ಅಭಿಪ್ರಾಯ / ಸಲಹೆಗಳು

Crime Reported in Panambur PS                         

ಪಿರ್ಯಾದಿ UJJAL TARAPDAR ದಾರರು ಸೀ ಬರ್ಡ್ ಮರೈನ್ ಸರ್ವೀಸಸ್ಸ್ ಗೋವಾ ಕಂಪನಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡಿಕೊಂಡಿದ್ದವರು ಕಳೆದ 05 ದಿನಗಳಿಂದ ಮಂಗಳೂರಿನ ತಣ್ಣೀರುಬಾವಿಯ ಫಾತಿಮಾ ಬೀಚ್ ಸಮೀಪ ಕಂಪನಿ ವಹಿಸಿಕೊಂಡಿದ್ದ ಓಶಿಯನ್ ಬ್ಲೆಸ್ಸಿಂಗ್ ಶಿಪ್ ಅರಬ್ಬೀ ಸಮುದ್ರದಲ್ಲಿ ಮುಳೂಗಿಹೋಗಿದ್ದ ಶಿಪ್ ಅನ್ನು ಸ್ಕ್ರಾಪ್ ಗೆ ತೆಗೆಯಲು ವಹಿಸಿಕೊಂಡಿದ್ದ ಕೆಲಸವನ್ನು ದಿನಾಂಕ:09-03-2022 ರಂದು ಸಂಜೆ 05.10 ಗಂಟೆಗೆ ಇತರ ಕೆಲಸಗಾರರ ಜೊತೆ ಕೆಲಸ ಮಾಡುತ್ತಿದ್ದ ಬಾರ್ಜ್ ನ ಯ್ಯಾಂಕರ್ ರೋಪ್ ಬಿಗಿ ಮಾಡುವ ಕೆಲಸವನ್ನು ಮಾಡುತ್ತಿದ್ದ ನಾಸೀರುದ್ದೀನ್ ಖಾನ್ ಹಿಡಿದುಕೊಂಡಿದ್ದ ಕಬ್ಬಿಣದ ಹ್ಯಾಂಡಲ್ ನಾಸೀರ್ ಉದ್ದೀನ್ ರವರ ತಲೆಗೆ ಬಡಿದು ಚಿಕಿತ್ಸೆಗೆ ದಾಖಲಾಗಿದ್ದ ನಾಸೀರ್ ಉದ್ದೀನ್ ರವರು  ಮೃತ ಪಟ್ಟಿರುವುದಾಗಿದೆ. ಅಪಾಯಕಾರಿಯಾದ ಕೆಲಸವನ್ನು ಮಾಡಿಸುವ ಸಮಯ ಕೆಲಸಗಾರರ ಜೀವ ಹಾನಿಯಾಗುತ್ತದೆ ಎಂದು ತಿಳಿದು ಕೂಡ ಯಾವುದೇ  ಸುರಕ್ಷತೆ ನೀಡದೇ  ಆರೋಪಿತರುಗಳು ಕೆಲಸಕ್ಕೆ ನಿಯೋಜಿಸಿದ್ದರಿಂದ  ಈ ಘಟನೆ ಸಂಭವಿಸಿರುತ್ತದೆ.ಎಂಬಿತ್ಯಾದಿಯಾಗಿರುತ್ತದೆ

