ಅಭಿಪ್ರಾಯ / ಸಲಹೆಗಳು

Crime Reported in: Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿದಾರರ Smt Chennamma Poojarthi ಕೃಷಿ ಭೂಮಿಯಾದ ಮೂಡಬಿದ್ರೆ ತಾಲೂಕು ಪಾಲಡ್ಕ ಗ್ರಾಮದಲ್ಲಿರುವ ಬಾಕ್ಯಾರು ಗದ್ದೆ ಭೂಮಿಯನ್ನು ಉಳುಮೆ ಮಾಡಲು ದಿನಾಂಕ: 03-07-2022 ರಂದು ಸಂಜೆ 5.00 ಗಂಟೆಯಿಂದ ರಾತ್ರಿ 9.30 ಗಂಟೆಯ ಮಧ್ಯಾವಧಿಯಲ್ಲಿ ಟ್ರ್ಯಾಕ್ಟರ್ ನ್ನು ತಂದಿದ್ದು ಉಳುಮೆ ಮಾಡಿ ವಾಪಸ್ಸು ಟ್ರ್ಯಾಕ್ಟರ್ ನ್ನು ಕೊಂಡೋಗುತ್ತಿರುವಾಗ ಆರೋಪಿಗಳು ಸಮಾನ ಉದ್ದೇಶ ಹೊಂದಿ ಸ್ಥಳದಲ್ಲಿ ಕೆಂಪು ಕಲ್ಲನ್ನು ಅಡ್ಡಲಾಗಿ ಇಟ್ಟು, ಗದ್ದೆಯ ಹುಣಿಯನ್ನು ಅಗೆದು ಟ್ಯಾಕ್ಟರ್ ಹೋಗದಂತೆ ರಸ್ತೆಯನ್ನು ಸಫೂರ ಮಾಡಿ ತಡೆ ಮಾಡಿರುತ್ತಾರೆ. 01 ನೇ ಆರೋಪಿಯು ಪಿರ್ಯಾದಿದಾರರಿಗೆ ರಂಡೆ ಮುಂಡೆ ಬೇವರ್ಸಿ, ಸೂಳೆ ಎಂಬ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹೊಡೆಯಲು ಬಂದಿರುತ್ತಾನೆ, ಅಲ್ಲದೇ ಪ್ಯಾಂಟಿನ ಜಿಪ್ ನ್ನು ಜಾರಿಸಿ ಅಶ್ಲೀಲವಾಗಿ ಗುಪ್ತಾಂಗವನ್ನು ತೋರಿಸಿರುತ್ತಾನೆ, 02 ನೇ ಆರೋಪಿ ಪಿರ್ಯಾದಿದಾರರನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಹಾಗೂ ಉಳಿದ ಆರೋಪಿಗಳು ಪಿಯಾದಿದಾರರಿಗೆ ಅವಾಚ್ಯ ಶಬ್ಧಗಳಿಂದ ಬೈಯ್ದು ಕೊಲೆ ಬೆದರಿಕೆ ಹಾಕಿದ್ದು ಅಲ್ಲದೇ ಪಿರ್ಯಾದಿದಾರರ ಗದ್ದೆಗೆ ರಾತ್ರೋರಾತ್ರಿ ಅಕ್ರಮ ಪ್ರವೇಶ ಮಾಡಿ ಬಿತ್ತನೆ ಮಾಡಿದ ಬೆಳೆಯನ್ನು ನಾಶ ಮಾಡಿ ಅಪಾರ ನಷ್ಟವನ್ನುಂಟು ಮಾಡಿರುತ್ತಾರೆ. ಪಿರ್ಯಾದಿದಾರರಿಗೆ ಅಸೌಖ್ಯವಿದ್ದ ಕಾರಣ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ ಎಂಬಿತ್ಯಾದಿ.

