ಅಭಿಪ್ರಾಯ / ಸಲಹೆಗಳು

Crime Reported in Traffic North PS  

ದಿನಾಂಕ: 06-09-2021 ರಂದು ಪಿರ್ಯಾದಿದಾರರಾದ ವಿದ್ಯಾ.ಬಿ ಮಲ್ಯರವರು ಅವರ ಬಾಬ್ತು KA-19-MH-8977 ನಂಬ್ರದ ಕಾರಿನಲ್ಲಿ ONGC ಕಂಪೆನಿಗೆ  ಕೆಲಸದ ಬಗ್ಗೆ ಹೋಗಲು ಮನೆಯಿಂದ ಹೊರಟು ರಾಹೆ 66 ರಲ್ಲಿ ಚಲಾಯಿಸಿಕೊಂಡು ಬಂದು ಕೂಳೂರು ಕಡೆಗೆ ಹೋಗುತ್ತಾ ಕೋಡಿಕಲ್ ಕ್ರಾಸ್ ಬಳಿ ತಲುಪಿದಾಗ ಇತರ ವಾಹನಗಳು ರಸ್ತೆ ಕ್ರಾಸ್ ಆಗಲು ಪಿರ್ಯಾದಿದಾರರು ಕಾರನ್ನು ನಿಧಾನಿಸಿ ನಿಲ್ಲಿಸಿದ್ದು ವಾಹನಗಳು ಕ್ರಾಸ್ ಆದ ಕೂಡಲೇ ಸಮಯ ಸುಮಾರು ಬೆಳಿಗ್ಗೆ 08-50 ಗಂಟೆಗೆ ಕಾರನ್ನು ಮುಂದಕ್ಕೆ ಚಲಾಯಿಸುತ್ತಿದ್ದಂತೆ ಹಿಂದಿನಿಂದ KA-19-B-2579 ನಂಬ್ರದ ಲಾರಿಯನ್ನು ಅದರ ಚಾಲಕ ಚಂದ್ರಶೇಖರ ಎಂಬುವರು ನಿರ್ಲಕ್ಷತನದಿಂದ ಹಾಗೂ ದುಡುಕುತನದಿಂದ ಚಲಾಯಿಸಿ ಕಾರಿನ ಹಿಂಬದಿಯ ಬಲಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನ ಹಿಂಬದಿಯ Tail Lamp, ಬಲಭಾಗದ ಬಾಡಿ, ಡೋರ್ ಜಖಂಗೊಂಡಿರುವುದಾಗಿದೆ ಎಂಬಿತ್ಯಾದಿ

Crime Reported in Traffic South PS

ದಿನಾಂಕ: 06-09-2021 ರಂದು ಪಿರ್ಯಾದಿ SANDEEP R ದಾರರು ಅವರ ಬಾಬ್ತು ಸ್ಕೂಟರ್ ನಲ್ಲಿ ಮಂಗಳೂರು ಕಡೆಯಿಂದ ಕೊಟೆಕಾರ್ ಕಡೆಗೆ ಹೊಗುತ್ತಿರುವಾಗ ಸಮಯ ಸುಮಾರು ರಾತ್ತಿ:21:00 ಗಂಟೆಗೆ ಮಂಗಳೂರು ತಾಲೂಕು ಜಪ್ಪಿನ ಮೊಗೆರು ಗ್ರಾಮದ ಮಹಾಕಾಳಿ ಪಡುಪು ಜಂಕ್ಷನ್ ಬಳಿ   NH-66 ತಲುಪುತ್ತಿದ್ದಂತೆ ಅದೇ ಮಾರ್ಗವಾಗಿ ಹೋಗುತ್ತಿದ್ದ ಬಸ್ಸು ನಂಬ್ರ-KA-19-AA-5319 ನೇದರ ಚಾಲಕ ಸಂಪತ್ ಕುಮಾರ್  ರವರು ಬಸ್ಸನ್ನು ದುಡುಕುತನ ಹಾಗೂ  ನಿರ್ಲಕ್ಷ್ಯತನದಿಂದ  ತೀರಾ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರ ಮುಂದೆ ಹೆಲ್ಮೆಟ್ ಹಾಕಿ ಸವಾರಿ ಹೋಗುತ್ತಿದ್ದ ಸವಾರ ಸ್ಕೂಟರ್ ನಂಬ್ರ-KA-19-HG-7986 ನ ಮುಂದಿನ ಬಲಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸವಾರನು  ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದಿರುತ್ತಾರೆ ಅವರನ್ನು ನೋಡಲಾಗಿ ಸವಾರನಿಗೆ ತಲೆಯ ಹಿಂಬದಿಗೆ ರಕ್ತಗಾಯ,ಮುಖಕ್ಕೆ ರಕ್ತಗಾಯ, ಕಿವಿಯಲ್ಲಿ ರಕ್ತ ಬರುತ್ತಿರುವ ಗಾಯ ಹಾಗೂ ಹೊಟ್ಟೆಯಲ್ಲಿ ತರಚಿದ ಗಾಯವಾಗಿರುತ್ತದೆ ಅವರನ್ನು ಕೂಡಲೇ ಆಟೋರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಇಂಡಿಯಾನ ಆಸ್ವತ್ರೆಗೆ ಕರೆದುಕೊಂಡು ಹೋಗಿದ್ದು ಅವರನ್ನು ಪರೀಕ್ಷಿಸಿದ ವೈದ್ಯರು ಗಾಯಳು ಸ್ಕೂಟರ್ ಸವಾರ ಸುನೀಲ್(40) ರವರ ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

