ಅಭಿಪ್ರಾಯ / ಸಲಹೆಗಳು

Crime Reported in :  Traffic South PS

ಪಿರ್ಯಾದಿ ರಂಜಿತ್ ಸಿಹೆಚ್ ಸಿ ರವರು ಉಳ್ಳಾಲ ಪೊಲೀಸ್ ಠಾಣೆ ಮಂಗಳೂರು  ಇಲ್ಲಿ   ಕರ್ತವ್ಯ ನಿರ್ವಹಿಸುತ್ತಿದ್ದು  ದಿನಾಂಕ 11-03-2022 ರಂದು ಬೆಳಿಗ್ಗೆ ಸಮಯ ಸುಮಾರು 10-00 ಗಂಟೆಗೆ ಸಂಚಾರ ದಕ್ಷೀಣ ಪೊಲೀಸ್ ಠಾಣೆಗೆ ಮೋಟಾರ್ ಸೈಕಲ್ ನಂಬ್ರ: KA-19-EC-5831  ಮತ್ತು ಅದರ ಚಾಲಕನಾದ ಶ್ರೀ ತೌಸೀಫ್ ಮಹಮ್ಮದ್  ಇವರನ್ನು ಹಾಜರುಪಡಿಸಿ ಸದ್ರಿ ವ್ಯಕ್ತಿಯು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ : KA-19-EC-5831 ನೇದರಲ್ಲಿ ಅನೇಕ ಬಾರಿ ಉಳ್ಳಾಲ ನಗರದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಹಾಗೂ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದು ಪಿರ್ಯಾದಿದಾರರ ಠಾಣಾ ನಿರೀಕ್ಷಕರು ಸದರಿ ವ್ಯಕ್ತಿಯನ್ನು ಠಾಣೆಗೆ ಕರೆಯಿಸಿ ವಿಚಾರಿಸಲಾಗಿ ಸದರಿ ವ್ಯಕ್ತಿಯು ತಾನು ಅನೇಕ ಬಾರಿ ವಿಲಿಂಗ್ ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಪಿರ್ಯಾದಿದಾರರ ಠಾಣೆಯ ನಿರೀಕ್ಷಕರ ಆದೇಶನುಸಾರ ಸದರಿ ತಪ್ಪಿತಸ್ಥ ಬೈಕ್ ಚಾಲಕ ಶ್ರೀ ತೌಸೀಫ್ ಮಹಮ್ಮದ್  ಹಾಗೂ ಮೋಟಾರ್ ಸೈಕಲ್ ನಂಬ್ರ : KA-19-EC-5831 ನ್ನು ಮುಂದಿನ ಪುರಾವೆಗಾಗಿ ಸಂಚಾರ ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರ ಮಂದೆ ಒಪ್ಪಿಸಿದ್ದು ನಂತರ ಸದರಿ ಚಾಲಕನ ವಿರುದ್ದ ಮೋಟಾರ್ ವಾಹನ ಕಾಯಿದೆ ಅಡ್ಡಿಯಲ್ಲಿ ಸೂಕ್ತ ಕ್ರಮ ಜರುಗಿಸಲು ಕೊರಿರುವ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.            

 

2) ಆರೋಪಿ ಮಹಮ್ಮದ್ ಆನೀಜ್ ರವರು ಅವರ ಬಾಬ್ತು ಮೋಟಾರು ಸೈಕಲ್ ನಂಬ್ರ : KA-19-ET-0976 ನೇದರಲ್ಲಿ ಅನೇಕ ಬಾರಿ ಗ್ರಾಮಾಂತರ ಠಾಣಾ ಸರಹದ್ದಿನಲ್ಲಿರುವ ವಾಮಂಜೂರು ಪ್ರದೇಶದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಹಾಗೂ ಪ್ರಾಣಕ್ಕೆ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದಂತೆ  ತಪ್ಪಿತಸ್ಥ ಬೈಕ್ ಚಾಲಕ ಶ್ರೀ ಮಹಮ್ಮದ್ ಆನೀಜ್ ವಿರುದ್ದ ಮೋಟಾರ್ ವಾಹನ ಕಾಯಿದೆ ಅಡ್ಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

