ಅಭಿಪ್ರಾಯ / ಸಲಹೆಗಳು

Crime Reported in Panambur PS

ದಿನಾಂಕ 07-04-2022 ರಂದು ಪಿ.ಎಸ್.ಐ. ಶ್ರೀ  ಉಮೇಶ್ ಕುಮಾರ್ ಎಮ್.ಎನ್   ಮತ್ತು ಠಾಣಾ ಹೆಚ್.ಸಿ. ಡೇವಿಡ್ ಡಿಸೋಜಾ ರವರುಗಳು  ಠಾಣಾ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯದಲ್ಲಿ ಇದ್ದ ಸಮಯ ಮಧ್ಯಾಹ್ನ 12-30  ಗಂಟೆಗೆ  ತಣ್ಣೀರುಬಾವಿ ಬೀಚ್ ಬಳಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡುಬಂದಿದ್ದ   ಆಕಾಶ್ ಖಾರ್ವಿ ಪ್ರಾಯ: 24 ವರ್ಷ, ವಾಸ: ದುರ್ಗಾ ಗಣೇಶ್ ಸೇವಾ ಟ್ರಸ್ಟ್, ಹತ್ತಿರ, ತೋಟಾಬೆಂಗ್ರೆ, ಮಂಗಳೂರು ಎಂಬವನನ್ನು   ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆಗೆ ಎ.ಜೆ.ಆಸ್ಪತ್ರೆ,  ಮಂಗಳೂರುರವರ  ಬಳಿ ತಪಾಸಣೆಗೊಳಪಡಿಸಿದ್ದಲ್ಲಿ  ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವ ಮೇರೆಗೆ ಎನ್.ಡಿ.ಪಿ.ಎಸ್ ಕಾಯ್ದೆ 1985 ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಎಂಬಿತ್ಯಾದಿಯಾಗಿರುತ್ತದೆ.

 

Crime Reported in Ullal PS

ಪಿರ್ಯಾದಿದಾರರಾದ PSI ಶಿವಕುಮಾರ್.ಕೆ  ರವರು ದಿನಾಂಕ 07-04-2022 ರಂದು ಇಲಾಖಾ ವಾಹನ ನೇದರಲ್ಲಿ ಪಿಸಿ  ಕೆಂಪರಾಜರವರನ್ನು ಚಾಲಕರನ್ನಾಗಿ ಕರೆದುಕೊಂಡು ಹಗಲು ರೌಂಡ್ಸ್ ಕರ್ತವ್ಯದ ಬಗ್ಗೆ ಬೆಳಿಗ್ಗೆ 09-30 ಗಂಟೆಗೆ ಠಾಣೆಯಿಂದ ಹೊರಟು ಠಾಣಾ ಸರಹದ್ದಿನಲ್ಲಿ ಸಂಚರಿಸಿಕೊಂಡು ಕಲ್ಲಾಪು  ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಇದ್ದ ಸಮಯ 10-15 ಗಂಟೆಗೆ ಒಂದು ಟಿಪ್ಪರ್ ಲಾರಿಯು ಕಲ್ಲಾಪು ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದುದನ್ನು ಪರಿಶೀಲನೆಯ ಸಲುವಾಗಿ ನಿಲ್ಲಿಸಲು ಸೂಚಿಸಿದಾಗ ಟಿಪ್ಪರ್ ಲಾರಿಯ ಚಾಲಕನು ಪಿರ್ಯಾದಿದಾರರಿಂದ  ಸ್ವಲ್ಪ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿದ್ದು, ಪಿರ್ಯಾದಿದಾರರು ಮತ್ತು ಸಿಬ್ಬಂಧಿಯವರು ಪರಿಶೀಲಿಸಲು ಲಾರಿಯ ಸಮೀಪ ಹೋಗುತ್ತಿದ್ದಂತೆ ಲಾರಿಯ ಚಾಲಕ ಲಾರಿಯಿಂದ ಓಡಿ ಹೋಗಿರುತ್ತಾನೆ. ನಂತರ ಲಾರಿಯ ಬಾಡಿಯನ್ನು ಪರಿಶೀಲಿಸಲಾಗಿ ಲಾರಿಯಲ್ಲಿ ಸಾಮನ್ಯ ಮರಳು ಇರುವುದು ಕಂಡು ಬರುತ್ತದೆ. ಟಿಪ್ಪರ್ ಲಾರಿ ನಂಬ್ರ KA-19-AB-0566 ಆಗಿರುತ್ತದೆ. ಮತ್ತು ಓಡಿ ಹೋದ ಲಾರಿ ಚಾಲಕನನ್ನು ಗುರುತಿಸಲಾಗಿದ್ದು ಆತನ ಹೆಸರು ಕಲ್ಲಾಪು ವಾಸಿ ಮೊಹಮ್ಮದ್ ನೌಷಾದ್ ಅಲಿ ಆಗಿರುತ್ತದೆ.  ಆದ್ದರಿಂದ ಯಾವುದೇ ಪರವಾನಗಿ ಇಲ್ಲದೇ ಸಾಮನ್ಯ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ನಂಬ್ರ KA-19-AB-0566 ನೇದರ ಚಾಲಕ  ಕಲ್ಲಾಪು ವಾಸಿ ಮೊಹಮ್ಮದ್ ನೌಷಾದ್ ಅಲಿ ಮತ್ತು ಮಾಲಕನ ಮೇಲೆ ನೀಡಿದ ದೂರಿನ ಸಾರಾಂಶ.

 

ಇತ್ತೀಚಿನ ನವೀಕರಣ​ : 07-04-2022 06:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080