ಅಭಿಪ್ರಾಯ / ಸಲಹೆಗಳು

Crime Reported in : Kankanady Town PS

ಎಸ್.ಎಲ್ ಶೇಟ್ ಜ್ಯುವೆಲ್ಲರ್ಸ್ & ಡೈಮಂಡ್ ಹೌಸ್ ಸಂಸ್ಥೆಯ ಎಸ್.ಎಲ್ ಶೇಟ್ ಎಂಬ ಹೆಸರಿನ ಚಿನ್ನದ ಮಳಿಗೆಯು ನೊಂದಣಿ ಮಾಡಿಸಿ ಟ್ರೇಡ್ ಮಾರ್ಕ್ ಮತ್ತು ಅಧಿಕೃತ ಹಕ್ಕನ್ನು ಪಡೆದುಕೊಂಡು ವ್ಯವಹಾರವನ್ನು ಮಾಡಿಕೊಂಡಿರುತ್ತಾರೆ. ದಿನಾಂಕ 09-06-2022 ರಂದು 11-15 ಗಂಟೆಗೆ ಅಂತರ್ಜಾಲದಲ್ಲಿ ಯಾರೋ ಆರೋಪಿತರು ಅನಧಿಕೃತವಾಗಿ ಎಸ್.ಎಲ್ ಶೇಟ್ ಸಂಸ್ಥೆಯ ಲೋಗೊ ಮತ್ತು ಟ್ರೇಡ್ ಮಾರ್ಕ್ ಹೆಸರನ್ನು ಕೃತಿ ಚೌರ್ಯ ಎಸಗಿ ವ್ಯವಹಾರ ಮಾಡುತ್ತಾ ಸಾರ್ವಜನಿಕರಿಗೆ ಮತ್ತು  ಪಿರ್ಯಾದಿದಾರರ ಸಂಸ್ಥೆಗೆ ಮೋಸ ಮತ್ತು ನಷ್ಟವನ್ನುಂಟು ಮಾಡುತ್ತಿದ್ದಾರೆ ಎಂಬಿತ್ಯಾದಿ

Crime Reported in : Traffic North Police Station                                                                      

ಪಿರ್ಯಾದಿದಾರರ Jagadheesha ತಮ್ಮನಾದ ಶ್ರೀಧರ ಪ್ರಾಯ 50 ವರ್ಷ, ಎಂಬಾತನು ಈ ದಿನ ದಿನಾಂಕ 09-06-2022 ರಂದು ಎಂದಿನಂತೆ ಕೂಲಿ ಕೆಲಸಕ್ಕೆ ಹೋಗುವ ಸಲುವಾಗಿ ಮನೆಯಿಂದ ಹೊರಟು ಹಳೆಯಂಗಡಿ ಜಂಕ್ಷನಿನ ತೆರೆದ ಡಿವೈಡರ್ ನಲ್ಲಿ ರಸ್ತೆ ದಾಟುತ್ತಾ  ರಸ್ತೆ ಮಧ್ಯೆ ಡಿವೈಡರ್ ಸಮೀಪ ಸಮೀಪಿಸುತ್ತಿದ್ದಂತೆ ಬೆಳಿಗ್ಗೆ ಸಮಯ ಸುಮಾರು 08:45 ಗಂಟೆಗೆ ಡಾ|| ಪ್ರಸನ್ನ ಎಂಬಾತನು ತನ್ನ ಬಾಬ್ತು KA-19-MJ-4384 ನಂಬ್ರದ ಕಾರನ್ನು  ಮುಲ್ಕಿ ಕಡಟೆಯಿಂದ ಮಂಗಳೂರು ಕಡಗೆ  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಜಂಕ್ಷನ್ ನಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಶ್ರೀಧರ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಶ್ರೀಧರ ರವರು ಡಾಮಾರು ರಸ್ತೆಗೆ ಬಿದ್ದು ಅವರ ಹಣೆಯ ಎಡಬದಿಗೆ ಮತ್ತು ಎಡ ಕೋಲು ಕಾಲಿಗೆ ಚರ್ಮ ಹರಿದ ರೀತಿಯ ರಕ್ತ ಗಾಯವಾಗಿದ್ದು ಅಲ್ಲದೆ ಎರಡೂ ಕಾಲಿನ ಮೊಣ ಗಂಟಿನ ಬಳಿ ಊದಿಕೊಂಡಂತೆ ಗಾಯವಗಿ ಒಮೆಗಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in : Mulki PS        

