ಅಭಿಪ್ರಾಯ / ಸಲಹೆಗಳು

Crime Reported in : Moodabidre PS      

ದಿನಾಂಕ: 29-05-2022 ರಂದು ಪಿರ್ಯಾದಿ NAVAZ  ತನ್ನ ಬಾಬ್ತು ಮೋಟಾರ್ ಸೈಕಲ್ ನಂ: KA-70-H-3273ನೇದರಲ್ಲಿ ತನ್ನ ತಾಯಿಯಾವರಾದ ಶ್ರೀಮತಿ ನಫೀಸಾ ರವರನ್ನು ಸಹ ಸವಾರಳಾನ್ನಾಗಿ ಕುಳ್ಳಿರಿಸಿಕೊಂಡು ತನ್ನ ಮನೆಯಾದ ಬೆಳ್ತಂಗಡಿ ತಾಲೂಕು ಕೋಲ್ಪದ ಬಯಲಿನಿಂದ ಬೆಳುವಾಯಿಯಲ್ಲಿ ನಡೆಯಲಿರುವ ಸಂಬಂಧಿಕರ ಮದುವೆ ಕಾರ್ಯಕ್ರಮದ ಬಗ್ಗೆ ಹೋರಟಿದ್ದು, ಮೂಡಬಿದ್ರೆಯ ಸೋನ್ಸ್ ಫಾರ್ಮ್ ಹತ್ತಿರ ತಲುಪುತ್ತಿದ್ದಂತೆ ಸಮಯ ಸುಮಾರು 13.15 ಗಂಟೆಯ ಸಮಯಕ್ಕೆ ಮೂಡಬಿದ್ರೆಯಿಂದ ಬೆಳುವಾಯಿ ಕಡೆಗೆ ಹಿಂದಿನಿಂದ ಬಂದ KA-19-Q-0606 ಮೋಟಾರು ಸೈಕಲ್ ಸವಾರ ಸ್ಟೀಬರ್ಡ್  ಡಿಸೋಜಾ ಎಂಬವರು ತನ್ನ ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್‌ನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಹಿಂಬದಿ ಸವಾರರಾದ ಪಿರ್ಯಾದಿದಾರರ ತಾಯಿಯವರು ರಸ್ತೆಗೆ ಬಿದ್ದ ಪರಿಣಾಮ ಮುಖಕ್ಕೆ ತೀವ್ರತರವಾದ ಜಜ್ಜಿದ ನಮೂನೆಯ ರಕ್ತಗಾಯವಾಗಿರುತ್ತದೆ, ಗಾಯಾಳುವನ್ನು ಹತ್ತಿರದ ಮೂಡಬಿದ್ರೆ ಮೌಂಟ್ ರೋಸಾರಿಯೊ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹಿಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

Crime Reported in : Mulki PS                                                

ದಿನಾಂಕ: 07-06-2022 ರಂದು ಮುಲ್ಕಿ ಪೊಲೀಸ್ ಠಾಣೆಯ ಹೆಚ್ ಸಿ  ಜಯರಾಮ ರವರು ಹೊಯ್ಸಳ ಕರ್ತವ್ಯದಲ್ಲಿರುವ ಸಮಯ ಸುಮಾರು 16-06 ಗಂಟೆಗೆ ಕಿನ್ನಿಗೋಳಿ ಮಾರ್ಕೆಟ್ ಬಳಿ ಓರ್ವ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟಕ್ಕಾಗಿ ಹಣವನ್ನು ಸಂಗ್ರಹಿಸುತ್ತಿರುವುದಾಗಿ ಮಾಹಿತಿ ಬಂದಂತೆ ಸದ್ರಿ ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಮಾರ್ಕೆಟ್ ಬಳಿಗೆ ತೆರಳಿ 16-30 ಗಂಟೆಗೆ ಪರಿಶೀಲಿಸಿದಾಗ ಸಾರ್ವಜನಿಕ ಸ್ಥಳದಲ್ಲಿ ಶ್ರೀನಿವಾಸ (50) ವಾಸ: ಕಾಪಿಕಾಡು ಮನೆ, ಕೊಯಿಕುಡೆ ಅಂಚೆ, ಮಂಗಳೂರು ತಾಲೂಕು ಎಂಬಾತನು ಮಟ್ಕಾ ಜೂಜಾಟಕ್ಕೆ ಚೀಟಿ ಬರೆಯುತ್ತಾ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದು ಕಂಡು ಬಂದಿದ್ದು, ಮಟ್ಕಾ ಜೂಜಾಟಕ್ಕೆ ಸಂಗ್ರಹಿಸಿದ ನಗದು ಹಣ ರೂಪಾಯಿ 1400/-, ಮಟ್ಕಾ ಚೀಟಿ-01, ಬಾಲ್ ಪಾಯಿಂಟ್ ಪೆನ್ -01 ಇವುಗಳನ್ನು ಸ್ವಾಧೀನಪಡಿಸಿ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ವರದಿಯೊಂದಿಗೆ ಹಾಜರುಪಡಿಸಿರುವುದಾಗಿದೆ ಎಂಬಿತ್ಯಾದಿ.

