ಅಭಿಪ್ರಾಯ / ಸಲಹೆಗಳು

Crime Reported in Barke PS

 ಪಿರ್ಯಾದಿದಾರರಾದ ಸಂಜೀವ ಸ್.ಕೆ ಪ್ರಾಯ 78 ವರ್ಷ ಇವರು ಗಂಗೂಬಾಯಿ ಕಂಪೌಂಡ್, ಭಗವತಿ ನಗರ, ಕೊಡಿಯಾಲ್ ಬೈಲ್ ಅಲ್ಲಿ ವಾಸವಾಗಿದ್ದು,  ದಿನಾಂಕ: 09-09-2021 ರಂದು ರಾತ್ರಿ ಸಮಯ ಸುಮಾರು 11-00 ಗಂಟೆಗೆ ಪಿರ್ಯಾದಿದಾರರ ನೆರೆಮನೆಯಲ್ಲಿ ವಾಸವಿರುವ ತನ್ನ ಅಣ್ಣನ ಮಗನಾದ ಪ್ರತ್ವಿಜೀತ್ ಕ್ಷುಲಕ ಕಾರಣಕ್ಕೆ ಪಿರ್ಯಾದಿದಾರರಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿ, ಪಿರ್ಯಾದಿಯ ತಲೆಗೆ, ಬಲಕಿವಿಯ ಬಳಿ ಮತ್ತು ಗದ್ದಕ್ಕೆ ಕಡಗ ಧರಿಸಿದ ಬಲ ಕೈಯಿಂದ ಗುದ್ದಿದ ರಕ್ತದ ಗಾಯವಾಗಿತ್ತದೆ. ನಂತರ ಪಿರ್ಯಾದಿದಾರರು ಆಟೋ ಒಂದರಲ್ಲಿ ಮಂಗಳೂರು ನಗರದ ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ತೆರೆಳಿ, ಹೋರ ರೋಗಿಯಾಗಿ ಚಿಕಿತ್ಸೆ ಪಡೆದು, ನಂತರ ಪಿರ್ಯಾದಿದಾರರು ಮನೆಗೆ ತೆರೆಳಿ ವಿಶ್ರಾಂತಿ ಪಡೆದು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುವುದಾಗಿದೆಂಬಿತ್ಯಾದಿ ಸಾರಾಂಶ.

Crime Reported in  Mangalore East Traffic PS                                

ದಿನಾಂಕ 10.09.2021 ರಂದು ಪಿರ್ಯಾದಿದಾರರಾದ ಜಗನ್ನಾಥ ಸಾಮನಿ(70ವರ್ಷ) ರವರು  ತನ್ನ ನೆರೆಮನೆಯವರಾದ  ಸಚಿನ್ ಗೋಯಲ್ ರವರೊಂದಿಗೆ KA-19-EJ-1102ನೇ ಸ್ಕೂಟರಿನಲ್ಲಿ ಸಹಸವಾರರಾಗಿ  ತನ್ನ ಊರಾದ ಹರೇಕಳಕ್ಕೆ  ಕುಂಟಿಕಾನ ಕಡೆಯಿಂದ ಪಂಪುವೆಲ್ ಕಡೆಗೆ ರಾ.ಹೆ 66 ರಲ್ಲಿ  ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 09-40 ಗಂಟೆ  ನಂತೂರು ಜಂಕ್ಷನ್ ತಲುಪುತ್ತಿದ್ದಂತೆ  ಬಿಕರ್ನಕಟ್ಟೆ ಕಡೆಯಿಂದ ನಂತೂರು ಜಂಕ್ಷನ್ ಕಡೆಗೆ KA19MH8915 ನೇ ವಾಹನದ ಚಾಲಕಿ ಟೆಲ್ಮಾ ಡಿ  ಸೋಜಾರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸಹಸವಾರನಾಗಿ  ಹೋಗುತ್ತಿದ್ದ ಸ್ಕೂಟರಿನ ಎಡ ಮುಂಭಾಗಕ್ಕೆ ಢಿಕ್ಕಿಪಡಿಸಿದ ಪರಿಣಾಮ  ಪಿರ್ಯಾದಿದಾರರು ಹಾಗೂ ಸವಾರರು ಡಾಮಾರು ರಸ್ತೆಗೆ ಬಿದ್ದು  ಪಿರ್ಯಾದಿದಾರರ ಎಡಕೆನ್ನೆಯ ಬಳಿ, ಎಡಹುಬ್ಬಿನ ಬಳಿ,ಎಡಕೋಲುಕಾಲಿಗೆ ಹಾಗೂಬಲ ಕೋಲುಕಾಲಿಗೆ  ತರಚಿತ ಗಾಯವಾಗಿದ್ದು ಎಡಕಾಲಿನ ಮಧ್ಯೆ ಬೆರಳಿಗೆ ರಕ್ತಗಾಯವಾಗಿದ್ದು ಅಲ್ಲದೇ ಎಡಕಾಲಿನ  ಎರಡನೇ ಬೆರಳಿಗೆ ಮೂಳೆಮುರಿತದ ಗಾಯವಾಗಿರುತ್ತದೆ. ಹಾಗೂ ಸ್ಕೂಟರ್ ಸವಾರ ಸಚಿನ್ ರವರಿಗೂ ಕೂಡಾ ಸಣ್ಣಪುಟ್ಟ ಗಾಯವಾಗಿರುತ್ತದೆ. ಎಂಬಿತ್ಯಾದಿ

