ಅಭಿಪ್ರಾಯ / ಸಲಹೆಗಳು

Crime Reported in Traffic South PS

ಪಿರ್ಯಾದಿ MANOJ ದಾರರು ದಿನಾಂಕ: 08-12-2021 ರಂದು ಬೆಳಿಗ್ಗೆ ಅವರು ಕೆಲಸ ಮಾಡುವ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಮ್ಯಾಕ್ಸ್ ಪೋರ್ಟ್ ಅಪಾರ್ಟ ಮೆಂಟ್  ಎದುರು ನಿಂತುಕೊಂಡಿರುವಾಗ ಸಮಯ ಸುಮಾರು ಬೆಳಿಗ್ಗೆ 09-10 ಗಂಟೆಗೆ ತೊಕ್ಕೊಟ್ಟು ಕಡೆಯಿಂದ ಉಳ್ಳಾಲದ ಕಡೆಗೆ ಹೊಗುತ್ತಿದ್ದ ಬೈಕ್ ನಂಬ್ರ: KA-19-EM-4104 ನೇದರ ಸವಾರ ಮೊಹಮ್ಮದ್ ಇಮ್ರಾನ್ @ ಮೊಹಮ್ಮದ್ ಕೈಪ್   ಎಂಬಾತನು ಹೆಲ್ಮೆಟ್ ಧರಿಸದೇ ಬೈಕ್ ನ್ನು ಸವಾರಿ ಮಾಡಿಕೊಂಡು ದುಡುಕುತನ ಹಾಗೂ ತೀರಾ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ಬೈಕ್ ಸವಾರ ತನ್ನ ವಾಹನದ ನಿಯಂತ್ರಣ ಕಳೆದುಕೊಂಡು ಸ್ಕೀಡ್ಡಾಗಿ ರಸ್ತೆ ಮಧ್ಯೆದ ಡಿವೈಡರ್ ಮೇಲಿರುವ ವಿದ್ಯುತ್ ದೀಪದ ಕಂಬಕ್ಕೆ ಡಿಕ್ಕಿ ಹೋಡೆದ ಪರಿಣಾಮ, ಬೈಕ್ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದು ಬೈಕ್ ಸವಾರನ ತಲೆಯು ನೆಲಕ್ಕೆ ಅಪ್ಪಳಿಸಿ ಒಡೆದು ಹೋದ ಗಂಬೀರ ಸ್ವರೂಪದ ರಕ್ತ ಗಾಯ ಹಾಗೂ ಎಡಕೈ ಕೊಲುಕೈಗೆ ತರಚಿದ ರಕ್ತ ಗಾಯವಾಗಿ ಮೃತಪಡುವ ಸ್ಥಿತಿಯಲ್ಲಿದ್ದವನನ್ನು ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಆತನನ್ನು  ಅಂಬುಲೆನ್ಸ್ ವೊಂದರಲ್ಲಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಬಳಿಕ ಅಲ್ಲಿನ ವೈಧ್ಯರು ಪರೀಕ್ಷಿಸಿ ಗಾಯಾಳು ಅಪಘಾತದಿಂದ ಗಂಭೀರ ಗಾಯಗೊಂಡು ಮೃತಪಟ್ಟ ವಿಷಯ ಪಿರ್ಯಾದಿದಾರರಿಗೆ ನಂತರ ತಿಳಿದಿರುತ್ತದೆ ಎಂಬಿತ್ಯಾದಿ.

Crime Reported in Kankanady Town PS

ಪಿರ್ಯಾದುದಾರರಾದ ಸಂಪತ್ ಕುಕ್ಯಾನ್ (34)  ಎಂಬವರು ತಮ್ಮ ಬಾಬ್ತು  KA-19-AC-8911   ನೇ ನಂಬ್ರದ Bajaj Company Pulsar-160 ಮೋಟಾರ್ ಸೈಕಲ್  ನ್ನು ದಿನಾಂಕ:28-11-2021 ರಂದು ಸಂಜೆ 6.00 ಗಂಟೆಗೆ   ಜಪ್ಪಿನಮೊಗರು ಕಡೇಕಾರ್ ಹೈವೇ ರಸ್ತೆಯ  ಬದಿಯಲ್ಲಿ ನಿಲ್ಲಿಸಿ  ಕೆಲಸಕ್ಕೆ ಹೋಗಿರುತ್ತಾರೆ,  ಅದರಂತೆ ಕೆಲಸ ಮುಗಿಸಿ  ರಾತ್ರಿ  8.00 ಗಂಟೆಗೆ ಪಿರ್ಯಾದುದಾರರು  ಮೋಟಾರ್ ಸೈಕಲ್  ನಿಲ್ಲಿಸಿದ  ಜಾಗಕ್ಕೆ  ಬಂದು  ನೋಡಿದಾಗ  ಪಿರ್ಯಾದಿದಾರರ ಇರಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್  ಇರದೇ ಇದ್ದು, ಪಿರ್ಯಾದಿದಾರರ ಮೋಟಾರ್ ಸೈಕಲ್ ನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುವುದಾಗಿದೆ. ಪಿರ್ಯಾದುದಾರರ  ಮೋಟಾರ್ ಸೈಕಲ್ ನ್ನು ಕಳವು ಮಾಡಿಕೊಂಡು ಹೋದವರ ಮೇಲೆ ಸೂಕ್ತ ಕಾನೂನು ಕ್ರಮ  ಜರುಗಿಸಬೇಕಾಗಿ ಕೋರಿಕೆ ಎಂಬಿತ್ಯಾದಿ. ಸುತ್ತಲಿನ ಪರಿಸರದಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು   ಈ ದಿನ ತಡವಾಗಿ  ದೂರು  ನೀಡಿರುವುದಾಗಿದೆ.  ಕಳುವಾದ ಬೈಕ್ ನ ಅಂದಾಜು ಮೌಲ್ಯ 30,000/- ರೂಪಾಯಿಗಳು ಆಗಿರುತ್ತದೆ.

