ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS       

ದಿನಾಂಕ: 09-09-2021 ರಂದು ಪಿರ್ಯಾದಿ ANTHAPPA POOJARY  ತನ್ನ ಸ್ನೇಹಿತರಾದ ಜನಾರ್ಧನರವರೊಂದಿಗೆ ಮಾತನಾಡುವರೇ ಮಲ್ಲಿಕಟ್ಟೆಗೆ ಬಂದವರು, ನಂತರದಲ್ಲಿ ಸ್ಟೇಟ್ ಬ್ಯಾಂಕ್ ಗೆ ಹೋಗುವರೇ ಮಲ್ಲಿಕಟ್ಟೆ ಬಸ್ ಸ್ಟ್ಯಾಂಡ್ ನ ಎದುರು ನಿಂತು ಕೊಂಡಿದ್ದಾಗ ಬೆಳಿಗ್ಗೆ ಸಮಯ ಸುಮಾರು 10:30 ಗಂಟೆಗೆ KA-19-AC-6695 ನಂಬ್ರದ ಬಸ್ಸನ್ನು ಅದರ  ಚಾಲಕ ನೇವಿಲ್ ಡಿಸೋಜಾ ಎಂಬಾತನು ನಂತೂರು ಕಡೆಯಿಂದ ಮಲ್ಲಿಕಟ್ಟೆ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಬಸ್ ನಿಲ್ದಾಣದ ಎದುರು ನಿಂತುಕೊಂಡಿದ್ದ ಪಿರ್ಯಾದಿದಾರರ ಎಡ ಭುಜಕ್ಕೆ ಗುದ್ದಿದ ಪರಿಣಾಮ, ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದವರನ್ನು ಸ್ನೇಹಿತ ಜನಾರ್ಧನರವರು ಮಂಗಳೂರು ನಗರದ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದು, ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ ಎಂಬಿತ್ಯಾದಿ.

                       

