ಅಭಿಪ್ರಾಯ / ಸಲಹೆಗಳು

Crime Reported in Traffic North Police Station

ದಿನಾಂಕ :07-02-2022 ರಂದು ಪಿರ್ಯಾದಿ Smt. Jayashri ದಾರರ ತಮ್ಮನಾದ ಜಯಪ್ರಕಾಶ್ ಪ್ರಾಯ 33 ವರ್ಷ ಎಂಬಾತನು ಆತನ ಬಾಬ್ತು KA-19-ES-2923 ನಂಬ್ರದ ಸ್ಕೂಟರಿನಲ್ಲಿ ಸಂದೀಪ್ ಎಂಬಾತನನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ತನ್ನ ಮನೆಯಾದ ಪಚ್ಚನಾಡಿ ಎಂಬಲ್ಲಿಂದ ಬೋಂದೆಲ್ ಕಾವೂರು ಮಾರ್ಗವಾಗಿ KSRTC ಬಸ್ಸು ನಿಲ್ದಾಣ ಕಡೆಗೆ ಹೋಗುತ್ತಾ ಬೆಳಗಿನ ಜಾವ ಸುಮಾರು 01:30 ಗಂಟೆಗೆ ಕೊಂಚಾಡಿ ಜಂಕ್ಷನ್ ಸಮೀಪದ ಇಳಿಜಾರು ಕಾಂಕ್ರೀಟ್ ತಿರುವು ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಹೋಗಿ ರಸ್ತೆಯ ಮಧ್ಯದ ಡಿವೈಡರಿಗೆ ಡಿಕ್ಕಿ ಪಡಿಸಿ ಸ್ಕೂಟರ್ ಡಿವೈಡರಿನ ಮೇಲೆ ಹತ್ತಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಜಯಪ್ರಕಾಶ್ ತನ್ನ  ಸ್ಕೂಟರಿನ ಹತೋಟಿ ತಪ್ಪಿ ಸ್ಕೂಟರ್ ಸಮೇತ ಇಳಿಜಾರು ಕಾಂಕ್ರೀಟ್ ರಸ್ತೆಯಲ್ಲಿ ಮಗುಚಿ ಬಿದ್ದು ತಲೆಗೆ ಗುದ್ದಿದ ಗಂಭೀರ ಸ್ವರೂಪದ ಒಳ ಗಾಯವಾಗಿ, ಹಣೆಯ ಬಲಬದಿ, ಬಲ ಕಣ್ಣಿನ ಬಲಬದಿ, ಮೂಗಿಗೆ, ಎಡ ಕಿವಿಯ ತಟ್ಟೆಗೆ, ಬಲ ಕೈ ಭುಜಕ್ಕೆ, ಎರಡೂ ಕಾಲುಗಳ ಕೋಲು ಭಾಗಕ್ಕೆ ಹಾಗೂ, ಎರಡೂ ಕಾಲಿನ ಹೆಬ್ಬೆರಳುಗಳಿಗೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು, ಅಲ್ಲದೇ ಸಹ ಸವಾರನಾಗಿ ಕುಳಿತಿದ್ದ ಸಂದೀಪ್ ಎಂಬಾತನಿಗೂ ಕೂಡಾ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಎ ಜೆ ಆಸ್ಪತ್ರೆಗೆ  ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in Kankanady Town PS                                                       

ಪಿರ್ಯಾದುದಾರರಾದ  ದುರ್ಗಾ ಪ್ರಸಾದ್ (19) ಎಂಬವರು ತಮ್ಮ ಬಾಬ್ತು  KA-21-EB-4505  ನೇ ಡಿಯೋ ಮ್ಯಾಟ್ ಗ್ರೇ ಕಲರ್ ನ ಸ್ಕೂಟರನ್ನು  ದಿನಾಂಕ:30-01-2022 ರಂದು ರಾತ್ರಿ 10:30 ಗಂಟೆಗೆ  ಅವರು ಪ್ರಸ್ತುತ ವಾಸವಾಗಿರುವ  ವಿ ಎನ್ ಎಸ್  ಪಿಜಿಯ  ಎದುರುಗಡೆ  ನಿಲ್ಲಿಸಿ  ಹೋಗಿದ್ದು,  ಮರುದಿನ ದಿನಾಂಕ 31-02-2022 ರಂದು ಬೆಳಗ್ಗೆ 10:00 ಗಂಟೆಗೆ ಬಂದು ನೋಡಿದಾಗ ಪಿರ್ಯಾದುದಾರರ ಸ್ಕೂಟರ್ ನಿಲ್ಲಿಸಿದ ಸ್ಥಳದಲ್ಲಿ ಇರದೇ ಇದ್ದು ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದಲ್ಲಿ ಹಾಗೂ ಪರಿಚಯಸ್ಥರಲ್ಲಿ ವಿಚಾರಿಸಲಾಗಿ ಪತ್ತೆಯಾಗಿರುವುದಿಲ್ಲ.  ಪಿರ್ಯಾದುದಾರರ ಸ್ಕೂಟರನ್ನು ಯಾರೋ ಕಳ್ಳರು  ಕಳುವು ಮಾಡಿಕೊಂಡು ಹೋಗಿರುವುದಾಗಿದೆ. ಕಳುವು ಮಾಡಿಕೊಂಡು ಹೋದವರ ಮೇಲೆ ಸೂಕ್ತ ಕಾನೂನು ಕ್ರಮ  ಜರುಗಿಸಬೇಕಾಗಿ ಕೋರಿಕೆ ಎಂಬಿತ್ಯಾದಿ. ಕಳುವಾದ ಸ್ಕೂಟರಿನ ಗ್ರೇ ಬಣ್ಣದ್ದಾಗಿದ್ದು, 2021ನೇ ಮಾಡಲ್  ದಾಗಿರುತ್ತದೆ. ಇದರ ಅಂದಾಜು ಮೌಲ್ಯ 40,000/- ರೂಪಾಯಿಗಳು ಆಗಿರುತ್ತದೆ.

