ಅಭಿಪ್ರಾಯ / ಸಲಹೆಗಳು

Crime Reported in CEN Crime PS

ಪಿರ್ಯಾದಿದಾರರಾದ SHYAMSUNDAR ರವರು ದಿನಾಂಕ 08-02-2022 ರಂದು ಠಾಣೆಯಲ್ಲಿರುವ ಸಮಯ ಸುಮಾರು 12-55 ಗಂಟೆಗೆ  ಬಾತ್ಮಿದಾರರಿಂದ ಉರ್ವ ಸ್ಟೋರ್ ನ ಸುಂಕದಕಟ್ಟೆ ಬಳಿ ಯಾರೋ ಓರ್ವ ಯುವಕ ಯಾವುದೋ ಅಮಲು ವಸ್ತುವನ್ನು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ಮಾಹಿತಿ ನೀಡಿದಂತೆ ತಕ್ಷೀರು ಸ್ಥಳಕ್ಕೆ ದಾಳಿ ನಡೆಸಿ ನಶೆಯ ಅಮಲಿನಲ್ಲಿದ್ದ ಧನುಷ್ ಕುಮಾರ್ ಪ್ರಾಯ 20 ವರ್ಷ ಎಂಬಾತನನ್ನು ವಿಚಾರಿಸಿದ್ದಲ್ಲಿ  ಗಾಂಜಾವನ್ನು ಓಸಿಬಿ ಪೇಪರಿನಲ್ಲಿ ಹಾಕಿ ಸೇದಿರುವುದಾಗಿ ಒಪ್ಪಿಕೊಂಡಂತೆ ವಶಕ್ಕೆ ಪಡೆದು ಮಂಗಳೂರು ನಗರದ ಕುಂಟಿಕಾನದಲ್ಲಿರುವ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತನು ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಾಧಿಕಾರಿಯವರು ನೀಡಿದ ವೈದ್ಯಕೀಯ ಧೃಢಪತ್ರದ ಮೇರೆಗೆ ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

2) ಪಿರ್ಯಾದಿದಾರರು ಮಂಗಳೂರು ನಗರದ ಮರೋಳಿ ಯೂನಿಯನ್ ಬ್ಯಾಂಕ್ ಆಫ್  ಇಂಡಿಯಾದಲ್ಲಿ ಖಾತೆ ಯನ್ನು ಹೊಂದಿರುತ್ತಾರೆ. ದಿನಾಂಕ 08-02-2022 ರಂದು ವ್ಯಕ್ತಿಯೋರ್ವರು ಮಧ್ಯಾಹ್ನ 4 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಮೊಬೈಲ್ ನಂಬರ್ ಗೆ 8327710873 ನೇ ದರಿಂದ ಕರೆ ಮಾಡಿದ್ದು ಪಿರ್ಯಾದಿದಾರರು ಸ್ನ್ಯಾ   ಪ್ ಡೀಲ್ ಆನ್ ಲೈನ್ ಆಪ್ ನಲ್ಲಿ ಟೀ ಕಪ್ ಒಂದನ್ನು ಆರ್ಡರ್ ಮಾಡಿದ್ದು ಸದ್ರಿ ಸಂಸ್ಥೆಯಿಂದ ಕೆರೆ ಬಂದಿರುವುದಾಗಿ ಭಾವಿಸಿ ಅವರೊಂದಿಗೆ ಮಾತನಾಡಿದ್ದು  ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿಯು ಪಿರ್ಯಾದಿದಾರರಲ್ಲಿ ಕರೆಯನ್ನು ಹೋಲ್ಡ್ ನಲ್ಲಿ ಇರಿಸುವಂತೆ ಸೂಚಿಸಿ ಎರಡು ಲಿಂಕ್ ಹೊಂದಿರುವ ಸಂದೇಶವನ್ನು ಕಳುಹಿಸಿ ಸದ್ರಿ ಲಿಂಕ್ ಗಳ ಮುಖಾಂತರ ಪಿರ್ಯಾದಿದಾರರ ಡೆಬಿಟ್ ಕಾರ್ಡ್ ನಂಬರ್ ,ಸಿ.ವಿ.ವಿ ನಂಬರ್ ಹಾಗು ಒಟಿಪಿ ವಿವರಗಳನ್ನು ಪಿರ್ಯಾದಿದಾರರರಿಂದ ಪಡೆದುಕೊಂಡು ಪಿರ್ಯಾದಿದಾರರ ಯೂನಿಯನ್ ಬ್ಯಾಂಕ್ ಆಫ್  ಇಂಡಿಯಾದ ಖಾತೆ ಯಿಂದ ಹಂತ ಹಂತವಾಗಿ ಒಟ್ಟು 45,000/-ರೂ ಗಳನ್ನು ಯಾರೋ ಅಪರಿಚಿತ ವ್ಯಕ್ತಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿರುತ್ತಾರೆ. ಆದುದರಿಂದ ಪಿರ್ಯಾದಿದಾರರಿಗೆ ಲಿಂಕ್ ಗಳನ್ನು ಕಳುಹಿಸಿ ಅದರ ಮೂಲಕ ಪಿರ್ಯಾದಿದಾರ ಬ್ಯಾಂಕ್ ವಿವರಗಳನ್ನು ಪಡೆದು ಮೋಸದಿಂದ ತನ್ನ ಖಾತೆಗೆ ಹಣ ವರ್ಗಾಯಿಸಿಕೊಂಡಿರುವ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿರುತ್ತಾರೆ ಎಂಬಿತ್ಯಾದಿ .

