ಅಭಿಪ್ರಾಯ / ಸಲಹೆಗಳು

Crime Reported in : Mangalore Rural PS       

ಮಂಗಳೂರು ತಾಲೂಕು ಬೊಂಡಂತಿಲ ಗ್ರಾಮದ ಬಿತ್ತುಪಾದೆ ಮಸೀದಿ ಬಳಿ ಪಿರ್ಯಾದಿದಾರರು Sayida ವಾಸವಿದ್ದ ಮನೆಗೆ ಈ ದಿನ ದಿನಾಂಕ 09/06/2022 ರಂದು ಸಮಯ ಸುಮಾರು ರಾತ್ರಿ 20.30 ಗಂಟೆಗೆ ಪಿರ್ಯಾದಿದಾರರ ನೆರೆ ಕರೆ ಮನೆಯವರಾದ ನಫಿಯಾ ಎಂಬವರ ಸಂಬಂಧಿಗಳಾದ ಅಡ್ಯಾರ್-ಕಣ್ಣೂರಿನ ಮೊಹಮ್ಮದ್ ಸಿನಾನ್, ಮೊಹಮ್ಮದ್ ಸಿಯಾನ್, ಮೊಹಮ್ಮದ್ ರಫೀಜ್ ರವರು ಅಕ್ರಮವಾಗಿ ಪ್ರವೇಶಿಸಿ ಪಿರ್ಯಾದಿದಾರರ ಗಂಡ ನವಾಜ ರವರಿಗೆ ಆರೋಪಿಗಳೆಲ್ಲರು ಸೇರಿಕೊಂಡು ಕೈಯಿಂದ ತಲೆಗೆ ಮತ್ತು ಬೆನ್ನಿಗೆ ಹೊಡೆದು ಕಾಲಿನಿಂದ ತುಳಿಯುತ್ತಿರುವಾಗ ಪಿರ್ಯಾದಿದಾರು ಯಾಕೆ ಗಂಡನಿಗೆ ಹೊಡೆಯುತ್ತಿರಿ ಎಂದು ಅಡ್ಡ ಬಂದಾಗ ಅವರೆಲ್ಲರು ಪಿರ್ಯಾದಿದಾರರ ಮಾನಕ್ಕೆ ಹಾನಿಯಾಗುವ ರೀತಿಯಲ್ಲಿ ಮೈಮೇಲೆ ಕೈ ಹಾಕಿ ತಲೆಗೆ ಗುದ್ದಿ ಕೈ ಹಿಡಿದು ಎಳೆದಾಡಿದ್ದು ಸದ್ರಿ ಸಮಯ ಪಿರ್ಯಾದಿದಾರರ ಗಂಡನ ಅಕ್ಕ ಜುಬೇದಾ ರವರು ಅಲ್ಲಿಗೆ ಬಂದಿದ್ದು ಅವರಿಗೆ ಕೂಡಾ ಎಲ್ಲರು ಸೇರಿ ಎಳೆದಾಡಿ ಕೈಯಿಂದ ಹೊಡೆದಿರುತ್ತಾರೆ. ಸದ್ರಿ ಸಮಯ ಬೊಬ್ಬೆ ಕೇಳಿ ನೆರೆಕರೆ ಮನೆಯಲ್ಲಿರುವ ಪಿರ್ಯಾದಿದಾರರ ಅಣ್ಣ ಜಮಾಲ್ ಮತ್ತು ನೆರೆಕರೆಯವರಾದ ಮೊಹಮ್ಮದ್ ಸಲಾಂ, ಇನ್ನಿತರರು ಮನೆ ಬಳಿ ಬಂದಿದ್ದನ್ನು ನೋಡಿ ಆರೋಪಿಗಳೆಲ್ಲರು ಪಿರ್ಯಾದಿದಾರರು ಮತ್ತು ಅವರ ಗಂಡನನ್ನು ಉದೇಶಿಸಿ ಬೇವರ್ಸಿ ರಂಡೆ ಮಕ್ಳ ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮನ್ನು ಜೀವಂತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಓಡಿ ಹೋಗಿರುವುದಾಗಿದೆ. ಈ ಘಟನೆಯಿಂದ ಪಿರ್ಯಾದಿದಾರರಿಗೆ ಮತ್ತು, ಅವರ ಗಂಡ ನವಾಜ್, ಜುಬೇದಾ ರವರಿಗೆ ಗುದ್ದಿದ ನೋವಾಗಿರುತ್ತದೆ. ಈ ಘಟನೆಗೆ ಕಾರಣ ಈ ದಿನ ದಿನಾಂಕ 09/06/2022 ರಂದು ಸಂಜೆ 18.30 ಗಂಟೆಗೆ ಪಿರ್ಯಾದಿದಾರರಿಗೆ ಮತ್ತು ಅವರ ಗಂಡ ನವಾಜ್ ರವರಿಗೆ ನೆರೆ ಕರೆ ಮನೆಯ ನಫಿಯಾರವರೊಂದಿಗೆ ಮಕ್ಕಳು ಅಂಗಳದಲ್ಲಿ ಸೈಕಲ್ ಚಲಾಯಿಸುವ ವಿಚಾರದಲ್ಲಿ ಬಾಯಿ ಮಾತಿನ ಗಲಾಟೆಯಾಗಿದ್ದು ಈ ಬಗ್ಗೆ ನಫಿಯಾರವರ ಸಂಬಂಧಿಗಳಾದ ಆರೋಪಿಗಳು ಕೃತ್ಯವೆಸಗಿರುವುದಾಗಿದೆ. ಆದುದರಿಂದ  ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಕೋರಿಕೆ ಎಂಬಿತ್ಯಾದಿಯಾಗಿದೆ.

