ಅಭಿಪ್ರಾಯ / ಸಲಹೆಗಳು

Crime Reported in Panambur PS

ಪಿರ್ಯಾದಿ DEEPAKದಾರರು  ಮಾರ್ಕೆಟಿಂಗ್ ಕೆಲಸ ಮಾಡಿಕೊಂಡ್ಡಿದ್ದು, ದಿನಾಂಕ: 07-11-2021 ರಂದು ರಾತ್ರಿ 11-30 ಗಂಟೆಗೆ  ಬೆಂಗಳೂರಿನಿಂದ KA 53 P 0941  ಕಾರಿನಲ್ಲಿ  ತನ್ನ ಸ್ನೇಹಿತರಾದ ಶ್ರೀನಿವಾಸ,  ಪ್ರಶಾಂತ್ ,, ಸುನೀಲ್ ,  ಸುದೀಪ್ , ಪ್ರಜ್ವಲ್,  ದಿನೇಶ, ಸೀನಾ ಎಂಬುವರಗಳ ಜೊತೆ ಪ್ರವಾಸಕ್ಕೆಂದು ಹೋರಟು  ಈ ದಿನ ದಿನಾಂಕ: 08-11-2021 ರಂದು  ಮಂಗಳೂರಿನ ಪಣಂಬೂರು ಬೀಚ್ ಗೆ ಬಂದು  ಸ್ನೇಹಿತರೊಂದಿಗೆ ನೀರಿನಲ್ಲಿ ಈಜುತ್ತಿರುವಾಗ, ಪಿರ್ಯಾಧಿದಾರರ ಸ್ನೇಹಿತರ ಪೈಕಿ  ದಿನೇಶ್ ಎಂಬಾತನು ಸಮುದ್ರ ನೀರಿನಲ್ಲಿ ಸ್ವಲ್ಪ ಮುಂದಕ್ಕೆ ಹೋದಾಗ, ಸಮಯ ಸುಮಾರು ಮಧ್ಯಾಹ್ನ 13-00 ಗಂಟೆಗೆ ಸಮುದ್ರದಲ್ಲಿ ಬಲವಾಗಿ ಅಲೆ ಬಂದು  ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಾಣೆಯಾಗಿರುತ್ತಾನೆ.  ಕಾಣೆಯಾದ ಸಮಯದಲ್ಲಿ ದಿನೇಶ್ ಬ್ಲೂ ಬಿನಿಯಾನ್, ಕಪ್ಪು ಬಣ್ಣದ ನೈಟ್ ಪ್ಯಾಂಟ್  ಧರಿಸಿರುತ್ತಾನೆ.  ಸಮುದ್ರದ ನೀರಿನ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿ  ಕಾಣೆಯಾದ ದಿನೇಶ್   ಪ್ರಾಯ: 20 ವರ್ಷ, ಎಂಬವರನ್ನು ಪತ್ತೆ ಹಚ್ಚಿಕೊಡಬೇಕಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ

Crime Reported in Bajpe PS

ಪಿರ್ಯಾದಿ Kumari Cristel Lobo ದಾರರು ದಿನಾಂಕ: 06-11-2021 ರಂದು ತನ್ನ ತಂದೆಯ ಬಾಬ್ತು ಆಕ್ಟೀವಾ ಸ್ಕೂಟರ್ ನಂಬ್ರ ಕೆಎ 19 ಹೆಚ್ ಜಿ 3350 ನೇದರಲ್ಲಿ ಸವಾರರಾಗಿದ್ದುಕೊಂಡು ತನ್ನ ಅಜ್ಜಿ ಲಿಲ್ಲಿ ಲೋಬೊ, ಪ್ರಾಯ 76 ವರ್ಷ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಹೊರಟು ಬಜಪೆ-ಕೈಕಂಬ ರಸ್ತೆಯಲ್ಲಿ ಹೋಗುತ್ತಾ ಸಮಯ ಸುಮಾರು 17.15 ಗಂಟೆಗೆ ಮಂಗಳೂರು ತಾಲೂಕು ಪಡುಪೆರಾರ ಗ್ರಾಮದ ಚಾರ್ ಕೋಲ್ ಹೊಟೇಲ್ ಎದುರು ತಲುಪುವಾಗ ಹಿಂದಿನಿಂದ ಕೆಎ 20 ಇವಿ 4809 ನೇ ಸ್ಕೂಟರನ್ನು ಅದರ ಸವಾರ ಕರುಣಾ ಸಾರಂಗ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿನ ಹಿಂಬದಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಸಹಸವಾರರ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಬಲಕೈಗೆ ತರಚಿದ ಹಾಗೂ ಬೆನ್ನಿಗೆ ಗುದ್ದಿದ ಗಾಯವಾಗಿದ್ದು, ಸಹಸವಾರೆ ಲಿಲ್ಲಿ ಲೋಬೊ ರವರಿಗೆ ತಲೆಗೆ ಮತ್ತು ಎಡಭುಜಕ್ಕೆ ಗುದ್ದಿದ ಗಾಯವಾಗಿರುತ್ತದೆ. ಅಪಘಾತಪಡಿಸಿದ ಸವಾರನೂ ರಸ್ತೆಗೆ ಬಿದ್ದಿದ್ದು ಆತನಿಗೂ ಕೈಗಳಿಗೆ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರು ಬಜಪೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಲಿಲ್ಲಿ ಲೋಬೊರವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ,” ಎಂಬಿತ್ಯಾದಿ.

