ಅಭಿಪ್ರಾಯ / ಸಲಹೆಗಳು

Crime Reported in Traffic South PS             

ದಿನಾಂಕ:06-10-2021 ರಂದು ಪಿರ್ಯಾದಿದಾರರಾದ ಶ್ರೀಮತಿ ಭಾಗ್ಯಲಕ್ಷ್ಮೀ ರವರು ಅವರ ಮನೆಯಿಂದ ಸೋಮೇಶ್ವರ ದೇವಸ್ಥಾನಕ್ಕೆ ಹೋಗುವರೇ ಅವರ ಮಗ ಚೇತನ್ ನ ಸ್ಕೂಟರ್ ನಂಬ್ರ KA-19-HH-3555 ನೇದರಲ್ಲಿ ಚೇತನ್ ಸವಾರನಾಗಿ ಹಾಗೂ ಪಿರ್ಯಾದಿದಾರರೂ ಸಹ ಸವಾರರಾಗಿ ಕುಳಿತುಕೊಂಡು ಸೋಮೇಶ್ವರ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 07.30 ಗಂಟೆಗೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಒಂಬತ್ತು ಕೆರೆ ಬಸ್ಸು ನಿಲ್ದಾಣದ ಎದುರುಗಡೆ ತಲುಪಿದಾಗ ಸ್ಕೂಟರ್ ಸವಾರ ಚೇತನ್ ಸ್ಕೂಟರ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿ ಒಮ್ಮೇಲೇ ಸ್ಕೂಟರಿನ ಬ್ರೇಕ್ ಹಾಕಿದ ಪರಿಣಾಮ ಪಿರ್ಯಾದಿದಾರರೂ ಸ್ಕೂಟರ್ ಮೇಲಿಂದ ನಿಯಂತ್ರಣ ಕಳೆದುಕೊಂಡು ಆಯತಪ್ಪಿ ಡಾಮಾರು ರಸ್ತೆಗೆ ಬಿದ್ದು ಅವರಿಗೆ ಬಲಬದಿ ತಲೆಗೆ ಗಂಭೀರ ಸ್ವರೂಪದ ಗಾಯ ಹಾಗೂ ಬಲ ಮೊಣಕೈಗೆ ತರಚಿದ ಗಾಯವಾಗಿದ್ದು ನಂತರ ಅವರನ್ನು ಸ್ಕೂಟರ್ ಸವಾರ ಚೇತನ್ ಹಾಗೂ ಅಲ್ಲಿ ಸೇರಿದ ಜನರು ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ

 

Crime Reported in Traffic North PS

ದಿನಾಂಕ:06-10-2021 ರಂದು ಪಿರ್ಯಾದಿದಾರರಾದ ಪ್ರವೀಣ್ ಕುಮಾರ್ ರವರು ಮನೆಯ ಸಾಮಾಗ್ರಿಗಳನ್ನು ತರಲು ತಮ್ಮ ಬಾಬ್ತು KA-19-EL-4288 ನಂಬ್ರದ ಮೋಟಾರ್ ಸೈಕಲಿನಲ್ಲಿ ಸುರತ್ಕಲ್ ಜಂಕ್ಷನ್ ಕಡೆಯಿಂದ ಕೃಷ್ಣಾಪುರ ಕಡೆಗೆ ಹಾದು ಹೋಗುವ ಡಾಮರು ರಸ್ತೆಯಲ್ಲಿರುವ ಮಾರುಕಟ್ಟೆ ಕಡೆಗೆ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 10:30 ಗಂಟೆಗೆ ಸುರತ್ಕನ್ ನ ಡಾ|| ಮೂರ್ತಿಸ್ ಐ ಕೇರ್ ಸೆಂಟರ್ ಕಟ್ಟಡದ ಎದುರಿನಲ್ಲಿ ಹೋಗುತ್ತಿದ್ದಂತೆ ಪಿರ್ಯಾದಿದಾರರ ಮೋಟಾರ್ ಸೈಕಲಿನ ಹಿಂದಿನಿಂದ ಅಂದರೆ ಸುರತ್ಕಲ್ ಜಂಕ್ಷನ್ ಕಡೆಯಿಂದ KA-19-C-6129 ನಂಬ್ರದ ಬಸ್ಸನ್ನು ಅದರ ಚಾಲಕನಾದ IQBAL ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕಾಲಿನ ಪಾದದ ಮೇಲೆ ಬಸ್ಸಿನ ಎಡಬದಿಯ ಚಕ್ರವು ಹರಿದು ಹೋಗಿ ಅವರ ಎಡಕಾಲಿನ  ಕೋಲು ಕಾಲಿನಿಂದ ಪಾದದವರೆಗೆ ಚರ್ಮ ತರಚಿದ ಗಾಯ, ಅಲ್ಲದೇ ಮಣಿಗಂಟು ಹಾಗೂ ಹೆಬ್ಬೆರಳ ಬುಡದ ಬಳಿ ಚರ್ಮ ಕಿತ್ತುಹೋದ ರೀತಿಯ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರಿನ ಜ್ಯೋತಿ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಎಂಬಿತ್ಯಾದಿ