Crime Reported in Mangalore East PS

ಫಿರ್ಯಾದಿ Deepak Salyan ದಾರರು ದಿನಾಂಕ: 09-30-2022 ರಂದು  ರಾತ್ರಿ 10-15 ಗಂಟೆಗೆ ಮಂಗಳೂರು ನಗರದ ಕುಲಶೇಖರ ಕಲ್ಪನೆ ಎಂಬಲ್ಲಿ ರಸ್ತೆಯ ಬದಿಯಲ್ಲಿ ತನ್ನ ಪರಿಚಯದ ಬಸವ ಎಂಬಾತನೊಂದಿಗೆ ಮಾತನಾಡಿಕೊಂಡಿದ್ದ ಸಮಯ ಅವರ ಪಕ್ಕದಲ್ಲಿ ನಿಂತುಕೊಂಡಿದ್ದ 2 ಜನ ಅಪರಿಚಿತ ವ್ಯಕ್ತಿಗಳ ಪೈಕಿ ಒಬ್ಬಾತನು ಪೋನ್ ನಲ್ಲಿ ಜೋರಾಗಿ ಮಾತನಾಡುತ್ತಿದ್ದು, ಆತನಿಗೆ ಬಸವನು ಮೆಲ್ಲನೆ ಮಾತನಾಡುವಂತೆ ತಿಳಸಿದಾಗ ಅವರುಗಳು ಕೋಪಗೊಂಡು ಏಕಾಏಕಿ ಪಿರ್ಯಾದಿದಾರರ ಬಳಿಗೆ ಬಂದು ಪಿರ್ಯಾದಿದಾರರಿಗೆ ಆವಾಚ್ಯ ಶಬ್ದದಿಂದ ಬೈದು ಕೈಯಲ್ಲಿದ್ದ ಹೆಲ್ಮಟ್ ನಿಂದ ತಲೆಗೆ ಹೊಡೆದು ಹಾಗೂ ಮೈಕೈಗೆ ಕೈಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Crime Reported in Mulki PS

ಪಿರ್ಯಾದಿದಾರರು ದಿನಾಂಕ 08.03.2022 ರಂದು ಸಂಜೆ ತಮ್ಮ ಹೆಂಡತಿ ಹಾಗೂ ಮಗಳೊಂದಿಗೆ ಪಾವಂಜೆ ಗ್ರಾಮದ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಜಾತ್ರೆಯ ಸಂತೆಯಲ್ಲಿ  ಸುತ್ತಾಡುತ್ತಿರುವಾಗ ಪಿರ್ಯಾದಿದಾರರು ಹಿಡಿದುಕೊಂಡಿದ್ದ ಮಗಳು ಸಂಜೆ ಸುಮಾರು 07.30 ಗಂಟೆಗೆ ಚೈನ್ ಎಂದು ಹೇಳಿದಾಗ ಪಿರ್ಯಾದಿದಾರರು ತಿರುಗಿ ನೋಡಿದಾಗ ಆಕೆಯ ಕುತ್ತಿಗೆಯಲ್ಲಿದ್ದ  ಚೈನ್ ಕಾಣೆಯಾಗಿದ್ದು  ಹಿಂತಿರುಗಿ ನೋಡಿದಾಗ ಒರ್ವ ವ್ಯಕ್ತಿಯು ಪಿರ್ಯಾದಿದಾರರನ್ನು ನೋಡಿ ಜನ ಜಂಗುಳಿಯ ಮದ್ಯದಲ್ಲಿ ಮರೆಯಾಗಿ ಹೋಗಿದ್ದು. ಆತನೇ ಚಿನ್ನದ ಚೈನನ್ನು ಕಳ್ಳತನ ಮಾಡಿಕೊಂಡುಹೋಗಿರುವುದಾಗಿ  ಕಳ್ಳತನವಾದ ಚೈನ್ ಸುಮಾರು 1 ಪವನ್ ತೂಕ ಇರುವುದು ಎಂಬಿತ್ಯಾದಿ.