Vinayaka Toragal PSI ದಿನಾಂಕ: 08-06-2022 ರಂದು ಖಾಸಗಿ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸುಮಾರು 18-55 ಗಂಟೆಗೆ ಲಿಂಗಪ್ಪಯ್ಯಕಾಡು ನಾಗಬನದ  ಬಳಿ ಓರ್ವ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟಕ್ಕಾಗಿ ಹಣವನ್ನು ಸಂಗ್ರಹಿಸುತ್ತಿರುವುದಾಗಿ ಮಾಹಿತಿ ಮೇರೆಗೆ ಲಿಂಗಪ್ಪಯ್ಯಕಾಡು ನಾಗಬನದ ಬಳಿ ವಾಹನವನ್ನು ನಿಲ್ಲಿಸಿ ಬಳಿಗೆ  19-00 ಗಂಟೆಗೆ ಪರಿಶೀಲಿಸಿದಾಗ ಸಾರ್ವಜನಿಕ ಸ್ಥಳದಲ್ಲಿ ಬಂದೇ ನವಾಜ್ (47) ವಾಸ: 19/182, ಬಿಜಾಪುರ ಕಾಲನಿ,ಕೆ.ಎಸ್. ರಾವ್ ನಗರ  ಕಾರ್ನಾಡು ಗ್ರಾಮ, ಮಂಗಳೂರು ತಾಲೂಕು ಎಂಬಾತನು ಮಟ್ಕಾ ಜೂಜಾಟಕ್ಕೆ ಚೀಟಿ ಬರೆಯುತ್ತಾ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದು ಕಂಡು ಬಂದಿದ್ದು, ಮಟ್ಕಾ ಜೂಜಾಟಕ್ಕೆ ಸಂಗ್ರಹಿಸಿದ ನಗದು ಹಣ ರೂಪಾಯಿ 570/-, ಮಟ್ಕಾ ಚೀಟಿ-01, ಬಾಲ್ ಪಾಯಿಂಟ್ ಪೆನ್ -01 ಇವುಗಳನ್ನು ಸ್ವಾಧೀನಪಡಿಸಿ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ವರದಿಯೊಂದಿಗೆ ಹಾಜರುಪಡಿಸಿರುವುದಾಗಿದೆ ಎಂಬಿತ್ಯಾದಿ.

Crime Reported in : Mangalore Rural PS       

ದಿನಾಂಕ 08-06-2022 ರಂದು ಪಿರ್ಯಾದಿದಾರರು Vinayak Bhavikatti ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ರಾತ್ರಿ ಸಮಯ 19.30 ಗಂಟೆಗೆ ಮಂಗಳೂರು ತಾಲೂಕು ನೀರುಮಾರ್ಗ ರಂಗಪಾದೆ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದ ಬಳಿ ಮಾದಕ ವಸ್ತುವಾದ ಗಾಂಜ ಸೇವನೆ ಮಾಡುತ್ತಿದ್ದ ಯಶವಂತ ಎಂ.ಎಸ್ (21) ವಾಸ-#65, 14 ನೇ ಮೈನ್ ಸರಸ್ವತಿಪುರಂ ಮೈಸೂರು. ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ

Crime Reported in : Mangalore East Traffic PS                                                       

 ಪಿರ್ಯಾದಿದಾರರಾದ ವಿಜಯರಾಜ್ ಪಿ.ಎಸ್.ಐ ರವರು ದಿನಾಂಕ: 08/06/2022 ರಂದು ಠಾಣಾ ಸಿಬ್ಬಂದಿಗಳೊಂದಿಗೆ ಮಂಗಳೂರು ವೆಲೆನ್ಸಿಯಾ (ಡಬ್ಬಲ್ ಗೇಟ್ ರೋಡ್) ಎಂಬಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿರುವ ವಾಹನಗಳ ಮೇಲೆ ಕೇಸು ದಾಖಲಿಸುತ್ತಿದ್ದ ಸಮಯ ಸುಮಾರು 16.45 ಗಂಟೆಗೆ ಕೋಟಿ ಚನ್ನಯ್ಯ ವೃತ್ತದ ಕಡೆಯಿಂದ ಕಾರೊಂದನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದುದ್ದನ್ನು ಕಂಡ ಸಿಬ್ಬಂದಿಯವರು  ನಿಲ್ಲಿಸುವಂತೆ ಸೂಚನೆ ನೀಡಿದರೂ ಕೂಡ ಸದ್ರಿ ಕಾರನ್ನು ಚಾಲಕನು ನಿಲ್ಲಿಸದೇ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸುತ್ತಾ ಸದ್ರಿ ಕಾರಿನ ಮುಂದುಗಡೆಯಿಂದ ಹೋಗುತ್ತಿದ್ದ ಸ್ಕೂಟರ್ ನೊಂದಣಿ ಸಂಖ್ಯೆ: KA19ET8076 ನೇಯದಕ್ಕೆ ಹಿಂಬದಿಯಿಂದ ಡಿಕ್ಕಿ ಪಡಿಸಿ ಕಾರನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದು, ಈ ಡಿಕ್ಕಿ ರಭಸಕ್ಕೆ ಸ್ಕೂಟರ್ ಸವಾರ ವಿನಿಷ್ ಎಂಬಾತನು ರಸ್ತೆಗೆ ಬಿದ್ದು ಬಲಗೈ ಮೊಣಗಂಟಿಗೆ, ಹಾಗೂ ಬಲಕಾಲಿನ ತೊಡೆಗೆ ತರಚಿದ ಗಾಯವಾಗಿದ್ದು ಆತನನ್ನು ಉಪಚರಿಸಿ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಪಡಿಸಿ ಸ್ಥಳದಿಂದ ಪರಾರಿಯಾದ ಕಾರಿನ ನೊಂದಣಿ ಸಂಖ್ಯೆ: KA-19-MG-200 ಆಗಿದ್ದು, ಇದು ವೋಕ್ಸ್ ವೆಗಾನ್ ಕಂಪನಿಯ ಗ್ರೇ ಬಣ್ಣದ ಕಾರು ಆಗಿರುತ್ತದೆ ಎಂಬಿತ್ಯಾದಿ.