Crime Reported in Urva PS

ದಿನಾಂಕ 08-09-2021 ರಂದು ಪಿರ್ಯಾದು Rajesh H J ASI, Urwa Police Station ದಾರರು ಸಿಬ್ಬಂದಿಯವರೊಡನೆ ಲೇಡಿಹಿಲ್ ವೃತ್ತದ ಬಳಿ ಸಂಜೆ 06.00 ಗಂಟೆಯಿಂದ 10.00 ಗಂಟೆಯ ತನಕ ಕರ್ತವ್ಯದಲ್ಲಿದ್ದ ಸಮಯ ರಾತ್ರಿ 7-30 ಗಂಟೆಗೆ ಮಣ್ಣಗುಡ್ಡೆ ಕಡೆಯಿಂದ ಲೇಡಿ ಹಿಲ್  ವೃತ್ತದ ಕಡೆಗೆ ಬಂದ ದ್ವಿ ಚಕ್ರ  ವಾಹನವನ್ನು ಪಿರ್ಯಾದುದಾರರು ಜೊತೆಯಲ್ಲಿದ್ದ ಸಿಬ್ಬಂದಿಗಳೂಡನೆ ತಪಾಸಣೆ ಮಾಡುವ ಸಲುವಾಗಿ ಸೂಚನೆ ಕೊಟ್ಟು ನಿಲ್ಲಿಸಿದಾಗ, ಸದ್ರಿ ಸ್ಕೂಟರ್ ಕೆ ಎ 19 ಈ ಎನ್ 5481 ನೇ ನಂಬ್ರದ ಕಪ್ಪು ಬಣ್ಣದ ಆಕ್ಸಸ್ಸ್ ಸ್ಕೂಟರ್ ಆಗಿದ್ದು,  ಸದ್ರಿ ಸ್ಕೂಟರ್ ನಲ್ಲಿ   ಹಿಂಬದಿ ಸವಾರನು  ಹೆಲ್ಮೆಟ್ ಹಾಕದೇ ಇದ್ದು, ಈ ಬಗ್ಗೆ ಅವರಿಗೆ ತಿಳಿಯಪಡಿಸಿದಾಗ, ಆ ಸ್ಕೂಟರ್ ನಲ್ಲಿ  ಸಹ ಸವಾರನಾಗಿದ್ದ   ವ್ಯಕ್ತಿಯು  ಒಮ್ಮೇಲೇ ಗಾಡಿಯಿಂದ ಇಳಿದು ಪಿರ್ಯಾದುದಾರರು ಹಾಗೂ ಸಿಬ್ಬಂದಿಯವರ ಬಳಿಗೆ ಬಂದು ಅವರನ್ನು ಉದ್ದೇಶಿಸಿ,   “ನಿಮಗೆ ಗಾಡಿ ನಿಲ್ಲಿಸಲು ಹಕ್ಕು ಕೊಟ್ಟದ್ದು ಯಾರು?  ನೀವು ಪೊಲೀಸ್ ನವರು ನಾಯಿಗಳು ಹಣ ಕಲೆಕ್ಷನ್ ಮಾಡಲು ಇಲ್ಲಿ ನಿಂತಿದ್ದೀರಿ. ಎಂಬುದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ಬೈದಿದಲ್ಲದೇ ಅದೇ ವ್ಯಕ್ತಿಯು ನಿಮಗೆ ಲೇಡಿ ಹಿಲ್ ನಲ್ಲಿ ಗೇಟ್ ಹಾಕಿ ವಾಹನ ತಪಾಸಣೆ ಮಾಡುವ ಅಧಿಕಾರ ಕೊಟ್ಟವರು ಯಾರು?  ನೀವು ಇಲ್ಲಿಂದ ನಡೀರಿ, ನನ್ನ ಗಾಡಿಯನ್ನು ಚೆಕ್ ಮಾಡುವುದು ಅಗತ್ಯವಿಲ್ಲ ಎಂಬುದಾಗಿ ಬೈದು  ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ  ಪಿರ್ಯಾದಿದಾರರು ಮತ್ತು ಜೊತೆಗಿದ್ದ ಸಿಬ್ಬಂದಿಗಳನ್ನು ಕೈಯಿಂದ ಹಿಂದಕ್ಕೆ ತಳ್ಳಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ. ಆ ಸಮಯದಲ್ಲಿ ಪಿರ್ಯಾದುದಾರರು ಹಾಗೂ ಸಿಬ್ಬಂದಿಯವರು ಅವರನ್ನು ಸಮಾಧಾನಪಡಿಸಿ ಆತನ ಹೆಸರು ವಿಳಾಸ ಕೇಳಿದಾಗ, ತನ್ನ ಹೆಸರು ರಾಜೇಶ್ ಪ್ರಭು ಪ್ರಾಯ 33 ವರ್ಷ, ತಂದೆ: ರಾಮಕೃಷ್ಣ ಪ್ರಭು, ವಾಸ: ದುರ್ಗಾಪರಮೇಶ್ವರಿ ಹಾಲ್ ಬಳಿ, ಕೇರ್ಪಳ ಸುಳ್ಯ, ಎಂಬುದಾಗಿ ತಿಳಿಸಿರುತ್ತಾರೆ, ಪಿರ್ಯಾದಿದಾರರು ಸಿಬ್ಬಂದಿಯವರೊಡನೆ ವಾಹನವನ್ನು ತಪಾಸಣೆ ಮಾಡುವ ಸಮಯದಲ್ಲಿ ಸದ್ರಿ ವ್ಯಕ್ತಿಯು ಇದಕ್ಕೆ ವಿರೋಧ ವ್ಯಕ್ತ ಪಡಿಸಿ  ಉದ್ದೇಶ ಪೂರ್ವಕವಾಗಿ  ಸಮವಸ್ತ್ರದಲ್ಲಿದ್ದ  ಪಿರ್ಯಾದುದಾರರು ಹಾಗೂ ಸಿಬ್ಬಂದಿಯವರ ಸರಕಾರಿ ಕರ್ತವ್ಯಕ್ಕೆ  ಅಡ್ಡಿಪಡಿಸಿರುತ್ತಾರೆ ಎಂಬಿತ್ಯಾದಿ.

