ಅಭಿಪ್ರಾಯ / ಸಲಹೆಗಳು

Crime Reported in Urva PS   

ದಿನಾಂಕ 09/05/2022 ರಂದು ಠಾಣಾ ಎ.ಎಸ್.ಐ ವೇಣುಗೋಪಾಲ, ಪಿ.ಸಿ ವೆಂಕಟೇಶ ಮತ್ತು ಚಾಲಕರಾಗಿ ಹೆಚ್.ಜಿ ಸುನೀಲ್ ರವರ ಜೊತೆ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ದಿನಾಂಕ 10/05/2022 ರಂದು ಬೆಳಗ್ಗಿನ ಜಾವ 03:00 ಗಂಟೆಗೆ ಮಂಗಳೂರು ಚಿಲಿಂಬಿ ಸಾರಸತ್ವ್ ಬ್ಯಾಂಕ್ ನ ಬಳಿ ಇರುವ ಮರದ ಬದಿಯಲ್ಲಿ ಒರ್ವ ವ್ಯಕ್ತಿಯು ತನ್ನ ಇರುವುವಿಕೆಯನ್ನು ಮರೆಮಾಚಿಕೊಂಡು ನಿಂತಿದ್ದು ಚಿಲಿಂಬಿ ಮೋರ್ ಸುಪರ್ ಮಾರ್ಕೇಟ್ ಬಳಿ ಹಿಡಿದು ಆತನನ್ನು ವಿಚಾರಿಸಲಾಗಿ ತನ್ನ ಹೆಸರು  ಪ್ರೇಮ್ ಲಾಲ್ ದಿಂಗ್ವಾನಿ, ಪ್ರಾಯ 24 ವರ್ಷ,  ವಾಸ: ತೇಜ್ ಪ್ಯಾಲೇಸ್, 5 ನೇ ಮಹಡಿ 501, ಉಲ್ಲಾಸ್-2 ಮುಂಬೈ ಕಲ್ಯಾಣ್, ಥಾಣೆ, ಮಹಾರಾಷ್ಟ್ರ ರಾಜ್ಯ ಎಂಬುದಾಗಿ ತಿಳಿಸಿದ್ದು ಈ ಆಪರ ವೇಳೆಯಲ್ಲಿ ಇಲ್ಲಿ ಇರುವಿಕೆಯ ಬಗ್ಗೆ ಕೇಳಲಾಗಿ ಸಮರ್ಪಕವಾದ ಉತ್ತರ ನೀಡದೇ ಇದ್ದು ಈತನು ಯಾವುದೇ ಬೇವಾರೆಂಟು ತಕ್ಷೀರು ಮಾಡುವ ಇರಾದೇ ಇದ್ದುದಾಗಿ ಬಲವಾದ ಸಂಶಯ ಕಂಡು ಬಂದಿದ್ದುದ್ದರಿಂದ ಆತನನ್ನು ಬೆಳಗಿನ ಜಾವ 03:30 ಗಂಟೆಗೆ ವಶಕ್ಕೆ ತೆಗೆದುಕೊಂಡು ಮುಂದಿನ ಕಾನೂನು ಕ್ರಮಕ್ಕಾಗಿ ವರದಿ ಎಂಬಿತ್ಯಾದಿ.

 