3) ದಿನಾಂಕ 11-03-2022 ರಂದು  ಪಿರ್ಯಾದಿ MAHAMMOD AYUB KANURU ದಾರರ   ಪರಿಚಯದವರಾದ   ಚಂದ್ರ  ಶೇಖರ ಎಂಬವರು ಕಣ್ಣೂರು ಪೋಸ್ಟ್ ಆಫೀಸ್ ಬಳಿ  ಬಿ  ಸಿ  ರೋಡ್   ಕಡೆಯಿಂದ   ಮಂಗಳೂರು   ಕಡೆಗೆ  ಹಾದು  ಹೋಗಿರುವ   ರಾಷ್ಟ್ರೀಯ   ಹೆದ್ದಾರಿ   73  ರ   ಡಾಮಾರು   ರಸ್ತೆಯನ್ನು    ದಾಟಲು    ನಿಂತುಕೊಂಡಿರುವ ಸಮಯ  ಸುಮಾರು    ಬೆಳಿಗ್ಗೆ    09:45 ಗಂಟೆಗೆ   ಬಿ ಸಿ ರೋಡ್   ಕಡೆಯಿಂದ    ಮಂಗಳೂರು   ಕಡೆಗೆ  ಮೋಟಾರ್   ಸೈಕಲ್   ನಂಬ್ರ  KA-19-HH-6101  ನೇದನ್ನು   ಅದರ   ಸವಾರ   ದೀಕ್ಷಿತ್   ಎಂಬಾತನು   ಮೋಟಾರ್   ಸೈಕಲನ್ನು  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ   ರಸ್ತೆಯ   ತೀರಾ   ಎಡಬದಿಗೆ   ಸವಾರಿ ಮಾಡಿಕೊಂಡು  ಹೋಗಿ  ರಸ್ತೆ ಬದಿಯಲ್ಲಿ  ನಿಂತಿದ್ದ   ಚಂದ್ರ  ಶೇಖರರವರಿಗೆ   ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು    ಮತ್ತು  ಮೋಟಾರ್   ಸೈಕಲ್   ಸವಾರ ಮೋಟಾರ್   ಸೈಕಲ್   ಸಮೇತ  ಡಾಮರು  ರಸ್ತೆಗೆ  ಬಿದ್ದರು  . ಈ  ಅಪಘಾತದಿಂದ ಚಂದ್ರಶೇಖರರವರಿಗೆ ತಲೆಗೆ   ಗಂಭೀರ  ಸ್ವರೂಪದ ಗಾಯ   , ಹಣೆಯ   ಎಡಬದಿ ರಕ್ತ ಗಾಯ   ಹಾಗೂ   ಬಲಕಾಲಿಗೆ   ಮೂಳೆಮುರಿತದ  ಗಂಬೀರ   ಸ್ವರೂಪದ  ಗಾಯವಾಗಿರುತ್ತದೆ. ಹಾಗೂ  ಅಪಘಾತ ಪಡಿಸಿದ  ಮೋಟಾರ್  ಸೈಕಲ್  ಸವಾರನಿಗೆ ಎಡಭುಜ ಹಾಗೂ   ಎಡಕಾಲಿಗೆ  ಸಾಧರಣ ಗಾಯವಾಗಿದ್ದು  ಗಾಯಾಳುಗಳನ್ನು   ಚಿಕಿತ್ಸೆ  ಬಗ್ಗೆ  ಪಿರ್ಯಾದಿದಾರರು  ಮತ್ತು  ಅಲ್ಲಿ  ಸೇರಿದ   ಸಾರ್ವಜನಿಕರು  ಅದೇ  ರಸ್ತೆಯಲ್ಲಿ ಬರುತ್ತಿದ್ದ  ಅಂಬ್ಯಲೆನ್ಸ್  ಒಂದರಲ್ಲಿ   ಕಂಕನಾಡಿ  ಫಾದರ್ ಮುಲ್ಲರ್  ಆಸ್ಪತ್ರೆಗೆ  ಕರೆದುಕೊಂಡು   ಹೋಗಿ ದಾಖಲಿಸಿರುತ್ತಾರೆ  ಎಂಬಿತ್ಯಾದಿ

 

