ಅಭಿಪ್ರಾಯ / ಸಲಹೆಗಳು

Crime Reported in CEN Crime PS

ದಿನಾಂಕ: 26/11/2021 ರಂದು ಪಿರ್ಯಾದಿದಾರರ ಮೊಬೈಲ್ ಸಂಖ್ಯೆ  ಗೆ ಯಾರೋ ಅಪರಿಚಿತ ವ್ಯಕ್ತಿಯು ಪಾರ್ಟ್ ಟೈಮ್  ಜಾಬ್ ಗೆ ಆಯ್ಕೆಯಾಗಿರುವುದಾಗಿ ಒಂದು ಸಂದೇಶ ಬಂದಿದ್ದು, ಸದ್ರಿ ಸಂದೇಶ ದಲ್ಲಿ ಒಂದು  ಲಿಂಕ್ LINK-Wa.me/918675186814sacc ಬಂದಿರುತ್ತದೆ. ಆದರಂತೆ ಪಿರ್ಯಾದಿದಾರರು ಸದ್ರಿ ಲಿಂಕ್ ಕ್ಲಿಕ್ ಮಾಡಿ  +918675186814 ನೇ ನಂಬ್ರದ whatsapp ವ್ಯಕ್ತಿಯೊಂದಿಗೆ ಪಾರ್ಟ್ ಟೈಮ್  ಆನ್ ಲೈನ್ ಜಾಬ್ ನ ವಿಷಯವಾಗಿ ಚಾರ್ಟ್ ಮಾಡಿರುತ್ತಾರೆ. ಸದ್ರಿ job ನ ಸಂಪೂರ್ಣ ಮಾಹಿತಿಗಳನ್ನು ತಿಳಿಯಲು ಅಪರಿಚಿತ ವ್ಯಕ್ತಿಯು ಒಂದು ಟೆಲಿಗ್ರಾಮ್ ಲಿಂಕ್ ಕಳುಹಿಸಿರುತ್ತಾರೆ https://telegram.org/ ಸದ್ರಿ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ Flipkart online-mall ಎಂಬ ಹೆಸರಿನ ಟೆಲಿಗ್ರಾಮ್ ನಲ್ಲಿ  ಪಿರ್ಯಾದಿದಾರರು job ನವಿಷಯವಾಗಿ ಚಾರ್ಟ್ ಮಾಡಿರುತ್ತಾರೆ ಈ ಸಮಯದಲ್ಲಿ  ಅಪರಿಚಿತ ವ್ಯಕ್ತಿಯು http://ws0888.com ಸದ್ರಿ ಟೆಲಿಗ್ರಾಮ್ ಲಿಂಕ್ ಕಳುಹಿಸಿರುತ್ತಾರೆ  ಸದ್ರಿ ಲಿಂಕ್ ನ ಮೂಲಕ “ Monster Amazon” ಎಂಬ  website ತೆರೆದಿದ್ದು ಸದ್ರಿ  website ಪಿರ್ಯಾದಿದಾರರು  account ತೆರೆದು  USER ID, ಹಾಗೂ  password ಕ್ರಿಯೇಟ್ ಮಾಡಿರುತ್ತಾರೆ ಆನ್ ಲೈನ್ ನಲ್ಲಿ  Product  Order ಮಾಡಿ ಕಮಿಷನ್ ಗಳಿಸಿಬಹುದೆಂದು ತಿಳಿಸಿರುತ್ತಾರೆ.  ದಿನಾಂಕ 05/12/2021 ಪಿರ್ಯಾದಿದಾರರು Axis ಬ್ಯಾಂಕ್ ಖಾತೆ ನೇ ದರಿಂದ 200/- ರೂ ಹೂಡಿಕೆ ಮಾಡಿದ್ದು ನಂತರ  ದಿನಾಂಕ 06/12/2021 ಪಿರ್ಯಾದಿದಾರರ  ಲಾಭಾಂಶವಾಗಿ ಖಾತೆಗೆ 380/- ರೂಪಾಯಿ ಜಮಾವಾಗಿರುತ್ತಾದೆ. ನಂತರದಲ್ಲಿ ಹೆಚ್ಚಿನ ಹಣ ತೊಡಗಿಸಿ ಹೆಚ್ಚಿನ ಲಾಭಗಳಿಸುವ  ಉದ್ದೇಶದಿಂದ ಪಿರ್ಯಾದಿದಾರರು ತಮ್ಮ  Axis ಬ್ಯಾಂಕ್ ಖಾತೆಯಿಂದ ದಿನಾಂಕ 06/12/2021ರಂದು  ಅಪರಿಚಿತ ವ್ಯಕ್ತಿಯು ಕಳುಹಿಸಿದ QR CODE ಮೂಲಕ 86,000/- ಹಾಗೂ ಸದ್ರಿ ದಿನಾಂಕದಂದು ಪಿರ್ಯಾದಿದಾರರ Canara Bank ಖಾತೆ ನಂಬ್ರ ದರಿಂದ ಅಪರಿಚಿತ ವ್ಯಕ್ತಿಯು ತಿಳಿಸಿದ yes bank ಖಾತೆ ನಂಬ್ರ 708090836496227 ಕ್ಕೆ 50,000/-ರೂ  ಮತ್ತು ದಿನಾಂಕ  07/12/2021 ಪಿರ್ಯಾದಿದಾರರು ಅಪರಿಚಿತ ವ್ಯಕ್ತಿಯು  ಕಳುಹಿಸಿದ QR CODE ಗೆ 30,000/- ಹಾಗೂ  yes bank ಖಾತೆ ನಂಬ್ರ 708090836496227 ಕ್ಕೆ 1,50,000/-  ಹಾಗೂ ದಿನಾಂಕ 07/12/2021 ವ್ಯಕ್ತಿಯು ಕಳುಹಿಸಿದ QR CODE ಮೂಲಕ 20,000/-  ಹಾಗೂ ಆರೋಪಿಯ ICICI BANK ಖಾತೆ ನಂಬ್ರ 615701504908 ನೇದಕ್ಕೆ 1,95,000/- ವರ್ಗಾಯಿಸಿರುತ್ತಾರೆ  ಹೀಗೆ  ಅಪರಿಚಿತ ವ್ಯಕ್ತಿಯು ತಿಳಿಸಿದ yes bank, ICICI BANK ಹಾಗೂ QR CODE SCAN ಮೂಲಕ  ಹಂತ ಹಂತವಾಗಿ ಪಿರ್ಯಾದಿದಾರರು ಒಟ್ಟು 5,31,200/- ಹಣವನ್ನು ವರ್ಗಾಯಿಸಿರುತ್ತಾರೆ ಅದರೆ ಪಿರ್ಯಾದಿದಾರರಿಗೆ  ಯಾವುದೇ ಲಾಭವನ್ನು ನೀಡದೆ ಹಾಗೂ ಹಣವನ್ನು ಪಾವತಿ ಮಾಡದೆ ಮೋಸ ಮಾಡಿರುತ್ತಾರೆ ಎಂಬಿತ್ಯಾದಿಯಾಗಿದೆ