 2) ಪಿರ್ಯಾದಿದಾರರಾದ ಹನುಮಂತ (34 ವರ್ಷ) ರವರು ದಿನಾಂಕ:06-06-2022 ರಂದು ತನ್ನ ಬಾಬ್ತು KA-19-AC-6239 ನಂಬ್ರದ ಆಟೋರಿಕ್ಷಾವನ್ನು ಚಾಲನೆ ಮಾಡಿಕೊಂಡು ಬಾಡಿಗೆ ಮಾಡಲು ಆವೇರಿ ಜಂಕ್ಷನ್ ಕಡೆಯಿಂದ ಡಾನ್ ಬಾಸ್ಕೊ ಕ್ರಾಸ್ ರಸ್ತೆಯಲ್ಲಿ ಚಲಾಯಿಸುತ್ತಾ ಮಿಲಾಗ್ರೀಸ್ ಕಡೆಗೆ ಬರುತ್ತಾ ಸಮಯ ಸುಮಾರು ಬೆಳಿಗ್ಗೆ 10:10 ಗಂಟೆಗೆ ಹೊಟೇಲ್ ಶೆಟ್ಟಿ ಲಂಚ್ ಹೋಮ್ ಎದುರುಗಡೆಯ ರಸ್ತೆಗೆ ಬಂದು ತಲುಪುತ್ತಿದ್ದಂತೆ ರಸ್ತೆಯ ಎಡಬದಿಯಲ್ಲಿದ್ದ KL-14-T-7486 ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಯಾವುದೇ ಮುನ್ಸೂಚನೆಯನ್ನು ನೀಡದೇ ರಸ್ತೆಯ ಕಡೆ ಕಾರನ್ನು ಹಿಮ್ಮುಖವಾಗಿ ಒಮ್ಮೆಲೇ ಚಲಾಯಿಸಿ ಪಿರ್ಯಾದಿದಾರರ ಆಟೋರಿಕ್ಷಾಕ್ಕೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಅವರು ಚಲಾಯಿಸುತ್ತಿದ್ದ ಆಟೋರಿಕ್ಷಾ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಪಿರ್ಯಾದಿದಾರರ ಮೇಲೆ ಬಿದ್ದ ಪರಿಣಾಮ ಪಿರ್ಯಾದಿದಾರರಾದ ಹನುಮಂತರವರ ಹೊಟ್ಟೆಯ ಭಾಗಕ್ಕೆ ಹಾಗೂ ತಲೆಗೆ ಗುದ್ದಿದ ರೀತಿಯ ತೀವ್ರ ಗಾಯವಾಗಿದ್ದು, ಅಲ್ಲಿ ಸೇರಿದ ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆ ಬಗ್ಗೆ ಗಾಯಾಳುವನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು ಆತನನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದು, ಪಿರ್ಯಾದಿದಾರರು ಅಪಘಾತದ ಬಗ್ಗೆ ತನ್ನ ಮನೆಯವರಲ್ಲಿ ವಿಚಾರಿಸಿ ನಂತರ ಪಿರ್ಯಾದಿ ನೀಡುವ ಬಗ್ಗೆ ನಿರ್ಧರಿಸಿದ್ದರಿಂದ ಈ ದಿನ ತಡವಾಗಿ ಪಿರ್ಯಾದಿ ನೀಡಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 09-06-2022 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080