ಅಭಿಪ್ರಾಯ / ಸಲಹೆಗಳು

Crime Reported in Traffic North PS

ದಿನಾಂಕ:10-12-2021 ರಂದು ಪಿರ್ಯಾದಿ Sunil G Shetty ದಾರರ ಚಿಕ್ಕಮ್ಮರಾದ ಶ್ರೀಮತಿ ಸುಮತಿ ಶೆಟ್ಟಿರವರು ಮದ್ಯಾಹ್ನ ಸಮಯ ಸುಮಾರು 12:30 ಗಂಟೆಗೆ ಸುರತ್ಕಲ್ ಜಂಕ್ಷನ್ ಬಳಿ ಇರುವ ಹೋಟೆಲ್ ಸದಾನಂದ ಕಟ್ಟಡದ ಎದುರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಂತೆ ಅವರ ಹಿಂದಿನಿಂದ ಅಂದರೆ ಸುರತ್ಕಲ್ ಜಂಕ್ಷನ್ ಕಡೆಯಿಂದ ಮುಕ್ಕ ಕಡೆಗೆ KA-19-D-6723 ನಂಬ್ರದ ಆಟೋರಿಕ್ಷಾವನ್ನು ಅದರ ಚಾಲಕನಾದ RAMANA ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  NH66  ನೇ ಡಾಮಾರು ರಸ್ತೆಯಲ್ಲಿ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯ ತೀರ ಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ಸುಮತಿ ಶೆಟ್ಟಿರವರು  ಡಿಕ್ಕಿ ಪಡಿಸಿದ ಪರಿಣಾಮ ಶ್ರೀಮತಿ ಸುಮತಿ ಶೆಟ್ಟಿರವರು ರಸ್ತೆಗೆ ಬಿದ್ದು ಶ್ರೀಮತಿ ಸುಮತಿ ಶೆಟ್ಟಿರವರ ಬಲಕಾಲಿನ ಮೊಣಗಂಟಿನ ಕೆಳಭಾಗ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in Traffic South PS

ದಿನಾಂಕ  10-12-2021 ರಂದು  ಪಿರ್ಯಾದಿ PRAVEEN CHANDRA SHETTY ದಾರರ   ಅತ್ತಿಗೆಯಾದ ಅಂಬಿಕಾರವರು   ಎಂದಿನಂತೆ   ಯೆನಪೊಯ  ಕಾಲೇಜ್ ಗೆ  ಕೆಲಸಕ್ಕೆಂದು   ಹೋಗುವ  ಸಲುವಾಗಿ    ತೊಕ್ಕೊಟ್ಟು   ಫ್ಲೈ ಓವರ್ ಅಡಿಯಲ್ಲಿ  ರಸ್ತೆಯನ್ನು  ದಾಟುತ್ತಿರುವ  ಸಮಯ   ಸುಮಾರು   ಬೆಳಗ್ಗೆ 08:00 ಗಂಟೆಗೆ ಕಾಸರಗೋಡು   ಕಡೆಯಿಂದ  ಬಿಸಿ ರೋಡ್  ದೇರಳಕಟ್ಟೆ ಕಡೆಗೆ    KSRTC  ಬಸ್ ನೊಂದಣಿ ಸಂಖ್ಯೆ KA-21-F-0079 ನೇದನ್ನು  ಅದರ   ಚಾಲಕ   ನಾಗರಾಜ್   ಎಂಬಾತನು   ದುಡುಕುತನ ಹಾಗೂ  ನಿರ್ಲಕ್ಷ್ಯ ತನದಿಂದ  ಚಲಾಯಿಸಿಕೊಂಡು   ಬಂದು   ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ  ಅತ್ತಿಗೆ ಅಂಬಿಕಾರವರಿಗೆ   ಡಿಕ್ಕಿ ಹೊಡೆದ ಪರಿಣಾಮ  ಅವರು  ಡಾಮಾರು  ರಸ್ತೆಗೆ  ಬಿದ್ದು   ಅವರ ಬಲಕಾಲಿನ ಮಣಿಗಂಟಿಗೆ  ಹಾಗೂ ಎಡಕಾಲಿನ  ಮೊಣಗಂಟಿಗೆ  ಗಂಭೀರ   ಸ್ವರೂಪದ   ರಕ್ತಗಾಯವಾಗಿರುತ್ತದೆ . ನಂತರ ಚಿಕಿತ್ಸೆ   ಬಗ್ಗೆ  ಗಾಯಾಳುವನ್ನು  ಅಲ್ಲಿ ಸೇರಿದ  ಸಾರ್ವಜನಿಕರು  ಮತ್ತು   KSRTC  ಬಸ್ಸಿನ  ನಿರ್ವಹಕ ವಾಹನವೊಂದರಲ್ಲಿ      ತೊಕ್ಕೊಟ್ಟು  ನೇತಾಜಿ   ಆಸ್ಪತ್ರೆಗೆ  ಕರೆದುಕೊಂಡು ಹೋಗಿ  ಪ್ರಥಮ ಚಿಕಿತ್ಸೆ ಕೊಡಿಸಿ ನಂತರ   ಹೆಚ್ಚಿನ  ಚಿಕಿತ್ಸೆ ಬಗ್ಗೆ  ದೇರಳಕಟ್ಟೆ  ಕೆ ಎಸ್ ಹೆಗ್ಡೆ  ಆಸ್ಪತ್ರೆಗೆ  ಕರೆದುಕೊಂಡು   ಹೋಗಿ  ದಾಖಲು ಮಾಡಿರುತ್ತಾರೆ  ಎಂಬಿತ್ಯಾದಿ .