 

Crime Reported in Kankanady Town PS

ಪಿರ್ಯಾದಿದಾರರಾದ Sanjay ರವರು ತಮ್ಮ ತಾಯಿಯೊಂದಿಗೆ ಜ್ಯೋತಿನಗರ, ಕುಲಶೇಖರ, ಪದವು ಗ್ರಾಮ, ಮಂಗಳೂರು ಎಂಬಲ್ಲಿ ವಾಸವಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದುದಾರ ತಾಯಿ ಶ್ರೀಮತಿ ಸವಿತಾ (50) ಎಂಬವರು ಕುಲಶೇಖರ ಹಾಲಿನ ಡೈರಿಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಸವಿತಾ ರವರು ಕಳೆದ ಸುಮಾರು  15 ದಿನಗಳಿಂದ ಅಸೌಖ್ಯದಲ್ಲಿದ್ದು ಮನೆಯಲ್ಲಿಯೆ ಇರುವುದಾಗಿದೆ. ದಿನಾಂಕ 07-02-2022 ರಂದು ಪಿರ್ಯಾದುದಾರರು ಕೆಲಸದ ನಿಮಿತ್ತ ಬೆಳಗ್ಗೆ 09:30 ಗಂಟೆಗೆ ಮನೆಯಿಂದ ಹೋಗಿದ್ದು ರಾತ್ರಿ 10:30 ರ ಸುಮಾರಿಗೆ ಮರಳಿ ಮನೆಗೆ ಬಂದಾಗ ಪಿರ್ಯಾದುದಾರರ ತಾಯಿಯು ಮನೆಯಲ್ಲಿ ಇಲ್ಲದೆ ಇರುವುದನ್ನು ನೋಡಿ ಅವರ ಮೊಬೈಲ್ ಗೆ ಕರೆ ಮಾಡಿದಾಗ ಅವರ ಮೊಬೈಲ್ ಮನೆಯಲ್ಲಿಯೇ ಇದ್ದು ಸುತ್ತಮುತ್ತಲು ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲಿಯು ಸಿಗದೇ ಕಾಣೆಯಾಗಿರುತ್ತಾರೆ. ಸವಿತಾ ರವರು  ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ಚೂಡಿದಾರ ಮತ್ತು ಕಪ್ಪು ಬಣ್ಣದ  ಪ್ಯಾಂಟ್ ದರಿಸಿದ್ದು  ಗೋದಿ ಮೈ ಬಣ್ಣ 5 ಅಡಿ 2 ಇಂಚು ಎತ್ತರವನ್ನು ಹೊಂದಿದ್ದು ಇವರನ್ನು ಪತ್ತೇ ಮಾಡಿ ಕೊಡಬೇಕಾಗಿ ಎಂಬಿತ್ಯಾದಿ.