Crime Reported in  Mangalore Rural PS

ಫಿರ್ಯಾಧಿ Rohan Roshan Fernandes ದಾರರು ದಿನಾಂಕ 10-09-2021 ರಂದು ಎಂದಿನಂತೆ ನೀರುಮಾರ್ಗದ ಸುಬ್ರಮಣ್ಯನಗರ ಪಿಂಕೋ ಮಿಲ್ ಬಳಿ ಇರುವ ಮೈದಾನದಲ್ಲಿ ಕ್ರಿಕೆಟ್ ಆಡುವರೇ ಹೋಗಿದ್ದು, ಫಿರ್ಯಾಧಿದಾರರು ಮೈದಾನದಲ್ಲಿ ಬೌಲಿಂಗ್ ಮಾಡುತ್ತಿರುವಾಗ ಸಂಜೆ 4.30 ಗಂಟೆ ಸುಮಾರಿಗೆ ಪರಿಚಯದ ಕಿಶೋರ್ ಹಾಗೂ ದೇವು ಎಂಬುವವರು ಏಕಾಏಕಿ ಮೈದಾನಕ್ಕೆ ಬಂದು ಫಿರ್ಯಾಧಿದಾರರನ್ನು ತಡೆದು ನಿಲ್ಲಿಸಿ ದೇವು ಎಂಬಾತನು ಆತನ ಕೈಯಲ್ಲಿದ್ದ ಕ್ರಿಕೆಟ್ ಬ್ಯಾಟಿನಿಂದ ಫಿರ್ಯಾಧಿದಾರರ ತಲೆಯ ಬಲಬದಿಗೆ ಹಾಗೂ ಬೆನ್ನಿಗೆ ಹಾಗೂ ಕಿಶೋರ್ ಎಂಬಾತನು ಆತನ ಕೈಯಲ್ಲಿದ್ದ ವಿಕೆಟ್ ನಿಂದ ಬೆನ್ನಿಗೆ, ಬಲಗೈಗೆ, ತುಟಿಗೆ ಹೊಡಿದಿದ್ದು, ಆಗ ಮೈದಾನದಲ್ಲಿ ಆಟವಾಡುತ್ತಿದ್ದ ಫಿರ್ಯಾಧಿದಾರರ ಸ್ನೇಹಿತರು ಬಂದಾಗ ಆರೋಪಿತರು ಫಿರ್ಯಾಧಿದಾರರನ್ನು ಉದ್ದೇಶಿಸಿ ಇವತ್ತು ಬದುಕಿದೆ, ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿ ಓಡಿಹೋಗಿರುತ್ತಾರೆ. ಇದರಿಂದ ಗಾಯಗೊಂಡ ಫಿರ್ಯಾಧಿದಾರರನ್ನು ಶ್ರೀಕಾಂತ್ ಎಂಬುವವರು ಆಟೋರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಫಿರ್ಯಾಧಿದಾರರು ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡ ಬಳಿಕ ಠಾಣೆಗೆ ಬಂದು ಹಲ್ಲೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ದೂರು ನೀಡಿರುತ್ತಾರೆ ಎಂಬಿತ್ಯಾದಿ