Crime Reported in Barke PS

 ಪಿರ್ಯಾದಿದಾರರಾದ ಶ್ರೀಮತಿ ಶಾರದ ರವರು ಪ್ರಭಾರ ಸಹಾಯಕ ನೋಂದಣಾಧಿಕಾರಿ ಹಾಗೂ ಸಹಾಯಕ ಆಡಳಿತಾಧಿಕಾರಿ, ದ.ಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, 1ನೇ ಅಡ್ಡರಸ್ತೆ, ಮಣ್ಣಗುಡ್ಡ, ಕೇಂದ್ರ ಉಗ್ರಾಣ ಹತ್ತಿರ ಮಂಗಳೂರು ಇಲ್ಲಿ ಕೆಲಸ ಮಾಡಿಕೊಂಡಿದ್ದು, ಈ ಕಚೇರಿಯ ಶೀಘ್ರಲಿಪಿಗಾರರಾದ ಶ್ರೀ ಶಿವಾನಂದ ಎಂ ಪ್ರಾಯ 41 ವರ್ಷ ರವರು ಸುಮಾರು 04 ವರ್ಷಗಳಿಮದ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಸದರಿ ನೌಕರನು ಮೌಖಿಕವಾಗಿ ತಾನು ಆರ್ಥಿಕ ಸಮಸ್ಯೆಯಿಂದ ಸಾಯುವುದಾಗಿ ಹೇಳಿಕೊಳ್ಳುತ್ತಿದ್ದವರು, ದಿನಾಂಕ: 08-12-2021 ರಂದು ಸಂಜೆ 06-30 ಗಂಟೆಯವರೆಗೆ ಕಛೇರಿಯಲ್ಲಿದ್ದು, ದಿನಾಂಕ: 09-12-2021 ರಿಂದ  ಕಾಣೆಯಾಗಿದ್ದು ಪತ್ತೆ ಮಾಡಿಕೋಡಬೇಕಾಗಿ ಎಂಬಿತ್ಯಾದಿ ಸಾರಾಂಶ.

