ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS

ದಿನಾಂಕ 06-11-2021 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಆಲ್ವಿನ್ ಮೆನೇಜಸ್(58ವರ್ಷ)ರವರು  ತನ್ನ ಬಾಬ್ತು ಸುಜುಕಿ ಆಕ್ಸಿಸ್ ಸ್ಕೂಟರ್ KA-19-ES-5448 ರಲ್ಲಿ ಸಹಸವಾರರಾಗಿ  ಪ್ರಶಾಂತರವರನ್ನು ಕುಳ್ಳಿರಿಸಿಕೊಂಡು ಪದವಿನಂಗಡಿ ಹೋಗುವರೇ ಮನೆಯಿಂದ ಹೊರಟು ಎ.ಜೆ ಆಸ್ಪತ್ರೆಯ ಸರ್ವಿಸ್ ರಸ್ತೆಯಲ್ಲಿ ಬರುತ್ತಾ ಸಮಯ ಸುಮಾರು ಬೆಳಿಗ್ಗೆ  08:30 ಗಂಟೆಗೆ ಎ.ಜೆ ಆಸ್ಪತ್ರೆಯ ಮುಖ್ಯ ಗೇಟಿನ ಎದುರುಗಡೆ ಬಂದು ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ KA-19-MJ-0187ನೇ ಕಾರನ್ನು  ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ  ಚಲಾಯಿಸಿಕೊಂಡು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರನ್ನು ಬಲಬದಿಯಿಂದ ಓವರ್ಟೇಕ್ ಮಾಡಿ  ಯಾವುದೇ ಸೂಚನೆ ನೀಡದೇ ಎ.ಜೆ ಆಸ್ಪತ್ರೆಯ ಮುಖ್ಯ ಗೇಟಿನ  ಕಡೆಗೆ ಎಡಕ್ಕೆ ತಿರುಗಿಸಿ ಪಿರ್ಯಾದಿದಾರರ ಸ್ಕೂಟರಿಗೆ ಢಿಕ್ಕಿ ಹೊಡೆದಿರುತ್ತಾರೆ ಆ ವೇಳೆ  ಪಿರ್ಯಾದಿದಾರರ  ಮತ್ತು ಸಹಸವಾರ ಪ್ರಶಾಂತರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಭುಜಕ್ಕೆ ಮೂಳೆ ಮುರಿತ ಗಾಯ ಹಾಗೂ ಎಡಕೈಯ ಮೊಣಗಂಟಿಗೆ ರಕ್ತಗಾಯ ಎಡಕಾಲು ಮೊಣಗಂಟಿಗೆ  ರಕ್ತಗಾಯವಾಗಿದ್ದು . ಸಹಸವಾರ ಪ್ರಶಾಂತರವರ  ಎಡಕಾಲು ಮೊಣಗಂಟಿಗೆ ತರಚಿದ ಗಾಯವಾಗಿದ್ದು ಪಿರ್ಯಾದಿದಾರರು ಹಾಗೂ ಸಹಸವಾರರು ಸಾರ್ವಜನಿಕರ ಸಹಾಯದಿಂದ  ಎ.ಜೆ ಆಸ್ಪತ್ರೆಯಲ್ಲಿ  ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು  ಅಪಘಾತ  ಪಡಿಸಿದ ಕಾರು ಚಾಲಕ ಕಾರನ್ನು ಸ್ಥಳದಿಂದ ತೆಗೆದುಕೊಂಡು  ಹೋಗಿ ಪರಾರಿಯಾಗಿರುತ್ತಾರೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 06-11-2021 06:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080