    

Crime Reported in Traffic North PS

ದಿನಾಂಕ:07-09-2021 ರಂದು ಪಿರ್ಯಾದಿದಾರರಾದ ರೋಶನ್ ಟೆರೆನ್ಸ್ ಡಿಸೋಜಾರವರು ಅವರ ಕಛೇರಿಯ ಕೆಲಸದ ಬಗ್ಗೆ ತನ್ನ ಬಾಬ್ತು KA-19-EM-7117 ನಂಬ್ರದ ಸ್ಕೂಟರಿನಲ್ಲಿ ಹೊನ್ನಕಟ್ಟೆ ಕಡೆಗೆ ಹೋಗುತ್ತಾ  ಸಮಯ ಸುಮಾರು 15:45 ಗಂಟೆಗೆ ಹೊನ್ನಕಟ್ಟೆಯ ತೆರದ ಡಿವೈಡರ್ ಬಳಿ ಸಮೀಪಿಸುತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಬೈಕಂಪಾಡಿ ಜಂಕ್ಷನ್ ಕಡೆಯಿಂದ ಸುರತ್ಕಲ್ ಕಡೆಗೆ KA-20-C-8299 ನಂಬ್ರದ ಸ್ವರಾಜ್ ಮುಝ್ದ ಗೂಡ್ಸ್ ಲಾರಿಯನ್ನು ಅದರ ಚಾಲಕನಾದ ಹರೀಶ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರನ್ನು ಎಡಬದಿಯಿಂದ ಒವರ್ ಟೇಕ್ ಮಾಡುವ ಭರದಲ್ಲಿ ಪಿರ್ಯಾದಿದಾರರ ಸ್ಕೂಟರಿನ ಎಡಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ  ರಾಹೆ 66 ರ ಡಾಮರು ರಸ್ತೆಗೆ ಬಿದ್ದ ಪರಿಣಾಮ ಅವರ ಎಡಕೈ ಭುಜದ ಮೂಳೆ ಬಿರುಕು ಬಿಟ್ಟಿರುವುದರಿಂದ ಚಿಕಿತ್ಸೆಯ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ

 

2) ದಿನಾಂಕ 08-09-2021 ರಂದು ಪಿರ್ಯಾದಿದಾರರಾದ ಅಬ್ದುಲ್ ರಕೀಬ್ ರವರು ತಮ್ಮ ಕೆಲಸ ಮುಗಿಸಿಕೊಂಡು ತಮ್ಮ ತಂದೆಯಾದ ರಜಬ್ ಎಂಬವರೊಡನೆ ಅವರ ಬಾಬ್ತು KA-19-HD-8152 ನಂಬ್ರದ ಮೋಟಾರ್ ಸೈಕಲ್ ನಲ್ಲಿ ಬಿಜೈಯಿಂದ ಕುಂಟಿಕಾನ, ಕಾವೂರು, ಶಾಂತಿನಗರ ಮಾರ್ಗವಾಗಿ ಮನೆ ಕಡೆಗೆ ಹೋಗುತ್ತಾ ಸಮಯ ಸುಮಾರು 17:00 ಗಂಟೆಗೆ ಶಾಂತಿನಗರ ಬಸ್ ಸ್ಟಾಪ್ ದಾಟಿ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ KA-19-ML-3462 ನಂಬ್ರದ ಬಿಳಿ ಬಣ್ಣದ ಕಾರನ್ನು ಅದರ ಚಾಲಕ ರಿಜ್ವಾನ್ ಎಂಬಾತನು ಕೂಳೂರು ಜಂಕ್ಷನ್ ಕಡೆಯಿಂದ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಮೋಟಾರ್ ಸೈಕಲ್ ಸವಾರ ರಜಬ್ ರವರು ಮೋಟಾರ್ ಸೈಕಲ್ ನಿಂದ ರಸ್ತೆಗೆ ಎಸೆಯಲ್ಪಟ್ಟು ಬಿದ್ದು, ಪಿರ್ಯಾದಿದಾರರ ಬಲ ಕೈ ಮೊಣಗಂಟಿಗೆ ಹಾಗೂ ಬಲ ಕಾಲಿನ ಮಣಿ ಗಂಟಿಗೆ ಮೂಳೆ ಮುರಿತದ ಗಾಯವಾಗಿದ್ದು, ಮೋಟಾರ್ ಸೈಕಲ್ ಸವಾರ ರಜಬ್ ರವರಿಗೆ ಬಲ ಕಾಲಿನ ಪಾದಕ್ಕೆ ಹಾಗೂ ಮಣಿಗಂಟಿಗೆ ಮೂಳೆ ಮುರಿತದ ಗಾಯದ ವಾಗಿದ್ದು, ಬಲ ಕಾಲಿನ ಕೋಲು ಕಾಲಿಗೆ ರಕ್ತ ಗಾಯವಾಗಿದ್ದು, ಎರಡೂ ಕೈಗಳಿಗೆ ಗುದ್ದಿದ ರೀತಿಯ ಗಾಯಗೊಂಡಿದ್ದವರು ಎ ಜೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡಕೊಂಡು ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Crime Reported in Mangalore North PS

