Crime Reported in Mangalore South PS
ದಿನಾಂಕ 10-04-2022 ರಂದು ಸಂಜೆ ಸಮಯ ಮಂಗಳೂರು ನಗರದ ವೆಲೆನ್ಸಿಯಾ ಸರ್ಕಲ್ ಬಳಿಯ ಐಡಿಯಲ್ ಚಿಕನ್ ಶಾಫ್ ಬಳಿ ಐಡಿಯಲ್ ಚಿಕನ್ ಅಂಗಡಿಯ ಕೆಲಸಗಾರರಿಗೆ ಹಲ್ಲೆ ನಡೆಸಿ ಕೊಲೆ ನಡೆಸಲು ಪ್ರಯತ್ನಿಸಿದ ಪ್ರೀತಮ್ ಪೂಜಾರಿ @ ಪ್ರೀತಮ್ ಹಾಗೂ ಧೀರಜ್ ಎಂಬುವರನ್ನು, ಹೊಯ್ಸಳ-6 ವಾಹನದಲ್ಲಿ ಕರ್ತವ್ಯದಲ್ಲಿದ್ದ ದಕ್ಷಿಣ ಪೊಲೀಸ್ ಠಾಣಾ ಪಿ ಸಿ ಪರಶುರಾಮ ಮುಡೆಪ್ಪಗೋಳ್ ಹಾಗೂ ಪಿ ಸಿ ಯಮನಪ್ಪ ವಂದಾಲ ರವರು ವಶಕ್ಕೆ ಪಡೆದುಕೊಂಡು, 19-15 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸಿದ್ದು, ಅವರುಗಳನ್ನು ವಿಚಾರಣೆ ನಡೆಸಿದ ಸಮಯ, ಆರೋಪಿ ಪ್ರೀತಮ್ ಪೂಜಾರಿ @ಪ್ರೀತಮ್, ಪ್ರಾಯ: 27 ವರ್ಷ, ವಾಸ: ಜಯನಗರ, ಜೆಲ್ಲಿಗುಡ್ಡೆ, ಬಜಾಲ್, ಮಂಗಳೂರು, ಈತನು ಗಾಂಜಾ ಸೇವನೆ ಮಾಡಿರುವ ಬಗ್ಗೆ ಒಪ್ಪಿಕೊಂಡಂತೆ, ಆರೋಪಿಯನ್ನು ಮಂಗಳೂರು ಕುಂಟಿಕಾನ ಎ.ಜೆ ಆಸ್ಪತ್ರೆಯಲ್ಲಿ ಫಾರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದಂತೆ, ವೈಧ್ಯಾಧಿಕಾರಿಗಳು ಆರೋಪಿಯನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ, ಆರೋಪಿಯು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುತ್ತದೆ. ಅದರಂತೆ ಆರೋಪಿ ಪ್ರೀತಮ್ ಪೂಜಾರಿ @ ಪ್ರೀತಮ್ ಎಂಬಾತನ ವಿರುದ್ದ ಎನ್.ಡಿ.ಪಿ.ಎಸ್ ಆಕ್ಟ್ 1985 ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಎಂಬಿತ್ಯಾದಿಯಾಗಿರುತ್ತದೆ.
