ಅಭಿಪ್ರಾಯ / ಸಲಹೆಗಳು

Crime Reported in : Kankanady Town PS                                                       

ಪಿರ್ಯಾದಿದಾರರು Joyson Goveas ಸೈಮನ್ ಲೇನ್ ಹೋಲಿಹಿಲ್ ಮರೋಳಿಯಲ್ಲಿ ವಾಸವಾಗಿದ್ದು,ಮಂಗಳೂರಿನ ಪಂಪವೆಲ್ ಜಂಕ್ಷನ ನಲ್ಲಿ ಪಾಸ್ಟ್ ಪುಡ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರ ಅಣ್ಣನಾದ  ಪ್ರವೀಣ್ ವಿಲ್ಸನ್ ಡಿ’ಸೋಜಾ ಎಂಬವರಲ್ಲಿ KA-19-EY-8175 ನೇ ನಂಬ್ರದ ಕಪ್ಪು ಬಣ್ಣದ ಹೋಂಡಾ ಆಕ್ಟೀವಾ 5ಜಿ ಸ್ಕೂಟರ್ ಇದ್ದು, ಈ ಸ್ಕೂಟರನ್ನು ದಿನಾಂಕ: 29.05.2022 ರಂದು ಪ್ರವೀಣ್ ವಿಲ್ಸನ್ ಡಿ’ಸೋಜಾ ರವರಿಂದ ಪಾಸ್ಟ್ ಪೂಡ್ ಕೆಲಸದ ನಿಮಿತ್ತ ಕೇಳಿ ಪಡೆದುಕೊಂಡು ಉಪಯೋಗಿಸುತ್ತಿದ್ದು.ದಿನಾಂಕ: 31.05.2022 ರಂದು ರಾತ್ರಿ 8:00 ಗಂಟೆ ಸಮಯಕ್ಕೆ  ಫಾಸ್ಟ್ ಫುಡ್ ಅಂಗಡಿ ಬಳಿ ಸ್ಕೂಟರನ್ನು ಪಾರ್ಕ್ ಮಾಡಿದ್ದು, ರಾತ್ರಿ 11:00 ಗಂಟೆ ಸಮಯಕ್ಕೆ ಮನೆಗೆ ಹೋಗುವರೇ ಸ್ಕೂಟರಿನಲ್ಲಿ  ಲಗೇಜನ್ನು ಇಟ್ಟು, ಸ್ಕೂಟರಿಗೆ ಕೀ ಹಾಕಿ ವಾಪಾಸ್ಸು ಪಾಸ್ಟ್ ಫುಡ್ ಅಂಗಡಿ ಬಳಿ ಬಂದು ಪಾಸ್ಟ್ ಫುಡ್ ಅಂಗಡಿಯನ್ನು ಮುಚ್ಚಿ ಸ್ಕೂಟರ್ ಬಳಿ ಹೋದಾಗ ಸ್ಕೂಟರಿನಲ್ಲಿ ಕೀ ಕಾಣಿಸದೇ ಇದ್ದು, ನಂತರ ಸುತ್ತ ಮುತ್ತ ಹುಡುಕಾಡಿದಲ್ಲಿ ಸ್ಕೂಟರಿನ ಕೀ ಸಿಗದೇ ಇದ್ದುದರಿಂದ ಸ್ಕೂಟರನ್ನು ಪಂಪ್ ವೆಲ್ ಬಳಿಯ ವಿಶ್ವಾಸ್ ಬಿಲ್ಡಿಂಗ್ ಬಳಿ ರಾತ್ರಿ 11:30 ಗಂಟೆ ಸಮಯಕ್ಕೆ ಪಾರ್ಕ್ ಮಾಡಿ ಪಿರ್ಯಾದಿದಾರರು ಮತ್ತು ಅವರ  ತಂದೆ ಓಮಿನಿ ಕಾರಿನಲ್ಲಿ ಮನೆಗೆ ಹೋಗಿದ್ದು, ಮರು ದಿನ ದಿನಾಂಕ: 01.06.2022 ರಂದು ಬೆಳಿಗ್ಗೆ ಸಮಯ ಸುಮಾರು 08:00 ಗಂಟೆಗೆ ವಾಪಾಸ್ಸು ಸ್ಕೂಟರ್ ಪಾರ್ಕ್ ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ ಪಾರ್ಕ್ ಮಾಡಿದ ಸ್ಥಳದಲ್ಲಿ ಸ್ಕೂಟರ್ ಕಾಣಿಸದೇ ಇದ್ದು, ಸ್ಕೂಟರ್ ಪಾರ್ಕ್ ಮಾಡಿದ ಸ್ಥಳದ ಸುತ್ತಮುತ್ತ ಎಲ್ಲಾ  ಹುಡುಕಾಡಿದರೂ ಕಂಡು ಬಂದಿರುವುದಿಲ್ಲ. ಯಾರೋ ಕಳ್ಳರು ದಿನಾಂಕ: 31.05.2022 ರಂದು ರಾತ್ರಿ 11:30 ಗಂಟೆಯಿಂದ ದಿನಾಂಕ: 01.06.2022ರ ಬೆಳಿಗ್ಗೆ 08:00 ಗಂಟೆಯ ಮದ್ಯಾವಧಿಯಲ್ಲಿ KA-19-EY-8175 ನೇ ನಂಬ್ರದ ಸ್ಕೂಟರನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ.ಕಳ್ಳತನವಾದ ಸ್ಕೂಟರ್ ನ ಅಂದಾಜು ಮೌಲ್ಯ ರೂ 35,000/- ಆಗಬಹುದು. ಆದುದರಿಂದ ಕಳ್ಳತನವಾದ ಪ್ರವೀಣ್ ವಿಲ್ಸನ್ ಡಿ’ಸೋಜಾ ರವರ KA-19-EY-8175 ನೇ ನಂಬ್ರದ ಹೋಂಡಾ ಆಕ್ಟೀವಾ 5ಜಿ ಸ್ಕೂಟರನ್ನು ಪತ್ತೆಮಾಡಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ. ಕಳವಾದ ಸ್ಕೂಟರಿನ ನೊಂದಣಿ ಸಂಖ್ಯೆ: KA-19-EY-8175 ಆಗಿದ್ದು, ಚಾಸಿಸ್ ನಂಬ್ರ: ME4JF50BEJT088094 ಮತ್ತು ಇಂಜಿನ್ ನಂಬ್ರ: JF50ET8088069 ಆಗಿರುತ್ತದೆ.

