ಅಭಿಪ್ರಾಯ / ಸಲಹೆಗಳು

Crime Reported in Barke PS

ಪಿರ್ಯಾದಿದಾರರಾದ ಶ್ರೀ ಕೆ. ಪ್ರಕಾಶ್ ಪ್ರಾಯ 69 ವರ್ಷ ರವರು ದಿನಾಂಕ: 22-11-2021 ರಂದು ರಾತ್ರಿ ಸಮಯ 08-00 ಗಂಟೆಗೆ ತನ್ನ ಮನೆಯಾದ ಗುಂಡಿಹೌಸ್, ಪತ್ತುಮುಡಿ ಹತ್ತಿರದ ವಠಾರದಲ್ಲಿ ಪಿರ್ಯಾದಿದಾರರ ಬಾಬ್ತು KA-19 U5588ನೇ ಹಿರೋ ಹೊಂಡಾ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ಮನೆಗೆ ತೆರೆಳಿದ್ದು, ಮರುದಿನ ದಿನಾಂಕ: 23-11-2021 ರಂದು ಬೆಳಿಗ್ಗೆ 08-00 ಗಂಟೆಗೆ ನೋಡಲಾಗಿ ರಾತ್ರಿ ನಿಲ್ಲಿಸಿದ ದ್ವಿಚಕ್ರ ವಾಹನ ಕಾಣದೇ ಇದ್ದು ಈ ಬಗ್ಗೆ  ಪಿರ್ಯಾದಿದಾರರು ನೆರೆಕೆರೆಯವರಲ್ಲಿ ಹಾಗೂ ಮಂಗಳೂರು ನಗರದ ಪರಿಸರದಲ್ಲಿ  ಹುಡುಕಾಡಿದರೂ ಸಿಗದೇ ಇರುವ ಕಾರಣ  ಈ ದಿನ ಠಾಣೆಗೆ ಬಂದು ದೂರು ನೀಡಿದ್ದು ಪಿರ್ಯಾದಿದಾರರ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ದಿನಾಂಕ: 22-11-2021 ರಂದು ರಾತ್ರಿ ಸಮಯ 08-00 ಗಂಟೆಯಿಂದ  ದಿನಾಂಕ: 23-11-2021 ರ ಬೆಳಿಗ್ಗೆ 08-00 ಗಂಟೆಯ ಮಧ್ಯೆ ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿ ಸಾರಾಂಶ. 

Crime Reported in Urva PS  

ಪಿರ್ಯಾದಿ Smt Dhanuja ದಾರರ ಗಂಡ ಶಿವೇಶ್(28) ವರ್ಷ ಎಂಬವರು ದಿನಾಂಕ 07-12-2021 ರಂದು ಬೆಳಿಗ್ಗೆ 09-45 ಗಂಟೆಗೆ ಮನೆಯಿಂದ ಬಿಜೈ ಮೆಸ್ಕಾಂ ಕಚೇರಿಗೆ ಕರ್ತವ್ಯಕ್ಕೆ ಹೋದವರು ಕಚೇರಿ ಆವರಣದಲ್ಲಿ ತನ್ನ ಬಾಬ್ತು ಬೈಕ್ ನ್ನು ಪಾರ್ಕ್ ಮಾಡಿ  ತನ್ನ ಮೊಬೈಲ್ ಪೋನ್ ನ್ನು ಬೈಕ್ ನಲ್ಲಿರಿಸಿ ಕಚೇರಿಗೆ ಹೋಗದೆ ಕಚೇರಿ ಆವರಣದಿಂದ ಹೊರ ಹೋದವರು ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಕಾಣೆಯಾದ ಪಿರ್ಯಾದಿದಾರರ ಗಂಡನನ್ನು ಪತ್ತೆ ಹಚ್ಚಿಕೊಡುವಂತೆ ಕೋರಿಕೆ ಎಂಬಿತ್ಯಾದಿ.