Crime Reported in Traffic South PS

ಪಿರ್ಯಾದಿದಾರರಾದ NELSON KEVIN PINTO ರವರು ದಿನಾಂಕ :07-02-2022 ರಂದು ಮೋಟಾರ್ ಸೈಕಲ್ ನಂಬ್ರ:  KA-21-R-8317 ನೇದನ್ನು ಸವಾರಿ ಮಾಡಿಕೊಂಡು ವಾಮಂಜೂರು ಮಂಗಳಜ್ಯೋತಿ ಕಡೆಗೆ ಹೋಗಿ ವಾಪಾಸ್ಸು ಮನೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ಮದ್ಯಾಹ್ನ 1-20 ಗಂಟೆಗೆ ಮಂಗಳೂರು ತಾಲ್ಲೂಕು ತಿರುವೈಲ್ ಗ್ರಾಮದ ವಾಮಂಜೂರು ಚರ್ಚ್ ಸಭಾ ಭವನದ ಮುಂದುಗಡೆ ಡಾಮಾರು ರಸ್ತೆ ತಲುಪಿದಾಗ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಹಿಂಬದಿಯಿಂದ ಅಪರಿಚಿತ ಸ್ಕೂಟರ್ ವೊಂದರ ಸವಾರ ನು ಇಬ್ಬರು ಸಹ ಸವಾರನ್ನು ಕುಳ್ಳಿರಿಸಿಕೊಂಡು  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಹಿಂಬದಿ ಡಿಕ್ಕಿ ಪಡಿಸಿ ನಂತರ  ವಾಹನವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ ಈ ಅಪಘಾತದಿಂದ ಪಿರ್ಯಾದಿದಾರರಿಗೆ ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ ಅಲ್ಲಿ ಸೇರಿ ಜನರು ಪಿರ್ಯಾದಿದಾರರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ವಾಹನವೊಂದರಲ್ಲಿ ಕುಳ್ಳಿರಿಸಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Crime Reported in Moodabidre PS

