ಅಭಿಪ್ರಾಯ / ಸಲಹೆಗಳು

Crime Reported in Mangaluru South PS

ಮಂಗಳೂರು ಬರ್ಕೆ ಪೊಲೀಸ್ ಠಾಣೆಯ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಬಂಧಿಯಾಗಿದ್ದ ನವೀನ ಎಂಬಾತನನ್ನು ಮಾನಸಿಕ ಖಾಯಿಲೆಯ ಹಿನ್ನೆಲೆಯಲ್ಲಿ ದಿನಾಂಕ:28-09-2021 ರಂದು ಮಂಗಳೂರು ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ  ಚಿಕಿತ್ಸೆಗೆ ಸೆಲ್ ವಾರ್ಡ್ ಗೆ ದಾಖಲಿಸಲಾಗಿರುತ್ತದೆ. ಸದ್ರಿ ಸೆಲ್ ವಾರ್ಡ್ ನಲ್ಲಿ ದಿನಾಂಕ :08-11-2021 ರಂದು 14-20 ಗಂಟೆಗೆ ಆರೋಪಿ ನವೀನನು  ಸೆಲ್ ವಾರ್ಡ್ ನ ಕಬ್ಬಿಣದ ಗ್ರಿಲ್ಸ್ ಗೆ ಬೆಡ್ ಶೀಟ್ ನಿಂದ ಕಟ್ಟಿ ಮತ್ತೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದವನನ್ನು ತಡೆದು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುವುದು ಎಂಬಿತ್ಯಾದಿ.

Crime Reported in Moodabidri PS

ಪಿರ್ಯಾದಿ ಉಸ್ಮಾನ್ ರವರು  ದಿನಾಂಕ: 07-11-2021 ರಂದು ತನ್ನ ಬಾವ ನವಾಜ್ ಎಂಬುವರ ಜೊತೆಯಲ್ಲಿ ಕೈಕಂಬದಲ್ಲಿ ಸರ್ಕಸ್ ನೋಡಲು KA 19 EU 8250 ರ ಬುಲೆಟ್ ಬೈಕಿನಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ಹೋಗಿ ಸರ್ಕಸ್ ಮುಗಿದ ನಂತರ ಅದೇ ಬೈಕಿನಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ಕೈಕಂಬ ಕಡೆಯಿಂದ ತೋಡಾರು ಕಡೆಗೆ ಬರುತ್ತಾ ರಾತ್ರಿ ಸುಮಾರು 10-00 ಗಂಟೆಗೆ ತೋಡಾರು ಜಂಕ್ಷನ್ ಬಳಿ ಬಳಿ ಹಿದಾಯತ್ ನಗರದ ಕಡೆ ಹೋಗಲು ಬುಲೆಟ್ ಬೈಕ್ ಸವಾರ ನವಾಜ್ ಇಂಡಿಕೇಟರ್ ಅನ್ ಮಾಡಿ ಬಲಕ್ಕೆ ತಿರುಗಿಸುತ್ತಿರುವಾಗ ಮೂಡಬಿದ್ರೆಯಿಂದ ಮಂಗಳೂರು ಕಡೆಗೆ ಕಡೆಗೆ KA19 HC 0683 ರ ಮೋಟಾರು ಸೈಕನ್ನು ಅದರ ಸವಾರ ಸಂತೋಷ ಎಂಬಾತನು ಅತೀ ವೇಗ ಮತ್ತು ಅಜಾಗರುಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಸವಾರಿ ಮಾಡಿಕೊಂಡ ಬಂದು ಬುಲೆಟ್ ಬೈಕಿನ ಹಿಂದೆ ಕುಳಿತ ಪಿರ್ಯಾಧಿದಾರರ ಎಡ ಕಾಲಿಗೆ  ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾಕಧಿದಾರರು ರಸ್ತೆಗೆ ಎಸೆಯಲ್ಪಟ್ಟು ಎಡ ಕಾಲಿಗೆ ಮೂಳೆ ಮುರಿತದ ಗಂಭೀರ ರೀತಿಯ ಗಾಯವಾಗಿದ್ದು, ನವಾಜ್ ರವರಿಗೆ ಯಾವುದೇ ಗಾಯವಾಗಿರುವುದಿಲ್ಲ, ಪಿರ್ಯಾಯಧಿದಾರರು ಮಂಗಳೂರು ಹೈಲ್ಯಾಂಡ್ ಆಸ್ಪ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿ ಸಾರಾಂಶ.

Crime Reported in Kavoor PS

ಪಿರ್ಯಾದುದಾರರಾದ DINESH P SANIL HC ರವರು ದಿನಾಂಕ 08/11/2021 ರಂದು ಸಂಜೆ 3.40 ಗಂಟೆಗೆ ಮಂಗಳೂರು ತಾಲೂಕು ಕುಂಜತ್ತಬೈಲ್ ಗ್ರಾಮದ ಮರಕಡ ಹಳೆಮೊಗರು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ಎಂಬ ಜೂಜಾಟವನ್ನು ಆಡುತ್ತಿದ್ದಾರೆ ಎಂದು ದೊರೆತ ಖಚಿತ ಮಾಹಿತಿಯಂತೆ  ಠಾಣಾ ಸಿಬ್ಬಂದಿಗಳನ್ನು ಕರೆದುಕೊಂಡು  ಸಮಯ  ಸಂಜೆ 4.15 ಗಂಟೆಗೆ ಮೇಲ್ಕಂಡ ಸದ್ರಿ ಸ್ಥಳಕ್ಕೆ ಹೋದಾಗ ಕೆಲವರು ಸ್ಥಳದಲ್ಲಿ ಸುತ್ತುವರೆದು ಕೋಳಿ ಅಂಕ ಎಂಬ ಜೂಜಾಟವನ್ನು ಆಡುತ್ತಿದ್ದಲ್ಲಿ ದಾಳಿ ಮಾಡಿ ಅವರನ್ನು ಸುತ್ತುವರೆದು ನಾಲ್ಕು ಜನರನ್ನು ಹಿಡಿದು ನಿಲ್ಲಸಿದ್ದು ಅವರ ಹೆಸರು ಕೇಳಲಾಗಿ 1. ಕಮಲಾಕ್ಷ, 2. ಭರತ್ 3. ಕಿರಣ 4.ಚರಣ ರಾಜ್ ಎಂಬುದಾಗಿ ತಿಳಿಸಿದ್ದು ಅದರಂತೆ ಜೂಜಾಟಕ್ಕೆ ಬಳಸಿದ್ದ 700/- ನಗದು ಹಣ  ಮತ್ತು ಬೇರೆ ಬೇರೆ ಜಾತಿಯ 2 ಕೋಳಿ ಸ್ವಾಧೀನಪಡಿಸಿ ಆಪಾದಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 09-11-2021 07:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080