Crime Reported in Konaje PS    

ಪಿರ್ಯಾದಿ Santhosh Naik ದಾರರು ತೇಜ್ ಟೆಕ್ನಿಕಲ್ ಸರ್ವಿಸ್ ಎಂಬ ಕಂಪನಿಯಲ್ಲಿ ಟೆಕ್ನಿಷಿಯನ್ ಕೆಲಸ ಮಾಡಿಕೊಂಡಿದ್ದು, ದೇರಳಕಟ್ಟೆ ಯನಪೋಯಾ ಆಸ್ಪತ್ರೆಯಿಂದ ಕುರ್ನಾಡು ಗ್ರಾಮದವರೆಗೆ ಕಂಪನಿಗೆ ಸಂಬಂಧಿಸಿದ 13 ಮೊಬೈಲ್ ಟವರ್ ಗಳ ಇನ್ ಚಾರ್ಜ್ ನೋಡಿಕೊಂಡಿರುತ್ತಾರೆ. ದಿನಾಂಕ 28.02.2022 ರಂದು ಸಂಜೆ ಸುಮಾರು 17.00 ಗಂಟೆಗೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಅಸೈಗೋಳಿಯಲ್ಲಿರುವ ಟವರ್ ಗೆ ಬಂದು ಚೆಕ್ ಮಾಡಿಕೊಂಡು ಹೋಗಿದ್ದು, ನಂತರ ಈ ದಿನ ದಿನಾಂಕ 09.03.2022 ರಂದು ಬೆಳಗ್ಗೆ 10.00 ಗಂಟೆಗೆ ಪಿರ್ಯಾದಿದಾರರು ಅಸೈಗೋಳಿಯಲ್ಲಿರುವ ಟವರ್ ಗೆ ಬಂದು ನೋಡಲಾಗಿ ಟವರ್ ಗೆ ಅಳವಡಿಸಿದ್ದ ಅಮರ್ ರಾಜ್ ಕಂಪನಿಯ ಕಪ್ಪು ಬಣ್ಣದ 24 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಬ್ಯಾಟರಿಗಳ ಅಂದಾಜು ಮೌಲ್ಯ ಒಂದು ಲಕ್ಷ ರೂಪಾಯಿ ಆಗಬಹುದು ಎಂಬಿತ್ಯಾದಿ.

Crime Reported in Surathkal PS

 ಪಿರ್ಯಾದಿ SANDEEP ದಾರರ  ಪತ್ನಿ ಶ್ರೀಮತಿ ವರ್ಷಿತಾ ಸಾಲ್ಯಾನ್ (30) ಇವರು ದಿನಾಂಕ: 07-03-2022 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಕುಳಾಯಿ ಗ್ರಾಮದ ಕುಳಾಯಿಯ ಬಾಡಿಗೆ ಮನೆಯಿಂದ ಕೆಲಸಕ್ಕೆಂದು ಅತ್ತೆ ಪದ್ಮಾವತಿ ಇವರಲ್ಲಿ ಹೇಳಿ ಹೊರಗಡೆ ಹೋದವರು ಮಧ್ಯಾಹ್ನ 12-30 ಗಂಟೆಗೆ ಪೋನ್ ಮಾಡಿ ಸ್ಟೇಟ್ ಬ್ಯಾಂಕ ನಲ್ಲಿ ಇರುವುದಾಗಿ ತಿಳಿಸಿ ಆ ಬಳಿಕ ಮೊಬೈಲ್ ಸ್ವಿಚ್ ಆಪ್ ಮಾಡಿದವರು ಈವರೆಗೆ ಅವರ ಇರುವಿಕೆಯ ಬಗ್ಗೆ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡುವರೇ ಎಂಬಿತ್ಯಾದಿಯಾಗಿರುತ್ತದೆ.

ಕಾಣೆಯಾದವರ ಚಹರೆ:

ಹೆಸರು: ವರ್ಷಿತಾ ಪ್ರಾಯ 30 ವರ್ಷ

ಎತ್ತರ: 5 ಅಡಿ 4 ಇಂಚು

ಮೈಬಣ್ಣ:.ಬಿಳಿ ಮೈಬಣ್ಣ,ದಪ್ಪ ಶರೀರ

ಗೊತ್ತಿರುವ ಭಾಷೆಗಳು: ಕನ್ನಡ, ಇಂಗ್ಲೀಷ್, ತುಳು

ಧರಿಸಿರುವ ಬಟ್ಟೆ : ಮೆರೂನ್ ಬಣ್ಣದ ಕುರ್ತ ಹಾಕಿರುತ್ತಾರೆ.

 

 

 

ಇತ್ತೀಚಿನ ನವೀಕರಣ​ : 10-03-2022 04:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080