 

Crime Reported in Moodabidre PS

ಪಿರ್ಯಾದಿ Mrs Bhavani R Shetty ದಾರರು ಮತ್ತು ಆರೋಪಿ Sukesh Manai , Shravani S Hegde , Mohan Das M , Sharada R Shetty ತರೆಲ್ಲರೂ ಒಂದೇ ಕುಟುಂಬದವರಾಗಿದ್ದು ಇವರುಗಳ ಮದ್ಯೆ ಕುಟುಂಬದ ಆಸ್ತಿಯ ವಿಚಾರದಲ್ಲಿ ತಕರಾರು ಇದ್ದು ಸಿವಿಲ್ ವ್ಯಾಜ್ಯ ಇರುತ್ತದೆ. 1 ರಿಂದ 3 ನೇ ಆರೋಪಿತರು ಮತ್ತು 4 ನೇ ಆರೋಪಿತರ ಗಂಡ ದಿ.ಕುಟ್ಟಿ ಶೆಟ್ಟಿರವರ ಮದ್ಯೆ ಏಳಿಂಜೆ ಗ್ರಾಮದ ಸರ್ವೆ ನಂಬ್ರ 14/12 ರ 0.02 ಎಕ್ರೆ ಆಸ್ತಿಯನ್ನು ರಸ್ತೆಯಾಗಿ ಉಪಯೋಗಿಸುವ ಬಗ್ಗೆ ದಿನಾಂಕ: 12-12-2012 ರಂದು ಕರಾರು ಪತ್ರವನ್ನು ಮಾಡಿಕೊಂಡಿದ್ದು, ಈ ಕರಾರು ಪತ್ರವನ್ನು ದಾವಾ ಸಂಖ್ಯೆ 184/2016 ರಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಆರೋಪಿತರೆಲ್ಲರೂ ಸೇರಿ ದಾವಾ ಸಂಖ್ಯೆ 184/2016 ರಲ್ಲಿ ನಿಪಿ-18 ರ ದಾಖಲೆಯ ದೃಡೀಕೃತ ಪ್ರತಿಯನ್ನು ನ್ಯಾಯಾಲಯದಿಂದ ಪಡೆದು ದುರುದ್ದೇಶ ಪೂರ್ವಕವಾಗಿ ಸರ್ವೆ ನಂಬ್ರ 14/12 ಎಂದು ನಮೂದಾಗಿರುವುದನ್ನು ತಿದ್ದಿ ಸರ್ವೆ ನಂಬ್ರ 14/14 ಎಂದು ದಾಖಲಿಸಿ ನಕಲಿ ದಾಖಲೆಯನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪಿರ್ಯಾದುದಾರರಿಗೆ  ಮೋಸ ವಂಚನೆ, ನಂಬಿಕೆ ದ್ರೋಹ ಮಾಡಿರುತ್ತಾರೆ.

Crime Reported in Mangalore South PS

ದಿನಾಂಕ 28-11-2021ರಂದು 21-00 ಗಂಟೆಯಿಂದ 21-10 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಓಲ್ಸ್ ಕೆಂಟ್ ರಸ್ತೆಯಲ್ಲಿ, ಕಮಲ ಇನ್-ಫೇಬ್ ಎಂಬ ಹೆಸರಿನ ಶಾಫ್ ಬಳಿಯಲ್ಲಿ ಪಾರ್ಕ್ ಮಾಡಿಟ್ಟಿದ್ದ ಪಿರ್ಯಾದಿ TIMANNA YALLAPPA HEBBAL ದಾರರು ಉಪಯೋಗಿಸುತ್ತಿದ್ದ. ಅಂಬಿಕಾ ಅಶೋಕ್ ಉಳ್ಳಾಲ್ ರವರ ಆರ್. ಸಿ. ಮಾಲಕತ್ವದ ಹೊಂಡಾ ಕಂಪನಿಯ ಡಿಯೋ 07/2018ನೇ ಮೋಡಲ್ ನ KA 19 EZ 1399 ನೊಂದಣಿ ಸಂಖ್ಯೆಯ ME4JF39JGJT012046 ಚೆಸಿಸ್ ನಂಬ್ರದ, JF39ET5017332 ಇಂಜಿನ್ ನಂಬ್ರದ, PEARL IGNEOUS ಬಣ್ಣದ, ಅಂದಾಜು ಮೌಲ್ಯ 30,000/-/- ರೂಪಾಯಿ ಬೆಲೆಬಾಳುವ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನದ ಸೀಟ್ ನ ಕೆಳಗಡೆ ಬಾಕ್ಸ್ ನಲ್ಲಿ ಸದ್ರಿ ವಾಹನಕ್ಕೆ ಸಂಬಂಧಿಸಿದ ಆರ್.ಸಿ.ಯ ಮೂಲ ಪ್ರತಿ, ಹಾಗೂ ಇನ್ಸೂರೆನ್ಸ್ ಪಾಲಿಸಿಯ ಜೆರಾಕ್ಸ್ ಪ್ರತಿಗಳು  ಇದ್ದವು. ಈ ದಿನ ದಿನಾಂಕ 07-12-2021ರ ವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 08-12-2021 07:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080