Crime Reported in Bajpe PS

“ಫಿರ್ಯಾದಿ Yakoob Ismail Bava ದಾರರ ಮಗ ಮೊಹಮ್ಮದ್ ಅಬ್ದುಲ್ ರಹಿಮಾನ್, ಪ್ರಾಯ 12 ವರ್ಷ, ರವರು ದಿನಾಂಕ: 05-10-2021 ರಂದು ಮಧ್ಯಾಹ್ನ 1.00 ಗಂಟೆಗೆ ತನ್ನ ಮನೆ 5th cross road, Malvooru village ಯಿಂದ ಊಟಮಾಡಿಕೊಂಡು  ವಾಪಾಸು ಶಾಲೆಗೆ ನಡೆದುಕೊಂಡು ಹೋಗುತ್ತಾ ಮಂಗಳೂರು ತಾಲೂಕು ಮಳವೂರು ಗ್ರಾಮದ ಜರಿನಗರ ಪಾಪ್ಯುಲರ್ ಶಾಲೆಯ 5ನೇ ಅಡ್ಡರಸ್ತೆ ಬಳಿ ತಲುಪುತ್ತಿದ್ದಂತೆ ಸ್ಕೂಟರ್ ನಂಬ್ರ ಕೆಎ 19 ಇಎನ್ 6858 ನೇದನ್ನು ತನ್ನ ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಕರವಾಗಿ ಚಲಾಯಿಸಿಕೊಂಡು ಬಂದು ಮೊಹಮ್ಮದ್ ಅಬ್ದುಲ್ ರಹಿಮಾನ್ ಗೆ ಹಿಂದಿನಿಂದ ಢಿಕ್ಕಿಯಾದ ಪರಿಣಾಮ ಆತನ ತಲೆಗೆ ಕೆ.ಪಿ.ಇಬ್ರಾಹಿಂ ರವರ ಕಂಪೌಂಡ್ ಗೋಡೆ ತಾಗಿ ಭಾರಿ ಗಾಯ ಉಂಟಾಗಿರುತ್ತದೆ. ಗಾಯಾಳು ಚಿಕಿತ್ಸೆ ಬಗ್ಗೆ  ಮಂಗಳೂರು ಎಜೆ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬಿತ್ಯಾದಿ

Crime Reported in Surathkal PS

ದಿನಾಂಕ 25/09/2021 ರಂದು ರಾತ್ರಿ 09.00 ಗಂಟೆಗೆ ಕಾಟಿಪಳ್ಳ ಗ್ರಾಮದ ಗಣೇಶಪುರದ ಆರೋಪಿ ಚಂದ್ರಪ್ಪ ರವರ ಬಾಡಿಗೆ ಮನೆಯ ಬಳಿ ಆರೋಪಿಗಳಾದ ಚಂದ್ರಪ್ಪ ಹಾಗೂ ವೆಂಕಟೇಶ್ ಇವರು ಕೆಲಸದ ವಿಚಾರದಲ್ಲಿ ಫಿರ್ಯಾದಿದಾರರಾದ ಪುನೀತ್ ಕುಮಾರ ರವರ ತಂದೆ ರುದ್ರೇಶ್ ರವರಲ್ಲಿ ಜಗಳ ಮಾಡಿ ಆರೋಪಿ ಚಂದ್ರಪ್ಪ ಇವರು ಕಾಲಿನಿಂದ ರುದ್ರೇಶರವರ ಹೊಟ್ಟೆಯ ಎಡ ಬದಿಗೆ ತುಳಿದು, ಆರೋಪಿ ವೆಂಕಟೇಶ್ ರವರು ರುದ್ರೇಶ ರವರ ಮುಖಕ್ಕೆ ಕೈಯಿಂದ ಹೊಡೆದುದಲ್ಲದೇ ಮನೆ ಕಡೆಗೆ ಹೊರಟ ರುದ್ರೇಶರವರನ್ನು ಮುಂದೆ ಹೋಗದಂತೆ ತಡೆದಿರುವುದಾಗಿದೆ. ಬಳಿಕ ರುದ್ರೇಶರವರು ಅವರ ಊರಾದ ದಾವಣಗೆರೆಗೆ ಹೋಗಿ ದಿನಾಂಕ 03.10.2021 ರಂದು ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

