಿದಾರರ 3ನೇ ಮಗಳು ಪಿರ್ಯಾದಿದಾರರ ಸ್ವಂತ ಊರಾದ ಬಾದಾಮಿಯ ಕೋಟೆಕಲ್ ಗೆ ದಿನಾಂಕ:04-09-2021 ರಂದು ಮನೆಯಿಂದ ಹೊರಟು ಹೋದವಳು ಸ್ಯಂತ ಊರಿಗೂ ಹೋಗದೇ ಮರಳಿ ಮನೆಗೂ ಬಾರದೇ ಕಾಣೆಯಾಗಿರುತ್ತಾಳೆ.

 

ಕಾಣೆಯಾಗಿರುವ ವ್ಯಕ್ತಿಯ ಚಹರೆ

ಹೆಸರು: ಸುಮಿತ

ಪ್ರಾಯ:19 ವರ್ಷ

ತಂದೆ:ಹನುಮಂತಪ್ಪ ಶಿರೂರು

ಎತ್ತರ:5’2

ಬಣ್ಣ:ಗೋಧಿ ಮೈ ಬಣ್ಣ,ಸಪೂರ ಶರೀರ

ಧರಿಸಿದ ಉಡುಪು:ಕಪ್ಪು ಬಣ್ಣದ ಟೀ ಶರ್ಟ್, ಮಿಲಿಟರಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

 

ಇತ್ತೀಚಿನ ನವೀಕರಣ​ : 06-09-2021 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080