ಕಾಣೆಯಾದವರ ಚಹರೆ ಮನೆಯಿಂದ ಹೋಗುವಾಗ ನೇರಳೆ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಖಾಕಿ ಬಣ್ಣದ ಪ್ಯಾಂಟ್ ನ್ನು ಧರಿಸಿದ್ದು, 5 ಅಡಿ 10 ಇಂಚು ಎತ್ತರ, ಗೋಧಿ ಮೈಬಣ್ಣ, ದೃಡ ಶರೀರ, ಬಲ ಕಣ್ಣಿನ ಹುಬ್ಬಿನ ಕೆಳಗೆ ಹಳೆ ಗಾಯದ ಗುರುತು ಇರುತ್ತದೆ.

Crime Reported in Mangalore Rural PS

ಪಿರ್ಯಾದಿದಾರರಾದ ಮಹಮ್ಮದ್ ಜಾಸ್ಮಿರ್ ಎಂಬವರು ತಂದೆ ಅಬ್ಬುಸಾಲಿ ಮತ್ತು ಅಣ್ಣ ನೌಫಲ್ ಎಂಬವರೊಂದಿಗೆ ವಾಮಂಜೂರು ಮಸೀದಿ ಬಳಿ ನೌಫಲ್ ಎಂಬ ಹೊಟೇಲ್ ನಡೆಸುತ್ತಿದ್ದು ಸದ್ರಿ ಹೊಟೇಲಿಗೆ ದಿನಾಂಕ: 06-12-2021 ರಂದು ರಾತ್ರಿ ಸುಮಾರು 9.30 ಗಂಟೆಗೆ ಉಳಾಯಿಬೆಟ್ಟು ನಿವಾಸಿ ಶರೀಫ್, ಪರಾರಿ ನಿವಾಸಿ ಉಬೈದುಲ್ಲಾ, ಗುಡ್ಡೆ ನಿವಾಸಿ ಫೈಝಲ್ ಎಂಬವರು ಬಂದು ಪಿರ್ಯಾದಿದಾರರನ್ನು ಕುರಿತು ಕೊಟ್ಟ ಸಾಲವನ್ನು ಕೇಳುತ್ತೀರಾ, ಎಂದು ಅವರ ಪೈಕಿ ಶರೀಫ್ ಎಂಬವನು ಪಿರ್ಯಾದಿದಾರರ ತಲೆಯ ಹಿಂಭಾಗಕ್ಕೆ, ಉಬೈದುಲ್ಲಾ ನು ಹೊಟೇಲ್ ನಲ್ಲಿದ್ದ ಚೇರ್ ನಿಂದ ಪಿರ್ಯಾದಿದಾರರ ಬೆನ್ನಿಗೆ, ಫೈಜಲ್ ನು ಪಿರ್ಯಾದಿದಾರರ ಮುಖಕ್ಕೆ ಕೈಯಿಂದ ಹೊಡೆದಿದ್ದು, ಪಿರ್ಯಾದಿದಾರರ ತಂದೆ ಮತ್ತು ಅಣ್ಣ ಜಗಳವನ್ನು ಬಿಡಿಸಲು ಬಂದಾಗ ಅವರನ್ನು ಕುರಿತು ಬೇವಾರ್ಸಿ, ರಂಡೇಮಕ್ಕಳೇ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿದ್ದು,  ಗಾಯಗೊಂಡ ಪಿರ್ಯಾದಿದಾರರು ಮಂಗಳೂರು ಕೊಲಾಸೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಠಾಣೆಗೆ ಬಂದು ದೂರು ನೀಡಿರುವುದಾಗಿದೆ.