Crime Reported in Mangalore South PS

 ಪಿರ್ಯಾದಿದಾರರಾದ ನಾಗೇಶ್ ಶೇರಿಗುಪ್ಪಿ ಪ್ರಾಯ 31 ವರ್ಷದವರು, ಹೆಂಡತಿ ಹಾಗೂ ಇಬ್ಬರು ಮಕ್ಕಳ ಜೊತೆ ಹಸನ್ ಶೆಲ್ಟರ್ ಅರ್ಪಾಟ್ಮೆಂಟ್, ಸುವರ್ಣ ರೋಡ್ 1ST ಕ್ರಾಸ್ ವೆಲೆನ್ಸೀಯಾ ಮಂಗಳೂರು ಎಂಬಲ್ಲಿ ಸುಮಾರು 08 ವರ್ಷಗಳಿಂದ ವಾಸವಾಗಿದ್ದರು. ಪಿರ್ಯಾದಿದಾರರು ರವಿ ಎಂಬವರ ಬಳಿ ಕಾರು ಚಾಲಕನಾಗಿ ಕೆಲಸಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ಹೆಂಡತಿ ಶ್ರೀಮತಿ ವಿಜಯ ಲಕ್ಷ್ಮೀ ಪ್ರಾಯ 26 ವರ್ಷ ದವರು ವಾಸವಾಗಿದ್ದ ಹಸನ್ ಶೆಲ್ಟರ್ ಫ್ಲಾಟ್ ನಲ್ಲಿ ವಾಚ್ ಮ್ಯಾನ್ ಕೆಲಸ ಮಾಡಿಕೊಂಡಿದ್ದರು.  ಪಿರ್ಯಾದಿದಾರರು ಎಂದಿನಂತೆ ದಿನಾಂಕ 05-10-2021 ರಂದು ಕೆಲಸಕ್ಕೆ ತೆರಳಿದ ಸಮಯದಲ್ಲಿ, ಸಮಯ ಸುಮಾರು 12.30 ಗಂಟೆಗೆ ಪಿರ್ಯಾದಿದಾರರು ವಾಸವಾಗಿದ್ದ ಹಸನ್ ಶೆಲ್ಟರ್ ಫ್ಲಾಟ್ ನ ಮ್ಯಾನೇಜರ್ ದೂರವಾಣಿ ಕರೆ ಮಾಡಿ ಪಿರ್ಯಾದಿದಾರರ ಹೆಂಡತಿಯಾದ ಶ್ರೀಮತಿ ವಿಜಯಾ ಲಕ್ಷ್ಮೀ ಪ್ರಾಯ 26 ವರ್ಷದವರು ಮನೆಯಲ್ಲಿ ಇಲ್ಲದೆ ಇರುವ ಕಾರಣ, ಪಿರ್ಯಾದಿದಾರರಿಗೆ ಜನರೇಟ್ ಆನ್ ಮಾಡಲು ತಿಳಿಸಿದ್ದರಿಂದ, ಪಿರ್ಯಾದಿದಾರರು  ಕೂಡಲೇ ಫ್ಲಾಟ್ ಗೆ ಬಂದು, ಮನೆಯಲ್ಲಿ  ನೋಡಿದಾಗ ಇಬ್ಬರು  ಮಕ್ಕಳು ಮಾತ್ರ ಇದ್ದು, ಹೆಂಡತಿಯು ಮನೆಯಲ್ಲಿ ಇಲ್ಲದೆ ಕಾಣೆಯಾಗಿರುತ್ತಾಳೆ, ನಂತರ  ಮೊಬೈಲ್ ಫೋನ್ ಗೆ ಕರೆ ಮಾಡಿದಾಗ ಮೊಬೈಲ್ ಪೋನ್ ಸ್ವಿಚ್ ಆಫ್ ಆಗಿರುತ್ತದೆ. ಪಿರ್ಯಾದಿದಾರು ಕೂಡಲೇ ಸಂಬಂಧಿಕರನ್ನು, ಪರಿಚಯದವರನ್ನು ಹಾಗೂ ಸ್ನೇಹಿತರನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ಲಬ್ಯವಿರವುದಿಲ್ಲ. ಅದ್ದರಿಂದ ಕಾಣೆಯಾದ ವಿಜಯಲಕ್ಷ್ಮೀ ಪ್ರಾಯ 26 ರವರನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿ.