4)  ದಿನಾಂಕ 10-03-2022 ರಂದು ಬೆಳಿಗ್ಗೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ನಲ್ಲಿ ILYAS ZYAN ಎಂಬ ಖಾತೆದಾರ ತನ್ನ ಇನ್ಸ್ಟಾಗ್ರಾಂನಲ್ಲಿ ಇತ್ತೀಚಿಗೆ ಮಾರ್ಚ್ ತಿಂಗಳಲ್ಲಿ 01.03.2022 ರಿಂದ 06.03.2022 ರವರೆಗೆನಡೆದ  ಉಳ್ಳಾಲದಲ್ಲಿ  ಊರೂಸ್ ಕಾರ್ಯಕ್ರಮದ ದಿನ ನೊಂದಣಿ ಸಂಖ್ಯೆ ಇಲ್ಲದ ಮೋಟಾರ್ ಸೈಕಲ್ ನಲ್ಲಿ ಇಬ್ಬರೂ ಸಹ ಸವಾರರನ್ನೂ ಕುಳ್ಳಿರಿಸಿಕೊಂಡು ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಉಳ್ಳಾಲ ಬೈಲ್ ತನಕ ಹಾಗೂ ಅದೇ ದಿನ ನಾಗೂರಿಯಿಂದ ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ತನಕ ಸಾರ್ವಜನಿಕ ರಸ್ತೆಯಲ್ಲಿ ಮೋಟಾರ್ ಸೈಕಲ್ ನಲ್ಲಿ ಸ್ಟಂಟ್ ಮಾಡುತ್ತಾ ವೀಲಿಂಗ್ ಮಾಡಿ ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಇತರೆ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಅಪಾಯವಾಗುವ ರೀತಿಯಲ್ಲಿ ಮೋಟಾರ್ ಸೈಕಲ್ ಸವಾರಿ ಮಾಡಿಕೊಂಡು ಹೋಗಿರುವ ವೀಡಿಯೋ  ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗುತ್ತಿರುವುದನ್ನು ಗಮನಿಸಿ ಸದ್ರಿ ಇನ್ಸ್ಟಾಗ್ರಾಂ ಖಾತೆದಾರನ ವಿಡಿಯೋಗಳನ್ನು ಪರಿಶೀಲಿಸಲಾಗಿ ಅದರಲ್ಲಿ ಮೋಟಾರ್ ಸೈಕಲ್ ನಂಬ್ರ KA-19-ER-1853 ಹಾಗೂ ನೊಂದಣಿ ಸಂಖ್ಯೆ ಇಲ್ಲದ ಮೋಟಾರ್ ಸೈಕಲ್ ಮತ್ತು ಮೋಟಾರ್ ಸೈಕಲ್ ನಂಬ್ರ KA-19-EL-5577ನಲ್ಲಿ ಸ್ಟಂಟ್ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಪಡಿಸಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಸದ್ರಿಯವರ ವಿರುದ್ದ ಹಾಗೂ ಬೈಕನ್ನು ಒದಗಿಸಿಕೊಟ್ಟಿರುವ  ಬೈಕ್ ಮಾಲಿಕರ ವಿರುದ್ದ ಮತ್ತು ವಿಡಿಯೋ ಮಾಡುತ್ತಿದ್ದ ಸಫ್ವಾನ್ ನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿಯಾಗಿರುತ್ತದೆ.

 

5) ದಿನಾಂಕ 10-03-2022 ರಂದು ಬೆಳಿಗ್ಗೆ ಸಾಮಾಜಿಕ ಜಾಲತಾಣವಾದಲ್ಲಿ  KA 19 EY 3744 PULSAR ಮೋಟಾರು ಸೈಕಲ್ ಸವಾರನು  ಅಡ್ಯಾರ್ ಸಮೀಪ ವೀಲಿಂಗ್ ಮಾಡಿ ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಇತರೆ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಅಪಾಯವಾಗುವ ರೀತಿಯಲ್ಲಿ ಮೋಟಾರ್ ಸೈಕಲ್ ಸವಾರಿ ಮಾಡಿಕೊಂಡು ಹೋಗಿರುವ ವೀಡಿಯೋ  ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗುತ್ತಿರುವುದನ್ನು ಗಮನಿಸಿ ವಿಚಾರಣೆ ನಡೆಸಿದಾಗ ಸದರಿ ಬೈಕ್ ಮಾಲಕರಾದ ಶ್ರೀಮತಿ ಮಾಲತಿ ಶೆಟ್ಟಿ ಗಂಡ: ಸುಧೀರ್ ಶೆಟ್ಟಿ ರವರು  ತನ್ನ ಬಾಬ್ತು ಬೈಕನ್ನು ತನ್ನ ಮಗನಾದ  ಕಿಶನ್ ಶೆಟ್ಟಿ  ರವರಿಗೆ ಕೊಟ್ಟಿದ್ದು ,ಸದರಿ ಬೈಕ್  ಮಾಲಕರ ಮಗ ಕಿಶನ್ ಶೆಟ್ಟಿ ನ್ನು ವಿಚಾರಿಸಲಾಗಿ ಆತನು ತಾನು ಅಡ್ಯಾರು ಬಳಿ ವೀಲಿಂಗ್ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು  ಬೈಕ್ ನಂಬ್ರ KA 19 EY 3744  ನೇದರ ಚಾಲಕನಾದ ಕಿಶನ್ ಶೆಟ್ಟಿ   ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 11-03-2022 06:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080