 

2) ಪಿರ್ಯಾದು Sri Khader Ali ದಾರರು ದಿನಾಂಕ 06-11-2021 ರಂದು ಅವರ   ಕೆ ಎ 19 ಇ ಜಿ 7526 ನೇ ನಂಬ್ರದ ಬ್ಯೆಕಿನಲ್ಲಿ ಮಗ ಶೇಕ್ ಮೊಹಮ್ಮದ್ ರಿಫಾಜ್ ಎಂಬಾತನನ್ನು ಕುಳ್ಳಿರಿಸಿಕೊಂಡು ಗಂಜಿಮಠ ಕಡೆಯಿಂದ ಮನೆ ಕಡೆಗೆ ಹೋಗುತ್ತಿದ್ದ ಸಮಯ ಸಂಜೆ ಸುಮಾರು 7-15 ಗಂಟೆಗೆ  ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ  ಗಂಜಿಮಠ ಸನಾ ಕಾಂಪ್ಲೆಕ್ಸ್ ಬಳಿ ತಲುಪುತ್ತಿದಂತೆ ಪಿರ್ಯಾದುದಾರರ ಮುಂದೆಯಿಂದ ಅಂದರೆ ಕ್ಯೆಕಂಬ ಕಡೆಯಿಂದ ಬರುತ್ತಿದ್ದ ಕೆ ಎ 18 ಪಿ 7775 ನೇಯ ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾರೂಕತೆಯಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಬ್ಯೆಕಿನ ಮಂಭಾಗಕ್ಕೆ ಡಿಕ್ಕಿ ಹೊಡೆದು  ಪಿರ್ಯಾದುದಾರರು ಮತ್ತು ಆತನ ಮಗನಿಗೆ ಗಾಯಗಳನ್ನು ಉಂಟುಮಾಡಿರುತ್ತಾನೆ ಎಂಬಿತ್ಯಾದಿ .

 