Crime Reported in Surathkal PS
ಫಿರ್ಯಾದಿ RAMESH KOTIAN ದಾರರ ಹೆಂಡತಿ ಪ್ರಾಯ ಸುಮಾರು 52 ವರ್ಷದ ಪ್ರೇಮ ರವರು ಸುಮಾರು 2 ವರ್ಷದಿಂದ ಮಾನಸಿಕ ಕಿನ್ನತೆಯಿಂದ ಬಳಲುತ್ತಿದ್ದು, ಕಳೆದ ವರ್ಷ ಮನೆ ಬಿಟ್ಟು 2-3 ಬಾರಿ ಹೋಗಿ ಒಂದು ವಾರ ಬಿಟ್ಟು ಮನೆಗೆ ಬಂದಿರುತ್ತಾಳೆ. ದಿನಾಂಕ 02/04/2022 ರಂದು ಬೆಳಿಗ್ಗೆ 7.00 ಗಂಟೆಗೆ ತನ್ನ ತಾಯಿ ಮನೆಯಾದ ಮುಲ್ಕಿ ಪಂಜಿನಡ್ಕ ಎಂಬಲ್ಲಿಗೆ ಹೋಗಿ ಬರುವುದಾಗಿ ಪಿರ್ಯಾದಿದಾರರಲ್ಲಿ ತಿಳಿಸಿ ಹೋಗಿರುತ್ತಾರೆ. ದಿನಾಂಕ 05/04/2022 ರಂದು ಮಧ್ಯಾಹ್ನ 2.30 ಗಂಟೆಗೆ ಪಿರ್ಯಾದಿದಾರರ ಮನೆಯಲ್ಲಿ ದೈವ ದರ್ಶನ ಕಾರ್ಯಕ್ರಮವಿದ್ದು ಆ ಸಮಯ ಮನೆಗೆ ಬಂದಿದ್ದ ತನ್ನ ಹೆಂಡತಿಯ ಅಕ್ಕ ಶ್ರೀಮತಿ ಅರುಣ ರವರಲ್ಲಿ ತನ್ನ ಪತ್ನಿಯ ಬಗ್ಗೆ ವಿಚಾರಿಸಲಾಗಿ ಶ್ರೀಮತಿ ಅರುಣ ರವರು ಪ್ರೇಮಳು ತಾಯಿಯ ಮನೆಗೆ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಕಾಣೆಯಾದ ಪತ್ನಿಯ ಪತ್ತೆಯ ಬಗ್ಗೆ ಸಂಬಂಧಿಕರಲ್ಲಿ ಫೋನ್ ಮಾಡಿ ವಿಚಾರಿಸಿದ್ದು, ಈವರೆಗೆ ಪತ್ತೆಯಾಗದ ಕಾರಣ ದೂರು ನೀಡಿದ್ದು, ಪತ್ತೆ ಮಾಡುವರೇ ಎಂಬಿತ್ಯಾದಿಯಾಗಿರುತ್ತದೆ.
ಕಾಣೆಯಾದವರ ಚಹರೆ:
ಹೆಸರು : ಶ್ರೀಮತಿ ಪ್ರೇಮಾ
ಪ್ರಾಯ: 52 ವರ್ಷ
ಎತ್ತರ : 5.2 ಇಂಚು
ಗೋಧಿ ಮೈಬಣ್ಣ, ಕಪ್ಪು ಕೂದಲು, ದುಂಡು ಮುಖ
ತುಳು, ಕನ್ನಡ, ಮಾತನಾಡುತ್ತಾರೆ.
2) ಫಿರ್ಯಾದಿ BASAVARAJ PATIL ದಾರರ ಹೆಂಡತಿ ಪ್ರಾಯ ಸುಮಾರು 22 ವರ್ಷದ ಬಾಳಮ್ಮ ಯಾನೆ ಮೇಘ ರವರು ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕು ನಾಗರಸಿಕೊಪ್ಪರವರಾಗಿದ್ದು, ಪ್ರಸ್ತುತ ಸುರತ್ಕಲ್ ಗ್ರಾಮದ ತಡಂಬೈಲ್ ಅಬ್ದುಲ್ ಸಲೀಂ ರವರ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ. ದಿನಾಂಕ 08/04/2022 ರಂದು ಬೆಳಿಗ್ಗೆ 8.00 ಗಂಟೆಗೆ ಪಿರ್ಯಾದಿದಾರರು ಕೂಲಿ ಕೆಲಸಕ್ಕೆಂದು ತೆರಳಿದವರು ಸಮಯ 10.00 ಗಂಟೆಗೆ ಚಹಾ ವಿರಾಮದ ವೇಳೆಯಲ್ಲಿ ಮನೆಗೆ ಬಂದಾಗ ತನ್ನ ಪತ್ನಿ ಶ್ರೀಮತಿ ಬಾಳಮ್ಮ ಯಾನೆ ಮೇಘ ಮತ್ತು 2 ವರ್ಷ ಪ್ರಾಯದ ಮಗು ಮನೆಯಲ್ಲಿ ಇರದೇ ಕಾಣೆಯಾಗಿರುತ್ತಾರೆ ಎಂಬಿತ್ಯಾದಿ.