ಕಾಣೆಯಾದ ಹೆಂಗಸಿನ ಚಹರೆ;

ಗೋಧಿ ಮೈ ಬಣ್ಣ ,ಸಾಧಾರಣ ಶರೀರ,

ಎತ್ತರ 5.1 ಅಡಿ,

ಕಪ್ಪು ಬಣ್ಣದ ಚೂಡಿದಾರದ ಪ್ಯಾಂಟ್, ಹಾಗೂ ನೀಲಿ ಹಾಗೂ ಅರಿಸಿಣ ಬಣ್ಣದ ಹೂ ಗಳಿರುವ ಚೂಡಿದಾರದ ಟಾಪ್  ಧರಿಸಿರುತ್ತಾಳೆ.

Crime Reported in Moodabidre PS

ಪಿರ್ಯಾದಿದಾರರಾದ ಶ್ರೀ ಕೌಶಿಕ್ ಕಲ್ಲೂರಾಯ, ಪ್ರಾಯ: 45 ವರ್ಷ, ರವರ ವಿಳಾಸವಾದ ಮೂಡಬಿದ್ರೆ ತಾಲೂಕು ಮಾಂಟ್ರಾಡಿ ಗ್ರಾಮದ ಪೆಂಚಾರು ಎಂಬಲ್ಲಿರುವ ಅಡಿಕೆ ತೋಟದಿಂದ ದಿನಾಂಕ: 03-10-2021 ರಿಂದ ದಿನಾಂಕ: 05-10-2021 ರ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಹಣ್ಣಡಿಕೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ದಿನಾಂಕ: 05-10-2021 ರಂದು ಪಿರ್ಯಾದಿದಾರರು ತೋಟಕ್ಕೆ ಹೋಗಿ ನೋಡಿದಾಗ ತಿಳಿದು ಬಂದಿದ್ದು, ಕಳ್ಳತನವಾದ ಅಡಿಕೆಯ ಅಂದಾಜು ಮೌಲ್ಯ ರೂಪಾಯಿ : 30,000/- ಆಗಬಹುದು ಎಂಬಿತ್ಯಾದಿ.

 

2) ಪಿರ್ಯಾದಿ ROHITH SHETTY ದಾರರ ತಂದೆಯವರಾದ  ಶ್ರೀಧರ ಶೆಟ್ಟಿ, ಪ್ರಾಯ: 73 ವರ್ಷ ಎಂಬುವರು ದಿನಾಂಕ 29-09-2021 ರ ಸಮಯ ಬೆಳಿಗ್ಗೆ ಸುಮಾರು 08:00 ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೊರಟು ಹೋದವರು ವಾಪಾಸು ಮನೆಗೆ ಬಾರದೇ ಇದ್ದಾಗ ಅವರನ್ನು ಸಂಬಂಧಿಕರ ಮನೆಗಳಲ್ಲಿ ಹಾಗೂ ಇತರ ಕಡೆಗಳಲ್ಲಿ  ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಶ್ರೀಧರ ಶೆಟ್ಟಿಯವರು ಶರಾಬು ಕುಡಿಯುವ ಚಟವನ್ನು ಹೊಂದಿದ್ದು, ಅವರು  ಈ ಹಿಂದೆಯೂ ಕೆಲಸಕ್ಕೆಂದು ಹೋದರೆ 03-04 ದಿನಗಳು ಮನೆಗೆ ವಾಪಾಸಾಗುತ್ತಿರಲಿಲ್ಲ. ಆ ಕಾರಣಕ್ಕೆ ಪಿರ್ಯಾದಿದಾರರು ಕಾಣೆಯಾದ ಶ್ರೀಧರ ಶೆಟ್ಟಿಯವರನ್ನು ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದುದರಿಂದ ತಡವಾಗಿ ದೂರು ನೀಡಿರುವುದು ಎಂಬಿತ್ಯಾದಿ.

