ಅಭಿಪ್ರಾಯ / ಸಲಹೆಗಳು

Crime Reported in : CEN Crime PS

ಪಿರ್ಯಾದಿದಾರು  ಏಕ್ಸೀಸ್ ಬ್ಯಾಂಕ್ ನಲ್ಲಿ  ಖಾತೆಯನ್ನು ಹೊಂದಿರುತ್ತಾರೆ. ಸದ್ರಿ ಬ್ಯಾಂಕ್ ನ ಡೆಬಿಟ್ ಕಾರ್ಡ್ ಹೊಂದಿದ್ದು, ಅದೇ ಬ್ಯಾಂಕ್ ನ 2 ಕ್ರೆಡಿಟ್ ಕಾರ್ಡ್  ಹೊಂದಿರುತ್ತಾರೆ. ಸದ್ರಿ ಕ್ರೆಡಿಟ್ ಕಾರ್ಡ್ ನ ಪೈಕಿ ಒಂದು ಕಾರ್ಡ್ ನ್ನು ಬ್ಲಾಕ್ ಮಾಡುವ ಸಲುವಾಗಿ ಗೂಗಲ್ ನಲ್ಲಿ ಏಕ್ಸೀಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಕಸ್ಟಮರ್ ಕೇರ್ ನಂಬ್ರವನ್ನು ಹುಡುಕಿ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿಯು ಪಿರ್ಯಾದಿದಾರರಲ್ಲಿ ANY DESK APP ಡೌನ್ ಲೋಡ್ ಮಾಡಲು ತಿಳಿಸಿ ನಂತರ SLICE APP ಡೌನ್ ಲೋಡ್ ಮಾಡಲು ತಿಳಿಸಿರುತ್ತಾರೆ. ಅದರಂತೆ ಪಿರ್ಯಾದಿದಾರರು ಆಪ್ ಡೌನ್ ಲೋಡ್ ಮಾಡಿದಾಗ, ಸದ್ರಿ ವ್ಯಕ್ತಿಯು ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಂಬ್ರವನ್ನು ಅದರಲ್ಲಿ ಹಾಕಲು ತಿಳಿಸಿ ನಂತರ ಪಿನ್ ನಂಬ್ರವನ್ನು ಹಾಕಲು ತಿಳಿಸಿದಾಗ, ಅದರಂತೆ ಮಾಡಿದ ಪಿರ್ಯಾದಿದಾರರ ಬ್ಯಾಂಕ್ ನ ಡೆಬಿಟ್ ಕಾರ್ಡ್ ನಿಂದ ತಲಾ 5025/- ರಂತೆ 5 ಸಲ ರೂಪಾಯಿ 25,125/- ನಂತರ ಕ್ರೆಡಿಟ್ ಕಾರ್ಡ್ ನಿಂದ ಕ್ರಮವಾಗಿ 49760/-, 49,760/-, 49,760/- ಮತ್ತು 20,310 ರಂತೆ ಒಟ್ಟು 1,67,530/- ರೂಪಾಯಿ ಕಡಿತಗೊಂಡ ಬಗ್ಗೆ ಮೊಬೈಲ್ ಗೆ ಮೆಸೇಜ್ ನಿನ್ನೆ ಸಂಜೆ 7-30 ಗಂಟೆಗೆ ಬಂದಿದ್ದು,  ನಂತರ ಪಿರ್ಯಾದಿದಾರರು ಕಸ್ಟಮರ್ ಕೇರ್ ಕರೆ ಮಾಡಿ ಕಾರ್ಡ್ ಗಳನ್ನು ಬ್ಲಾಕ್ ಮಾಡಿಸಿರುತ್ತಾರೆ.  ಹೀಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಿಂದ ರೂಪಾಯಿ 1,92,655/- ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ.  ಆದುದರಿಂದ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿರುತ್ತಾರೆ ಎಂಬಿತ್ಯಾದಿ

 