Crime Reported in : Mangalore East Traffic PS                                                       

ಪಿರ್ಯಾದಿದಾರರಾದ ಮೊಹಮ್ಮದ್ ಕುಂಯಿ ಎಂಬುವರು ದಿನಾಂಕ; 06/06/2022 ರಂದು ತಮ್ಮ ಕಾರು ನೊಂದಣಿ ಸಂಖ್ಯೆ; KL-14-R-4788 ನೇಯದನ್ನು ಚಲಾಯಿಸಿಕೊಂಡು ಪಂಪವೆಲ್ ಕಡೆಯಿಂದ ನಂತೂರು ಕಡೆಗೆ ಇರುವ ರಾಷ್ಟ್ರೀಯ ಹೆದ್ದಾರಿ 66 ನೇಯದಲ್ಲಿ ಬರುತ್ತಾ ಸಮಯ 16-30 ಗಂಟೆಗೆ ನಂತೂರು ಜಂಕ್ಷನ್ ತಲುಪುತ್ತಿದ್ದಂತೆ ಪಿರ್ಯಾದಿದಾರರ ಕಾರಿನ ಬಲ ಹಿಂಭಾಗದಿಂದ ಲಾರಿ ನೊಂದಣಿ ಸಂಖ್ಯೆ: KA-19-AA-6937 ನೇಯದನ್ನು ಅದರ ಚಾಲಕ ಡಾಕ್ಟರ್ ದಲಾಯ್ ಎಂಬಾತನು ದುಡುಕುತನ, ನಿರ್ಲಕ್ಷ್ಯತನದಿಂದ ಚಲಾಯಿಸುತ್ತಾ ಬಲಗಡೆಯಿಂದ ಓವರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿ ಪಡಿಸಿದ್ದು ಇದರಿಂದ ಲಾರಿಯ ಎಡ ಮುಂಭಾಗದ ಚಕ್ರದ ನಟ್ ಬೋಲ್ಟ್ ರಾಡ್ ಕಾರಿನ ಬಲ ಹಿಂಭಾಗದ ಡೋರಿಗೆ ಸಿಕ್ಕಿಕೊಂಡು ಉಜ್ಜಿದಂತಾಗಿ ಹಿಂಭಾಗದ ಡೋರ್, ಹಿಂಭಾಗದ ಚಕ್ರದ ಮೇಲಿನ ಬಾಡಿ, ಹಾಗೂ ಹಿಂಭಾಗದ ಬಂಪರ್ ಸಂಪೂರ್ಣ ಜಖಂಗೊಂಡಿರುತ್ತದೆ, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳವಂತೆ ಕೋರಿಕೆ ಎಂಬಿತ್ಯಾದಿ.

