ಅಭಿಪ್ರಾಯ / ಸಲಹೆಗಳು

Crime Reported in Surathkal PS

ಫಿರ್ಯಾದಿದಾರರಾದ ಸೋಹನ್ ರವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೈತ್ರಿಯಲ್ಲಿರುವ NEW MANGALORE PORT ROAD ಇದರ ಸುರತ್ಕಲ್ ಟೋಲ್ ಗೇಟ್ ನ ಸುಂಕ ವಸೂಲಾತಿಯನ್ನು ವಹಿಸಿಕೊಂಡಿರುವ CORAL ASSOCIATE ಇದರಲ್ಲಿ ಟೋಲ್ ಗೇಟ್ ಕೀಪರ್ ಆಗಿ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 08/02/2022 ರಂದು ಫಿರ್ಯಾದಿದಾರರು ಮೇಲ್ಕಾಣಿಸಿದ ಟೋಲ್ ಗೇಟ್ ನಲ್ಲಿ ಕರ್ತವ್ಯದಲ್ಲಿರುವಾಗ ಸಂಜೆ ಸುಮಾರು 5:05 ಗಂಟೆಯಿಂದ ಸಂಜೆ ಸುಮಾರು 5:15 ಗಂಟೆಯ ಮಧ್ಯೆ NITK ನಾಗ ಬನದ ಬಳಿ  ಟೋಲ್ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಸ್ಥಳದಿಂದ ಬಂದ KA-47-M-5351 ನೇ ಕಾರನ್ನು ಅದರ ಚಾಲಕನು ಟೋಲ್ ನ್ನು ಪಾವತಿಸದೇ ಸರ್ವೀಸ್ ರಸ್ತೆ ಕಡೆಗೆ ಬರುವುದನ್ನು ಕಂಡು ಫಿರ್ಯಾದಿದಾರರು ಬ್ಯಾರಿಕೇಡನ್ನು ಅಡ್ಡವಿರಿಸಿ FAST TAG ಕಡೆಗೆ ಹೋಗಲು ಸೂಚಿಸಿದಾಗ ಕಾರಿನಲ್ಲಿದ್ದ ಚಾಲಕನ ಹಿಂಬದಿ ಸೀಟಿನಿಂದ ಇಳಿದು ಬಂದ ಗಂಡಸು ಆ ಬಳಿಕ ಸದ್ರಿ ಕಾರಿನ ಚಾಲಕ ಹಾಗೂ ಇತರ 3 ಜನರೊಂದಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕೊಂದು ಹಾಕುವುದಾಗಿ ಜೀವ ಬೆದರಿಕೆಯನ್ನು ಹಾಕಿರುವುದು ಎಂಬಿತ್ಯಾದಿಯಾಗಿರುತ್ತದೆ.

Crime Reported in Ullal PS

ಪಿರ್ಯಾದಿದಾರರು ಬ್ಯಾಂಕ್ ಆಫ್ ಬರೋಡ ಉಳ್ಳಾಲ ಬ್ರಾಂಚ್ ನಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿದ್ದು ದಿನಾಂಕ 09-02-2022 ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿದಾರರು ಕಛೇರಿಗೆ ಬಂದಿದ್ದು ಈ ವೇಳೆ ಬ್ಯಾಂಕಿನ ಹೊರಗಡೆ ಇರುವ ATM ಮಿಷನ್ ಕೊಠಡಿಯನ್ನು ಪರಿಶೀಲಿಸದಾಗ ಯಾರೋ ಕಳ್ಳರು ಎಕ್ಸೋ ಬ್ಲೇಡ್ ನಿಂದ ಕಟ್ ಮಾಡಲು ಪ್ರಯತ್ನಿಸಿರುವುದು ಕಂಡು ಬಂದಿರುತ್ತದೆ. ನಂತರ ಸಿಸಿ ಕ್ಯಾಮೆರಾ ಪರಿಶೀಲಿಸದಾಗ ಬೆಳಿಗ್ಗಿನ ಜಾವ 02-20 ರ ವೇಳೆಗೆ ಯಾರೋ ಕಳ್ಳನು ATM ಕೊಠಡಿ ಪ್ರವೇಶಿಸಿ ಆತನಲ್ಲಿದ್ದ ಎಕ್ಸೋ ಬ್ಲೇಡ್ ಮತ್ತು ಸ್ಕ್ರೂ ಡ್ರೈವರ್ ಮುಖಾಂತರ ATM ಮಿಷನ್ ಒಂದು ಬದಿಯಲ್ಲಿ ಓಪನ್ ಮಾಡಲು ನೋಡಿದ್ದು ಅದು ಸಾದ್ಯವಾಗದೇ ಇದ್ದಾಗ ಅಲ್ಲಿಂದ ಹೊರಗಡೆ ಹೋಗುವುದು ಕಂಡು ಬಂದಿರುತ್ತದೆ. ಯಾರೋ ಕಳ್ಳನು ATM ಮಿಷನ್ ಕಟ್ ಮಾಡಿ ಕಳವು ಕೃತ್ಯಕ್ಕೆ ಪ್ರಯತ್ನಿಸಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 09-02-2022 07:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080