Crime Reported in Panambur PS

ಪಿರ್ಯಾದಿ SMT ZOHARA ರವರ ದೊಡ್ಡ ಮಗಳಾದ ಕುಮಾರಿ ಆಸ್ಪ ಪ್ರಾಯ: 21 ವರ್ಷ, ತಂದೆ: ಮನ್ಸೂರ್, ವಾಸ: ಮನೆ ನಂ. 27-38 ಸ್ವಾಮಿ ಅಜೀಜ್ ರವರ ಮನೆಯ ಸಮೀಪ, ಕಸಬಾ ಬೆಂಗ್ರೆ, ಮಂಗಳೂರು ತಾಲೂಕು ಎಂಬುವರು ಬೆಂಗ್ರೆಯಲ್ಲಿರುವ ಇರ್ಪಾಸ್ ಎಂಬವರ ಪ್ಯಾನ್ಸಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದವಳು. ಎಂದಿನಂತೆ  ದಿನಾಂಕ: 30-09-2021 ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ಹೋಗಿದ್ದವಳು ಮದ್ಯಾಹ್ನ ಮನೆಗೆ ಬಂದಿರುತ್ತಾಳೆ. ನಂತರ ಸಂಜೆ  ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಪ್ಯಾನ್ಸಿ ಅಂಗಡಿಯಲ್ಲಿ ಹೋಗಿ ಕೇಳಿದಾಗ ಅವಳು ಈ ದಿನ 4.30 ಗಂಟೆಯ ತನಕ ಪ್ಯಾನ್ಸಿಯಲ್ಲಿದ್ದವಳು ನಂತರ ಶಿವಮೊಗ್ಗಕ್ಕೆ ಹೋಗಲಿಕೆ ಇದೆ ಎಂದು ಹೇಳಿ ಹೋಗಿರುತ್ತಾಳೆ ಎಂದು ಹೇಳಿರುತ್ತಾರೆ. ಪಿರ್ಯಾದಿದಾರರ ಮಗಳಾದ ಆಸ್ಪ 10 ನೇ ತರಗತಿಯ ತನಕ ವಿದ್ಯಾಭ್ಯಾಸ ಮಾಡಿರುತ್ತಾಳೆ. ದಿನಾಂಕ: 30-09-2021 ರಂದು ಮದ್ಯಾಹ್ನ ಕೆಲಸಕ್ಕೆಂದು ಮನೆಯಿಂದ ಹೋದವಳು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಅವಳ ಬಗ್ಗೆ ಪಿರ್ಯಾದಿದಾರರು ಅವರ ಸಂಬಂಧಿಕರ ಮನೆಗೆ ಹೋಗಿದ್ದಾಳೆಯೇ ಎಂದು ಎಲ್ಲಾ ಕಡೆ ಹುಡುಕಾಡಲಾಗಿ ವಿಚಾರಿಸಿದರೂ ಈ ತನಕ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ವಿನಂತಿಸುತ್ತೇನೆ. ಮಗಳನ್ನು ಎಲ್ಲಾ ಕಡೆಗಳಲ್ಲಿ ಹುಡುಕಾಡಿ ಸಿಗದೇ ಇದ್ದುದರಿಮದ ದೂರು ನಿಡಲು ತಡವಾಗಿರುತ್ತದೆ ಎಂಬಿತ್ಯಾದಿ.