Crime Reported in Kankanady Town PS

ಪಿರ್ಯಾದಿದಾರರಾದ ಪೊಲೀಸ್ ಉಪನಿರೀಕ್ಷಕರಾದ ಕೃಷ್ಣ. ಬಿ   ರವರು ದಿನಾಂಕ 07-12-2021 ರಂದು   ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಸುಮಾರು  13:00  ಗಂಟೆಗೆ ಯುವಕನೊಬ್ಬ ಗಾಂಜಾ ಸೇವಿಸುತ್ತಿದ್ದಾನೆ ಎಂಬುದಾಗಿ  ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯಂತೆ ಸಾರ್ವಜನಿಕ ಸ್ಥಳವಾದ ನಾಲ್ಯಪದವು ಬಸ್ಸು  ನಿಲ್ದಾಣದ ಬಳಿ ಬಂದಾಗ ಯುವಕನೊಬ್ಬನು  ನಿಂತು ಸಿಗರೇಟು ಸೇದುತ್ತಿದ್ದು,  ಸದ್ರಿ ಯುವಕನನ್ನು ಹತ್ತಿರ ಕರೆದು ವಿಚಾರಿಸಿದಲ್ಲಿ ಅವನು  ತನ್ನ ಹೆಸರು    ಭಗವಾನ್ ಪ್ರಾಯ:31  ವಾಸ: 10/95  ಮಹಮ್ಮಾಯಿ ದೇವಸ್ಥಾನದ ಬಳಿ   ಮುಗ್ರೋಡಿ  ಶಕ್ತಿನಗರ ಮಂಗಳೂರು  ಎಂಬುದಾಗಿ ತಿಳಿಸಿದನು., ಬಾಯಿಯಿಂದ ಗಾಂಜಾ ಸೇವನೆ ಮಾಡಿರುವ ವಾಸನೆ ಬರುತ್ತಿದ್ದುದರಿಂದ ಆವರನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸುವ ಸಲುವಾಗಿ   ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ ಆತನು ತಾವು ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿರುತ್ತಾರೆ. ಆದರೂ ಆವರು ಗಾಂಜಾ ಸೇವಿಸಿದ್ದು ದೃಡೀಕರಿಸುವರೇ ಖಚಿತಪಡಿಸಿಕೊಳ್ಳುವ ಸಲುವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಧೃಢಿಕರಣ ಪತ್ರವನ್ನು ನೀಡಿರುವುದರಿಂದ ಆತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Crime Reported in Ullal PS

ಪ್ರಕರಣದ ಫಿರ್ಯಾದಿದಾರರಾದ  ರೇವಣ ಸಿದ್ದಪ್ಪ  ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ದಿನಾಂಕ. 07-12-2021 ರಂದು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಖಚಿತ ಮಾಹಿತಿ ಮೇರೆಗೆ 11-30 ಗಂಟೆಯ ಸಮಯಕ್ಕೆ ಉಳ್ಳಾಲ  ಗ್ರಾಮದ , ಉಳ್ಳಾಲ ಬೀಚ್ ನಲ್ಲಿರುವ ಮರದ ಕೆಳಗೆ  ಒಬ್ಬ ಯುವಕನು ಯಾವುದೋ ಮಾದಕ ವಸ್ತು ಸೇವಿಸಿ ನಶೆಯ ಅಮಲಿನಲ್ಲಿ ತೂರಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದವನನ್ನು ಹಿಡಿದು ವಿಚಾರಿಸಿಲಾಗಿ, ಆತನ ಹೆಸರು ಆಕಾಶ್ ಎಂ ಕಾಂಚಾನ್ (24) ವಾಸ: ವ್ಯಾಘ್ರಚಾಮುಂಡೇಶ್ವರಿ ದೇವಸ್ಥಾನದ ದ್ವಾರದ ಎದುರು ಮನೆ, ಮೊಗವೀರಪಟ್ನ, ಉಳ್ಳಾಲ  ಗ್ರಾಮ ಮಂಗಳೂರು. ಇವನನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರಿಂದ ತಪಾಸಣೆಗೊಳಪಡಿಸಿದಾಗ ಇವನು ಮಾದಕ ವಸ್ತು ಗಾಂಜಾ ಸೇವನೆ  ಮಾಡಿರುವುದು ದೃಢಪಟ್ಟಿರುವ ಕಾರಣ ಇವರ ವಿರುದ್ಧ ದಾಖಲಿಸಿಕೊಂಡ ಪ್ರಕರಣದ ಸಾರಾಂಶ.

 

 

 

ಇತ್ತೀಚಿನ ನವೀಕರಣ​ : 07-12-2021 08:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080