ಕಾಣೆಯಾದವರ ವಿವರ:

ಹೆಸರು: ಶಿವಾನಂದ ಮಿಟ್ಟಿ ಪ್ರಾಯ 41 ವರ್ಷ

ತಂದೆ: ಪೆಂಟಪ್ಪ ಮಿಟ್ಟಿ

ಎತ್ತರ: 5.6 ಅಡಿ

ಮಾನಾಡುವ ಭಾಷೆ: ಕನ್ನಡ, ಹಿಂದಿ, ತುಳು

ಚಹರೆ : ಎಣ್ಣೆಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಶರೀರ, ಕ್ಲೀನ್ ಶೆವ್ ಮಾಡಿರುತ್ತಾನೆ.

Crime Reported in Traffic North PS

ದಿನಾಂಕ:08-12-2021 ರಂದು ಪಿರ್ಯಾದಿ Smt Chandana ದಾರರು ತನ್ನ ಗಂಡನ ಬಾಬ್ತು KA-20-EK-4275 ನಂಬ್ರದ ಜುಪಿಟರ್ ಸ್ಕೂಟರಿನಲ್ಲಿ ಅಗತ್ಯ ಕೆಲಸದ ಬಗ್ಗೆ ಸುರತ್ಕಲಿಗೆ ಬಂದಿದ್ದವಳು ಕೆಲಸ ಮುಗಿಸಿಕೊಂಡು ವಾಪಸ್ಸು ತನ್ನ ಮನೆಯಾದ ನಂದಿಕೂರು ಕಡೆಗೆ ಹೋಗಲು ಸುರತ್ಕಲ್ ಕಡೆಯಿಂದ ಸೂರಜ್ ಇಂಟರ್ ನ್ಯಾಷನಲ್ ಹೋಟೇಲ್ ವರೆಗೆ ಸರ್ವೀಸ್ ಡಾಮಾರು ರಸ್ತೆಯಲ್ಲಿ ಬಂದು ಪಡುಬಿದ್ರೆ ಕಡೆಗೆ ಹೋಗಲು ಪಿರ್ಯಾದಿದಾರರು ತನ್ನ ಸ್ಕೂಟರಿಗೆ ಬಲಬದಿಯ ಇಂಡಿಕೇಟರ್ ಹಾಕಿಕೊಂಡು ಪಡುಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಹಾದು ಹೋಗುವ NH 66 ನೇ ಡಾಮಾರು ರಸ್ತೆಯ ಮಧ್ಯದ ಡಿವೈಡರ್ ಬಳಿ ಬಂದು ಮಂಗಳೂರು ಕಡೆಯಿಂದ ಪಡುಬಿದ್ರೆ ಕಡೆಗೆ ಹಾದು ಹೋಗುವ NH 66 ನೇ ಡಾಮಾರು ರಸ್ತೆಯಲ್ಲಿ ಸಾಗುವ ವಾಹನಗಳನ್ನು ಗಮನಿಸುತ್ತಿದ್ದ ಸಮಯ ಸುಮಾರು ರಾತ್ರಿ 7:15 ಗಂಟೆಗೆ ಮಂಗಳೂರು ಕಡೆಯಿಂದ ಪಡುಬಿದ್ರೆ ಕಡೆಗೆ ಹಸಿ ಮೀನು ಸಾಗಿಸುವ KA-20-D-5699 ನಂಬ್ರದ ವಾಹನವನ್ನು ಅದರ ಚಾಲಕನಾದ NIZAM MOIDDIN ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಜಂಕ್ಷನ್ ಜಾಗದಲ್ಲಿರುವ ತೆರೆದ ಡಿವೈಡರ್ ಬಳಿ ಅಪಾಯಕಾರಿ ರೀತಿಯಲ್ಲಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಮಧ್ಯದ ಡಿವೈಡರ್ ಬಳಿ ವಾಹನಗಳನ್ನು ಗಮನಿಸುತ್ತಿದ್ದ ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿ ಸ್ಕೂಟರನ್ನು ಮುಂದೆ ಎಳೆದುಕೊಂಡು ಹೋಗಿದ್ದು ಇದರ ಪರಿಣಾಮ ಪಿರ್ಯಾದಿದಾರರ ಬಲಬದಿಯ ಕಾಲರ್ ಬೋನ್ ಬಳಿ ಮೂಳೆ ಬಿರುಕು ಬಿಟ್ಟ ರೀತಿಯ ಗಂಭೀರ ಸ್ವರೂಪದ ಗಾಯವಾಗಿದ್ದು, ಬಲಕಾಲಿನ ಕಿರು ಬೆರಳಿಗೆ ಗುದ್ದಿದ ರೀತಿಯ ಗಾಯ, ಕೆನ್ನೆಯ ಬಲಬದಿ, ಬಲಕೈ ಭುಜಕ್ಕೆ, ಬೆನ್ನಿನ ಎಡ ಬದಿ, ಹಾಗೂ ಬಲಕಾಲಿನ ಮೊಣಗಂಟಿಗೆ ಅಲ್ಲಲ್ಲಿ ತರಚಿದ ರೀತಿಯ ಗಾಯವಾಗಿದ್ದು ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ ಎಂಬಿತ್ಯಾದಿ.