 

Crime Reported in Konaje PS

ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಪುಲಿಂಚಾಡಿ ಎಂಬಲ್ಲಿ ಪಿರ್ಯಾದಿ Smt Padmavatti Poojary ದಾರರ ನೆರೆಮನೆಯಲ್ಲಿ ವಾಸವಿರುವ ಆರೋಪಿತನಾದ ಉಮೇಶ್ ನಾಯ್ಕ್ ಎಂಬವರು ಅವರ ಮೊಬೈಲ್ ಫೋನ್ ನಲ್ಲಿ ಪಿರ್ಯಾದಿದಾರರ ಅನುಮತಿಯಿಲ್ಲದೆ ದಿನಾಂಕ 22.07.2021 ರಂದು ಮಧ್ಯಾಹ್ನ ಸುಮಾರು  12:00 ಗಂಟೆಗೆ, ದಿನಾಂಕ 16.08.2021 ರಂದು ಸಂಜೆ 5:30 ಗಂಟೆಗೆ ದಿನಾಂಕ 19.08.2021 ರಂದು   ಮಧ್ಯಾಹ್ನ 1:30 ಗಂಟೆಗೆ ಪಿರ್ಯಾದಿದಾರರ ಮತ್ತು ಅವರ ಮನೆಯವರ ಫೋಟೋಗಳನ್ನು ನಿರಂತರವಾಗಿ ತೆಗೆದು ಕಿರುಕುಳ ನೀಡುತ್ತಿರುವುದಲ್ಲದೆ, ಉಮೇಶ್ ನಾಯ್ಕ ರವರು ಕೆಲವು ದಿನಗಳಿಂದ ಕೈಯಲ್ಲಿ ಬಡಿಗೆಯನ್ನು ಹಿಡಿದುಕೊಂಡು ಪಿರ್ಯಾದಿದಾರರನ್ನು ಉದ್ದೇಶಿಸಿ, “ನಿಮ್ಮನ್ನು ಬಿಡುತ್ತೇನಾ. ನಿಮ್ಮನ್ನು ಓಡಿಸದೆ ಬಿಡುವುದಿಲ್ಲ. ಬನ್ನಿ ನೋಡುವಾ” ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಅಲ್ಲದೆ ಆರೋಪಿಯು ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದವರಾಗಿದ್ದು, ಪಿರ್ಯಾದಿದಾರರ ಮೇಲೆ ಸುಳ್ಳು ದೂರು ನೀಡಿ ದೌರ್ಜನ್ಯ ಎಸಗುತ್ತಾ ಬರುತ್ತಿದ್ದಾರೆ  ಎಂಬಿತ್ಯಾದಿ.

 

