ಅಭಿಪ್ರಾಯ / ಸಲಹೆಗಳು

Crime Reported in Mangalore South PS

ಕೇಂದ್ರ ಸರ್ಕಾರವು ಕಾಣೆಯಾದ ಮತ್ತು ಶೋಷಿತ ಮಕ್ಕಳ ಕೇಂದ್ರವನ್ನು (National Centre for Missing and Exploited Children)  ಸೈಬರ್ ಟಿಪ್ ಲೈನ್ ದೂರನ್ನು ಸಿ.ಐ.ಡಿ. ಬೆಂಗಳೂರು ರವರು ಸ್ವೀಕರಿಸಿ ದಿನಾಂಕ 07-02-2022 ರ ಪತ್ರದೊಂದಿಗೆ ಸೈಬರ್ ಅಪರಾಧ ಪೊಲೀಸ್ ಠಾಣೆ, ಮಂಗಳೂರು ನಗರ ರವರಿಗೆ ಕಳುಹಿಸಿಕೊಟ್ಟಿದ್ದನ್ನು ಪರಿಶೀಲಿಸಲಾಗಿ ದಿನಾಂಕ 09-01-2021 ರಂದು ಮಗುವಿನ ಅಶ್ಲೀಲ ವಿಡಿಯೋವನ್ನು RAMBABU RABIDAS ಎಂಬವರು ಡೌನ್ ಲೋಡ್ ಮಾಡಿ ವಾಟ್ಸ್ ಆಪ್ ಮೂಲಕ ಕಳುಹಿಸಿ ಪ್ರಸಾರ ಮಾಡಿದ ಬಗ್ಗೆ ಮಾಹಿತಿ ಇರುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಗುವಿನ ಅಶ್ಲೀಲತೆ ವಿಡಿಯೋ, ಆರೋಪಿಯ ಮೊಬೈಲ್ ನಂಬರ್ ಒಳಗೊಂಡಿರುವುದು ಕಂಡು ಬರುತ್ತದೆ. ಆರೋಪಿಯ ಹೆಸರು ವಿಳಾಸ Ramdas Rabidas, MANGALORE –ಎಂಬುದಾಗಿದ್ದು  ಈ  ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

                          

Crime Reported in Mangalore North PS                                         

ಪ್ರಕರಣದ ಪಿರ್ಯಾದಿದಾರರಾದ ಎಸ್. ಪ್ರಶಾಂತ ಕುಮಾರ ರವರು M/s Griffin Intellectual Properties Private Services Pvt.Ltd ಕಂಪನಿಯ ಇನ್ವೇಸ್ಟಿಗೇಷನ್ ಆಫೀಸರ್ ಆಗಿದ್ದು, ಪಿರ್ಯಾದಿ ಸಂಸ್ಥೆಯು M/s Apple INC ಗೆ ಸಂಬಂಧಪಟ್ಟ Apple ಬಿಡಿ ಭಾಗಗಳ ಅಧಿಕೃತ ಮಾರಾಟ ಸಂಸ್ಥೆಯಾಗಿದ್ದು, ಈ ಅಧಿಕೃತ ಕಂಪನಿಯ ಬಿಡಿ ಭಾಗಗಳನ್ನು ಆರೋಪಿಗಳಾದ 01)ಮಂಗಳೂರಿನ ಮೇಘಾ ಮಾರ್ಕೆಟ್ ನಲ್ಲಿರುವ ಕಮಲ್ ಮೊಬೈಲ್ಸ್ ಹಾಗೂ 2)ರಾಜಲಕ್ಷ್ಮಿ ಮೊಬೈಲ್ಸ್, 3) ಮಂಗಳೂರಿನ ಸಿಟಿ ಮಾರ್ಕೆಟ್ ನಲ್ಲಿರುವ ಜೆ.ಜೆ ಮೊಬೈಲ್ಸ್, ಹಾಗೂ 4) ಪ್ರಗತಿ ಮೊಬೈಲ್ಸ್ ನವರು ಅಪಲ್ ಬಿಡಿ ಭಾಗಗಳನ್ನು ಪಿರ್ಯಾದಿ ಸಂಸ್ಥೆಯ ಹೆಸರಿನಲ್ಲಿ ನಕಲಿಯಾಗಿ ಮಾರಾಟ ಮಾಡಿ ಅಧಿಕೃತ ಪಿರ್ಯಾದಿ ಸಂಸ್ಥೆಗೆ ನಷ್ಟವನ್ನು  ಉಂಟು ಮಾಡುವ ಉದ್ದೇಶದಿಂದ ಪಿರ್ಯಾದಿ ಸಂಸ್ಥೆಗೆ ಮೋಸ ಮಾಡಿ ಮಾರಾಟ ಮಾಡುತ್ತಿರುವುದಾಗಿದೆ. ಎಂಬಿತ್ಯಾದಿಯಾಗಿದೆ.