Crime Reported in: Mangalore South PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ಪಿರ್ಯಾದಿದಾರರಾದ ಮಂಗಳೂರು ನಗರ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ರವರು ದಿನಾಂಕ 09-07-2022 ರಂದು ಸಮಯ 19:00 ಗಂಟೆಗೆ ಸಿಸಿಬಿ ಕಛೇರಿಯಲ್ಲಿದ್ದಾಗ ಮಂಗಳೂರು ನಗರದ ರಾವ್ & ರಾವ್ ಸರ್ಕಲ್ ಬಳಿಯ ಮಹರಾಜ ಬಿಲ್ಡಿಂಗ್ ನ 2 ನೇ ಮಹಡಿಯಲ್ಲಿರುವ ದೀಪ್ ಪ್ರೆಂಡ್ಸ್ ಅಸೋಸಿಯೇಷನ್ ಎಂಬ ರಿಕ್ರಿಯೇಷನ್  ಕ್ಲಬ್ ನಲ್ಲಿ ಅದೃಷ್ಠದ ಇಸ್ಪೀಟ್ ಜೂಜಾಟವಾದ ಅಂದರ್ ಬಾಹರ್ ಆಟವನ್ನು ಆಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ ಸದ್ರಿ ರಿಕ್ರಿಯೇಷನ್ ಕ್ಲಬ್ ಗೆ ದಾಳಿ ನಡೆಸುವ ಸಲುವಾಗಿ ಮೇಲಾಧಿಕಾರಿಗಳಿಂದ ಶೋಧನಾ ವಾರಂಟನ್ನು ಪಡೆದು ಸಿಸಿಬಿ ಘಟಕದ ಸಿಬ್ಬಂದಿಗಳ ಹಾಗೂ  ಪಂಚರ ಜೊತೆ  ಸಮಯ 20:45 ಗಂಟೆಗೆ  ಮಂಗಳೂರು ನಗರದ ರಾವ್ & ರಾವ್ ಸರ್ಕಲ್ ಬಳಿಯ ಕಿಂಗ್ಸ್ ಬಾರ್ & ರೆಸ್ಟೋರೆಂಟ್ ಇರುವ ಮಹಾರಾಜಾ ಬಿಲ್ಡಿಂಗ್ ನ 2 ನೇ ಮಹಡಿಯ ಕೋಣೆಯ ಒಳಗೆ ಹಾಲ್ ಗೆ ದಾಳಿ ನಡೆಸಿದಾಗ  ಒಂದು ಟೇಬಲ್ ಸುತ್ತ ಜನರು ಚೆಯರ್ ಗಳಲ್ಲಿ ಕುಳಿತು ಇಸ್ಪೀಟ್ ಎಲೆಗಳನ್ನು ಟೇಬಲ್ ಮೇಲೆ ಹಾಕುತ್ತಾ ಉಲಾಯಿ-ಪಿದಾಯಿ ಎಂದು ಹೇಳುತ್ತಾ ಅಕ್ರಮ ಜೂಜಾಟವಾದ ಅಂದರ್ ಬಾಹರ್ ಜುಗಾರಿ ಆಟವನ್ನು ಆಡುತ್ತಿದ್ದು, ಅಂದರ್ ಬಾಹರ್ ಎಂದು ಇಸ್ಪೀಟುಗಳನ್ನು ಹಾಕುತ್ತಿದ್ದ ಅನಿಲ್ ರಾಜ್ ಹಾಗೂ ಪ್ರವೀಣ್ ರವರನ್ನು ವಿಚಾರಿಸಿದಾಗ ಈ ಅಕ್ರಮ ಜೂಜಾಟವನ್ನು ವಿನ್ನು@ರಂಜಿತ್ ನಡೆಸುತ್ತಿರುವುದಾಗಿ ತಿಳಿದುಬಂದಿರುತ್ತದೆ. ಅಕ್ರಮ ಜೂಜಾಟವಾದ ಅಂದರ್ ಬಾಹರ್ ಜುಗಾರಿ ಆಟದಲ್ಲಿ ನಿರತರಾಗಿದ್ದ 28 ಜನರನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದು ಹಾಗೂ ಆಟಕ್ಕೆ ಉಪಯೋಗಿಸಿದ್ದ ನಗದು ಹಣ ರೂ. 1,03,000/-, ಇಸ್ಪೀಟ್ ಕಾರ್ಡ್, ಆಟಕ್ಕೆ ಉಪಯೋಗಿಸಿದ 15 ಪ್ಲಾಸ್ಟಿಕ್ ಚೆಯರ್ ಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಅಂದರ್ ಬಾಹರ್ ಜುಗಾರಿ ಆಟದಲ್ಲಿ ನಿರತರಾಗಿದ್ದ 28 ಜನರನ್ನು ಹಾಗೂ ಸ್ವಾಧೀನಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ವರದಿಯೊಂದಿಗೆ ಹಾಜರುಪಡಿಸಿದ್ದು, ಸದ್ರಿ ವರದಿಯನ್ನು ಠಾಣೆಯಲ್ಲಿ ಸ್ವೀಕರಿಸಿ ಠಾಣಾ NCR NO PO1042220601577 ರಂತೆ ನೊಂದಾಯಿಸಿ ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲು ಅನುಮತಿ ಪಡೆದು ಪ್ರಥಮ ವರ್ತಮಾನ ವರದಿ ದಾಖಲಿಸಿಕೊಂಡಿರುವುದಾಗಿದೆ

 

ಇತ್ತೀಚಿನ ನವೀಕರಣ​ : 11-07-2022 08:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080