Crime Reported in Mangalore North PS             

 ದಿನಾಂಕ 10.05.2022 ರಂದು ಬೆಳಗ್ಗೆ 09:30 ಗಂಟೆಗೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಕರಂಗಲ್ಪಾಡಿ ಬಳಿ ಆಲಿಸ್ ಮ್ಯಾನರ್ ಅಪಾರ್ಟ್ ಮೆಂಟ್ ನಲ್ಲಿ 4 ಜನ ಯುವಕರು ಯಾವುದೋ ಮಾದಕ ವಸ್ತು ಸೇವಿಸಿ ನಶೆಯಲ್ಲಿದ್ದು ಕಂಡು ಬರುತ್ತಿದ್ದು, ಅವರುಗಳು ಅನುಮಾನಸ್ಪದ ರೀತಿಯಲ್ಲಿ ಸುತ್ತಾಡಿಕೊಂಡಿರುವ ಬಗ್ಗೆ ಠಾಣಾ ಹೊಯ್ಸಳ ವಾಹನಕ್ಕೆ ಮಾಹಿತಿ ಬಂದಂತೆ, ಸದ್ರಿ ಹೊಯ್ಸಳ ಕರ್ತವ್ಯದಲ್ಲಿದ್ದ ಎಎಸ್ ಐ ರಾಘವೇಂದ್ರ ಹಾಗೂ ಚಾಲಕರಾದ ರಮೇಶ್ ಕಂಬಿರವರು ಸದ್ರಿ ಸ್ಥಳಕ್ಕೆ ತೆರಳಿ ಆ 4 ಜನ ಯುವಕರನ್ನು ವಿಚಾರಿಸಿ ಹೆಸರು ವಿಳಾಸ ಕೇಳಲಾಗಿ 1) ಬಿಲಾಲ್ ಅಹ್ಮದ್ (19) ವಾಸ: ಫಳ್ನೀರ್ ಸ್ಟರಕ್ ರೋಡ್ ವೆಸ್ಟ್ ಗೇಟ್ ಹೈಟ್ಸ್ ಮಂಗಳೂರು, 2) ಸನು(21) ವಾಸ: ಕನಾಯಾಮ್ ಬ್ಲಾಕಲ್ ಪೇಡಿ ವಯನಾಡ್ ಕೇರಳ, 3) ಆದರ್ಶ್ (19) ವಾಸ: ಕರಿಮತ್ತಿಲ್ ವೆಳ್ಳಿಲಾಪುಳ್ಳಿ ಪಟ್ಟಾಂಬಿ ತಲಕಶೇರಿ ಪಾಲಕ್ಕಾಡ್ ಕೇರಳ, 4)  @@@@ (20) ಕಣ್ಣೂರು ಕೇರಳ ಎಂಬುದಾಗಿ ಹೇಳಿದ್ದು, ಗಾಂಜಾ ಸೇವನೆ ಮಾಡಿರುವುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು      ಎ.ಜೆ ಆಸ್ಪತ್ರೆ ಕುಂಟಿಕಾನ, ಮಂಗಳೂರು ಇಲ್ಲಿ ತಪಾಸಣೆ ಗೊಳಪಡಿಸಿದ್ದಲ್ಲಿ  1) ಬಿಲಾಲ್ ಅಹ್ಮದ್ (19), 2) ಸನು(21), 3) ಅಮೆನ್ ಅರ್ಶದ್ (20) ರವರು ನಿಷೇದಿತ ಅಮಲು ಪದಾರ್ಥವಾದ ಗಾಂಜಾ ಸೇವನೆ ಮಾಡಿರುವುದಾಗಿ ವೈದ್ಯಕೀಯ ವರದಿಯನ್ನು ನೀಡಿರುತ್ತಾರೆ. ಆದ್ದರಿಂದ ಗಾಂಜಾ ಸೇವನೆ ಮಾಡಿರುವ 1) ಬಿಲಾಲ್ ಅಹ್ಮದ್ (19), 2) ಸನು(21), 3) ಅಮೆನ್ ಅರ್ಶದ್ (20) ಇವರ ವಿರುದ್ದ ಎನ್.ಡಿ.ಪಿ.ಎಸ್ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳಲಾಗಿದೆ ಎಂಬಿತ್ಯಾದಿ

  

Crime Reported in Mangalore East Traffic PS                

ದಿನಾಂಕ:20-04-2022 ರಂದು ಪಿರ್ಯಾದಿದಾರರಾದ ಮಹಮ್ಮದ್ ರಿಝ್ವಾನ್ (27) ರವರು ಸ್ಕೂಟರ್ ನಂಬ್ರ:KA-19-HF-5531 ನೇದರಲ್ಲಿ  ಸಮೀರ್  ಇಬ್ರಾಹಿಂರವರು ಸವಾರರಾಗಿಯೂ ಪಿರ್ಯಾದಿದಾರರು  ಸಹವಾರರಾಗಿ ಮಲ್ಲಿಕಟ್ಟೆ ಕಡೆಯಿಂದ ಕಂಕನಾಡಿ ಕಡೆಗೆ ಬರುತ್ತಾ ಸಮಯ ಸುಮಾರು ಮಧ್ಯಾಹ್ನ  12:30 ಗಂಟೆಗೆ  ಸೈಂಟ್ ಆಗ್ನೇಸ್ ಜಂಕ್ಷನಿಗೆ ಬಂದು ತಲುಪುವುದಕ್ಕಿಂತ ಮುಂಚೆ ಸಿಗುವ ಹಂಪ್ಸ್  ಇರುವ ಜಾಗಕ್ಕೆ ತಲುಪುತ್ತಿದ್ದಂತೆ ಸದ್ರಿ ಸ್ಕೂಟರಿನ ಸವಾರನು ಸ್ಕೂಟರನ್ನು  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಒಮ್ಮೆಲೇ ಬ್ರೇಕ್  ಹಾಕಿದ ಪರಿಣಾಮ ಸದ್ರಿ ಸ್ಕೂಟರ್ ಹತೋಟಿ ತಪ್ಪಿ ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಕೈಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಹತ್ತಿರದ ಕೊಲಾಸೋ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡಿರುವುದಾಗಿದೆ. ಈ ಅಪಘಾತದಲ್ಲಿ ಸವಾರ ಸಮೀರ್ ಇಬ್ರಾಹಿಂ ರವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಅಪಘಾತ ಪಡಿಸಿದ ಸ್ಕೂಟರ್ ಸವಾರ  ಸಮೀರ್ ಇಬ್ರಾಹಿಂ ರವರ  ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 10-05-2022 07:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080