 

Crime Reported in : Moodabidre PS                                                       

ದಿನಾಂಕ: 06-06-2022 ರಂದು ಪಿರ್ಯಾದಿ PRAKASH PRABHU ಹಿರಿಯ ಮಗಳಾದ ಪ್ರಕೃತಿ ಪಿ ಪ್ರಭು ಎಂಬುವರು ಪಿರ್ಯಾದಿದಾರರ ಕಿರಿಯ ಮಗಳಾದ ಪ್ರಣತಿ ಪ್ರಭು ಎಂಬುವವಳಿಗೆ ಮನೆಯಿಂದ ಟ್ಯೂಷನ್ ಕೋಡಿಸುವರೆ ಕಸರುಗದ್ದೆಯಲ್ಲಿರುವ ಪೂರ್ಣಿಮ ಪ್ರಭು ನಡೆಸುಕೊಂಡಿರುವ ಟೋಶನ್ ಕ್ಲಾಸ್ ಗೆ ಕೆಎ-19-ಹೆಚ್‌ಜೆ-0602 ಸ್ಕೂಟರ್  ನೇದರಲ್ಲಿ  ಕರೆದುಕೊಂಡು ಹೋಗಿರುತ್ತಾರೆ, ನಂತರ ಟ್ಯೂಷನ್ ಕ್ಲಾಸ್ ಬಳಿ ಪ್ರಣತಿ ಪ್ರಭು ವಳನ್ನು ಅಲ್ಲಿಯೇ ಬಿಟ್ಟು ವಾಪಾಸ್ಸು ಮನೆಗೆ ಬರುವ ಸಮಯ ಸುಮಾರು ಸಂಜೆ 05.00 ಗಂಟೆಗೆ ಕೆಸರುಗದ್ದೆಯ ಆಟೋ ಸ್ಟಾಂಡ್ ಬಳಿ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಮೂಡಬಿದ್ರೆ ಕಡೆಯಿಂದ ಬೆಳುವಾಯಿ ಕಡೆಗೆ ಬರುತ್ತಿದ್ದ ಕೆಎ-21-ಎಸ್-708 ನೇ ಸವಾರನಾದ ಶಾಹಿಲ್ ಎಂಬುವರು ಮೋಟಾರು ಸೈಕಲ್ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಮಗಳಾದ ಪ್ರಕೃತಿ ಪಿ ಪ್ರಭು ಳು ರಸ್ತೆಯ  ಮಧ್ಯೆ ಬಿದ್ದಿದ್ದು ಈ ರಸ್ತೆ ಅಪಘಾತದ ಪರಿಣಾಮ ತಲೆಗೆ ಗಂಬೀರ ಸ್ವರೂಪದ ಗಾಯ ಹಾಗೂ ಕೈ ಕಾಲುಗಳಿಗೆ ತರಚಿದ ನಮೂನೆಯ ಗಾಯಗಳಾಗಿದ್ದು ಚಿಕತ್ಸೆಯ ಬಗ್ಗೆ ಮೂಡಬಿದರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿ ಅಲ್ಲಿಯ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಎಂಬಿತ್ಯಾದಿ.

Crime Reported in : Bajpe PS

“ಪಿರ್ಯಾದು Musabba ದಿನಾಂಕ 06-06-2022 ರಂದು ತನ್ನ ಬಾಬ್ತು ಕೆ ಎ 18 ಇ ಜೆಡ್ 3917 ನೇಯ ದ್ವಿಚಕ್ರ ವಾಹನದಲ್ಲಿ ಮನೆ ಕಡೆಗೆ ಅಂದರೆ ಪೆರ್ಮುದೆ ಕಡೆಯಿಂದ ಬಜಪೆ ಕಡೆಗೆ ಬರುತ್ತಿರುವಾಗ ರಾತ್ರಿ  ಸುಮಾರು 8-15 ಗಂಟೆಗೆ ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ವಿಜಯ ವಿಠ್ಠಲ ಭಜನಾ ಮಂದಿರದ ಬಸ್ ಸ್ಟಾಪ್  ಬಳಿ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಕಿನ್ನಿಪದವು ಕಡೆಯಿಂದ ನಂಬ್ರ ತಿಳಿಯದ ಕಾರ್ ಒಂದನ್ನು ಅದರ ಚಾಲಕ  ಅತೀವೇಗ ಹಾಗೂ ಅಜಾಗರುಕತೆಯಿಂದ ತೀರಾ ಬಲ ಬದಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮೊಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಬಲ ಕಾಲಿನ ಬೆರಳುಗಳಿಗೆ, ತಿವ್ರ ತರಹದ ಗಾಯಗಳಾಗಿದ್ದು ನಂತರ ಪಿರ್ಯಾದುದಾರರನ್ನು ಒಂದು ಕಾರಿನಲ್ಲಿ ಮಂಗಳೂರಿನ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ  ದಾಖಲಿಸಿರುತ್ತಾರೆ. ಅಲ್ಲದೆ ಅಪಘಾತ ಪಡಿಸಿದ ವಾಹನ ಚಾಲಕನು ಅಪಘಾತದ ಮಾಹಿತಿಯನ್ನು ಪೊಲೀಸರಿಗೆ ತಿಳಿಸದೇ, ಗಾಯಾಳುವಿನ ಆರೈಕೆ ಮಾಡದೇ ಸ್ಥಳದಿಂದ ಪರಾರಿಯಾಗಿರುವುದಾಗಿದೆ.ಎಂಬಿತ್ತ್ಯಾದಿ.

ಇತ್ತೀಚಿನ ನವೀಕರಣ​ : 08-06-2022 07:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080