ಅಭಿಪ್ರಾಯ / ಸಲಹೆಗಳು

Crime Reported in Barke PS

ಪಿರ್ಯಾದಿದಾರರಾದ ಶಶಿಧರ ಎಂಬುವರು ಮಂಗಳೂರಿಗೆ ಕೂಲಿ ಕೆಲಸಕ್ಕೆಂದು ಸುಮಾರು 04 ತಿಂಗಳ ಹಿಂದೆ ತನ್ನ ಪತ್ನಿ ಗೀತಾ ಪ್ರಾಯ 36 ವರ್ಷ ಎಂಬುವರೊಂದಿಗೆ ಬಂದು ಎನ್ ಕ್ಲೇವ್ ಮಠದಕಣಿ ಕ್ರಾಸ್ ರಸ್ತೆ ಗಾಂಧಿನಗರ ನಿಶಾಂತ್ ಶೇಟ್ ಎಂಬುವರ ಮನೆಯಲ್ಲಿ ವಾಸವಾಗಿದ್ದು, ದಿನಾಂಕ: 07-05-2022 ರಂದು ಬೆಳಿಗ್ಗೆ ಸಮಯ 07-00 ಗಂಟೆಗೆ ಪಿರ್ಯಾದಿದಾರರಿಗೆ ಮತ್ತು ಅವರ ಹೆಂಡತಿ ಗೀತಾ ಎಂಬುವರಿಗೆ ಹಣದ ವಿಚಾರದಲ್ಲಿ ಗಲಾಟೆ ಆಗಿದ್ದು, ಇದರಿಂದ ಪಿರ್ಯಾದಿದಾರರ ಹೆಂಡತಿ ಕೋಪಗೊಂಡು ಮನೆ ಬಿಟ್ಟು ಹೊಗರೆ ಹೋದವರು ಈ ವರೆಗೂ ವಾಪಾಸು ಮನೆಗೆ ಬಾರದೆ, ಊರಿಗೂ ಹೋಗದೇ, ಸಂಭಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದು,  ಈ ವರೆಗೂ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿ ಸಾರಾಂಶ.

ಕಾಣೆಯಾದವರ ವಿವರ:

ಹೆಸರು: ಗೀತಾ ಪ್ರಾಯ 36 ವರ್ಷ   ಗಂಡ:ಶಶಿಧರ

ಎತ್ತರ: 5’ ಅಡಿ

ಮಾನಾಡುವ ಭಾಷೆ: ಕನ್ನಡ, 

ಬಣ್ಣ: ಗೋದಿ ಮೈಬಣ್ಣ, ದುಂಡು ಮುಖ, ದಪ್ಪ ಶರೀರ,

ಧರಿಸಿರುವ ಬಟ್ಟೆ: ಬೂದು ಬಣ್ಣದ ಸೀರೆ.

 

 

Crime Reported in Traffic North Police Station

ದಿನಾಂಕ 08-05-2022 ರಂದು ಸಂಜೆ ಸಮಯ ಸುಮಾರು 5:00 ಗಂಟೆಗೆ ಪಿರ್ಯಾದಿ Roshan Prasad ದಾರರು ಗೊವಿಂದದಾಸ ಶಾಲೆಯ ಎದುರು ಸರ್ವೀಸ್ ರಸ್ತೆಯಲ್ಲಿ ನಿಂತುಕೊಂಡಿರುವಾಗ KA-19-MM-2742 ನಂಬ್ರದ ಕಾರನ್ನು ಅದರ ಚಾಲಕ ದರ್ಶನ್ ಎಂಬಾತನು ರಾ ಹೆ 66 ರಲ್ಲಿ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಗೊವಿಂದದಾಸ ಜಂಕ್ಷನ್ ಬಳಿಯ ಪೊಲೀಸ್ ಅಂಬ್ರೆಲ್ಲಾದ ಉತ್ತರದ ಬದಿಯಿಂದ ಮಹಾಲಿಂಗೇಶ್ವರ ಶಾಲೆಯ ರಸ್ತೆಯ ಕಡೆಗೆ ರಮೇಶ್ ಕುಮಾರ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-19-EB-6605 ನಂಬ್ರದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ರಮೇಶ್ ಕುಮಾರ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ತಲೆಯ ಹಿಂಭಾಗಕ್ಕೆ ತೀವ್ರ ರೀತಿಯ ರಕ್ತ ಗಾಯವಾಗಿದ್ದು, ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ 5:15 ಗಂಟೆಗೆ ಪರಿಕ್ಷೀಸಿದ ವೈದ್ಯರು ರಮೇಶ್ ಕುಮಾರ್ ರವರು ಚಿಕಿತ್ಸೆಗೆ ಕರೆ ತರುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

