ಅಭಿಪ್ರಾಯ / ಸಲಹೆಗಳು

Crime Reported in: Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ  ಮಾನ್ಯ ನ್ಯಾಯಾಲಯದಿಂದ ಬಂದ  ಖಾಸಗಿ ಪಿರ್ಯಾ್ದಿ SANDEEP NAYAK  ನಂಬ್ರ:22/2022 ರಲ್ಲಿ ನಮೂದಿಸಿದ 1 ನೇ ಆರೋಪಿ ಪಿರ್ಯಾಾದುದಾರರ ಹೆಂಡತಿಯಾಗಿದ್ದು 2 ನೇ ಆರೋಪಿಯು ಪಿರ್ಯಾ2ದುದಾರರ ಮಾವನಾಗಿರುತ್ತಾರೆ. ಪಿರ್ಯಾಾದುದಾರರು 1 ನೇ ಆರೋಪಿಯನ್ನು ದಿನಾಂಕ 23-10-2013 ರಂದು ಮೂಡಬಿದ್ರೆ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದು ಆರೋಪಿತಳನ್ನು ಅಮೇರಿಕಾಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಪಿರ್ಯಾರದುದಾರರು ಅಮೇರಿಕಾದಲ್ಲಿ  ಉದ್ಯೋಗದಲ್ಲಿದ್ದು ತನ್ನ ಉಳಿತಾಯದ ಹಣವನ್ನು 1 ನೇ ಆರೋಪಿಯ ಒತ್ತಾಯದಂತೆ ವಿವಿಧ ಕಂಪೆನಿಗಳ ಷೇರು ಮತ್ತು ಮ್ಯೂಚುವಲ್ ಫಂಡ್ ಗಳಲ್ಲಿ ಸುಮಾರು 60 ಲಕ್ಷ ರೂಪಾಯಿಗೂ ಹೆಚ್ಚಿನ ಹಣವನ್ನು ವಿನಿಯೋಗಿಸಿರುತ್ತಾರೆ. ಪ್ರಸ್ತುತ ಅದರ ಮೌಲ್ಯ ಒಂದು ಕೋಟಿಗೂ ಬೆಲೆ ಬಾಳುವಂತಹದ್ದಾಗಿರುತ್ತದೆ. 2020 ನೇ ಆಗಸ್ಟ್ ತಿಂಗಳಲ್ಲಿ ಪಿರ್ಯಾದದುದಾರರು ಆರೋಪಿತಳ ಜೊತೆ ಭಾರತಕ್ಕೆ ಬಂದ ನಂತರ ಮೂಡಬಿದ್ರೆಯ ಜ್ಯೋತಿನಗರ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು 1 ನೇ ಆರೋಪಿಯ ವರ್ತನೆಯಲ್ಲಿ ಬದಲಾವಣೆಯಾಗಿದ್ದು 2 ನೇ ಆರೋಪಿಯ ಕುಮ್ಮಕ್ಕಿನಿಂದ ವಾಣಿಜ್ಯ ಕಟ್ಟಡವನ್ನು ಕಟ್ಟುವರೇ ಹಣ ನೀಡುವ ಬಗ್ಗೆ ಪಿರ್ಯಾೆದುದಾರರಲ್ಲಿ ಒತ್ತಾಯಿಸುತ್ತಿದ್ದರು. ಪಿರ್ಯಾಯದುದಾರರು ನೀಡಲು ಸಾದ್ಯವಿಲ್ಲವೆಂದು ಹೇಳಿದಾಗ ಆರೋಪಿತರು  ನೀನು ನನಗೆ ಬೇಡ , ನಿನಗೆ ಬುದ್ದಿ ಕಲಿಸುತ್ತೇನೆ, ನೀನು ನಿನ್ನ ತಂದೆ ತಾಯಿಯನ್ನು ಬಿಟ್ಟು ಬರಬೇಕು, ಅವರ ಜೊತೆ ಯಾವುದೇ ಸಂಬಂದ ಇಟ್ಟುಕೊಳ್ಳಬಾರದು ನಿನ್ನನ್ನು  ಬೀದಿಗೆ ತರುತ್ತೇನೆ. ಸುಳ್ಳು ದೂರು ನೀಡಿ ಜೈಲಿಗೆ ಹಾಕುತ್ತೇನೆ. ಅಲ್ಲದೇ, ಮಗುವಿನ ಜೊತೆಯಲ್ಲಿ ಸಂಸಾರ ನಡೆಸದಂತೆ ಬಿಕಾರಿಯಾಗಿಸುತ್ತೇನೆ ಎಂಬುದಾಗಿ ಬೈದುದಲ್ಲದೇ ಪಿರ್ಯಾಜದುದಾರರ ವಿರುದ್ದ ಮೂಡಬಿದ್ರೆ ನ್ಯಾಯಾಲಯದಲ್ಲಿ ಎಂ.ಸಿ ಸಂಖ್ಯೆ:45/2021 ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ಸುಳ್ಳು ಆರೋಪಣೆಯನ್ನು ಮಾಡಿರುತ್ತಾರೆ. ಅಲ್ಲದೇ ಮೂಡಬಿದ್ರೆ ಕೆನರಾ ಬ್ಯಾಂಕಿನಲ್ಲಿ ಜಂಟಿ ಲಾಕರಿನಲ್ಲಿದ್ದ ಒಡವೆಗಳನ್ನು ಪಿರ್ಯಾಯದುದಾರರ ಒಪ್ಪಿಗೆಯಿಲ್ಲದೇ ಲಾಕರ್ ನಲ್ಲಿದ್ದ ಒಡವೆಗಳನ್ನು ತೆಗೆದು ಮಾರಾಟ ಮಾಡಿರುತ್ತಾರೆ. ಇದರಿಂದ ಪಿರ್ಯಾಯದುದಾರರಿಗೆ ಆರೋಪಿಗಳು ಮೋಸದಿಂದ ನಂಬಿಕೆ ದ್ರೋಹ ಎಸಗಿರುತ್ತಾರೆ ಎಂಬಿತ್ಯಾದಿಯಾಗಿದೆ.

