ಅಭಿಪ್ರಾಯ / ಸಲಹೆಗಳು

Crime Reported in Mangalore Women PS                                                      

ಪಿರ್ಯಾದುದಾರರಾದ  1 ನೇ ಆರೋಪಿ ಮೊಹಮ್ಮದ್ ಇಮ್ರಾನ್ ಎಂಬವರೊಂದಿಗೆ ದಿನಾಂಕ 11-11-2019 ರಂದು ವಿವಾಹವಾಗಿದ್ದು, ವಿವಾಹದ ನಂತರ 2 ನೇ ಆರೋಪಿ ಅತ್ತೆ, 1 ಆರೋಪಿಯ ತಂಗಿಯವರಾದ 3, 4, 5 ನೇ ಆರೋಪಿಗಳ ಕುಮ್ಮಕ್ಕಿನಿಂದ ವರದಕ್ಷಿಣೆಗಾಗಿ ಪಿರ್ಯಾದಿದಾರರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಅಲ್ಲದೇ ಆರೋಪಿ 1 ನೇಯವರ ಜೊತೆಗೆ ಇತರ ಆರೋಪಿಗಳು ಒಟ್ಟಿಗೆ ಸೇರಿ ದಿನಾಂಕ 13-12-2021 ರಂದು 14:00 ಗಂಟೆಗೆ ಮಂಗಳೂರು ಪೊಳಲಿ ಅಡೂರು ಗಂಡನ ಮನೆಯಾದ ಕಲ್ಲಕಲಂಬಿ ಎಂಬಲ್ಲಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ಎಂಬಿತ್ಯಾದಿ.

Crime Reported in Traffic North Police Station              

ದಿನಾಂಕ 09-01-2021 ರಂದು ಪಿರ್ಯಾದಿ Kiran Kumar ದಾರರು ತಡಂಬೈಲ್ ನ ಗರುಡ ಬಾರ್ ಆಂಡ್ ರೆಸ್ಟೋರೆಂಟಿನ ಎದುರು ಇರುವ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹಾದು ಹೋಗುವ NH 66 ನೇ ರಸ್ತೆಯನ್ನು ದಾಟಿ ಡಿವೈಡರ್ ಬಳಿ ತಲುಪುತ್ತಿದ್ದಂತೆ ರಾತ್ರಿ ಸಮಯ ಸುಮಾರು 8:30 ಗಂಟೆಗೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KA-19-MK-4766 ನಂಬ್ರದ ಜೀಪನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀಯಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಎಡ ಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಹಾಗೂ ಬಲ ಕಾಲಿನ ಹೆಬ್ಬೆರಳಿಗೆ ಗುದ್ದಿದ ರೀತಿಯ ಗಾಯವಾಗಿ ಚಿಕತ್ಸೆಯ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in CEN Crime PS

ಪಿರ್ಯಾದಿದಾರರು ಮಂಗಳೂರು ಪೋರ್ಟ್ ರಸ್ತೆಯ ಎಸ್.ಬಿ.ಐ ಬ್ಯಾಂಕ್ ನಲ್ಲಿ ಎಸ್.ಬಿ ಖಾತೆ ಹೊಂದಿದ್ದು ದಿನಾಂಕ 09-01-2022 ರಂದು 11-37 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ಗೆ 8348467661 ಮೊಬೈಲ್ ನಂಬ್ರದಿಂದ “ ನಿಮ್ಮ ಅಕೌಂಟ್ ಬ್ಲಾಕ್ ಆಗಿದೆ ಪಾನ್ ಕಾರ್ಡ್ ಅಪ್ ಡೇಟ್ ಮಾಡಿ” ಎಂಬುದಾಗಿ ಲಿಂಕ್ ಬಂದಿರುತ್ತದೆ. ಅದನ್ನು ನೋಡಿದ ಪಿರ್ಯಾದಿದಾರರ ಹೆಂಡತಿ ತರಾತುರಿಯಲ್ಲಿ ಸದ್ರಿ ಲಿಂಕ್ ನ್ನು ಒತ್ತಿದ ಕಾರಣದಿಂದ 11.55 ಗಂಟೆಗೆ ಪಿರ್ಯಾದಿದಾರರ ಖಾತೆಯಿಂದ ರೂಪಾಯಿ 25,000/-IMPS NO. 200911562276 ಮೂಲಕ ವರ್ಗಾವಣೆಯಾದ ಬಗ್ಗೆ ಪಿರ್ಯಾದಿದಾರರ ಮೊಬೈಲ್ ನಂಬ್ರಕ್ಕೆ ಮೆಸೇಜ್ ಬಂದಿರುತ್ತದೆ. ಅದಾದ ಬಳಿಕ 12.02 ಗಂಟೆಗೆ 8348467661 ಮೊಬೈಲ್ ನಂಬ್ರದಿಂದ ಪಿರ್ಯಾದಿದಾರರ ಮೊಬೈಲ್ ಕರೆ ಬಂದು OTP  ನಂಬ್ರವನ್ನು ಕೇಳಿದ್ದು, ಆಗ ಪಿರ್ಯಾದಿದಾರರಿಗೆ, ಅವರ ಹೆಂಡತಿಗೆ ಮೋಸ ಹೋದ ಬಗ್ಗೆ ಮನವರಿಕೆಯಾಗಿರುತ್ತದೆ. ಆದುದರಿಂದ ಈ ಬಗ್ಗೆ  ಸೂಕ್ತ ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದಿಯಾಗಿರುತ್ತದೆ ಎಂಬಿತ್ಯಾದಿ