ದಿನಾಂಕ 03.09.2021 ರಂದು ಮದ್ಯಾಹ್ನ 2-30 ಗಂಟೆಯಿಂದ 3-30 ಗಂಟೆಯ ಮದ್ಯ ಅವಧಿಯಲ್ಲಿ ಮಂಗಳೂರು ನಗರದ ಕಾರ್ ಸ್ಟ್ರೀಟ್ ಫ್ಲವರ್ ಮಾರ್ಕೆಟ್ ಹಿಂಬದಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿಟ್ಟಿದ್ದ ಪಿರ್ಯಾದಿದಾರರಾದ ಸುರೇಶ್ ನಾಯಕ್ ಎಂಬವರ ಬಾಬ್ತು  KA-19 EE-1244 ನೊಂದಣಿಯ ಹೋಂಡಾ ಆಕ್ಟಿವಾ ಸ್ಕೂಟರ್‌ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

ಕಳವಾದ ದ್ವಿಚಕ್ರ ವಾಹನದ  ವಿವರ ಈ ಕೆಳಗಿನಂತಿದೆ:

KA-19 EE-1244 ನೇ ನೊಂಧಣಿ ನಂಬ್ರದ ಹೊಂಡ ಆಕ್ಟಿವಾ  ದ್ವಿಚಕ್ರ ವಾಹನ,  ಬಿಳಿ ಬಣ್ಣ

ಇಂಜಿನ್ ನಂಬ್ರ: JC44E1754843  ಚೆಸಿಸ್ ನಂಬ್ರ: ME4JC448LB8643853

ಮೊಡೆಲ್- 2011,  ಅಂದಾಜು ಮೌಲ್ಯ ರೂ 11,000/- ಆಗಬಹುದು.

          ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಳವಾದ  KA-19 EE-1244 ನೇ ನೊಂದಣಿ ನಂಬ್ರದ ಹೋಂಡಾ ಆಕ್ಡಿವಾ ದ್ವಿಚಕ್ರ ವಾಹನ ಪತ್ತೆ ಮಾಡಿಕೊಡಬೇಕಾಗಿ ನೀಡಿದ ಪಿರ್ಯಾದಿದಾರರ ದೂರಿನ ಸಾರಾಂಶವಾಗಿರುತ್ತದೆ.