2) ಪಿರ್ಯಾದಿದಾರರು ಮತ್ತು ಅವರ ಪತ್ನಿ ಹೆಸರಿನಲ್ಲಿ ಕೆನರಾ ಬ್ಯಾಂಕ್ ಮಂಗಳೂರು ಗಾಂಧಿನಗರ ಬ್ರಾಂಚ್ ನಲ್ಲಿ ಜಂಟಿ ಉಳಿತಾಯ ಖಾತೆ ಹೊಂದಿದ್ದು ಸದ್ರಿ ಬ್ಯಾಂಕ್ ಖಾತೆಗೆ ಡೆಬಿಟ್ ಕಾರ್ಡ್ ಮಂಜೂರು ಆಗಿರುತ್ತದೆ. ದಿನಾಂಕ: 15/09/2021 ರಂದು ಸಂಜೆ ಸುಮಾರು 4 ಗಂಟೆಯಿಂದ 4.30 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರು ಮನೆಯಲ್ಲಿರುವ ಸಮಯ 8509055504 ನೇ ಮೊಬೈಲ್ ನಂಬ್ರದಿಂದ ಅಪರಿಚಿತ ವ್ಯಕ್ತಿ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತನ್ನನ್ನು ತಾನು ಬ್ಯಾಂಕ್ ಉದ್ಯೋಗಿಯೆಂದು ಪರಿಚಯಸಿಕೊಂಡು ಕೆನರಾ ಬ್ಯಾಂಕ್ ಖಾತೆಗೆ ಹೊಂದಿಕೊಂಡಿರುವ ಡೆಬಿಟ್ ಕಾರ್ಡ್ ನಿಷ್ಕ್ರಿಯ ಗೊಂಡಿರುವುದಾಗಿಯೂ ಸದ್ರಿ ಕಾರ್ಡ್ ನ್ನು ನವೀಕರಿಸುವ ಬಗ್ಗೆ ಡೆಬಿಟ್ ಕಾರ್ಡ್ ನಂಬ್ರ ಮತ್ತು CVV ಕೋಡ್ ತಿಳಿಸುವಂತೆ ಕೋರಿಕೊಂಡಿದ್ದು ಅದರಂತೆ ಪಿರ್ಯಾದಿದಾರರು ಅಪರಿಚಿತ ವ್ಯಕ್ತಿಯು ಬ್ಯಾಂಕ್ ಉದ್ಯೋಗಿಯೆಂದು ನಂಬಿ ಆತನು ಕೇಳಿದಂತೆ ಎಟಿಎಂ ಕಾರ್ಡ್ ಸಂಖ್ಯೆ:  ಮತ್ತು CVV ಕೋಡ್ ತಿಳಿಸಿರುತ್ತಾರೆ, ಪಿರ್ಯಾದಿದಾರರು ಸದ್ರಿ ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ಸಂಖ್ಯೆ ಮತ್ತು ಸಿವಿವಿ ಕೋಡ್ ನೀಡಿದ ಕೂಡಲೇ ಸದ್ರಿ ವ್ಯಕ್ತಿಯು ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ನೇಯದರಿಂದ ಒಟ್ಟು ಎರಡು ಹಂತದಲ್ಲಿ ರೂ 51,150/- ರೂಗಳನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿರುತ್ತಾರೆ ಎಂಬಿತ್ಯಾದಿ

 

3)  ದಿನಾಂಕ 10-02-2022 ರಂದು ಸುಮಾರು 11-00 ಗಂಟೆಗೆ ಪಿ.ಎಸ್.ಐ ಲತಾ ರವರು ಠಾಣೆಯಲ್ಲಿರುವಾಗ ಠಾಣಾ ಹೆಚ್ ಸಿ  ರವರುದೂರವಾಣಿ ಕರೆ ಮಾಡಿ ಮಂಗಳೂರು ನಗರದ ಕುಂಟಿಕಾನ ಪ್ಲೈಓವರ್ ಕೆಳಗಡೆ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ಯುವಕ ಯಾವುದೋ ಅಮಲು ಪದಾರ್ಥ ಸೇವನೇ ಮಾಡಿ ಸಾರ್ವಜನಿಕರಿಗೆ ಹಾಗೂ ವಾಹನಗಳ  ಓಡಾಟಕ್ಕೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ  ಬಾತ್ಮಿದಾರರಿಂದ ಮಾಹಿತಿ ಬಂದಿರುವುದಾಗಿ ತಿಳಿಸಿದಂತೆ  ಸ್ಥಳಕ್ಕೆ ಧಾಳಿ ನಡೆಸಿ ಆಪಾದಿತ ಪುನೀತ್ ದೇವಾಡಿಗ (21) ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ತಾಪಾಸಣೆಗೆ ಒಳಪಡಿಸಿ ಆಪಾದಿತನು ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಾಧಿಕಾರಿಯವರು ನೀಡಿದ ವೈದ್ಯಕೀಯ ಧೃಢಪತ್ರದ ಮೇರೆಗೆ  ಆತನ ವಿರುದ್ದ ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

4)  ದಿನಾಂಕ 10-02-2022 ರಂದು ಸುಮಾರು 10-45 ಗಂಟೆಗೆ ಪಿ.ಎಸ್.ಐ ಸತೀಶ್ ಎಮ್ .ಪಿ  ರವರು ಠಾಣೆಯಲ್ಲಿರುವಾಗ ಠಾಣಾ ಹೆಚ್ ಸಿ ದೂರವಾಣಿ ಕರೆ ಮಾಡಿ ಮಂಗಳೂರು ನಗರದ  ಕೋಡಿಕಲ್ ನಾಗಬ್ರಹ್ಮ ಚಾವಡಿ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ಯುವಕ ಯಾವುದೋ ಅಮಲು ಪದಾರ್ಥ ಸೇವನೇ ಮಾಡಿ ಸಾರ್ವಜನಿಕರಿಗೆ ಹಾಗೂ ವಾಹನಗಳ  ಓಡಾಟಕ್ಕೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ  ಬಾತ್ಮಿದಾರರಿಂದ ಮಾಹಿತಿ ಬಂದಿರುವುದಾಗಿ ತಿಳಿಸಿದಂತೆ ಸ್ಥಳಕ್ಕೆ ಧಾಳಿ ನಡೆಸಿ ಆಪಾದಿತ ಸುದೀಪ್ ಪಿ (20) ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ತಾಪಾಸಣೆಗೆ ಒಳಪಡಿಸಿ ಆಪಾದಿತನು ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಾಧಿಕಾರಿಯವರು ನೀಡಿದ ವೈದ್ಯಕೀಯ ಧೃಢಪತ್ರದ ಮೇರೆಗೆ ಆತನ ವಿರುದ್ದ ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 10-02-2022 06:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080