ಅಭಿಪ್ರಾಯ / ಸಲಹೆಗಳು

Crime Reported in Panambur PS

ಪಿರ್ಯಾದಿ PARVATHI ದಾರರು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ  ಎವರೆಸ್ಟ್ ಸೀ ಫುಡ್  ಕಂಪನಿಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದು ದಿನಾಂಕ:10-02-2022 ರ ರಾತ್ರಿ ಯಿಂದ 11-02-2022 ರ  ಬೆಳಿಗ್ಗೆ ತನಕ ರಾತ್ರಿ ಪಾಳಿಯ  ಕರ್ತವ್ಯ  ಮಾಡಿ ಕಂಪನಿಯ ಒಳಗಿದ್ದ ಕೆಲಸಗಾರರ ವಿಶ್ರಾಂತಿ ರೂಮಿನಲ್ಲಿ ಇತರ ಕೆಲಸಗಾರರ ಜೊತೆ ಇದ್ದಾಗ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಕಂಪನಿಯ ಮಶಿನರಿ ಇದ್ದ ಕಡೆಯಿಂದ ಅಮೋನಿಯ ಅನಿಲ ಸೋರಿಕೆಯಾಗಿ ದಟ್ಟ ಹೊಗೆ ಸಮೇತವಾಗಿ ಪಿರ್ಯಾದಿದಾರರು ಮತ್ತು ಇತರರು ಇದ್ದ ಸ್ಥಳಕ್ಕೆ ಆವರಿಸಿರುವ ಪರಿಣಾಮ ಉಸಿರು ಗಟ್ಟಿದ ಸ್ಥಿತಿಯಾಗಿ ಅಸ್ವಸ್ಥ ಗೊಂಡವರನ್ನು ಚಿಕಿತ್ಸೆ ಬಗ್ಗೆ ಸುರತ್ಕಲ್ ಶ್ರೀನಿವಾಸ ಸ್ಪತ್ರೆಗೆ ದಾಖಲಿಸಿರುವುದು ಹಾಗೂ ಪಿರ್ಯಾದಿದಾರರ ಜೊತೆಯಲ್ಲಿದ್ದ ಇತರ ಸುಮಾರು 25 ಜನ ಕೆಲಸಗಾರರು ಕೂಡ ಕಂಪನಿಯಿಂದ ಹೊರಬಂದ ಅಮೋನಿಯಂ ಗ್ಯಾಸ್ ಸೇವನೆಯಿಂದ ಅಸ್ವಸ್ಥರಾಗಿ ಒಳರೋಗಿಗಳಾಗಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಘಟನೆಗೆ ಎವರೆಸ್ಟ್ ಸೀ ಫುಡ್ ಕಂಪನಿಯ ಮಾಲಕರಾದ ಸಿಂಧು ರಾಮ್ ಪುತ್ರನ್, ಆನಂದ ಪುತ್ರನ್, ವಸೀಮ್, ಹನೀಫ್,  ಮ್ಯಾನೇಜರ್ ಯಶವಂತ್ ಶಣೈ, ಮಶಿನ್ ಆಪರೇಟರ್ ಜಿನ್ ಸನ್  ಎಂಬವರುಗಳ ತೀವ್ರ ನಿರ್ಲಕ್ಷತನವೇ ಕಾರಣವಾಗಿರುತ್ತದೆ.ಇದರ ಪರಿಣಾಮ ಪಿರ್ಯಾದಿದಾರರಿಗೆ ಮತ್ತು ಇತರ 25 ಜನ ಕಂಪನಿ ಕೆಲಸಗಾರರಿಗೆ ಆರೋಗ್ಯದ ಮೇಲೆ ಗಂಭೀರ ಹಾನಿಯಾಗಿರುವುದು ಮತ್ತು ಆರೋಗ್ಯದ ಸಮಸ್ಯೆಯಾಗಿರುತ್ತದೆ.ಎಂಬಿತ್ಯಾದಿ. 