Crime Reported in Mangalore North PS

ಪಿರ್ಯಾದಿ BHARATH KUMAR ದಾರರು ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕರಾಗಿದ್ದು, ದಿನಾಂಕ 09.09.2021 ರಂದು ಮಾನ್ಯ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರವರು  ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ನಿಯಮವಳಿಯನ್ನು ಉಲ್ಲಂಘಿಸುವವರ ವಿರುದ್ದ ಕ್ರಮಕೈಗೊಳ್ಳುವಂತೆ ಮೌಖಿಕವಾಗಿ ಸೂಚಿಸಿದ ಪ್ರಕಾರ ಪಿರ್ಯಾದಿದಾರರು ಹಾಗೂ ಆರೋಗ್ಯ ನಿರೀಕ್ಷಕರಾದ 1. ಶಿವಲಿಂಗ ಕೊಂಡಗೋಳಿ, 2. ಅರುಣ್ ಕುಮಾರ್ ಬಿ ಕೆ, 3. ದೀಪಿಕಾ ಶ್ಯಾಮಿನಿ ಡಿಸೋಜಾ, 4. ಅಶ್ವಿನಿ ರವರು ನಗರಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸಿ ಪರಿಶೀಲಿಸಿದಾಗ  ಸಂಜೆ ಸುಮಾರು 6.00 ಗಂಟೆಗೆ ಲೇಡಿಗೋಷನ್ ಆಸ್ಪತ್ರೆಯ ಕಟ್ಟಡದ ಎದುರುಗಡೆ ಇರುವ ಲಿಂಕಿಂಗ್ ಟವರ್ಸ್ ಬಿಲ್ಡಿಂಗ್ನ ಕೆಳಮಹಡಿಯಲ್ಲಿ ಸುಮಾರು ಜನ ಯಾವುದೇ ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರವನ್ನು ಪಾಲನೆ ಮಾಡದೇ ಯಾವುದೋ ಆಟದಲ್ಲ್ಲಿ ನಿರತರಾಗಿದ್ದು, ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕರೊಂದಿಗೆ ದಾಳಿ ನಡೆಸಿದ ಸಂದಂರ್ಭದಲ್ಲಿ ಅಲ್ಲಿಂದ ಚೆಲ್ಲಾಪಿಲ್ಲಿಯಾಗಿ ಓಡಿಹೋಗಿರುತ್ತಾರೆ. ಹೆಚ್ಚಿನ ಜನರು ಗುಂಪು ಸೇರಿಕೊಂಡು ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರ ಕಾಪಾಡದೇ ಇರುವುದರಿಂದ ಕೋವಿಡ್ ಪಸರಿಸಲು ಇದು ಕಾರಣವಾಗಿರುತ್ತದೆ. ಸರ್ಕಾರದ ಹಾಗೂ ಮಾನ್ಯ ಜಿಲ್ಲಾಧಿಕಾರಿಯವರ ಕೋವಿಡ್ ನಿಯಮಾವಳಿಯ ಆದೇಶಗಳನ್ನು ಉಲ್ಲಂಘಿಸಿದ ಕಟ್ಟಡದ ಮಾಲೀಕರ ಮೇಲೆ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 2005 ರಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Crime Reported in Traffic South PS