Crime Reported in Traffic South Police Station                                                       

ಪಿರ್ಯಾದಿ MAHAMMOD ANSAR ದಾರರು  KA-19-AA-5302 ಅಶೋಕ್ ಲೇ ಲ್ಯಾಂಡ್ ಟೆಂಪೋ ನೇದರ ನೋಂದಾಣಿ ಮಾಲಕನಾಗಿದ್ದು ಸದ್ರಿ ವಾಹನವನ್ನು ಸೋಮೇಶ್ವರ ಪುರಸಭೆಗೆ ಕಸದ ವಿಲೇವಾರಿಯ ಸಾಗಣಿಕೆಯ ಬಗ್ಗೆ ಒಪ್ಪಂದ ಮಾಡಿಕೊಂಡಿರುತ್ತಾರೆ ನಿನ್ನೆ ದಿನ ದಿನಾಂಕ: 09-01-2022 ರಂದು ಮಧ್ಯಾಹ್ನ ಸಮಯ KA-19-AA-5302 ಅಶೋಕ್ ಲೇ ಲ್ಯಾಂಡ್ ಟೆಂಪೋವನ್ನು ಅದರ ಚಾಲಕ ಸುಧೀರ ರವರು ಅವರ ಮನೆಯಾದ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಉಚ್ಚಿಲ ಎಂಬಲ್ಲಿ ರಾ.ಹೆ. 66 ಡಾಮಾರು ರಸ್ತೆಯ ಬದಿಯ ಕಚ್ಚಾ ಮಣ್ಣು ರಸ್ತೆಯಲ್ಲಿ ಪಾರ್ಕ್ ಮಾಡಿ ನಿಲ್ಲಿಸಿರುತ್ತಾರೆ. ಈ ದಿನ ದಿನಾಂಕ: 10-01-2022 ರಂದು ಮುಂಜಾನೆ ಜಾವ 02-00 ಗಂಟೆಗೆ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಮೀನಿನ ಲಾರಿ ನಂಬ್ರ: GA-07-F-7070 ನೇದರ ಚಾಲಕ ಅಬ್ದುಲ್ ಸತ್ತಾರ್ ಎಂಬವರು ಲಾರಿಯನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ KA-19-AA-5302 ಅಶೋಕ್ ಲೇ ಲ್ಯಾಂಡ್ ಟೆಂಪೋ ನೇದಕ್ಕೆ ಹಿಂದಕ್ಕೆ ಡಿಕ್ಕಿ ಪಡಿಸಿರುತ್ತಾನೆ. ಈ ಅಪಘಾತದಿಂದ ಯಾರಿಗೋ ಗಾಯಗಳು ಉಂಟಾಗಿರುವುದಿಲ್ಲ. ಆದರೆ ಪಿರ್ಯಾದಿದಾರರ ಬಾಬ್ತು KA-19-AA-5302 ಅಶೋಕ್ ಲೇ ಲ್ಯಾಂಡ್ ಟೆಂಪೋ ವಾಹನದ ಹಿಂಬದಿಯು ಭಾಗಶ: ಸಂಪೂರ್ಣ ಜಖಂಗೊಂಡಿರುವುದಲ್ಲದೇ ಅಪಘಾತಪಡಿಸಿದ ಮೀನಿನ ಲಾರಿ ನಂಬ್ರ: GA-07-F-7070 ನೇದರ ಮುಂಭಾಗ ಜಖಂಗೊಂಡಿರುತ್ತದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 10-01-2022 07:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080