Crime Reported in Traffic North Police Station                              

ಪಿರ್ಯಾದಿ Manoj Kumar ದಾರರು ಅದಾನಿ Total Gas ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದು ನಿನ್ನೆ ದಿನಾಂಕ 10-01-2022 ರಂದು ವಾಹನ ಸಂಚಾರ ಕಡಿಮೆ ಇರುವ ಸಮಯದಲ್ಲಿ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು KA-19-MH-4289 ನಂಬ್ರದ ಕ್ರೇನ್ ಸಹಾಯದಿಂದ ಗ್ಯಾಸ್ ಪೈಪ್ ಗಳನ್ನು ವಿಧ್ಯಾದಾಯನಿ ಶಾಲೆಯ ಬಳಿಯಿಂದ ಸುರತ್ಕಲ್ ಕಾರ್ಪೊರೇಶನ್ ಕಛೇರಿ ಬಳಿಗೆ ರಾ ಹೆ 66 ರಲ್ಲಿ ಸಾಗಿಸಿಕೊಂಡು ಹೋಗುತ್ತಾ ಸುರತ್ಕಲ್ ಕಾರ್ಪೊರೇಶನ್ ಕಛೇರಿ ಎದುರು ತಲುಪಿದಾಗ ರಾತ್ರಿ ಸಮಯ ಸುಮಾರು 10:00 ಗಂಟೆಗೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KA-21-N-6565 ನಂಬ್ರದ ಕಾರನ್ನು ಅದರ ಚಾಲಕ ದೇವಿ ಪ್ರಸಾದ್ ಹೊಳ್ಳ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕ್ರೇನ್ ಬಳಿ ಬ್ಯಾಟನ್ ಲೈಟ್ ಹಿಡಿದು ದಾರಿಯಾಗಿ ಬರುವ ವಾಹನಗಳಿಗೆ ಸೂಚನೆ ನೀಡುತ್ತಿದ್ದ  M D ಅನ್ವರ್ ಆಲಂ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಕ್ರೇನ್ ನ ಹಿಂಬದಿಗೆ ಬಿದ್ದು M D ಅನ್ವರ್ ಆಲಂ ರವರ ಎಡ ಕಾಲಿನ ತೊಡೆಗೆ ಹಾಗೂ ಬಲ ಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in Mulki PS

ಪಿರ್ಯಾದಿ Mrs. R Padmashri Geologist Of Mines and  Geology Department ದಾರರು ದಿನಾಂಕ:06-01-2022 ರಂದು  15-00 ಗಂಟೆಗೆ ಅಕ್ರಮ ಮರಳುಗಾರಿಕೆ ಚಟುವಟಿಕೆಗಳನ್ನು ಮಾಡುತ್ತಿರುವ ಬಗ್ಗೆ ಪ್ರಾದೇಶಿಕ ನಿರ್ದೇಶಕರ (ಪರಿಸರ) ಕಛೇರಿಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಗ್ರಾಮ ಕರಣಿಕರೊಂದಿಗೆ   ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರವರ ಆದೇಶದಂತೆ ಮಂಗಳೂರು ತಾಲೂಕು ಬಪ್ಪನಾಡು ಗ್ರಾಮದ ಸ.ನಂ.96  ರಲ್ಲಿ ಪರಿಶೀಲನೆ  ಮಾಡಲಾಗಿ ಬಪ್ಪನಾಡು ಜಳಕದ ಕಟ್ಟೆ ಎಂಬಲ್ಲಿ ಶಾಂಭವಿ ನದಿ ದಡದಲ್ಲಿ 02 ಮೆಟ್ರಿಕ್ ಟನ್ ಗಳಷ್ಟು ಮರಳು ಕಂಡು ಬಂದಿರುತ್ತದೆ. ಸದ್ರಿ ಮರಳನ್ನು ಪಿರ್ಯಾದಿದಾರರು ಮಹಜರು ಮುಖೇನ ಸದ್ರಿ ಸ್ಥಳದಿಂದ ಸ್ವಾಧೀನಪಡಿಸಿಕೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮುಕ್ಕ ತನಿಖಾ ಠಾಣೆಗೆ ಸಾಗಾಣಿಕೆ ಮಾಡಿ ಶೇಖರಿಸಿಕೊಂಡಿರುವುದಾಗಿದೆ.  ಅಲ್ಲದೇ  ಯಾರೋ ಕಳ್ಳರು ಸರಕಾರಿ ಸೊತ್ತಾದ ಮರಳನ್ನು ಶಾಂಭವಿ ನದಿಯಿಂದ ತೆಗೆದು ಕಳ್ಳತನ ಮಾಡಿರುವುದಾಗಿದೆ ಎಂಬಿತ್ಯಾದಿಯಾಗಿದೆ.

 

ಇತ್ತೀಚಿನ ನವೀಕರಣ​ : 11-01-2022 09:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080