 

Crime Reported in Moodabidre PS

 ದಿನಾಂಕ: 08-12-2021 ರಂದು ಪಿರ್ಯಾಧಿ Harindra Shetty  ದಾರರು ತನ್ನ ಸ್ನೇಹಿತ ಶರತ್ ಎಂಬಾತನ್ನು ಅವರ ಮನೆಗೆ ಬಿಟ್ಟು ವಾಪಾಸ್ಸು, ಪಿರ್ಯಾಧಿದಾರರ ಮನೆಯಾದ ಮೂಡಾಯಿಕಾಡು ಕಡೆಗೆ ಮೋಟಾರು ಸೈಕಲ್ ನಲ್ಲಿ ಕಾರ್ಕಳ - ಮೂಡಬಿದ್ರೆ ರಸ್ತೆಯಲ್ಲಿ ಸವಾರಿಮಾಡಿಕೊಂಡು ಬರುತ್ತಿರುವಾಗ ರಾತ್ರಿ ಸುಮಾರು 10-40 ಗಂಟೆಗೆ ಬೆಳುವಾಯಿ ಗ್ರಾಮದ ಮಾರಿಗುಡಿ ದೇವಸ್ಥಾನದ ಬಳಿ ತಲುಪುವಾಗ ಪಿರ್ಯಾಧಿದಾರರ ಹಿಂದಿನಿಂದ ಅಂದರೆ ಕಾರ್ಕಳ ಕಡೆಯಿಂದ ಮೂಡಬಿದ್ರೆ ಕಡೆಗೆ ಕೆ.ಎ 19 ಎ.ಸಿ 585 ನೇ ಸಾಯಿ ಟ್ರಾವೆಲ್ಸ್ ಬಸ್ಸನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರುಕಡತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಬೈಕನ್ನು ಹಿಂದಿಕ್ಕಿ ಸ್ವಲ್ಪ ದೂರ ಮುಂದೆ ರಸ್ತೆಯ ಬಲ ಬದಿಯಲ್ಲಿ ಚಾಲಾಯಿಸಿಕೊಂಡು ಹೋಗಿ ಮೂಡಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಕೆ.ಎ 20 ವೈ 4964 ನೇ ಮೋಟಾರು ಸೈಕಲ್ ನಲ್ಲಿ ಬರುತ್ತಿದ್ದ ಜಗನ್ನಾಥ ಶೆಟ್ಟಿ ಎಂಬುವರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಅಘಾತದ ಪರಿಣಾಮ ಮೋಟಾರು ಸೈಕಲ್ ಸವಾರ ಜಗನ್ನಾಥ ಶೆಟ್ಟಿ ಎಂಬಾತನ  ತಲೆಗೆ ಮತ್ತು ಕೈ - ಕಾಲುಗಳಿಗೆ ಹಾಗೂ ದೇಹದ ಇತರ ಭಾಗಗಳಿಗೆ ಗಂಬೀರ ಸ್ವೃರೂಪದ ಗಾಯವಾಗಿ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಎಂಬಿತ್ಯಾಧಿ.

 

ಇತ್ತೀಚಿನ ನವೀಕರಣ​ : 09-12-2021 08:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080