 

Crime Reported in : Traffic South Police Station                                                     

ದಿನಾಂಕ :06.06.2022 ರಂದು ಪಿರ್ಯಾದಿದಾರರಾದ ಶರಣ್ ಕುಮಾರ್ (26) ರವರು ತಮ್ಮ ಬಾಬ್ತು  ಮೋಟಾರ್ ಸೈಕಲ್ ನಂಬ್ರ:KA-04-KC-4418  ನೇದರಲ್ಲಿ ಪಿರ್ಯಾದಿದಾರರು ಸವಾರನಾಗಿ ಶುಭನಾರಾಯಣ್ ರನ್ನು  ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕೆಲಸದ ನಿಮಿತ್ತ ಪಡೀಲ್ ಕಡೆಯಿಂದ ತೊಕ್ಕೊಟ್ಟು ಮಾರ್ಗವಾಗಿ  ಮುಡಿಪು ಕಡೆಗೆ ಹೋಗುತ್ತೀರುವ ಸಮಯ ಸಮಾರು 13:00 ಗಂಟೆಗೆ ದೇರಳಕಟ್ಟೆ ಪ್ಲಾಮ ನೆಕ್ಟ್  ಅಪಾರ್ಟ್ ಮೆಂಟ್ ಹತ್ತಿರ ತಲುಪಿದಾಗ  ಪಿರ್ಯಾದಿದಾರರ ಮೋಟಾರ್ ಸೈಕಲ್ ನ ಹಿಂದಿನಿಂದ ಅಂದರೆ ತೊಕ್ಕೊಟ್ಟು ನಿಂದ ನಾಟೇಕಲ್ ಕಡೆಗೆ ಬರುತ್ತಿದ್ದ  ಅಪರಿಚಿತ ಬಿಳಿ ಬಣ್ಣದ  ಕಾರೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆಮಾಡಿಕೊಂಡು ಬಂದು ಪಿರ್ಯಾದಿದಾರರು  ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನ ಎಡಬದಿಗೆ ಡಿಕ್ಕಿಪಡಿಸಿ ಕಾರಿನ ಚಾಲಕ ಕಾರಿನ ಸಮೇತ ಪರಾರಿಯಾಗಿದ್ದು  ಸದ್ರಿ ರಸ್ತೆ  ಅಪಘಾತದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರ ರಿಬ್ಬರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಗೈ ಮೊಣಗಂಟಿನ ಹತ್ತಿರ ಮೂಳೆಮುರಿತದ ಗಾಯ ಹಾಗೂ ಎಡಗೈಭುಜಕ್ಕೆ  ಗುದ್ದಿದ ರೀತಿಯಾ ರಕ್ತಗಾಯ ,ಎಡಗಾಲಿನ ಮೊಣಕಾಲಿಗೆ ರಕ್ತಗಾಯ ವಾಗಿದ್ದು ಹಾಗೂ ಸಹ ಸವಾರ ಶುಭನಾರಾಯಣ್ ರವರ ಗಲ್ಲಕ್ಕೆ ತುಟಿಗೆ  ಹಾಗೂ   ಹಲ್ಲುಗಳಿಗೆ  ಗಂಭೀರ ಸ್ವರೂಪದ  ಗಾಯವಾಗಿದ್ದು   ನಂತರ  ಅಲ್ಲಿ ಸೇರಿದ ಸಾರ್ವಜನಿಕರು   ಗಾಯಾಳುಗಳನ್ನು ಆಟೋರಿಕ್ಷಾವೊಂದರಲ್ಲಿ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ  ದಾಖಲಿಸಿರುತ್ತಾರೆ ಎಂಭಿತ್ಯಾಧಿ

ಇತ್ತೀಚಿನ ನವೀಕರಣ​ : 07-06-2022 06:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080