ದಿನಾಂಕ: 09-09-2021 ರಂದು ಪಿರ್ಯಾದಿ MOHAMMAD HANIF ದಾರರ ತಾಯಿ ಜಮೀಳಾ(40) ರವರು ಸಹ ಸವಾರಿನಿಯಾಗಿ ಪಿರ್ಯಾದಿದಾರರ ಭಾವ ಮುನ್ನೀರ್ ರವರು ಸವಾರನಾಗಿ ಸ್ಕೂಟರ್ ನಂಬ್ರ KL-14-W-7160 ನೇದರಲ್ಲಿ  ನಾರ್ಲೆ ಪಡೀಲ್ ಕಡೆಯಿಂದ  ಕೆ,ಸಿ ನಗರದ ಕಡೆ ಹೋಗಿ ವಾಪಸ್ಸು ನಾರ್ಲೆ ಪಡೀಲ್ ಕಡೆ ಬರುತ್ತಿರುವ ಸಮಯ ಸುಮಾರು 20:15 ಗಂಟೆಗೆ ದೇವಿನಗರದ ಪಂಜಳ ಜಂಕ್ಷನ್ ಬಳಿ ತಲುಪಿದಾಗ ಸವಾರ ಮುನ್ನಿರ್ ರವರು ದುಡುಕುತನ ಹಾಗೂ  ನಿರ್ಲಕ್ಷ್ಯತನದಿಂದ ಸ್ಕೂಟರ್ ನ್ನು ಸವಾರಿ ಮಾಡಿಕೊಂಡು ರಸ್ತೆಯೊಂದರ ಹೊಂಡಕ್ಕೆ ಸವಾರಿ ಮಾಡಿದ ಪರಿಣಾಮ ಸಹ ಸವಾರಿನಿ ಜಮೀಳಾ(40) ರವರು ಡಂಬಾರು ರಸ್ತೆಗೆ ಬಿದ್ದರು ಅವರಿಗೆ ತಲೆಯ ಹಿಂಬದಿಗೆ ಗಂಬೀರ ಸ್ವರೂಪದ ಗುದ್ದಿದ ರಕ್ತ ಗಾಯವಾಗಿದ್ದು ಅವರನ್ನು ಮುನ್ನಿರ್ ರವರು ಮತ್ತು ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಕಣಚೂರು ಆಸ್ವತ್ರೆಗೆ ದಾಖಲಿಸಿರುತ್ತಾರೆ ದಿನಾಂಕ 09-09-2021 ರಂದು ಜಮೀಳಾರವರು ಚಿಕಿತ್ಸೆ ಫಲಕಾರಿಯಾಗದೇ ಸಮಯ ರಾತ್ರಿ 21:10 ಗಂಟೆಗೆ ಮೃತ ಪಟ್ಟಿರುವುದಾಗಿ ವೈದ್ಯಧಿಕಾರಿಗಳು ತಿಳಿಸಿರುತ್ತಾರೆ ಈ ಅಪಘಾತಕ್ಕೆ ಕಾರಣರಾದ ಮುನ್ನಿರ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತು ಎಂಬಿತ್ಯಾದಿ

 

Crime Reported in Surathkal PS

ದಿನಾಂಕ: 09/09/2021 ಪಿರ್ಯಾದಿ SUSHANTH K, SENIOR HEALTH INSPECTOR OF MANGALORE CITY ದಾರರು ಅವರ ಸಿಬ್ಬಂದಿಗಳೊಂದಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸಂಜೆ 04-00 ಗಂಟೆಗೆ ಇಡ್ಯಾ ಗ್ರಾಮದ ಸುರತ್ಕಲ್ ರೆಲ್ವೆ ನಿಲ್ದಾಣದ ಕಡೆ ಹೋಗುವ  ರಸ್ತೆಯ ಬದಿ ಇರುವ ಕಟ್ಟಡದಲ್ಲಿರುವ ರಿಕ್ರಿಯೇಶನ್ ಕ್ಲಬ್ ಗೆ ಹೋಗಿ ಮಾನ್ಯ ಜಿಲ್ಲಾಧಿಕಾರಿಯವರು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಇವರ ನಡುವಳಿ ನಂಬ್ರ: MAG 2 ಸಿ.ಆರ್ 156/2020-21 13,34,65/C4/28 ರ ನಡುವಳಿಯನ್ನು ಉಲ್ಲಂಘಿಸಿ ಆರೋಪಿ ರಾಜೇಶರವರು ಸುಮಾರು 10-15 ಜನರನ್ನು ಸದ್ರಿ ರಿಕ್ರಯೇಶನ್ ಕ್ಲಬ್ ನಲ್ಲಿ ಸೇರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಮುಖಕ್ಕೆ ಮಾಸ್ಕನ್ನು ಧರಿಸದೆ ಮಾನವ ಜೀವಕ್ಕೆ ಅಪಾಯಕಾರವಾದ ಕರೋನಾ ಸೋಂಕು ಹರಡುವ ಸಾಧ್ಯತೆ ಇರುವ ಬಗ್ಗೆ ತಿಳಿದು ನಿರ್ಲಕ್ಷತನ ವಹಿಸಿರುವುದು ಕಂಡು ಬಂದಿರುವುದಾಗಿದೆ ಆರೋಪಿ ರಾಜೇಶ ವಿರುದ್ದ ಕ್ರಮ ಜರುಗಿಸುವರೇ ಎಂಬಿತ್ಯಾದಿಯಾಗಿರುತ್ತದೆ.