 

Crime Reported in Mangalore West Traffic PS

ದಿನಾಂಕ: 08-04-2022 ರಂದು ಬೆಳಿಗ್ಗೆ 08-05 ಗಂಟೆ ಸಮಯಕ್ಕೆ ಫಿರ್ಯಾದಿದಾರರು ತನ್ನ ಸ್ನೇಹಿತ ಪ್ರತೀಕ್ ರವರ ಜೊತೆಯಲ್ಲಿ ದ್ವಿ ಚಕ್ರ ವಾಹನ ನಂಬ್ರ  ಕೆಎ 19 ಇಎ 4352ನೇದರಲ್ಲಿ ಸಹ ಸವಾರಳಾಗಿ ಲೇಡಿಹಿಲ್  ಲಾಲ್ ಭಾಗ್ ಕಡೆಯಿಂದ ಬಳ್ಳಾಲ್ ಭಾಗ್ ಕಡೆಗೆ ಪ್ರಯಾಣಿಸಿಕೊಂಡು ಬರುತ್ತಿರುವಾಗ ಮಂಗಳೂರು ತಾಲೂಕು ಲಾಲ್ ಭಾಗ್ ಸಿಗ್ನಲ್ ಬಳಿ ಕೆಎ 19ಎಂಕೆ 3689   ನೇ ಕಾರಿನ  ಚಾಲಕನು ಯಾವುದೇ ಸೂಚನೆಯನ್ನು ನೀಡದೇ ಬಳ್ಳಾಲ್ ಭಾಗ್ ಕಡೆಯಿಂದ ಬಿಜೈ ಕೆ.ಎಸ್.ಆರ್.ಟಿ.ಸಿ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿ ಫಿರ್ಯಾದಿದಾರರು ಸಹ ಸವಾರರಾಗಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ  ಮೋಟಾರ್ ಸೈಕಲ್ ಸವಾರ, ಹಾಗೂ  ಸಹಸವಾರಳು ಕಾರಿನ ಬಾನೆಟ್ ಮೇಲೆ ಬಿದ್ದಿದ್ದು, ದ್ವಿ ಚಕ್ರ ವಾಹನ ರಸ್ತೆಗೆ ಬಿದ್ದಿರುತ್ತದೆ. ಈ ಅಪಘಾತದಿಂದ ಪ್ರತೀಕ್ ನ ಮುಖಕ್ಕೆ, ಹಣೆಗೆ, ಬಲಕಾಲಿನ ಪಾದಕ್ಕೆ, ಬಲಕಾಲಿನ ಮಂಡಿಗೆ ರಕ್ತ ಗಾಯವಾಗಿರುತ್ತದೆ. ಫಿರ್ಯಾದಿದಾರರಿಗೆ ಬಲಕೈಗೆ, ಮೊಣಕೈಗೆ, ಎರಡು ಮಂಡಿಗೆ, ಬಲ ಕಾಲಿನ ಕೋಲು ಕಾಲಿಗೆ ತರಚಿದ ನಮೂನೆಯ ರಕ್ತ ಗಾಯವಾಗಿರುತ್ತದೆ. ಗಾಯಾಳುಗಳು ಪ್ರಸ್ತುತ  ಮಂಗಳೂರು ಫಾದರ್ ಮುಲ್ಲರ್ಸ್ ಅಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ಈ ಅಪಘಾತಕ್ಕೆ ಕಾರು ನಂಬ್ರ ಕೆಎ 19 ಎಂಕೆ 3689 ನೇದರ ಚಾಲಕ ಅಮಿತ್ ಸುವರ್ಣರವರ ತೀರ ನಿರ್ಲಕ್ಷನತನ ಹಾಗೂ ಅಜಾಗರೂಕತೆಯ ಚಾಲನೆಯೇ  ಕಾರಣವಾಗಿರುತ್ತದೆ ಎಂಬಿತ್ಯಾದಿಯಾಗಿದೆ.

 

ಇತ್ತೀಚಿನ ನವೀಕರಣ​ : 08-04-2022 07:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080