 

Crime Reported in Kavoor PS       

ದಿನಾಂಕ: 09/12/2021 ರಂದು ಪಿರ್ಯಾದಿ ASI MURALIDHAR BALLAL ರವರಿಗೆ ಬೆಳಿಗ್ಗೆ ಸುಮಾರು 09.15 ಗಂಟೆಗೆ ಯಾರೋ ಸಾರ್ವಜನಿಕರೊಬ್ಬರು ಠಾಣೆಯ ದೂರವಾಣಿಗೆ ಕರೆ ಮಾಡಿ ಮೂಡುಶೆಡ್ಡೆ ಗ್ರಾಮದ ಸರಕಾರಿ ಶಾಲೆಯ ಪಕ್ಕದ ಮೈದಾನದಲ್ಲಿ ಒಬ್ಬ ಯುವಕ ನಿಂತುಕೊಂಡು ಸಿಗರೇಟು ಸೇದುತ್ತಿರುವುದಾಗಿ ಮತ್ತು ಅಮಲಿನಲ್ಲಿ ನಿಂತುಕೊಂಡಿರುವುದಾಗಿ ಕಂಡು ಬರುತ್ತಿರುತ್ತದೆ ಎಂದು ಮಾಹಿತಿ ನೀಡಿದ್ದು,ಅದರಂತೆ ಪಿರ್ಯಾದಿದಾರರು  ಸಿಬ್ಬಂದಿಗಳ ಜೊತೆ ಇಲಾಖಾ ವಾಹನದಲ್ಲಿ ಸದ್ರಿ ಸ್ಥಳಕ್ಕೆ ಸುಮಾರು 09.30 ರ ವೇಳೆಗೆ ತಲುಪಿದಾಗ ಆರೋಪಿತನಾದ ಸಚಿನ್ (ಪ್ರಾಯ 25) ಎಂಬವನು ಸಿಗರೇಟ್ ಸೆದುತ್ತಾ ನಿಂತುಕೊಂಡಿದ್ದು ಮಾತನಾಡುವಾಗ ತೊದಲುತ್ತಿದ್ದು ಹಾಗೂ ಗಾಂಜಾ ವಾಸನೆ ಬರುತ್ತಿದ್ದರಿಂದ ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ಬಗ್ಗೆ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ತಜ್ಞ ವೈದ್ಯರು ಆರೋಪಿತರನ್ನು ಪರೀಕ್ಷಿಸಿ ಆರೋಪಿತನು ಗಾಂಜಾ ಸೇವನೆ ಮಾಡಿರುವುದಾಗಿ  ದೃಡಪತ್ರ ನೀಡಿರುವ ಮೇರೆಗೆ ಆಪಾದಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

2) ದಿನಾಂಕ: 09/12/2021 ರಂದು ಪಿರ್ಯಾದಿ ASI MURALIDHAR BALLAL ರವರಿಗೆ ಬೆಳಿಗ್ಗೆ  ಸುಮಾರು 10.45 ಗಂಟೆಗೆ ಯಾರೋ ಸಾರ್ವಜನಿಕರೊಬ್ಬರು ಠಾಣೆಯ ದೂರವಾಣಿಗೆ ಕರೆ ಮಾಡಿ ಮರಕಡ ಗ್ರಾಮದ ಬೊಂದೇಲ್ ಮೈದಾನದ ಹತ್ತಿರ ಖಾಲಿ ಜಾಗದಲ್ಲಿ ಒಬ್ಬ ಯುವಕ ನಿಂತುಕೊಂಡು ಸಿಗರೇಟು ಸೇದುತ್ತಿರುವುದಾಗಿ ಮತ್ತು ಅಮಲಿನಲ್ಲಿ ನಿಂತುಕೊಂಡಿರುವುದಾಗಿ ಕಂಡು ಬರುತ್ತಿರುತ್ತದೆ ಎಂದು ಮಾಹಿತಿ ನೀಡಿದ್ದು,ಅದರಂತೆ ಪಿರ್ಯಾದಿದಾರರು  ಸಿಬ್ಬಂದಿಗಳ ಜೊತೆ ಇಲಾಖಾ ವಾಹನದಲ್ಲಿ ಸದ್ರಿ ಸ್ಥಳಕ್ಕೆ ಸುಮಾರು 10.55 ರ ವೇಳೆಗೆ ತಲುಪಿದಾಗ ಆರೋಪಿತನಾದ ದರ್ಶನ್ (ಪ್ರಾಯ 21) ಎಂಬವನು ಸಿಗರೇಟ್ ಸೆದುತ್ತಾ ನಿಂತುಕೊಂಡಿದ್ದು ಮಾತನಾಡುವಾಗ ತೊದಲುತ್ತಿದ್ದು ಆತನನ್ನು ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ಬಗ್ಗೆ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ತಜ್ಞ ವೈದ್ಯರು ಆರೋಪಿತರನ್ನು ಪರೀಕ್ಷಿಸಿ ಆರೋಪಿತನು ಗಾಂಜಾ ಸೇವನೆ ಮಾಡಿರುವುದಾಗಿ  ದೃಡಪತ್ರ ನೀಡಿರುವ ಮೇರೆಗೆ ಆಪಾದಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 10-12-2021 06:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080