ಅಭಿಪ್ರಾಯ / ಸಲಹೆಗಳು

Crime Reported in Mangalore North PS

ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ   ಗುರಪ್ಪಕಾಂತಿರವರು  ದಿನಾಂಕ: 05-12-2021 ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದ ಬಗ್ಗೆ ಠಾಣಾ ಸಿಬ್ಬಂದಿಯವರೊಂದಿಗೆ  ರೌಂಡ್ಸ್ ನಲ್ಲಿರುತ್ತಾ ದಿನಾಂಕ 06-12-2021 ರಂದು ಬೆಳಗ್ಗಿನ ಜಾವ ಸುಮಾರು 03-10 ಗಂಟೆಗೆ ಕಾರ್ ಸ್ಟ್ರೀಟ್ ನ ಪ್ಲವರ್ ಮಾರ್ಕೆಟ್ ನ ಹಿಂಬದಿ ರಸ್ತೆಯಲ್ಲಿ ತಲುಪಿದಾಗ ಸದ್ಗುರು ಕಾಂಪ್ಲೆಕ್ಸ್‌‌‌‌ ನ ತಳ ಅಂತಸ್ತಿನಲ್ಲಿರುವ ಜಿ.ಜೆ ಗೋಲ್ಡ್ ವರ್ಕ್ಸ್ ಅಂಗಡಿಯ ಶಟರ್ ಬಳಿ  ಒಬ್ಬಾತನು ಆತನ ಶರ್ಟ್ ನಿಂದ ತನ್ನ ಮುಖವನ್ನು ಮುಚ್ಚಿ  ಇರುವಿಕೆಯನ್ನು ಮರೆಮಾಚಲು ಕುಳಿತ್ತಿದ್ದು, ಆತನ ಕಡೆಗೆ ಟಾರ್ಚ್‌ ಲೈಟ್‌ನ್ನು ಹಾಯಿಸಿದಾಗ ಆತನು ಓಡಲು ಪ್ರಯತ್ನಿಸಿದವನನ್ನು ಹಿಡಿದು ಅಪರಾತ್ರಿ ವೇಳೆಯಲ್ಲಿ ಇದ್ದ ಬಗ್ಗೆ ವಿಚಾರಿಸಿದಲ್ಲಿ ಯಾವುದೇ ರೀತಿಯ ಸಮರ್ಪಕ ಉತ್ತರ ನೀಡದೇ ಇದ್ದು, ಹೆಸರು ವಿಳಾಸ ಕೇಳಿದಾಗ  ತನ್ನ ಹೆಸರು ಸುದೀರ್  ಶೆಟ್ಟಿ, ಪ್ರಾಯ 38 ವರ್ಷ,  ವಾಸ: ಗಾಳಿಬೀಡು ಗ್ರಾಮ ಮತ್ತು ಪೋಸ್ಟ್,  ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ ಎಂಬುದಾಗಿ ತಿಳಿಸಿದನು.  ಈ ಅಪರಾತ್ರಿ ಸಮಯದಲ್ಲಿ ಮಂಗಳೂರು ನಗರದ ಸದ್ರಿ ಸ್ಥಳದಲ್ಲಿ ಕತ್ತಲೆಯಲ್ಲಿ ಇದ್ದು, ಹಾಗೂ ಈತನ  ಚಲನ ವಲನದಿಂದ ಈತನು ಕನ್ನ ಕಳವು ಅಥವಾ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಉದ್ದೇಶದಿಂದ, ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಸದ್ರಿ ಸ್ಥಳದಲ್ಲಿ ಅಂಗಡಿ ಶಟರ್ ನ ಬೀಗ ಮುರಿಯಲು ಹೊಂಚು ಹಾಕುತ್ತಿದ್ದಾನೆಂದು ಬಲವಾದ ಸಂಶಯಗೊಂಡು ಸದ್ರಿ ವ್ಯಕ್ತಿಯನ್ನು ಬೆಳಗ್ಗಿನ ಜಾವ 03-35 ಗಂಟೆಗೆ ವಶಕ್ಕೆ ಪಡೆದುಕೊಂಡು ಕರ್ನಾಟಕ ಪೊಲೀಸ್ ಕಾಯ್ದೆ  ರೀತ್ಯಾ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ  

 

Crime Reported in Konaje PS       

ದಿನಾಂಕ 06-12-2021 ರಂದು ಪಿರ್ಯಾದಿ Mallikarjun Biradar ದಾರರು  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮದ್ಯಾಹ್ನ ಸುಮಾರು 13-30 ಗಂಟೆಗೆ ಮಂಗಳೂರು ತಾಲೂಕು  ಕೊಣಾಜೆ ಗ್ರಾಮದ ಅಸೈಗೋಳಿ ಜಂಕ್ಷನ್  ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ, ಆರೋಪಿತನು ಗಾಂಜಾ ಎಂಬ ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಸಿಬ್ಬಂದಿಯವರ ಸಹಾಯದಿಂದ ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