ಪಿರ್ಯಾದಿದಾರರಾದ K NAGAKUMARA INDRA ರವರು ಮತ್ತು ಸಂಬಂಧಿಗಳಾದ ಕೆ. ಪ್ರಸನ್ನಕುಮಾರ, ಹರೀಶ್ ಜೈನ್, ಭರತ್ ರಾಜ್ ರವರು ಹಾಗೂ ಚಾಲಕನಾಗಿ ಧರಣೆಂದ್ರ ಕುಮಾರ ಕೆ.ಎ-20-ಪಿ-1306 ನೇ ನಂಬ್ರದ ಕಾರಿನಲ್ಲಿ ದಿನಾಂಕ: 04-12-2021 ರಂದು ಧರ್ಮಸ್ಥಳದ ಲಕ್ಷದೀಪೊತ್ಸವ ಕಾರ್ಯಕ್ರಮಕ್ಕೆ ತೆರಳಿದ್ದು ಕಾರ್ಯಕ್ರಮ ಮುಗಿಸಿಕೊಂಡು ವಾಪಾಸು ಕಾರ್ಕಳದಲ್ಲಿರುವ ಮನೆಗೆ ಬರುತ್ತಿರುವಾಗ ರಾತ್ರಿ ಸಮಯ ಸುಮಾರು 1.30 ಗಂಟೆಗೆ  ಕಾರಿನ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನೆಲ್ಲಿಕಾರಿನ ಬಸದಿ ಬಳಿ ತಲುಪುತ್ತಿದ್ದಂತೆ ರಸ್ತೆಯ ತೀರ ಎಡಬದಿಗೆ ಚಲಾಯಿಸಿಕೊಂಡು ಹೋಗಿ ರಸ್ತೆ ಬದಿಯ ತೋಡಿಗೆ ಇಳಿದು ಸದರಿ ತೋಡಿನ ಎಡ ಬದಿಗಿರುವ ಮಣ್ಣಿನ ಜರೆಗೆ ತಾಗಿಕೊಂಡು ಸುಮಾರು 50 ರಿಂದ 75 ಮೀಟರ್ ವರೆಗೂ ಚಲಿಸುತ್ತಾ ಬಂದ ಕಾರಣ ಕಾರಿನ ಚಾಲಕನ ಎಡಬದಿಯ ಸೀಟಿನಲ್ಲಿದ್ದ ಪಿರ್ಯಾದಿದಾರರ ತಲೆಗೆ ಗಂಬೀರ ರೀತಿಯ ಪೆಟ್ಟು ಹಾಗೂ ದೇಹದ ಇತರ ಭಾಗಗಳಿಗೆ ಗಾಯದ ನೋವುಗಳಾಗಿರುತ್ತವೆ, ಹಿಂಬದಿ ಸೀಟಿನಲ್ಲಿದ್ದ ಶ್ರೀ ಭರತ್ ರಾಜ್ ಇಂದ್ರ ರವರಿಗೂ ಗಾಯದ ನೋವುಗಳಾಗಿರುತ್ತವೆ ಹಾಗೂ ಕಾರಿನಲ್ಲಿದ್ದ ಇತರರಿಗೂ ಸಣ್ಣಪುಟ್ಟ ಗಾಯದ ನೋವುಗಳಾಗಿರುತ್ತವೆ. ಕಾರಿನ ಚಾಲಕರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೆಕಾಗಿ ಎಂಬಿತ್ಯಾದಿ.

Crime Reported in Bajpe PS

1) ಪಿರ್ಯಾದಿದಾರರಾದ Ganesh K.ರವರು  ದಿನಾಂಕ:07-02-2022 ರಂದು ಎಸ್ಈಝಡ್ ನಲ್ಲಿ  ಕೆಲಸ ಮುಗಿಸಿ  ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ19-ಈಎಲ್-7714 ನೇದನ್ನು ಚಲಾಯಿಸಿಕೊಂಡು ಮನೆ ಕಡೆಗೆ ಬರುತ್ತಿರುವಾಗ ಸಮಯ ಸುಮಾರು  14.30 ಗಂಟೆಗೆ ಮಂಗಳೂರು ತಾಲೂಕು ಬಜಪೆ ಗ್ರಾಮದ  ತಾರಿಕಂಬಳ ತಲುಪುತ್ತಿದ್ದಂತೆ, ತಾರಿಕಂಬಳ ಓಳ ರಸ್ತೆಯಿಂದ  ಮುಖ್ಯರಸ್ತೆಗೆ ಬೊಲೆರೋ  ಕಾರು ನಂಬ್ರ ಕೆಎ19-ಝಡ್-3345 ನೇದನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ,ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಎಡಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತ ಮತ್ತು ಬಲಕೈ ಬೆರಳಿಗೆ ತರಚಿದ  ಹಾಗೂ ಎದೆಗೆ ಗುದ್ದಿದ ಗಾಯವಾಗಿದ್ದು ಗಾಯಾಳು ಫಿರ್ಯಾದಿದಾರರು ಎ.ಜೆ ಆಸ್ಪತ್ರೆಯಲ್ಲಿ ಓಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