Crime Reported in Mangalore North PS

ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ   ನಾಗರಾಜ  ದಿನಾಂಕ 06-11-2021 ರಂದು ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದ ಬಗ್ಗೆ ಠಾಣಾ ಸಿಬ್ಬಂದಿ 23-00  ಗಂಟೆಗೆ ಹೊರಟು ಠಾಣಾ ಸರಹದ್ದಿನ ಸಂಚರಿಸಿ ದಿನಾಂಕ: 07-11-2021 ರಂದು ಬೆಳಗ್ಗಿನ ಜಾವ ಸುಮಾರು 02-00 ಗಂಟೆಗೆ ರಾವ್ & ರಾವ್ ಸರ್ಕಲ್ ಬಳಿ ತಲುಪಿದಾಗ ಮೈದಾನ 4 ನೇ ಅಡ್ಡ ರಸ್ತೆಯಲ್ಲಿರುವ  ಹೋಟೆಲ್ ಜೈನ್ ಹೋಟೆಲ್‌‌ ಇರುವ ಬಿಲ್ಡಿಂಗ್ ನ ಕೆಳ ಅಂತಸ್ತಿನ ಅಂಗಡಿ ಶಟರ್‌‌‌ನ ಬಳಿ ಇಬ್ಬರು ವ್ಯಕ್ತಿಗಳು ಕತ್ತಲೆಯಲ್ಲಿ ತಮ್ಮಗಳ ಮುಖವನ್ನು ಅವರುಗಳ ಶರ್ಟ್‌‌‌ನಿಂದ ಮುಚ್ಚಿ ತಮ್ಮಗಳ ಇರುವಿಕೆಯನ್ನು ಮರೆಮಾಚಲು ಕುಳಿತಿದ್ದು, ಟಾರ್ಚ್‌ ಲೈಟ್‌ನ್ನು ಹಾಯಿಸಿದಾಗ ಅವರಿಬ್ಬರು ಓಡಲು ಪ್ರಯತ್ನಿಸಿದವರನ್ನು  ಹಿಡಿದು ಅಪರಾತ್ರಿ ವೇಳೆಯಲ್ಲಿ ಇದ್ದ ಬಗ್ಗೆ ವಿಚಾರಿಸಿದಲ್ಲಿ ಸಮರ್ಪಕ ಉತ್ತರ ನೀಡದೇ ಇದ್ದು, ಹೆಸರು ವಿಳಾಸ ಕೇಳಿದಾಗ ಒಬ್ಬಾತನು ತನ್ನ ಹೆಸರು  ಮೊಹಮ್ಮದ್ ತೌಸೀಪ್ @ ಶೈಲು  @ ಮುನ್ನ, ಪ್ರಾಯ 29 ವರ್ಷ,  ವಾಸ: ಅನಂತ ಪದ್ಮನಾಭ ದೇವಸ್ಥಾನದ ಬಳಿ ಮನೆ, ಅಲಂಗಾರು, ಪೆರ್ಡೂರು ಗ್ರಾಮ, ಉಡುಪಿ ತಾಲೂಕು & ಜಿಲ್ಲೆ ಎಂಬುದಾಗಿ ತಿಳಿಸಿದನು. ಇನ್ನೊಬ್ಬಾತನು    ಮೊಹಮ್ಮದ್ ಅರ್ಪಾತ್, ಪ್ರಾಯ 34 ವರ್ಷ,  ವಾಸ: ಕುಚ್ಚಿಗುಡ್ಡೆ  ಹೌಸ್,   ಮಂಗಳಾಂತಿ, ಮಂಜನಾಡಿ ಪೋಸ್ಟ್, ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿದನು. ಸದ್ರಿಯರು ಈ ಅಪರಾತ್ರಿ ಸಮಯದಲ್ಲಿ ಮಂಗಳೂರು ನಗರದ ಸದ್ರಿ ಸ್ಥಳದಲ್ಲಿ ಕತ್ತಲೆಯಲ್ಲಿ ಇದ್ದು, ಹಾಗೂ ಇವರುಗಳ ಚಲನ ವಲನದಿಂದ ಇವರುಗಳು ಕನ್ನ ಕಳವು ಅಥವಾ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಉದ್ದೇಶದಿಂದ, ತಮ್ಮಗಳ ಇರುವಿಕೆಯನ್ನು ಮರೆಮಾಚಿಕೊಂಡು ಸದ್ರಿ ಸ್ಥಳದಲ್ಲಿ ಅಂಗಡಿ ಶಟರ್ ನ ಬೀಗ ಮುರಿಯಲು ಹೊಂಚು ಹಾಕುತ್ತಿದ್ದರೆಂದು ಬಲವಾದ ಸಂಶಯಗೊಂಡು ದೃಢ ಪಟ್ಟಿದ್ದರಿಂದ ಸದ್ರಿ ವ್ಯಕ್ತಿಗಳನ್ನು ಬೆಳಗ್ಗಿನ ಜಾವ 02-30 ಗಂಟೆಗೆ ವಶಕ್ಕೆ ಪಡೆದುಕೊಂಡು, ಆರೋಪಿತರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ  ರೀತ್ಯಾ ಪ್ರಕರಣ ದಾಖಲಿಸಿರುವುದಾಗಿದೆ  ಎಂಬಿತ್ಯಾದಿ  

 