Crime Reported in Barke PS    

ಪಿರ್ಯಾದಿದಾರರಾದ ಶ್ರೀಮತಿ ಯಶೋದಾ, ಅರೋಮಾ ಪಾರ್ಕ ಅಪಾರ್ಟಮೆಂಟ್ ಎಂಬಲ್ಲಿ ತನ್ನ ಸಂಸಾರದೊಂದಿಗೆ ವಾಸವಾಗಿ ವಾಚ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು, ತನ್ನ ಮಗಳಾದ ರೇಶ್ಮಾ ಪ್ರಾಯ 21 ವರ್ಷ ಎಂಬುವರಿಗೆ ಮದುವೆಗೆ ವಯಸ್ಸಾಗಿದುದರಿಂದ ಬೊಮ್ಮಹಳ್ಳಿ ಎಂಬಲ್ಲಿ ಸಂಬಂಧ ನೋಡಿ ದಿನಾಂಕ: 21-08-2021 ರಂದು ಮದುವೆಯ ನಿಶ್ಚಿತಾರ್ಥವನ್ನು ಪಿರ್ಯಾದಿದಾರರ ಮನೆಯಲ್ಲಿ ಮಾಡಿದ್ದು,  ನಿಶ್ಚಿತಾರ್ಥ ಸಂದರ್ಭದಲ್ಲಿ ಹುಡುಗನ ಮನೆಯವರು ಪಿರ್ಯದಿದಾರರಿಗೆ ಬಂಗಾರದ ಚೈನು-1, ಇದರ ಅಂದಾಜು ಮೌಲ್ಯ ಒಂದು ಲಕ್ಷ ರೂಪಾಯಿ, ಬಂಗಾರದ ಉಂಗುರ-1 ಇದರ ಅಂದಾಹು ಮೌಲ್ಯ 50 ಸಾವಿರ ರೂಪಾಯಿ, ಮತ್ತು ಬೆಳ್ಳಿ ಉಗುಂರ, ಕಿಯೋಲೆ, ಬೆಳ್ಳಿ ಕಾಲುಗೆಜ್ಜೆ ಈ ಒಟ್ಟು ಬೆಳ್ಳಿಯ ಅಂದಾಜು ಮೊತ್ತ 60 ಸಾವಿರ ರೂಪಾಯಿ, ಈ ಬೆಲೆ ಬಾಳುವ ಸೊತ್ತುಗಳನ್ನು ಪಿರ್ಯಾದಿ ಮಗಳು ರೇಶ್ಮಾ ಎಂಬವರು ದಿನಾಂಕ 26-08-2021 ರಂದು ಪಿರ್ಯಾದಿದಾರರಿಗೆ ಹಾಗೂ ಮನೆಯವರಿಗೆ ಗೊತ್ತಿಲ್ಲದೇ ಕಳವು ಮಾಡಿಕೊಂಡು ಹೋಗಿದ್ದು, ಮತ್ತು ಪಿರ್ಯಾದಿದಾರರು ಹಾಗೂ ಅವರ ಗಂಡ ಕೂಲಿ ಕೆಲಸ ಮಾಡಿ ಕೆನರಾ ಬ್ಯಾಂಕ್ ಖಾತೆ ಗೆ ಒಟ್ಟು 90,000/- ಹಣವನ್ನು ದುಡಿಮೆಯಿಂದ ಜಮಾ ಮಾಡಿದ್ದು, ಈ ಹಣವನ್ನು ಸಹ ಪಿರ್ಯಾದಿಯ ಮಗಳು ರೇಶ್ಮಾ ಎಂಬುವರು ಅಕ್ಬರ್ ಅಲಿ ಎಂಬುವರ ಖಾತೆಗೆ ವರ್ಗಾಯಿಸಿದ್ದು, ಇದರಿಂದ ಪಿರ್ಯಾದಿದಾರರಿಗೆ ಸೇರಿದ ಚಿನ್ನ ಮತ್ತು ಬೆಳ್ಳಿಯನ್ನು ಮನೆಯಿಂದ ಕಳವು ಮಾಡಿಕೊಂಡು ಹೋದ ರೇಶ್ಮಾ ಎಂಬುವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿ ಸಾರಂಶ

ಇತ್ತೀಚಿನ ನವೀಕರಣ​ : 07-09-2021 07:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080