2) ಫಿರ್ಯಾದಿದಾರರಾದ Mammu B.ರವರ ಮೂರು ಜನ ಮಕ್ಕಳ ಪೈಕಿ ಮುಬೀನಾ (22 ವರ್ಷ) ಮತ್ತು ಬುಶ್ರಾ (21 ವರ್ಷ) ಎಂಬವರು ಮಂಗಳೂರು ತಾಲೂಕು, ಬಜಪೆ ಗ್ರಾಮದ, ಕೊಂಚಾರ್ ಎಂಬಲ್ಲಿರುವ ಅಬ್ದುಲ್ ಖಾದರ್ ಎಂಬವರ  ಬಾಡಿಗೆ ಮನೆಯಲ್ಲಿ ವಾಸವಿದ್ದವರು ದಿನಾಂಕ 07.02.2022 ರಂದು ರಾತ್ರಿ ಸುಮಾರು 00:30 ಗಂಟೆಗೆ ಊಟ ಮಾಡಿ ಮನೆಯಲ್ಲಿ ಮಲಗಿದ್ದವರು ದಿನಾಂಕ 07.02.2022 ರಂದು ಮುಂಜಾನೆ 02:00 ಗಂಟೆಗೆ ಫಿರ್ಯಾದಿದಾರರ ಕಿರಿಯ ಮಗಳು ಎದ್ದು ನೋಡಲಾಗಿ ಮನೆಯಲ್ಲಿ ಇಲ್ಲದೇ ಇದ್ದು ಇವರ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಕೂಡಾ ಮುಬೀನಾ ಮತ್ತು ಬುಶ್ರಾ ಇವರು ಪತ್ತೆಯಾಗಿರುವುದಿಲ್ಲ” ಎಂಬಿತ್ಯಾದಿ.

ಕಾಣೆಯಾದವರ ಚಹರೆ:

ಹೆಸರು :ಕುಮಾರಿ ಮುಬೀನಾ (22 ವರ್ಷ)

ಎತ್ತರ : 4 ಅಡಿ 2 ಇಂಚು

ಮೈ ಬಣ್ಣ : ಎಣ್ಣೆ ಕಪ್ಪು ಮೈ ಬಣ್ಣ

ಕೂದಲು : ಕಪ್ಪು ತಲೆ ಕೂದಲು

ಧರಿಸಿದ ಬಟ್ಟೆ : ಚೂಡಿದಾರ ಧರಿಸಿದ್ದು (ಬಿಳಿ ಬಣ್ಣದ ಟಾಪ್ ಮತ್ತು ನೀಲಿ ಬಣ್ಣದ ಪ್ಯಾಂಟ್)

ಮಾತನಾಡುವ ಬಾಷೆ: ಬ್ಯಾರಿ, ಹಿಂದಿ, ಇಂಗ್ಲೀಷ್, ತುಳು, ಕನ್ನಡ ಭಾಷೆ ಮಾತನಾಡುತ್ತಾರೆ.

 

ಹೆಸರು :ಕುಮಾರಿ ಬುಶ್ರಾ (21 ವರ್ಷ)

ಎತ್ತರ : 4 ಅಡಿ 5 ಇಂಚು

ಮೈ ಬಣ್ಣ : ಬಿಳಿ ಮೈ ಬಣ್ಣ

ಕೂದಲು : ಕಪ್ಪು ತಲೆ ಕೂದಲು

ಧರಿಸಿದ ಬಟ್ಟೆ : ಚೂಡಿದಾರ ಧರಿಸಿದ್ದು (ಕಂದು ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್)

ಮಾತನಾಡುವ ಬಾಷೆ: ಬ್ಯಾರಿ, ತುಳು, ಕನ್ನಡ ಭಾಷೆ ಮಾತನಾಡುತ್ತಾರೆ.

ಇತ್ತೀಚಿನ ನವೀಕರಣ​ : 08-02-2022 08:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080