 

Crime Reported in Moodabidre PS   

ಪಿರ್ಯಾಧಿ Harinder Ram ದಾರರು ಸುಮಾರು ಮೂರು ವರ್ಷಗಳಿಂದ ಅನುಪಮ ಫೀಡ್ಸ್ ಫ್ಯಾಕ್ಟರಿಯಲ್ಲಿ ಲೇಬರ್ ಸಪ್ಲೈ ಅಗಿ ಕೆಲಸ ಮಾಡಿಕೊಂಡಿದ್ದು, ಅವರ ಊರಿನ ಒಟ್ಟು 36 ಜನ ಈಗ ಅನುಪಮ ಫಿಡ್ಸ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ: 08-08-2021 ರಂದು ಪಿರ್ಯಾಧಿದಾರರ ಊರಿನಿಂದ ಒಟ್ಟು 5 ಜನ ಅನುಪಮ ಫಿಡ್ಸ್ ಪ್ಯಾಕ್ಟರಿಯಲ್ಲಿ ಕೆಲಸಕ್ಕೆ ಬಂದಿದ್ದು ಅದರಲ್ಲಿ 4 ಜನ ಪಿರ್ಯಾಧಿದಾರರ ಸಂಬಂದಿಕರಾಗಿದ್ದು ಒರ್ವ ಅವರ ಊರಿನವರಾಗಿರುತ್ತಾರೆ, ಇವರುಗಳ ಪೈಕಿ ಕೃಷ್ಣ ರಾಂ (31) ಎಂಬಾತನು ಪಿರ್ಯಾಧಿದಾರರ ಹೆಂಡತಿಯ ಮಾವನ ಮಗನಾಗಿದ್ದು ಅತನು ದಿನಾಂಕ: 26-08-2021 ರ ವರೇಗೆ  ಪ್ಯಾಕ್ಟರಿಯಲ್ಲಿ ಕೆಲಸ ಮಾಡಿದ್ದು ದಿನಾಂಕ: 27-08-2021 ರಂದು ಅತನು ಬೆಳಿಗ್ಗೆ 10.30 ಗಂಟೆ ಸಮಯಕ್ಕೆ ಅವರು ವಾಸವಿದ್ದು ರೂಂ ನಿಂದ ಹೊರಟು ಹೋದವನು ವಾಪಾಸು ಬಾರದೇ ಕಾಣೆಯಾಗಿರುತ್ತಾನೆ. ಅತನು ಹೋಗುವ ಸಮಯ ರೂಂ ನಲ್ಲಿ ಅಡುಗೆ ಮಾಡುತ್ತಿದ್ದ ಬಿಹಾರ ದವರಾದ ಪ್ರಕಾಶ್ ಎಂಬವರಲ್ಲಿ ತಾನು ಮಾರ್ಕೆಟಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿರುತ್ತಾನೆ. ಅತನು ಊರಿಗೆ ಹೋಗಿರಬಹುದೆಂದು ಅಲ್ಲದೆ ಅವರ ಊರಿನವರು ಇಲ್ಲಿ ಕೆಲಸ ಮಾಡುವವರು ಇದ್ದಲ್ಲಿಗೆ ಹೋಗಿರ ಬಹುದೆಂದು ಬಾವಿಸಿ ಎಲ್ಲಾ ಕಡೆ ಹುಡುಕಾಡಿದರೂ ಈ ವರೇಗೆ ಪತ್ತೆ ಯಾಗಿರುವುದಿಲ್ಲ ಎಂಬಿತ್ಯಾಧಿ.