 

Crime Reported in Traffic South PS

ದಿನಾಂಕ: 05-10-2021 ರಂದು ಪಿರ್ಯಾದಿ MOHANA BANGERA ರವರ ಹೆಂಡತಿ ನಿಶ್ಮಿತ ರವರು ಸ್ಕೂಟರ್ ನಂಬ್ರ:KA-19-EU-4135 ನೇದನ್ನು ಸವಾರಿ ಮಾಡಿಕೊಂಡು ಕೊಲ್ಯ ಕಡೆಗೆ ಹೋಗುತ್ತಿರುವ ಸಮಯ ಸುಮಾರು ಬೆಳಿಗ್ಗೆ 9-30 ಗಂಟೆಗೆ ಮಂಗಳೂರು ತಾಲ್ಲೂಕು ಸೊಮೇಶ್ವರ ಗ್ರಾಮದ ಬೀರಿ ಎಂಬಲ್ಲಿ  ತಲಪಾಡಿ ಕಡೆಯಿಂದ ತೊಕ್ಕೊಟ್ಟು ಕಡೆಗೆ ಹಾದು ಹೋಗುವ ಸರ್ವಿಸ್ ಡಾಮಾರು ರಸ್ತೆ ತಲುಪಿದಾಗ ಅದೇ ರಸ್ತೆಯಲ್ಲಿ KSRTC ಬಸ್ಸ್ ನಂಬ್ರ:KA-19-F-3414 ನೇದರ ಚಾಲಕ ಬಸ್ಸ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಿಶ್ಮಿತಾರವರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಮುಂದಿನ ಎಡಬದಿಗೆ ಡಿಕ್ಕಿ ಪಡಿಸಿದ್ದು ಈ ಅಪಘಾತದ ಪರಿಣಾಮ ಸ್ಕೂಟರ್ ಸವಾರಳಾದ ನಿಶ್ಮಿತರವರು ಡಾಮಾರು ರಸ್ತೆಗೆ ಬಿದ್ದು ಅವರಿಗೆ ಗಲ್ಲಕ್ಕೆ ಮೂಳೆ ಮುರಿತದ ಗಾಯ ಎರಡು ತುಟ್ಟಿಗಳಿಗೆ,ಮೂಗಿಗೆ ,ಕಾಲಿಗೆ, ರಕ್ತ ಗಾಯ ಹಾಗೂ ಮುಂದಿನ ಎರಡು ಹಲ್ಲುಗಳು ಮುರಿದ ಗಾಯವಾಗಿದ್ದ ಅವರನ್ನು  ಅಲ್ಲಿ ಸೇರಿದ ಜನರು ಕಾರೊಂದರಲ್ಲಿ ಚಿಕಿತ್ಸೆ ಬಗ್ಗೆ  ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ.ಅಪಘಾತ ಪಡಿಸಿದ ಕೆ.ಎಸ್ .ಆರ್ ಟಿ ಸಿ ಬಸ್ಸಿನ ಚಾಲಕ ಬಸ್ಸನ್ನು ಅಪಘಾತ ಪಡಿಸಿದ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿರುತ್ತಾನೆ.ಎಂಬಿತ್ಯಾದಿ

 