Crime Reported in Traffic South P S

ದಿನಾಂಕ :06-11-2021 ರಂದು ಪಿರ್ಯಾದಿ YAMANURA ದಾರರು ಹಾಗೂ ಅವರ ಸ್ನೇಹಿತ ಆನಂದ @ಸಾಗರ ರವರು ಕೂಲಿ ಕೆಲಸ ಮುಗಿಸಿಕೊಂಡು ಸಂಜೆ ಸಮಯ ಊಟ ಮಾಡಲು ಕೋಟೆಕಾರ್ ಬೀರಿ ಹತ್ತಿರದ ಟಿಕ್ಕಪಾಯಿಂಟ್ ಹೋಟೆಲೊಂದಕ್ಕೆ ಹೋಗಲು ಸಮಯ ಸುಮಾರು  ರಾತ್ರಿ 7:30 ಗಂಟೆಗೆ ರಾ.ಹೆ. 66 ರ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಸ್ತೆಯನ್ನು ದಾಟಿ ನಂತರ  ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ  ಹಾದು ಹೋಗುವ ಡಾಮಾರು ರಸ್ತೆಯನ್ನು ದಾಟ್ಟುತ್ತಿರುವಾಗ ಮಂಗಳೂರು ಕಡೆಯಿಂದ ತಲಪಾಡಿ ಕಡಗೆ ಹೋಗುತ್ತಿದ್ದ ಅಪರಿಚಿತ ಕಾರೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆದಾಟುತ್ತಿದ್ದ ಆನಂದ @ಸಾಗರ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಆನಂದ @ಸಾಗರ ರವರು ಎಸೆಯಲ್ಪಟ್ಟು ರಸ್ತೆ ಬದಿಯ ಪೊದೆ ಪಕ್ಕದಲ್ಲಿ  ಬಿದಿದ್ದು ಅವರ ತಲೆಗೆ  ಮತ್ತು ಕೈ ಕಾಲುಗಳಿಗೆ ಗಂಭೀರ ಸ್ವರೂಪದ ರಕ್ತ ಗಾಯವಾಗಿದ್ದು ಅವರನ್ನು ಪಿರ್ಯಾದಿದಾರರು ಹಾಗೂ ಅಲ್ಲಿ ಸೇರಿದ ಸಾರ್ವಜನಿಕರು ಆಂಬುಲೆನ್ಸ್ ಒಂದರಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ಗಾಯಾಳುವನ್ನು ಪರಿಕ್ಷೀಸಿದ ಅಲ್ಲಿನ ವೈದ್ಯರು ಆನಂದ @ ಸಾಗರ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಅಪಘಾತ ಸ್ಥಳದಿಂದ ಕಾರು ಚಾಲಕ ಕಾರು  ಸಮೇತ ಪರಾರಿಯಾಗಿದ್ದು  ಅಪಘಾತ ಸ್ಥಳದಲ್ಲಿ ಡಿಕ್ಕಿಪಡಿಸಿದ ಅಪರಿಚಿತ ಕಾರಿನ ಜಖಂಗೊಂಡ  ಬಿಡಿ ಭಾಗಗಳು ಬಿದ್ದಿರುತ್ತವೆ ಎಂಬಿತ್ಯಾಧಿ,

 

Crime Reported in Mangalore South PS

ದಿನಾಂಕ 22-10-2021 ರಂದು ಬೆಳಿಗ್ಗೆ 08-00 ಗಂಟೆಯಿಂದ ದಿನಾಂಕ 23-10-2021ರಂದು ಬೆಳಗ್ಗೆ 08-00 ಗಂಟೆಯ  ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರದಲ್ಲಿರುವ  ಚಂದ್ರಶೇಖರ್  ಕಂಪೌಂಡು ಬಳಿಯಲ್ಲಿ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿ KARTHIK ದಾರರು ಉಪಯೋಗಿಸುತ್ತಿದ್ದ. ಅವರ ಸಂಬಂಧಿ ಅಣ್ಣ ಪುನೀತ್ ರವರ ಆರ್. ಸಿ. ಮಾಲಕತ್ವದ ಯಮಹಾ FZ BS III,  12/2012 ನೇ ಮೊಡಲ್ ನ KA 19 EG 6966 ನೊಂದಣಿ ಸಂಖ್ಯೆಯ ME121C0D9C2013750 ಚೆಸಿಸ್ ನಂಬ್ರದ, 21CD013744 ಇಂಜಿನ್ ನಂಬ್ರದ, ಕಪ್ಪು ಬಣ್ಣದ, ಅಂದಾಜು ಮೌಲ್ಯ 10,000/- ರೂಪಾಯಿ ಬೆಲೆಬಾಳುವ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನವನ್ನು ಕಳವಾದ ದಿನದಿಂದ ಈ ದಿನ ದಿನಾಂಕ 07-11-2021 ರ ವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 08-11-2021 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080