 

2) ಪಿರ್ಯಾದು HC SANTHOSH ದಾರರು ದಿನಾಂಕ 08-09-2021 ರಂದು ರಾತ್ರಿ ಸುಮಾರು 21.00 ಗಂಟೆಗೆ ರೌಂಡ್ಸ ನಲ್ಲಿ ಹೋಗುತ್ತಿರುವಾಗ ಬಲ್ಲಾಳ್ ಹೋಟೆಲ್ ಬಳಿ ತಲುಪುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಒಂದು ದ್ವಿ ಚಕ್ರವಾಹನವನ್ನು ತಳ್ಳಿಕೊಂಡು ವಿದ್ಯಾಗಿರಿ ಕಡೆಗೆ ಹೋಗುತ್ತಿರುವುದನ್ನು ಕಂಡು ಅನುಮಾನಗೊಂಡು ಕೂಡಲೇ ದ್ವಿ ಚಕ್ರವಾಹನವನ್ನು ನಿಲ್ಲಿಸಿದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಇಬ್ಬರು ವ್ಯಕ್ತಿಗಳು ದ್ವಿ ಚಕ್ರ ವಾಹನವನ್ನು ಬಿಟ್ಟು ಓಡಲು ಪ್ರಯತ್ನಿಸಿದ್ದು, ಸುತ್ತುವರೆದು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸವನ್ನು ಕೇಳಲಾಗಿ 1) ಶಿಯಾಬುದ್ದಿನ್ ಯಾನೆ ಶಿಯಾಬ್ 2) ನಿಸಾರ್ ಎಂಬುದಾಗಿ ತಿಳಿಸಿರುತ್ತಾರೆ. ಸದ್ರಿ ವ್ಯಕ್ತಿಗಳಲ್ಲಿ ದ್ವಿ ಚಕ್ರ ವಾಹನದ ಬಗ್ಗೆ ವಿಚಾರಿಸಲಾಗಿ  ದಿನಾಂಕ: 08-09-2021 ರಾತ್ರಿ ಸುಮಾರು 08:30 ಗಂಟೆಗೆ ನಾವಿಬ್ಬರು ಸೇರಿ ಮೂಡಬಿದ್ರೆ ಕೋರ್ಟ್ ರಸ್ತೆಯಲ್ಲಿರುವ ಒಂದು ಅಪಾರ್ಟ್ ಮೆಂಟ್ ಬಳಿ ಹ್ಯಾಂಡ್ ಲಾಕ್ ಮಾಡದೇ ನಿಲ್ಲಿಸಿದ್ದ ಈ ದ್ವಿ ಚಕ್ರ ವಾಹನವನ್ನು ಗುಜುರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಲ್ಲಿ ಯಾರು ಇಲ್ಲದೇ ಇರುವುದನ್ನು ನೋಡಿಕೊಂಡು ಅಲ್ಲಿಂದ ಈ ಬೈಕ್ ನ್ನು ಕಳವು ಮಾಡಿಕೊಂಡು ಗುಜುರಿ ಅಂಗಡಿಗೆ ಮಾರಾಟ ಮಾಡಲು ತಳ್ಳಿಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾರೆ. ದ್ವಿ ಚಕ್ರ ವಾಹನವನ್ನು ಪರಿಶೀಲಿಸಲಾಗಿ ಹಳೆಯ ಸುಜುಕಿ ಕಂಪನಿಯ ಹಳೆಯ ಮೋಟಾರ್ ಸೈಕಲ್ ಆಗಿದ್ದು ಇದರ ಹಿಂಬದಿ ಮತ್ತು ಮುಂದೆ ಎರಡು ಕಡೆಗಳಲ್ಲಿ ನಂಬರ್ ಪ್ಲೇಟ್ ಇರುವುದಿಲ್ಲ ಇದರ ಅಂದಾಜು ಮೌಲ್ಯ 40.000/- ರೂ ಆಗಬಹುದು ವಶಕ್ಕೆ ಪಡೆದುಕೊಂಡ ಸದ್ರಿ ವ್ಯಕ್ತಿಗಳು ಸುಜುಕಿ ಕಂಪನಿಯ ಹಳೆಯ ದ್ವಿ ಚಕ್ರವಾಹನವನ್ನು ಕಳವು ಮಾಡಿ ಗುಜುರಿ ಅಂಗಡಿಗೆ ಮಾರಾಟ ಮಾಡುವರೇ ತಳ್ಳಿಕೊಂಡು ಹೋಗುತ್ತಿರುವುದಾಗಿದೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 10-09-2021 02:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080