 

Crime Reported in : Kankanady Town PS                                                       

ಪಿರ್ಯಾದಿದಾರರು Hemanth Shetty ಕರಂಬೆಟ್ಟು, ಜಪ್ಪಿನಮೊಗರು ಗ್ರಾಮದಲ್ಲಿ ವಾಸವಾಗಿದ್ದು, ಮಂಗಳೂರಿನ ಪಣಂಬೂರು ಎಂಬಲ್ಲಿ ಭಜರಂಗ ಸ್ಟುಡಿಯೋ ಇಟ್ಟುಕೊಂಡು ಜೀವನ ಮಾಡಿಕೊಂಡಿರುವುದಾಗಿದೆ.  ಪಿರ್ಯಾದುದಾರರು ದಿನಾಂಕ: 07-06-2022 ರಂದು ಎಂದಿನಂತೆ ಕೆಲಸ ಮುಗಿಸಿಕೊಂಡು ರಾತ್ರಿ ಸುಮಾರು 10.00 ಗಂಟೆಗೆ ತಮ್ಮ ಬಾಬ್ತು ಯಮಹ ಆರ್. ಎಕ್ಸ್ 135 ನೇ KA-19-J-8780 ನಂಬ್ರದ ಬೈಕ್ ನಲ್ಲಿ ಜಪ್ಪಿನಮೊಗರು ಕರಂಬೆಟ್ಟುನಲ್ಲಿರುವ ಮನೆಯ ಬಳಿಗೆ ಬಂದು  ಬೈಕ್ ನ್ನು ಮನೆಯ ಹತ್ತಿರದ ಯುವಕ ಮಂಡಲದ ಖಾಲಿ ಸ್ಥಳದಲ್ಲಿ ಪಾರ್ಕ್ ಮಾಡಿ ಇಟ್ಟಿದ್ದು, ಮರು ದಿನ ದಿನಾಂಕ: 08.06.2022 ರಂದು ಬೆಳಿಗ್ಗೆ ಸಮಯ ಸುಮಾರು 06:00 ಗಂಟೆಗೆ ಬೈಕ್ ನ್ನು ಪಾರ್ಕ್ ಮಾಡಿದ ಸ್ಥಳಕ್ಕೆ ಪಿರ್ಯಾದುದಾರರು ಬಂದು ನೋಡಿದಾಗ ಬೈಕ್ ಪಾರ್ಕ್ ಮಾಡಿದ ಸ್ಥಳದಲ್ಲಿ ಕಾಣಿಸದೇ ಇದ್ದಾಗ, ಬೈಕ್ ನ್ನು ಪಾರ್ಕ್ ಮಾಡಿದ  ಸ್ಥಳದ ಸುತ್ತಮುತ್ತ ಎಲ್ಲಾ  ಹುಡುಕಾಡಿದರೂ ಕಂಡು ಬಂದಿರುವುದಿಲ್ಲ. ಯಾರೋ ಕಳ್ಳರು ದಿನಾಂಕ: 07-06-2022 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ: 08.06.2022 ರ ಬೆಳಿಗ್ಗೆ 06:00 ಗಂಟೆಯ ಮದ್ಯಾವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಕಳ್ಳತನವಾದ ಬೈಕ್ ನ ಅಂದಾಜು ಮೌಲ್ಯ ರೂ 5,000/- ಆಗಬಹುದು, ಪಿರ್ಯಾದುದಾರರು ಬೈಕ್ ಕಳ್ಳತನವಾದ ಬಗ್ಗೆ ಮಂಗಳೂರಿನ ವಿವಿಧ ಕಡೆಗಳಲ್ಲಿ ಹುಡುಕಾಡಿದರೂ ಇದುವರೆಗೂ ಎಲ್ಲಿಯೂ  ಪತ್ತೆಯಾಗಿರುವುದಿಲ್ಲ. ಆದ್ದರಿಂದ ಬೈಕ್ ಕಳ್ಳತನವಾದ ಬಗ್ಗೆ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿದೆ ಎಂಬಿತ್ಯಾದಿ.

