ಅಭಿಪ್ರಾಯ / ಸಲಹೆಗಳು

Crime Reported in : Mangalore North PS                                                               

ಪಿರ್ಯಾದಿದಾರರಾದ RAJESH ACHARYA ರವರು ಭವಂತಿ ಸ್ಟ್ರೀಟ್ ಎಂಬಲ್ಲಿ ಪ್ರಭಾಕರ್ ಶೇಟ್ ಎಂಬ ಜುವೆಲರಿ ಅಂಗಡಿಯನ್ನು ಹೊಂದಿದ್ದು, ಇದರಲ್ಲಿ ಬೆಳ್ಳಿ ಆಭರಣಗಳ ಕೆಲಸ ಮಾಡಿಕೊಂಡಿರುತ್ತಾರೆ. ತಾರೀಖು 05.03.2022 ರಂದು ಬೆಳಗ್ಗೆ ಅಂಗಡಿಗೆ ಬಂದು ರಾತ್ರಿ ಮನೆಗೆ ಹೋಗಿದ್ದು ಆ ಬಳಿಕ 02 ದಿನ ಅಂಗಡಿ ತೆರೆಯದೇ ಮನೆಯಲ್ಲಿದ್ದುವರು ಈ ದಿನ ದಿನಾಂಕ 08.03.2022 ರಂದು ಬೆಳಗಿನ ಜಾವ ಸುಮಾರು 02.30 ಗಂಟೆಗೆ ಮಹಾಲಕ್ಷ್ಮಿ ಜುವಲರಿ ಶಾಪ್ ನ ಸೆಕ್ಯೂರಿಟಿ ಗಾರ್ಡ್ ಪಿರ್ಯಾದಿದಾರರಿಗೆ ಕರೆ ಮಾಡಿ ಮಾಹಿತಿ ನೀಡಿದಂತೆ ಪಿರ್ಯಾದಿದಾರರು ಬೆಳಗಿನ ಜಾವ ಅಂಗಡಿಗೆ ಬಂದು ನೋಡಿದಾಗ ಯರೋ ಕಳ್ಳರು ಪಿರ್ಯಾದಿದಾರರ ಅಂಗಡಿಯ ಹಿಂಬದಿಯ ಮೇಲ್ಚಾವಣಿಯ ಹಂಚನ್ನು ತೆಗೆದು ಒಳಗಡೆ ಪ್ರವೇಶಿಸಿ ಅಂಗಡಿಯ ಒಳಗಿನ ಶೋಕೇಸ್ ನಲ್ಲಿ ಇಟ್ಟಿದ್ದ ಸುಮಾರು 60.000/- ಸಾವಿರ ಬೆಲೆಯ ವಿವಿಧ ನಮೂನೆಯ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿರುತ್ತಾರೆ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

 

Crime Reported in Mangalore East Traffic PS                

ಪಿರ್ಯಾದಿದಾರರಾದ ವಾಸುದೇವ್ ನಾಯಕ್ ರವರಿಗೆ ಅವರ ಅಕ್ಕ ಪದ್ಮಾವತಿ ಎಂಬುವರು ದೂರವಾಣಿ ಕರೆಮಾಡಿ ಅವರ ಚಿಕ್ಕಪ್ಪ ರಾಮ್ ದಾಸ್ ನಾಯಕ್(67) ರವರು ನಿನ್ನೆ ದಿನಾಂಕ: 07-03-2022 ರಂದು ಮಂಗಳೂರು ಸ್ಟೇಟ್ ಬ್ಯಾಂಕ್ ಕಡೆಯಿಂದ ತಮ್ಮ ಮನೆಯಿರುವ ಮಾರ್ಗನ್ಸ್ ಗೇಟ್ ಕಡೆಗೆ ಖಾಸಗಿ ಬಸ್ ರೂಟ್ ನಂಬ್ರ: 27 ನೊಂದಣಿ ಸಂಖ್ಯೆ; KA-19-AB-0229 ನೇಯದರಲ್ಲಿ ಬರುತ್ತಾ ಸದ್ರಿ ಬಸ್ ಮಾರ್ನಮಿಕಟ್ಟೆ ಸರ್ಕಲ್ ಬಳಿ ಸಮಯ  ರಾತ್ರಿ 7-45 ಗಂಟೆ ಸುಮಾರಿಗೆ ತಲುಪಿದ್ದು ಆಗ ಅವರು ಬಸ್ಸಿನಿಂದ ಇಳಿಯುತ್ತಿರುವಾಗ ಸದ್ರಿ ಬಸ್ ಚಾಲಕನು ದುಡುಕುತನ, ನಿರ್ಲಕ್ಷತನದಿಂದ, ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಏಕಾಏಕಿಯಾಗಿ ಚಲಾಯಿಸಿದ ಪರಿಣಾಮ ಮೆಟ್ಟಿಲಿನಿಂದ ಇಳಿಯುತ್ತಿದ್ದ ರಾಮದಾಸ್ ನಾಯಕ್ (67)ರವರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ಗೌತಮ್ ಎಂಬುವರು ಗಾಯಾಳು ರಾಮದಾಸ್ ನಾಯಕ್ (67) ರವರ ಮೊಬೈಲ್ ನಿಂದ ಕರೆಮಾಡಿ ತಿಳಿಸಿರುವ ಬಗ್ಗೆ ಪಿರ್ಯಾದಿದಾರರಿಗೆ ಹೇಳಿರುತ್ತಾರೆ,  ಆಗ ಪಿರ್ಯಾದಿದಾರರು ಆಸ್ಪತ್ರಗೆ ತೆರಳಿದ್ದು ಅಲ್ಲಿ ಅವರ ಚಿಕ್ಕಪ್ಪ ರಾಮದಾಸ್ ನಾಯಕ್(67) ರವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ವೈದ್ಯರಲ್ಲಿ ವಿಚಾರಿಸಿದಾಗ ಅವರಿಗೆ ತಲೆಗೆ, ಎಡಕೈ ಮೊಣಗಂಟಿಗೆ ಗಂಭೀರವಾದ ಹಾಗೂ ಎರಡೂ ಕಾಲುಗಳಿಗೆ ತರಚಿದ ಗಾಯಗಳಾಗಿರುವ ಬಗ್ಗೆ ತಿಳಿಸಿರುತ್ತಾರೆ, ಸದ್ರಿ ಬಸ್ ಚಾಲಕನ ಹೆಸರು ಚೇತನ್ ಎಂಬುದಾಗಿ ನಂತರ ತಿಳಿದು ಬಂದಿದ್ದು ಈ ಅಪಘಾತಕ್ಕೆ ಕಾರಣವಾದ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ.