2) ದಿನಾಂಕಃ 10.09.2021 ರಂದು ಪಿರ್ಯಾದಿ PSI Sharanappa Bhandari ದಾರರು ಇಲಾಖಾ ವಾಹನದಲ್ಲಿ ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ನಲ್ಲಿರುತ್ತಾ ಮಧ್ಯಾಹ್ನ ಸುಮಾರು 12.10 ಗಂಟೆಗೆ ಮಂಗಳೂರು ತಾಲೂಕು ಪಾವೂರು ಗ್ರಾಮದ ಮಲಾರ್ ದುರ್ಗಾ ಕಾಂಪ್ಲೆಕ್ಸ್ ಬಳಿ ತಲುಪುತ್ತಿದ್ದಂತೆ ಇನ್ನೋಳಿ ಕಡೆಯಿಂದ ಮಲಾರ್ ಪಾವೂರು ಕಡೆಗೆ 1) KA 19 AA 8605, 2) KA 19 B 7295, 3) KL 60 E 2269 ನೇ ಟಿಪ್ಪರ್ ಲಾರಿಯಲ್ಲಿ ಮರಳು ತುಂಬಿಸಿ ಸಾಗಾಟ ಮಾಡುತ್ತಿದ್ದು, ಪೊಲೀಸರನ್ನು ಕಂಡು ಲಾರಿಯ ಚಾಲಕರು ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಓಡಿ ಹೋಗಿದ್ದು, ಪರಿಶೀಲಿಸಲಾಗಿ ಈ ಮೂರು ಟಿಪ್ಪರ್ ಲಾರಿಗಳಲ್ಲಿ ಇನೋಳಿ ನೇತ್ರಾವತಿ ನದಿಯಿಂದ ಮರಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದ ಮೇರೆಗೆ 3 ಲಾರಿಗಳನ್ನು ಹಾಗೂ ಲಾರಿಯಲ್ಲಿದ್ದ ಮರಳನ್ನು ಪಂಚಾಯತುದಾರರ ಸಮಕ್ಷಮದಲ್ಲಿ ಸ್ವಾಧೀನಪಡಿಸಿಕೊಂಡು ಮುಂದಿನ ಕ್ರಮದ ಬಗ್ಗೆ ಠಾಣೆಗೆ ತಂದಿದ್ದು, ಲಾರಿಗಳ ಒಟ್ಟು ಅಂದಾಜು ಮೌಲ್ಯ 15,00,000/- ರೂಪಾಯಿಗಳು ಹಾಗೂ ಮರಳಿನ ಅಂದಾಜು ಮೌಲ್ಯ 20,000/- ರೂಪಾಯಿಗಳು ಆಗಬಹುದು ಎಂಬಿತ್ಯಾದಿ.

Crime Reported in Panambur PS

ಪಿರ್ಯಾದಿದಾರಾದ ಅಬ್ದುಲ್ ಅಜೀಜ್ರವರು ಅಜರ್ ಎಂಬವರ ಮಾಲಕತ್ವದ ಎಫ್. ಎನ್. ಚಿಲ್ಡ್ರನ್ಸ್ ಎಂಬ ಮೀನುಗಾರಿಕೆ ನಾಡದೋಣಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 11-09-2021 ರಂದು 06-30 ಗಂಟೆಗೆ ಅಳಿವೆ ಬಾಗಿಲಿನಿಂದ ಮೀನುಗಾರಿಕೆಗೆ ಹೊರಟಿದ್ದು, ತಣ್ಣೀರು ಬಾವಿಯಿಂದ ಸುಮಾರು 300 ಮೀ ದೂರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಮಯ ಸಮುದ್ರ ತೆರೆ ಅಪ್ಪಳಿಸಿ ಬೋಟು ಸಮುದ್ರದಲ್ಲಿ ಮುಳಗಿದ್ದು ಬೋಟಿನಲ್ಲಿದ್ದ ಒಟ್ಟು 5 ಜನರ ಪೈಕಿ 4 ಜನರು ಜೀವಂತವಾಗಿ ಈಜಿ ದಡ ಸೇರಿದ್ದು, ಬೋಟ್ ಚಾಲಕನಾಗಿರುವ ಮಹಮ್ಮದ್ ಷರೀಪ್ ಎಂಬವರು ವಾಪಾಸು ದಡಕ್ಕೆ ಬಾರದೆ ಕಾಣೆಯಾಗಿದ್ದು, ಈ ವರೆಗೆ ಸಮುದ್ರದಲ್ಲಿ ಹುಡುಕಾಡಿದರು ಮಹಮ್ಮದ್ ಷರೀಪ್ ಪತ್ತೆಯಾಗಿರುವುದಿಲ್ಲ. ಆದುದರಿಂದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವ ಸಮಯ ಸಮುದ್ರದಲ್ಲಿ ತೀವ್ರ ಅಲೆ ಎದ್ದು, ಬೋಟಿಗೆ ಅಪ್ಪಳಿಸಿದ ಕಾರಣ ಬೋಟು ಮಗುಚಿ ಬಿದ್ದು ಮಹಮ್ಮದ್ ಷರೀಪ್ ಎಂಬುವರು ಕಾಣೆಯಾಗಿರುವುದರಿಂದ ಸದ್ರಿಯವರನ್ನು ಪತ್ತೆ ಹಚ್ಚಿಕೊಡಬೇಕಾಗಿ ಎಂಬಿತ್ಯಾದಿ