 

Crime Reported in Surathkal PS

ಗಾಯಾಳು ರವೀಂದ್ರ ಕುಮಾರ್ ರವರು GANESHPURA ಹೋಟೆಲ್  ಸುಧಾಮದಲ್ಲಿ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ 06/05/2022 ರಂದು ಸಮಯ ರಾತ್ರಿ ಸುಮಾರು 2.30 ಗಂಟೆಗೆ ಮೂರನೇಯ ಮಹಡಿಯ ಕೊಠಡಿ ಸಂಖ್ಯೆ 305 ನೇದನ್ನು ಕ್ಲೀನ್ ಮಾಡಿ ನಂತರ ದಣಿವು ಆರಿಸಿಕೊಳ್ಳುವ ಬಗ್ಗೆ ಅದೇ ಮಹಡಿಯಲ್ಲಿ ಕುಳಿತುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲದೇ ಇದ್ದುದರಿಂದ ಸದ್ರಿ ಕೊಠಡಿಯಲ್ಲಿರುವ  ಕಿಟಕಿಯಲ್ಲಿ ಕುಳಿತುಕೊಂಡವರು, ಸದ್ರಿ ಕಿಟಕಿಗೆ ಯಾವುದೇ ರೀತಿಯ ಗ್ರೀಲ್ಸ್ ಇಲ್ಲದೇ ಇದ್ದುದರಿಂದ ಆಕಸ್ಮಿಕವಾಗಿ ಮೈ ವಾಲಿದಂತೆ ಆಗಿ ಮೂರನೇಯ ಮಹಡಿಯಿಂದ ಕೆಳಕ್ಕೆ ಬಿದ್ದು, ತನ್ನ ಎರಡು ಕೈಗಳಿಗೆ ಹಾಗು ಎರಡು ಕಾಲುಗಳಿಗೆ ಮತ್ತು ಸೊಂಟದ ತೀವ್ರ ಮೂಳೆ ಮುರಿತಕ್ಕೆ ಒಳಗಾಗಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಟೇಲಿನ ಮಾಲಕರು ನೌಕರರಿಗೆ ಸರಿಯಾದ ಸುರಕ್ಷತಾ ಕ್ರಮವನ್ನು ಮತ್ತು ಮೇಲ್ಚಿಚಾರಕರನ್ನು ನೇಮಿಸದೇ ತೀವ್ರ ತರಹದ ನಿರ್ಲಕ್ಷದಿಂದ ಕೆಲಸ ಮಾಡಿಸಿದ್ದರ ಪರಿಣಾಮ ಮತ್ತು ಹೊಟೇಲ್ ಕಟ್ಟಡದಲ್ಲಿ ಕಿಟಕಿಗೆ ಗ್ರೀಲ್ಸ್ ಇಲ್ಲದೇ ಇದ್ದುದರಿಂದ ರವೀಂದ್ರ ರವರು ತೀವ್ರ ತರಹದ ಗಾಯಕ್ಕೊಳಗಾಗಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 09-05-2022 07:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080