 

Crime Reported in Mangalore South PS                                   

ಪಿರ್ಯಾದಿದಾರರಾದ ಕೈರುನ್ನೀಸ ರವರ ಗಂಡನಾದ ನಿಸಾಮುದ್ದೀನ್ ಕೆ ಟಿ ಪ್ರಾಯ 29 ವರ್ಷ ರವರು ಮಂಗಳೂರು ನಗರದ ಬಂದರಿನ ಚಿಕನ್ ಶಾಪ್ ನಲ್ಲಿ ಸುಮಾರು 5 ತಿಂಗಳಿನಿಂದ ಕೆಲಸ ಮಾಡುತ್ತಿದ್ದವರು ಎಂದಿನಂತೆ  ದಿನಾಂಕ 25-02-2022 ರಂದು ಮನೆಯಿಂದ ಬೆಳಿಗ್ಗೆ 07.00 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗಿರುತ್ತಾರೆ  ನಿಸಾಮುದ್ದೀನ್  ರವರು  ಕೆಲವೊಮ್ಮೆ ಕೆಲಸಕ್ಕೆ ಹೋದರೆ 01 ವಾರದ ತನಕ ಮನೆಗೆ ಬಾರದೆ ಇದ್ದುದ್ದರಿಂದ ಪಿರ್ಯಾದಿದಾರರು ಅವರು ಬರುತ್ತಾರೆ ಎಂದು ತಿಳಿದುಕೊಂಡಿದ್ದು  ಆದರೆ 10 ದಿನಗಳಿಂದ ತನ್ನ ಗಂಡ ಈ ದಿನದ ವರೆಗೂ ಮನೆಗೆ ಬಾರದೆ ಇದ್ದು, ಮಂಗಳೂರು ನಗರದ ಕೆಲವೊಂದು ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ, ನೆರೆಕೆರೆಯವರನ್ನು ಹಾಗೂ ಸಂಭಂಧಿಕರನ್ನು, ಪರಿಚಯದ ಸ್ನೇಹಿತರನ್ನು ವಿಚಾರಿಸಿದಲ್ಲಿ ಯಾವುದೇ ಮಾಹಿತಿ ಈ ತನಕ ದೊರೆತಿರುವುದಿಲ್ಲ, ಅವರ ಹತ್ತಿರ ಇದ್ದ ಮೊಬೈಲ್ ಪೋನ್ ಗೆ ಕರೆ ಮಾಡಿದಾಗ ಪೋನ್ ಕೂಡಾ ಸ್ವಿಚ್ ಆಫ್ ಆಗಿರುತ್ತದೆ.  ಆದ್ದರಿಂದ ಕಾಣೆಯಾದ ನಿಸಾಮುದ್ದೀನ್ ಕೆ ಟಿ [29] ರವರನ್ನು ಪತ್ತೆಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿ. ಎಂಬಿತ್ಯಾದಿಯಾಗಿರುತ್ತದೆ.

 

ಕಾಣೆಯಾದ ನಿಸಾಮುದ್ದೀನ್  ಕೆ ಟಿ  ರವರ ಚಹರೆ:

ಹೆಸರು: ನಿಸಾಮುದ್ದೀನ್  ಕೆ ಟಿ 

ಪ್ರಾಯ:29 ವರ್ಷ

ಎತ್ತರ: 5 ಅಡಿ,  ಕಪ್ಪು  ಮೈ ಬಣ್ಣ

ಉದ್ಯೋಗ: ಬಂದರಿನ ಚಿಕನ್ ಶಾಪ್ ನಲ್ಲಿ ಕೆಲಸ

ಗುರುತು ಮಚ್ಚೆ: ಮುಖದ ಬಲ ಕಣ್ಣಿನ ಕೆಳಗಡೆ ಕಪ್ಪು ಮಚ್ಚೆ ಇರುತ್ತದೆ

ಧರಿಸಿದ ಊಡುಪು: ಹಳದಿ ಬಣ್ಣ ದ ಟೀ ಶರ್ಟ್, ಕಪ್ಪು ಬಣ್ಣ ದ ಜೀನ್ಸ್ ಪ್ಯಾಂಟ್

 ಮಾತನಾಡುವ ಭಾಷೆಗಳು : ಮಲಯಾಳಂ, ಕನ್ನಡ,  ಹಿಂದಿ,  ತುಳು,

ಇತ್ತೀಚಿನ ನವೀಕರಣ​ : 08-03-2022 07:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080