Crime Reported in Mangalore South PS

ಪಿರ್ಯಾದಿ Arun kumar B K ದಾರರು ಮಂಗಳೂರು ಮಹಾನಗರ ಪಾಲಿಕೆಯ ಕಿರಿಯ ಆರೋಗ್ಯ ನಿರೀಕ್ಷಕರಾಗಿದ್ದು, ದಿನಾಂಕ 09-09-2021 ರಂದು ಮಾನ್ಯ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರವರು ಪಿರ್ಯಾದಿದಾರರಿಗೆ, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಖಾಯಿಲೆ ನಿಯಂತ್ರಣದ ಬಗ್ಗೆಗಿನ ನಿಯಮಾವಳಿಗಳನ್ನು ಉಲ್ಲಂಘಿಸುವವರ ವಿರುದ್ದ ಕ್ರಮ ಕೈಗೊಳ್ಳುವ ಕುರಿತು ನೀಡಿದ ಮೌಖಿಕ ಆದೇಶದಂತೆ, ಪಿರ್ಯಾದಿದಾರರು ಹಾಗೂ ಆರೋಗ್ಯ ನಿರೀಕ್ಷಕರುಗಳಾದ ಶಿವಲಿಂಗ ಕೊಂಡಗೋಳಿ, ಭರತ್ ಕುಮಾರ್ ಹಾಗೂ ದೀಪಿಕಾ ಶ್ಯಾಮಿನಿ ಡಿಸೋಜಾ ಹಾಗೂ ಅಶ್ವಿನಿ  ಎಂಬುವರುಗಳೊಂದಿಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸಿ ಪರಿಶೀಲಿಸಿದಾಗ, ಸಂಜೆ 06-30 ಗಂಟೆಗೆ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿ ಇರುವ ರಾವ್ ಅಂಡ್ ರಾವ್ ಸರ್ಕಲ್ ಹತ್ತಿರದ ಕಿಂಗ್ಸ್ ಬಾರ್ ಕಟ್ಟಡದ ಮೇಲೆ ಹಾಗೂ ಹಿಂಬದಿ ಕಟ್ಟಡದಲ್ಲಿ ಸುಮಾರು 200 ಜನರು ಯಾವುದೇ ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರವನ್ನು ಪಾಲಿಸದೇ ಗುಂಪು ಸೇರಿಕೊಂಡು ಯಾವುದೋ ಆಟದಲ್ಲಿ ನಿರತರಾಗಿದ್ದು, ಆ ಸಮಯ ಪಿರ್ಯಾದಿದಾರರು ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕರುಗಳೊಂದಿಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿದಾಗ ಗುಂಪು ಸೇರಿದ್ದವರು ಓಡಿ ಹೋಗಿರುತ್ತಾರೆ. ಹೆಚ್ಚಿನ ಜನರು ಗುಂಪು ಸೇರಿಕೊಂಡು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದರಿಂದ, ಕೋವಿಡ್-19 ಖಾಯಿಲೆ ಪಸರಿಸಲು ಕಾರಣವಾಗಿದ್ದು, ಕೋವಿಡ್-19 ಖಾಯಿಲೆ ನಿಯಂತ್ರಣದ ಬಗ್ಗೆ ಘನ ಸರ್ಕಾರ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶಗಳನ್ನು ಉಲ್ಲಂಘಿಸಿದ ಸದ್ರಿ ಕಿಂಗ್ಸ್ ಬಾರ್ ಕಟ್ಟಡದ ಮಾಲಿಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ, ಎಂಬಿತ್ಯಾದಿಯಾಗಿರುತ್ತದೆ.

 

 

 

ಇತ್ತೀಚಿನ ನವೀಕರಣ​ : 11-09-2021 05:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080