 

Crime Reported in: Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ  ದಿನಾಂಕ: 10-07-2022 ರಂದು ವೇಣೂರು ಕೊರಂಗಲ ಎಂಬಲ್ಲಿ ಪಿರ್ಯಾುದಿದಾರರ Mrs Kavya ಕುಟುಂಬದ ಮನೆಯಲ್ಲಿ  ದೈವ ದರ್ಶನ ಕಾರ್ಯಕ್ರಮವಿದ್ದು ಈ ಕಾರ್ಯಕ್ರಮಕ್ಕೆ ಪಿರ್ಯಾಳದಿದಾರರು, ಅವರ ಅಣ್ಣ ಅಶ್ವಿನ್, ಅಕ್ಕ ಕವಿತ, ಕವಿತಳ ಮಗಳು ತನಿಶ್ಕಾ ತಾಯಿ ವಿಮಲ ರೊಂದಿಗೆ ಅಶ್ವಿನ್ ರವರು ಚಲಾಯಿಸುತ್ತಿದ್ದ ಕೆಎ-19-ಎಂ ಎಲ್-6616 ರಲ್ಲಿ ಹೊರಟು ಮುಡುಬಿದಿರೆ ಬೆಳ್ತಂಗಡಿ ರಸ್ತೆಯಲ್ಲಿ ವೇಣೂರು ಕಡೆಗೆ ಹೋಗುತ್ತಾ ಬೆಳಿಗ್ಗೆ 09.15 ಗಂಟೆ ಸಮಯಕ್ಕೆ  ಮಾರೂರು ಎಂಬಲ್ಲಿ ಗೆ ತಲಪುವ ಸಮಯ ಕಾರನ್ನು ಚಲಾಯಿಸುತ್ತಿದ್ದ ಅಶ್ವಿನ್ ರವರು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿ ಸೈಡ್ ಕೊಡುವ ಭರದಲ್ಲಿ ಕಾರನ್ನು  ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ್ದು,  ಕಾರು ಚಾಲಕನ ಹತೋಟಿ ತಪ್ಪಿ ರಸ್ತೆಯ ಎಡಭಾಗದ ಚರಂಡಿಗೆ ಜಾರಿ ನಿಂತಿದ್ದು. ಈ ಅಪಘಾತದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾಹದಿದಾರರಿಗೆ ಎಡಕಾಲಿನ ಮೊಣಗಂಟಿಗೆ ಒಳಜಖಂ, ಹಣೆಯ ಎಡಭಾಗಕ್ಕೆ ಗಾಯವಾಗಿರುತ್ತದೆ.  ಕಾರಿನಲ್ಲಿದ್ದ ಕವಿತಾ, ಆಕೆಯ ಮಗಳು ತನಿಶ್ಕಾ, ವಿಮಲಾ, ಕಾರು ಚಾಲಕ ಪಿರ್ಯಾಡದಿದಾರರ ಅಣ್ಣ ಅಶ್ವಿನ್ ಗೆ ಕೂಡಾ ಗಾಯ ನೋವುಗಳಾಗಿರುತ್ತದೆ.

          ಈ ಅಪಘಾತಕ್ಕೆ ಆಶ್ವಿನ್ ರವರು ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ್ದೇ ಕಾರಣವಾಗಿರುತ್ತದೆ. ಅಪಘಾತಪಡಿಸಿದ ಕಾರಿನ ಚಾಲಕ ಪಿರ್ಯಾಹದಿದಾರರ ಅಣ್ಣನಾಗಿದ್ದು ಈ ಬಗ್ಗೆ ಠಾಣೆಗೆ ಪಿರ್ಯಾದಿ  ನೀಡುವುದು ಬೇಡ ಎಂದು ಬಾವಿಸಿದ್ದಲ್ಲದೇ, ಕಾನೂನಿನ ತಿಳುವಳಿಕೆ ಇಲ್ಲದ ಕಾರಣ  ಈ ಪಿರ್ಯಾದನ್ನು ನೀಡಲು ವಿಳಂಬವಾಗಿರುತ್ತದೆ. ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 11-07-2022 08:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080