ಅಭಿಪ್ರಾಯ / ಸಲಹೆಗಳು

Crime Reported in Kavoor PS

ದಿನಾಂಕ: 08.10.2021 ರಂದು ಪಿರ್ಯಾದಿ PRATIBHA K H PSIದಾರರು ಇಲಾಖಾ ವಾಹನದಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಸುಮಾರು 00:05 ಗಂಟೆಗೆ ವಾಮಂಜೂರು ಆಶ್ರಯನಗರದ ಬಳಿಯಿರುವ ಮೈದಾನದ ಹತ್ತಿರ ಅನುಮಾನಸ್ಪಾದ ರೀತಿಯಲ್ಲಿ 1)ಮಹಮ್ಮದ್ ಮುಸ್ತಾಫ, 2) ಮೊಹಮ್ಮದ್ ರಿಜ್ವಾನ್ 3)ಮಹಮ್ಮದ್ ಶಾರೂಕ್, 4)ನಿಜಾಮುದ್ದೀನ್, 5)ದಾವೂದ್ ಹಕೀಂ ಎಂಬುವರು ಯಾವುದೋ ಮಾದಕ ಸೇವನೆ ಮಾಡುತ್ತಿದ್ದ ಬಗ್ಗೆ ಕಂಡು ಬಂದಿದ್ದು. ಸದ್ರಿಯವರನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆ ಬಗ್ಗೆ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ವೈದ್ಯಾಧಿಕಾರಿಯವರು ಪರೀಕ್ಷಿಸಿ ಮಹಮ್ಮದ್ ಶಾರೂಕ್ ಎಂಬವನು ಗಾಂಜಾ ಸೇವನೆ ಮಾಡಿರುವುದಾಗಿ POSITIVE ಧೃಡಪತ್ರ ನೀಡಿರುವ ಮೇರೆಗೆ ಸದ್ರಿ ಆರೋಪಿತನ ಮೇಲೆ ಎನ್.ಡಿ.ಪಿ.ಎಸ್ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Crime Reported in Moodabidre PS

ಪಿರ್ಯಾದಿ NAVEEN KUMAR ದಾರರು ದಿನಾಂಕ: 08-10-2021 ರಂದು ಕೆಲಸಕ್ಕೆ ಹೊರಟು ತನ್ನ ಬಾಬ್ತು ಸ್ಕೂಟರಿನಲ್ಲಿ ಮೂಡಬಿದ್ರೆ ಕಡೆಯಿಂದ ಕೊಡಂಗಲ್ಲು ಕಡೆಗೆ ವೇಣೂರು ರಸ್ತೆಯಲ್ಲಿ ಹೋಗುತ್ತಾ, ಮೂಡಬಿದ್ರೆ ತಾಲೂಕು ಪ್ರಾಂತ್ಯ  ಗ್ರಾಮದ ಅಪೂರ್ವ ನಗರ ಕ್ರಾಸ್ ಬಳಿಗೆ ತಲುಪುವಾಗ ಬೆಳಿಗ್ಗೆ ಸುಮಾರು 07-30 ಗಂಟೆಗೆ ವೇಣೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಕೆಎ-19-ಎಎ-1285 ನಂಬ್ರದ ಅಟೋರಿಕ್ಷಾವನ್ನು ಅದರ ಚಾಲಕರಾದ ವಿಠಲ ದೇವಾಡಿಗರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವಾಗ ತನ್ನ ಮುಂದೆ ರಸ್ತೆಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದ ಇನ್ನೊಂದು ಅಟೋರಿಕ್ಷಾವನ್ನು ಹಿಂದಿಕ್ಕುವ ಭರದಲ್ಲಿ ಪಿರ್ಯಾದಿದಾರರ ಅಣ್ಣ ನಾಗೇಶ್ ರವರು ಹರಿಶ್ಚಂದ್ರ ಹೆಗ್ಡೆ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ ಕೆಎ-21-ಕೆ-9500 ನಂಬ್ರದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ರಸ್ತೆಗೆ ಎಸೆಯಲ್ಪಟ್ಟು ನಾಗೇಶ್ ರವರ ತಲೆಯ ಬಲಭಾಗಕ್ಕೆ ಗುದ್ದಿದ ನಮೂನೆಯ ಒಳನೋವು ಎಡಕಣ್ಣಿನ ಹುಬ್ಬಿನ ಬಳಿ ರಕ್ತಗಾಯ, ಬಲಕಾಲಿನ ಪಾದದ ಬಳಿ ರಕ್ತಗಾಯವಾಗಿದ್ದು, ದೇಹದ ಇತರ ಕಡೆಗಳಿಗೆ ಸಣ್ಣ ಪುಟ್ಟ ಗಾಯ ನೋವುಗಳಾಗಿದ್ದು, ಹರಿಶ್ಚಂದ್ರ ಹೆಗ್ಡೆಯವರ ತಲೆಗೆ ರಕ್ತ ಗಾಯ ಹಾಗೂ ದೇಹದ ಇತರ ಕಡೆಗಳಿಗೆ ಗಾಯ ನೋವುಗಳಾದವರಿಗೆ ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವುದು ಎಂಬಿತ್ಯಾದಿ.

Crime Reported in Ullal PS

ಪಿರ್ಯಾದಿ Dabeeth Sajeev ದಾರರು ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನ  ವೈದ್ಯಕೀಯ ವಿದ್ಯಾರ್ಥಿಯಾಗಿರತ್ತಾರೆ. ಅವರ ತಂದೆ ತಾಯಿಯರು ದುಬೈಯಲ್ಲಿದ್ದು, ಅವರ Permannur ನ ವಾಸದ ಮನೆಗೆ ಬೀಗ ಹಾಕಿ ಅದರ ಮೇಲುಸ್ತುವಾರಿಯನ್ನು ತಾಯಿಯ ಅಣ್ಣ ದಿನಕರ ಉಳ್ಳಾಲರವರು ನೋಡಿಕೊಳ್ಳುವುದಾಗಿದೆ, ದಿನಾಂಕ 06-10-2021 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿದಾರರ ಮನೆಯಲ್ಲಿ ವಿದ್ಯುತ್ ದೀಪ್ ಉರಿಯುತ್ತಿದ್ದುದನ್ನು ಕಂಡು ಕೂಡಲೇ ಪಿರ್ಯಾದಿದಾರರಿಗೆ ತಿಳಿಸಿದಂತೆ , ಪಿರ್ಯಾದಿದಾರರು ಬಂದು ಪರಿಶೀಲಿಸಿದಾಗ ಮನೆಯ ಹಿಂಬಾಗಿಲಿನ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ ಮನೆಯ ಒಳಗಿದ್ದ 5-ತಾಮ್ರದ ದೀಪಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ದೀಪಗಳ ಅಂದಾಜು ಮೌಲ್ಯ 1 ಲಕ್ಷ ರೂ ಆಗಬಹುದು. ಈ ಕಳ್ಳತನವನ್ನು 05-10-2021 ರ ರಾತ್ರಿ 12 ಗಂಟೆಯಿಂದ 06-10-2021 ರ ರಾತ್ರಿ 7-00 ಗಂಟೆಯ ಮಧ್ಯೆ ಸಮಯದಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುವುದಾಗಿದೆ. ಎಂಬಿತ್ಯಾದಿ ಪ್ರಕರಣದ ಸಾರಾಂಶ.

ಇತ್ತೀಚಿನ ನವೀಕರಣ​ : 08-10-2021 05:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080