ಕಾಣೆಯಾದವರ ಚಹರೆ:
ಹೆಸರು : ಶ್ರೀಮತಿ ಬಾಳಮ್ಮ ಯಾನೆ ಮೇಘಾ
ಪ್ರಾಯ: 25 ವರ್ಷ
ಎತ್ತರ : 4.2 ಅಡಿ
ಗೋಧಿ ಮೈಬಣ್ಣ, ಕಪ್ಪು ಕೂದಲು, ದುಂಡು ಮುಖ
ಭಾಷೆ- ಕನ್ನಡ ಮಾತನಾಡುತ್ತಾರೆ.
ಧರಿಸಿದ ಬಟ್ಟೆಗಳು : ಹಸಿರು ಬಣ್ಣದ ನೈಟಿ ಧರಿಸಿರುತ್ತಾರೆ.
Crime Reported in Moodabidre PS
ಪಿರ್ಯಾದಿ MANJUNATHA GOWDA ದಾರರು ದಿನಾಂಕ 08-04-2022 ರಂದು ಬೆಳಿಗ್ಗೆ 8-30 ಗಂಟೆಗೆ ಗ್ಯಾರೇಜ್ ಕೆಲಸಕ್ಕೆ ಹೋಗುತ್ತೇನೆಂದು ಹೆಂಡತಿಯಾದ ಶ್ರೀಮತಿ ರಂಜೀನಿಯವರಿಗೆ ತಿಳಿಸಿ ಕೆಲಸಕ್ಕೆ ಬಂದಿದ್ದು, ಸಂಜೆ ಸುಮಾರು 19-30 ಗಂಟೆಗೆ ಗ್ಯಾರೇಜ್ ಕೆಲಸ ಮುಗಿಸಿಕೊಂಡು ಮನೆಗೆ ಹೋದಾಗ ಮನೆಗೆ ಬೀಗ ಹಾಕಿದ್ದು, ಬೀಗದ ಕೈ ಅಲ್ಲಿಯೇ ಇದ್ದು ನಂತರ ಮನೆಯ ಬಾಗಿಲು ಬೀಗ ತೆಗೆದು ನೋಡಿದಾಗ ಹೆಂಡತಿಯಾದ ರಂಜೀನಿ(33) ಮತ್ತು ಮಗು (7) ಎಂಬುವರು ಮನೆಯಲ್ಲಿ ಇರದೇ ಇದ್ದು ಪೋನ್ ಮಾಡಲಾಗಿ ಸ್ವಿಚ್ ಆಫ್ ಬಂದಿದ್ದರಿಂದ ಮಗು ಮತ್ತು ಹೆಂಡತಿಯ ಬಗ್ಗೆ ನೆರೆಕೆರೆಯವರಲ್ಲಿ ವಿಚಾರಿಸಲಾಗಿ ಅವರ ಬಗ್ಗೆ ತಿಳಿಯದ ಕಾರಣ ಹಾಗೂ ಸಂಬಂಧಿಕರಲ್ಲಿ ಮತ್ತು ಮೂಡುಬಿದ್ರೆ ಪೇಟೆ, ಕೆಸರುಗದ್ದೆ, ಪುತ್ತಿಗೆ ಮುಂತಾದ ಕಡೆಗಳಲ್ಲಿ ವಿಚಾರಿಸಿಕೊಂಡಲ್ಲಿ ಈ ವರೆಗೂ ಪತ್ತೆಯಾಗದ ಕಾರಣ ಪತ್ತೆ ಮಾಡುವರೇ ಕೋರಿದ ಪಿರ್ಯಾದಿ ಎಂಬಿತ್ಯಾದಿ