Crime Reported in Ullal PS

ಪಿರ್ಯಾದಿದಾರರು PSI Revanasiddappa ದಿನಾಂಕ 06/02/2022 ರಂದು ಸಿಬ್ಬಂದಿಯವರ ಜೊತೆಯಲ್ಲಿ ರೌಂಡ್ಸ್‌‌ ಕರ್ತವ್ಯದಲ್ಲಿರುವಾಗ ಠಾಣಾ ಸರಹದ್ದಿನ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಉಚ್ಚಿಲ ಪೆರಿಬೈಲ್ ಬೀಚ್‌ನಲ್ಲಿ ವ್ಯಕ್ತಿಯೊಬ್ಬ ಗಾಂಜಾ ಸೇವನೆ ಮಾಡಿ ನಶೆಯಲ್ಲಿ ಇದ್ದು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾನೆ ಎಂದು ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿದ್ದು ಕೂಡಲೇ ಸ್ಥಳಕ್ಕೆ ಬೆಳಗ್ಗೆ 11-30 ಗಂಟೆಗೆ ತಲುಪಿದಾಗ ಉಚ್ಚಿಲದ ಪೆರಿಬೈಲ್ ಬೀಚ್ನಲ್ಲಿರುವ ಮರದ ಕೆಳಗೆ ನಿಂತುಕೊಂಡಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲಿ ಅಮಲಿನಿಂದ ತೂರಾಡಿಕೊಂಡು ಇದ್ದು ಅವನ ಬಳಿಗೆ ಹೋಗಿ ವಿಚಾರಿಸಿದಾಗ ನಶೆಯ ಅಮಲಿನಲ್ಲಿ ಉತ್ತರಿಸುತ್ತಾ ಪದೇ ಪದೇ ವಿಚಾರಿಸಿದಾ ಸದ್ರಿ ವ್ಯಕ್ತಿಯು ನಿಷೇದಿತ ಅಮಲು ಪದಾರ್ಥ ಗಾಂಜಾವನ್ನು ಸೇವಿಸಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಹೆಸರು ವಿಳಾಸ ಕೇಳಲಾಗಿ ಮೊಹಮ್ಮದ್ ಸುಹೈಲ್(28 ವರ್ಷ) ವಾಸ : ಬಸ್ತಿಪಡ್ಪು, ಬಿ.ಎಫ್.ಸಿ ಕ್ಲಬ್ ಬಳಿ, ಉಳ್ಳಾಲ ಗ್ರಾಮ, ಮಂಗಳೂರು ಎಂಬುದಾಗಿ ತಿಳಿಸಿರುತ್ತಾನೆ. ಅವರನ್ನು ವಶಕ್ಕೆ ಪಡೆದು ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರಿಗೆ ಗಾಂಜಾ ಸೇವನೆಯ ಬಗ್ಗೆ ಪರೀಕ್ಷೆ ನಡೆಸಿ ವರದಿ ನೀಡುವಂತೆ ಕೋರಿಕೆ ಪತ್ರವನ್ನು ನಿವೇದಿಸಿಕೊಂಡಿದ್ದು, ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರು ಮೊಹಮ್ಮದ್ ಸುಹೈಲ್ ನನ್ನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದೈಕೀಯ ಪರೀಕ್ಷೆಗೆ ಒಳಪಡಿಸಿದಂತೆ, ಸದ್ರಿ ವ್ಯಕ್ತಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಈ ಬಗ್ಗೆ ದೇರಳ ಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಡಪತ್ರ ನೀಡಿದ ಮೇರೆಗೆ ಈ ಬಗ್ಗೆ ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 07-02-2022 07:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080