Crime Reported in Ullal PS                

ದಿನಾಂಕ. 3-10-2021 ರಂದು ಮದ್ಯಾಹ್ನ 12:15 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ತಲಪಾಡಿ ಗ್ರಾಮದ ತಲಪಾಡಿ ಆರ್.ಟಿ.ಒ ಚೆಕ್ ಪೋಸ್ಟ್ ಬಳಿ ಇರುವ ಹಳೇಯ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ರಾಜನ್ ರವರ ಮಾಲಕ ಹಾಗೂ ಚಾಲಕರಾಗಿರುವ ಕೆಎಲ್-56-ಎ-4146 ನೇ ಲಾರಿಯ ಕ್ಯಾಬಿನ್ನಲ್ಲಿಟ್ಟಿದ್ದ ಪ್ಲಾಸ್ಟಿಕ್ ಸರಿಯಾಗಿ ಜೋಡಿಸುವಂತೆ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಫಿರ್ಯಾದಿದಾರರಾದ ಅಬ್ದುಲ್ ರಹಿಮಾನ್.ಟಿ.ಎ. ರವರಿಗೆ ಸರಿಯಾದ ಭದ್ರತೆಯನ್ನು ನೀಡದೇ ಲಾರಿಯ ಮೇಲೆ ಹತ್ತಿಸಿಕೊಂಡು ಪ್ಲಾಸ್ಟಿಕನ್ನು ಸರಿಯಾಗಿ ಜೋಡಿಸಲು ಕೆಲಸ ಮಾಡಿಸಿದಾಗ ಫಿರ್ಯಾದಿದಾರರು ಲಾರಿಯ ಕ್ಯಾಬಿನ್ನಿಂದ 12 ಅಡಿ ಎತ್ತರದಿಂದ ಕೆಳಗಡೆ ನೆಲಕ್ಕೆ ಬಿದ್ದು ಪರಿಣಾಮ ಫಿರ್ಯಾದಿದಾರರ ಬಲಕೈಗೆ ಮೂಳೆ ಮುರಿತದ ರಕ್ತಗಾಯ, ಎಡಕೈಗೆ ಮೂಳೆ ಮುರಿತದ ರಕ್ತ ಗಾಯ, ಬಲಮುಖದ ಕಣ್ಣಿನ ಹತ್ತಿರ, ಕೆನ್ನೆ ಯಲ್ಲಿ ಮತ್ತು ಬಲಕಾಲಿನ ತೊಡೆಯಲ್ಲಿ ಚರ್ಮ ಸುಲಿದ ರಕ್ತ ಗಾಯ ಉಂಟಾಗಿ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಘಟನೆಗೆ ಲಾರಿ ಚಾಲಕ ಮಾಲಕರಾಗಿರುವ ರಾಜನ್ ರವರು ಯಾವುದೇ ಭದ್ರತೆಯ ವ್ಯವಸ್ಥೆಯನ್ನು ಮಾಡಿಸದೇ ನಿರ್ಲಕ್ಷತನದಿಂದ ಫಿರ್ಯಾದಿದಾರರಿಂದ ಕೆಲಸ ಮಾಡಿಸಿರುವುದೇ ಕಾರಣವಾಗಿರುತ್ತದೆ ಎಂಬಿತ್ಯಾದಿ.

 

Crime Reported in Moodabidre PS

 ಪಿರ್ಯಾದಿ ಶ್ಯಾಮ ಎಂ. ತಂದೆ.ದಿ.ಗೋಪಾಲ ಮಡಿವಾಳ, ರವರು ಹೊಸಬೆಟ್ಟು, ಮೂಡಬಿದ್ರೆ ತಾಲೂಕು ಎಂಬವರು ನೀಡಿದ ಪಿರ್ಯಾಪದಿಯ ಸಾರಾಂಶವೇನೆಂದರೆ, ಪಿರ್ಯಾದದಿದಾರರು ವಾಲ್ಪಾಡಿ ಗ್ರಾಮದ ಅರ್ಬಿ ಎಂಬಲ್ಲಿ ಸ.ನಂ. 72/2, 72/3, 72/4, 132/1 ರಲ್ಲಿ ಕೃಷಿ ಜಮೀನು ಭೂಮಿ ಹೊಂದಿದ್ದು,  ಆ ಜಾಗದಲ್ಲಿ ಅಡಿಕೆ ಮತ್ತು ತೆಂಗಿನ ಸಸಿ ನೆಟ್ಟಿರುತ್ತಾರೆ. ದಿನಾಂಕ     03-10-2021 ರಂದು ಬೆಳಿಗ್ಗೆ 10.00 ಗಂಟೆಗೆ ಪಿರ್ಯಾ ದಿದಾರರ ಕೃಷಿ ಭೂಮಿಗೆ ಆರೋಪಿಗಳಾದ ವಾಲ್ಪಾಡಿ ಶಂಕರ, ಸುಂದರಿ, ವಿಜಯ ಹಾಗೂ ಇತರ ಆರು ಮಂದಿ ಸಮಾನ ಉದ್ದೇಶದಿಂದ ಅಕ್ರಮ ಪ್ರವೇಶ ಮಾಡಿ, ನೆಟ್ಟ 540 ಅಡಿಕೆ ಮತ್ತು 30 ತೆಂಗಿನ ಸಸಿಗಳನ್ನು ಕಿತ್ತು ಬಿಸಾಡಿರುತ್ತಾರೆ. ಇದರಿಂದ ರೂ.40.000/- ನಷ್ಟವಾಗಿರುತ್ತದೆ.  ಆದುದರಿಂದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ,

ಇತ್ತೀಚಿನ ನವೀಕರಣ​ : 07-10-2021 03:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080