Crime Reported in : Traffic North Police Station                                                      

ದಿನಾಮಕ: 09-06-2022 ರಂದು ಪಿರ್ಯಾದಿದಾರರಾದ ಪ್ರಸಾದ್ (33) ರವರು ಎಂದಿನಂತೆ MRPL ಕ್ಯಾಂಟಿನ್ ನಲ್ಲಿ ಕೆಲಸ ಮುಗಿಸಿಕೊಂಡು ಅವರ ಬಾಬ್ತು KA-19-HH-7027 ನಂಬ್ರದ ಮೋಟಾರ್ ಸೈಕಲ್ ನಲ್ಲಿ ಮನೆ ಕಡೆಗೆ ಹೋಗುತ್ತಾ ಸಂಜೆ ಸಮಯ ಸುಮಾರು 5:20 ಗಂಟೆಗೆ ತಡಂಬೈಲ್ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಮೋಟಾರ್ ಸೈಕಲ್ ನ ಎದುರಿನಲ್ಲಿ ಮುಲ್ಕಿ ಕಡೆಗೆ ಹೋಗುತ್ತಿದ್ದ KA-20-N-9466 ನಂಬ್ರದ ಇನೋವಾ ಕಾರನ್ನು ಅದರ ಚಾಲಕನಾದ ABDUL HAKEEM ಎಂಬಾತನು ಯಾವುದೇ ಸೂಚನೆ ನೀಡದೆ ನಿರ್ಲಕ್ಷ್ಯತನದಿಂದ ಒಮ್ಮೆಲೆ ಬ್ರೇಕ್ ಹಾಕಿ ರಾಹೆ66 ನೇ ಡಾಮಾರು ರಸ್ತೆಯಲ್ಲಿ ನಿಲ್ಲಿಸಿದ ಪರಿಣಾಮ ಪಿರ್ಯಾದಿದಾರರ ಮೋಟಾರ್ ಸೈಕಲ್ ಇನೋವಾ ಕಾರಿನ ಹಿಂಬದಿಯ ಬಲ ಬದಿ ಕಾರ್ನರ್ ಭಾಗಕ್ಕೆ ಡಿಕ್ಕಿಯಾಗಿ ಪ್ರಸಾದ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಬಿದ್ದಿದ್ದು ಈ ಅಪಘಾತದಿಂದ ಪ್ರಸಾದ್ ರವರ ಸೊಂಟದ ಎಡಬದಿ, ಎಡಕಾಲಿನ ತೊಡೆ, ಹಾಗೂ ಕೋಲು ಕಾಲಿನಲ್ಲಿ, ಎಡಕಾಲಿನ ಪಾದದಲ್ಲಿ ಅಲ್ಲಲ್ಲಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಅಲ್ಲದೇ ಎರಡೂ ಕಣ್ಣುಗಳ ಮದ್ಯೆ ಹಣೆಯ ಭಾಗದಲ್ಲಿ ಮೂಗಿನ ಎಡಬದಿ ಹಾಗೂ ಗಲ್ಲದಲ್ಲಿ ಅಲ್ಲಲ್ಲಿ ಚರ್ಮ ತರಚಿದ ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ A J ಆಸ್ಪತ್ರೆಗೆ ದಾಖಲಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 10-06-2022 07:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080