 

Crime Reported in Kankanady Town PS

ಪಿರ್ಯಾದಿದಾರರಾದ ಪೊಲೀಸ್ ಉಪನಿರೀಕ್ಷಕರಾದ ಸುಂದರ್ ರಾಜ್  ರವರು ದಿನಾಂಕ 06-12-2021 ರಂದು   ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಸುಮಾರು  13:15  ಗಂಟೆಗೆ ಯುವಕನೊಬ್ಬ ಗಾಂಜಾ ಸೇವಿಸುತ್ತಿದ್ದಾನೆ ಎಂಬುದಾಗಿ  ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯಂತೆ ಸಾರ್ವಜನಿಕ ಸ್ಥಳವಾದ ಎಕ್ಕೂರು   ಬಸ್ ನಿಲ್ದಾಣದ ಬಳಿ ಬಂದಾಗ ಯುವಕನೊಬ್ಬನು  ನಿಂತು ಸಿಗರೇಟು ಸೇದುತ್ತಿದ್ದು,  ಸದ್ರಿ ಯುವಕನನ್ನು ಹತ್ತಿರ ಕರೆದು ವಿಚಾರಿಸಿದಲ್ಲಿ ಅವನು  ತನ್ನ ಹೆಸರು    ಸ್ಟೀವನ್ ಪ್ರಾಯ:22 ವರ್ಷ ವಾಸ: ಜಪ್ಪಿನಮೊಗೆರು  ಮನೆ ಕಂಕನಾಡಿ ಗ್ರಾಮ  ಮಂಗಳೂರು ಎಂಬುದಾಗಿ ತಿಳಿಸಿದನು. ಅಲ್ಲದೇ, ಬಾಯಿಯಿಂದ ಗಾಂಜಾ ಸೇವನೆ ಮಾಡಿರುವ ವಾಸನೆ ಬರುತ್ತಿದ್ದುದರಿಂದ ದೃಡೀಕರಿಸುವರೇ ಖಚಿತಪಡಿಸಿಕೊಳ್ಳುವ ಸಲುವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಧೃಢಿಕರಣ ಪತ್ರವನ್ನು ನೀಡಿರುವುದರಿಂದ ಆತನ ವಿರುದ್ದ ಪ್ರಕರಣ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

 

Crime Reported in Traffic North PS

ದಿನಾಂಕ 04-12-2021 ರಂದು ಪಿರ್ಯಾದಿದಾರರಾದ ಖಾಸಿಂ ಸಾಬ್ ರವರ ಬಾಬ್ತು KA-27-EB-0672 ನಂಬ್ರದ ಮೋಟಾರ್ ಸೈಕಲನ್ನು ವಾಲ್ಟರ್ ಡಿಸೋಜಾಎಂಬವರು ಬಾಳದ ಪೆರವೊ ಹೊಟೇಲ್ ನಿಂದ HPCL ಗೇಟ್ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗುತ್ತಾ ರಾತ್ರಿ ಸಮಯ ಸುಮಾರು 11:00 ಗಂಟೆಗೆ ಪೆರವೊ ಹೊಟೇಲ್ ನಿಂದ ಸ್ವಲ್ಪ ಮುಂದೆ ರಸ್ತೆಯಲ್ಲಿ ಸ್ಕಿಡ್ ಆಗಿ ಸುಮಾರು 15 ಅಡಿ ಮೋಟಾರ್ ಸೈಕಲ್ ಸಮೇತ ಜಾರಿಕೊಂಡು ರೋನಾಲ್ಡ್ ಕ್ರಾಸ್ಟ್ ರವರ ಪಾರ್ಕಿಂಗ್ ಯಾರ್ಡ್ ಗೆ ತಿರುಗುವ ಕಚ್ಚಾ ಮಣ್ಣು ರಸ್ತೆಯಲ್ಲಿ ಮೋಟಾರ್ ಸೈಕಲ್ ಸಮೇತ ಬಿದ್ದು ಅವರ ಹಣೆಗೆ, ಮುಖಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು ಅಲ್ಲದೇ ಮೈಕೈಗೆ ತರಚಿದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಎಜೆ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದಾಗ ದಿನಾಂಕ 05-12-2021 ರ ರಾತ್ರಿ 01:42 ಗಂಟೆಗೆ ವೈದ್ಯರು ಪರೀಕ್ಷಿಸಿ ಗಾಯಾಳು ವಾಲ್ಟರ್ ಡಿಸೋಜಾ ರವರು ಆಸ್ಪತ್ರೆಗೆ ಕರೆ ತರುವ ದಾರಿ ಮಧ್ಯೆ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

 

 

 

ಇತ್ತೀಚಿನ ನವೀಕರಣ​ : 06-12-2021 07:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080